ಗಾಂಧೀನಗರದ ಸಿದ್ಧ ಸೂತ್ರಗಳ ರೋಚಕತೆಯನ್ನು ಬದಿಗೊತ್ತಿ ಕೃಷ್ಣನ ಲವ್ ಸ್ಟೋರಿ, ಚಿತ್ರದ ಒಳಗಿನ ವರ್ಗ ಸಂಘರ್ಷದ ಸಂರಚನೆಯನ್ನು, ಸಂವಾದ ಡಾಟ್ ಕಾಂ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ರೂಪಿಸಿ ಚಿತ್ರಕ್ಕೆ ಹೊಸದೇ ಆಯಾಮವನ್ನು ನೀಡಿತು.

ಜೊತೆಗೆ ಚಿತ್ರದ ಬಗೆಗಿನ ಪಠ್ಯ ಬಹಳ ಮುಖ್ಯ ಎಂದೆನ್ನುವ ಸಂವಾದ ಡಾಟ್ ಕಾಂನ ಉದ್ದೇಶಕ್ಕೆ ಪೂರಕವಾಗಿ ಸಂವಾದದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿರ್ಮಾಪಕ ಉದಮ್ ಮೆಹತಾ ಹಾಗು ನಿರ್ದೇಶಕ ಶಶಾಂಕ್ ಸಂವಾದದ ಮೂಲಕ ಒಂದು ಪ್ರಕಟಣೆಯನ್ನು ನೀಡಿದರು. ಕೃಷ್ಣನ ಲವ್ ಸ್ಟೋರಿ ಚಿತ್ರದ ಬಗೆಗೆ ವಿಮರ್ಶಾ ಸ್ಪರ್ಧೆಯನ್ನು ಸಂವಾದ ಡಾಟ್ ಕಾಂ ಆಯೋಜಿಸಿ ಆಯ್ಕೆ ಮಾಡುವ ಹತ್ತು ಅತ್ಯುತ್ತಮ ವಿಮರ್ಶೆಗಳಿಗೆ ತಲಾ ಐದು ಸಾವಿರ ರೂ ಬಹುಮಾನವನ್ನು ಪ್ರಕಟಿಸಿದರು. ಕೃಷ್ಣನ್ ಲವ್ ಸ್ಟೋರಿ ಚಿತ್ರದ ನೂರನೆ ದಿನದ ಸಮಾರಂಭದಲ್ಲಿ ಬಹುಮಾನ ವಿತರಿಸುವ ಸಾಧ್ಯತೆಯನ್ನು ಬಿಡಿಸಿಟ್ಟರು, ಈ ವಿಮರ್ಶಾ ಸ್ಪರ್ಧೆಯ ಅಧಿಕೃತ ಪ್ರಕಟಣೆಯನ್ನು ಸಂವಾದ ಡಾಟ್ ಕಾಂ ಸದ್ಯದಲ್ಲೇ ಮಾಡಲಿದೆ. ಕನ್ನಡ ಚಿತ್ರರಂಗ ಹೊಸ ಅಧ್ಯಾಯ ನಾಂದಿ ಹಾಡುವ ನಿಟ್ಟಿನಲ್ಲಿ ಇಂಥಹ ಉದಾಹರಣೆಗಳು ವಿಸ್ತರಿಸಿಕೊಂಡಾಗ ಚಿತ್ರರಂಗದ ಬಗೆಗಿನ ಪರಿಕಲ್ಪನೆ ಬದಲಾವಣೆ ಯಾಗುವ ಸಾಧ್ಯತೆಯ ಬಗೆಗೆ ಸಂವಾದ ಡಾಟ್ ಕಾಂ ಆಯೋಜಿಸಿದ್ದ ಕಾರ್ಯಕ್ರಮವು ಒಂದು ಆಶಾಕಿರಣದಂತೆ ಅಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಗೋಚರಿಸಿತು.

ಜೊತೆಗೆ ಚಿತ್ರವೊಂದನ್ನು ನೋಡುವುದಲ್ಲ ‘ಓದುವುದು ಹೇಗೆ?’ ಎಂಬುವುದರ ಸುತ್ತ ಮೂರು ದಿನಗಳ ಶಿಬಿರವೊಂದನ್ನು ಸಂವಾದ ಡಾಟ್ ಕಾಂ ಪ್ರಕಟಿಸಿತು. ಸಂವಾದ ಕಾರ್ಯಕ್ರಮಕ್ಕೆ ದೂರದ ಬೀದರ್, ರಾಯಚೂರು, ಗದಗ, ಬೆಳಗಾವಿ, ದಾವಣಗೆರೆ ಮುಂತಾದ ಭಾಗಗಳಿಂದ ಆಸಕ್ತರು ಬಂದು ಚರ್ಚೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಕೃಷ್ಣನ ಲವ್ ಸ್ಟೋರಿ ಚಿತ್ರದ ನಿರ್ದೇಶಕ ಶಶಾಂಕ್, ಛಾಯಾಗ್ರಾಹಕ ಶೇಖರ್ ಚಂದ್ರ, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ನಾಯಕ ನಟ ಅಜಯ್ ರಾವ್, ಸಹನಟರಾದ ಸಂಜು, ವಿನೋದ್ ಹಾಜರಿದ್ದರು.

ಕನ್ನಡಸಾಹಿತ್ಯ ಡಾಟ್ ಕಾಂನ ಸಂಪಾದಕರೂ, ಹಿರಿಯ ಚಿತ್ರ ವಿಮರ್ಶಕರೂ ಆದ ಶೇಖರ್ ಪೂರ್ಣ ಚರ್ಚೆಯ ನಿರ್ವಹಣೆ ಮಾಡಿದರು. ಸಂವಾದ ಡಾಟ್ ಕಾಂನ ಅರೇಹಳ್ಳಿ ರವಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿಹಾಜರಿದ್ದ ಚಿತ್ರ ತಂಡದವರಿಗೆ ‘ಸಂವಾದ ಫಲಕ’ ಗಳನ್ನು ನೀಡಿ ಗೌರವಿಸಲಾಯಿತು.

Advertisements