ಅಭಿರುಚಿ ನಿರ್ಮಾಣದತ್ತ ಮುಖ ಮಾಡಿರುವ ಮೈಸೂರು ಫಿಲಂ ಸೊಸೈಟಿ ಮೇ 21 ರಿಂದ 23 ರವರೆಗೆ ಮೈಸೂರಿನ ನಮನ ಕಲ್ಯಾಣ ಮಂಟಪದಲ್ಲಿ ಚಿತ್ರೋತ್ಸವವನ್ನು ಏರ್ಪಡಿಸಿದೆ.

ಪ್ರವೇಶ ಉಚಿತ. ಚಿತ್ರ ಉತ್ಸವದ ಥೀಮ್ “ಪರಿಸರ : ಜಾಗತೀಕರಣ : ಪ್ರಗತಿ!”.

ಅಭಿವೃದ್ಧಿಯ ದೆಸೆಯಿಂದ ನಾವು ಕಳೆದುಕೊಳ್ಳುತ್ತಿರುವ, ಜಾಗತೀಕರಣದ ನೆಲೆಯಿಂದ ನಮ್ಮ ಕೊಳ್ಳುಬಾಕತನದ ವೃದ್ಧಿ ಹಾಗೂ ಪರಿಸರದ ಬಗ್ಗೆ ಹೆಚ್ಚುತ್ತಿರುವ ಅವಜ್ಞೆ ಕುರಿತೇ ಇಡೀ ಚಿತ್ರೋತ್ಸವಕ್ಕೆ ಕೊಟ್ಟ ಶೀರ್ಷಿಕೆ “ಅರಿವಿನ ಹಾದಿ”.

ಉತ್ಸವ ಶುಕ್ರವಾರ (ಮೇ 21) ಸಂಜೆ 6 ಕ್ಕೆ ಕೃಪಾಕರ ಸೇನಾನಿಯವರ “ವೈಲ್ಡ್ ಡಾಗ್ ಡೈರೀಸ್” ಸಾಕ್ಷ್ಯಚಿತ್ರದಿಂದ ಚಾಲನೆಗೊಳ್ಳಲಿದೆ. ನಂತರ ಕೈಪಾಕರ ಸೇನಾನಿಯವರೊಂದಿಗೆ ಸಂವಾದವಿದೆ.

ಶನಿವಾರ (ಮೇ 22) ಬೆಳಗ್ಗೆ 10.30 ಕ್ಕೆ ನೆದರ್ ಲ್ಯಾಂಡ್ಸ್ ನ ಬರ್ಟ್ ಹಾನ್ಸ್ ಟ್ರಾ ನಿರ್ದೇಶಿಸಿದ “ಗ್ಲಾಸ್” ಚಿತ್ರ ಪ್ರದರ್ಶನಗೊಳ್ಳಲಿದೆ. ನಂತರ 11. 00 ಕ್ಕೆ ಅಲೈನ್ ರೆಸ್ನಾಯಿಸ್ ರೂಪಿಸಿದ “ನೈಟ್ ಅಂಡ್ ಫಾಗ್”, 11.45 ಕ್ಕೆ “ಬರಾಕಾ” ಪ್ರದರ್ಶನವಿದೆ.

ಮಧ್ಯಾಹ್ನ 3 ಕ್ಕೆ ಜಾಕ್ವಿಸ್ ಪೆರಿನ್ ನಿರ್ದೇಶಿಸಿದ “ವಿಂಗ್ಡ್ ಮೈಗ್ರೇಷನ್”, 4. 30 ರಿಂದ ರಾಬರ್ಟ್ ಪ್ಲಹರ್ಟಿಯ “ನಾನೂಕ್ ಆಫ್ ದಿ ನಾರ್ತ್” ಪ್ರದರ್ಶನವಿದ್ದು, ನಂತರ ಮ್ಯಾನ್ ಮನು ಸಂವಾದದಲ್ಲಿ ಪಾಲ್ಗೊಳ್ಳುವರು.

ಭಾನುವಾರ (ಮೇ 23) ರಂದು ಬೆಳಗ್ಗೆ 10. 30 ಕ್ಕೆಪಂಕಜ್ ಗುಪ್ತಾ ಅವರ “ಅಪ್ನಾ ಆಲೂ ಬಜಾರ್ ಬೇಚಾ”, 11 ಕ್ಕೆ “ಬುನಾರ್ ಮಾನ್”, 11. 45 ಕ್ಕೆ “ಕಯಾನಿಸ್ ಕಾಟ್ಸಿ”, ಮಧ್ಯಾಹ್ನ 3 ಕ್ಕೆ “ಸರ್ಪ್ಲಸ್” ಹಾಗೂ 4 .30 ಕ್ಕೆ “ಹೋಮ್” ಸಾಕ್ಷ್ಯಚಿತ್ರಗಳು ಪ್ರದರ್ಶಿತಗೊಳ್ಳಲಿವೆ. ನಂತರ ನಾಗೇಶ್ ಹೆಗಡೆಯವರೊಂದಿಗೆ ಸಂವಾದವಿದೆ. ಮಾಹಿತಿಗೆ ಮನು : 94480 92049 ಸಂಪರ್ಕಿಸಬಹುದು.