ಸಾಂಗತ್ಯದ ಎರಡನೇ ಸಂಚಿಕೆ (ಜುಲೈ-ಸೆಪ್ಟೆಂಬರ್) ಸಿದ್ಧತೆ ಆರಂಭಗೊಂಡಿದೆ.

ಸಿನಿಮಾ ಕುರಿತಾದ ಭಿನ್ನ ಭಿನ್ನ ಹೊಳಹುಗಳ, ಹೊಸಬರ ಲೇಖನಗಳನ್ನು ನಾವು ಪ್ರಕಟಿಸುತ್ತಿದ್ದೇವೆ. ಸಿನಿಮಾ ವಿಮರ್ಶೆ (ತಾಂತ್ರಿಕ ನೆಲೆಯಲ್ಲಿ, ಸ್ವಲ್ಪ ಸವಿವರವಾಗಿರಬೇಕು, ಈಗ ಪತ್ರಿಕೆಗಳಲ್ಲಿ ಬರುತ್ತಿರುವ ಮಾದರಿಯ ವಿಮರ್ಶೆಗಳಲ್ಲ), ಸಿನಿಮಾ ಅನಿಸಿಕೆ, ಸಿನಿಮಾ ಮಾಧ್ಯಮ ಕುರಿತಾದ ತಾಂತ್ರಿಕ ಬರಹಗಳು, ಮಾಧ್ಯಮದ ಬಗೆಗಿನ ವಿಶ್ಲೇಷಣೆ, ಈಗಿನ ಟ್ರೆಂಡ್ ಕುರಿತಾದ ವಿಶ್ಲೇಷಣೆ, ನಿಮಗಿಷ್ಟವಾದ ನಿರ್ದೇಶಕ, ಸಿನಿಮಾ ಬಗೆಗಿನ ಲೇಖನ…ಹೀಗೆ ಯಾವುದೇ ಸಿನಿಮಾ ಕುರಿತಾದ ಬರಹಗಳನ್ನು ನೀವೂ ಕಳುಹಿಸಬಹುದು.

ಸಿನಿಮಾ ಮಾಧ್ಯಮದ ಬಗ್ಗೆ ಭಿನ್ನ ಭಿನ್ನ ನೆಲೆಯಲ್ಲಿ ಚರ್ಚಿಸುವುದು, ಸಂವಾದ ಏರ್ಪಡಿಸುವುದು ಹಾಗೂ ಮಾಧ್ಯಮದ ಬಗೆಗಿನ ಚರ್ಚೆಗೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ. ಈ ಹಿನ್ನಲೆಯಲ್ಲಿ ಲೇಖನಗಳನ್ನು ನಮ್ಮ ಇಮೇಲ್ saangatyamagazine@gmail. com ಗೆ ಕಳುಹಿಸಬಹುದು. ಅಂಚೆ ಮೂಲಕ ಕಳುಹಿಸುವವರು ಸಾಂಗತ್ಯ, ನಂ. 905/175 ಎ, 4 ನೇ ಮುಖ್ಯರಸ್ತೆ, 7 ನೇ ಅಡ್ಡರಸ್ತೆ, ಸಾರ್ವಜನಿಕ ಹಾಸ್ಟೆಲ್ ಬಳಿ, ವಿದ್ಯಾರಣ್ಯಪುರಂ, ಮೈಸೂರು-8 ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 99804 57812.

ಪ್ರತಿಕ್ರಿಯೆಗೆ ಸ್ವಾಗತ

ನಮ್ಮ ಮೊದಲ ಸಂಚಿಕೆ ಓದಿದವರು ತಮ್ಮ ಅನಿಸಿಕೆಗಳನ್ನು ಇದೇ ಇಮೇಲ್ ಅಥವಾ ವಿಳಾಸಕ್ಕೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಎರಡನೇ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.

ಸಂ

Advertisements