ನಿಜವಾಗಲೂ ಖುಷಿಯಾಗುತ್ತಿದೆ.

ಪುಟ್ಟದೊಂದು ತೊರೆ ಹೀಗೇ ಹರಿದೀತೆಂದು ಖಂಡಿತಾ ಎಣಿಸಿಯೂ ಇರಲಿಲ್ಲ. ಇನ್ನೂ ಹರಿದು ಸೇರುವ, ಸಂಭ್ರಮಿಸುವ ಹಾದಿ ಬಹಳ ದೊಡ್ಡದಿದೆ, ದೂರವಿದೆ ಎಂಬ ವಾಸ್ತವ ನೆನಪಿದ್ದೇ ಹೇಳುವುದಾದರೆ, ಬಹಳ ಖುಷಿಯಾಗುತ್ತಿದೆ.

ಸಾಂಗತ್ಯ ಬಳಗ ಒಂದು ಮ್ಯಾಗಜೈನ್ ಆರಂಭಿಸುವ ಪ್ರಸ್ತಾಪವನ್ನು ತಮ್ಮ ಸದಸ್ಯರೊಳಗೆ ಚರ್ಚೆಗೆ ಬಂದಾಗ, ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅದನ್ನೇ ಆಪ್ತ ವಲಯದಲ್ಲಿ ತೆರೆದಿಟ್ಟಾಗ ಕೆಲವರು ಆಗಬಹುದು ಎಂದರೆ, ಇನ್ನು ಕೆಲವರು ಅಗತ್ಯವಿದೆ ಎಂದಿದ್ದರು. ಮತ್ತೂ ಕೆಲವರು, ಆನ್ ಲೈನ್ ಕಾಲದಲ್ಲಿ ಮ್ಯಾಗಜೈನ್ ಎಲ್ಲಾ ಯಾಕೆ ತಲೆ ಕೆಡಿಸಿಕೊಳ್ತೀರಿ ಎಂದು ಹೇಳಿದ್ದರು. ಆದರೂ, ಯಾಕೋ ಬಳಗಕ್ಕೆ ಮ್ಯಾಗಜೈನ್ ಮಾಡಲೇಬೇಕೆಂಬ ತುಡಿತ ಅಂಥದೊಂದು ಸಾಧ್ಯತೆಯನ್ನು ನಿಜವಾಗಿಸಿತು.

ಮೊದಲನೇ ಸಂಚಿಕೆ ಏಪ್ರಿಲ್ 24 ರಂದು ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಜನ್ಮದಿನದಂದೇ ಬಿಡುಗಡೆಯಾಯಿತು. ಎಲ್ಲೆಡೆಯಿಂದಲೂ ಸಂಚಿಕೆಗೆ ಬರುತ್ತಿರುವ ಅಭಿಪ್ರಾಯ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಬಹುತೇಕ ಮಂದಿ ಸಿನಿಮಾ ಕ್ಷೇತ್ರಕ್ಕೆಂದು ಇಂಥದೊಂದು ಮ್ಯಾಗಜೈನ್ ಇರಲಿಲ್ಲ, ಬೇಕಿತ್ತು. ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. ವಿಜಯ ಕರ್ನಾಟಕ, ದಿ ಹಿಂದೂ ಪತ್ರಿಕೆಗಳು ನಮ್ಮ ಹೊಸ ಸಾಹಸವನ್ನು ಆಸಕ್ತರಿಗೆ ತಮ್ಮ ಲೇಖನದ ಮೂಲಕ ಪರಿಚಯಿಸಿವೆ. ಮೇಫ್ಲವರ್ ಮೀಡಿಯಾ ಹೌಸ್ ನ ಅವಧಿ ಬ್ಲಾಗ್ ಸಹ ನಮ್ಮ ಪ್ರಯತ್ನಕ್ಕೆ ಶುಭ ಹಾರೈಸಿದೆ. ಚಿತ್ರರಂಗದ ಹಲವು ಮಹನೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೊದಲ ಸಂಚಿಕೆ ಕುರಿತು ವ್ಯಕ್ತವಾಗುತ್ತಿರುವ ಅಭಿಪ್ರಾಯ ಎರಡನೇ ಸಂಚಿಕೆಯ ಸಿದ್ಧತೆಯನ್ನು ಮತ್ತಷ್ಟು ಗಂಭೀರವಾಗಿಸಿದೆ. ನಿರೀಕ್ಷೆಗಳನ್ನು ಹೆಚ್ಚುಗೊಳಿಸಿದೆ. ಹೊಸ ಸಂಭ್ರಮದೊಂದಿಗೆ ಮತ್ತೆ ಸಜ್ಜಾಗಿದ್ದೇವೆ.

ಮೊದಲ ಸಂಚಿಕೆ ಪ್ರತಿಗಳಿಗಾಗಿ ಸಂಪರ್ಕಿಸಿ
ನವ ಕರ್ನಾಟಕ ಪ್ರಕಾಶನದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಶಾಖೆಗಳು, ಅಂಕಿತ ಪ್ರಕಾಶನ, ಗಾಂಧಿ ಬಜಾರ್, ಸನ್ಮತಿ ಬುಕ್ ಹೌಸ್, ಮಲ್ಲೇಶ್ವರಂ, ಬೆಂಗಳೂರು
ಮೈಸೂರು ಫಿಲಂ ಸೊಸೈಟಿ, ಮೈಸೂರು, ಅತ್ರಿ ಬುಕ್ ಸೆಂಟರ್, ಮಂಗಳೂರು, ಸಾಹಿತ್ಯ ಭಂಡಾರ, ಹುಬ್ಬಳ್ಳಿ

ಉಳಿದಂತೆ ಚಂದಾದಾರರಾಗುವವರು, ಸಂಚಿಕೆ ಬೇಕೆನ್ನಿಸಿದವರು ಬೆಂಗಳೂರು-ವಾದಿರಾಜ್ 94805 82027, ಮಹೇಶ್ 94807 97112, ಅಕ್ಷಯ್ ಹೆಗಡೆ 94181 09206, ಪ್ರವೀಣ್ ಬಣಗಿ 99868 07953, ಮಂಗಳೂರು-ಸಿಬಂತಿ ಪದ್ಮನಾಭ 94495 25854, ಮೈಸೂರು-ಮಿತ್ರವಿಂದಾ 99804 57812, ಮೈಸೂರುಫಿಲಂ ಸೊಸೈಟಿ ಮನು 94480 92049, ಶಿವಮೊಗ್ಗ-ತೀರ್ಥಹಳ್ಳಿ-ಮಧುಕರ್ ಮಯ್ಯ 94481 54298, ಚಿಕ್ಕಮಗಳೂರು-ಘನಶ್ಯಾಮ 94484 70154, ಕೊಪ್ಪ-ಸುಧೀರ್ ಮುರೊಳ್ಳಿ 94482 45172, ಉಡುಪಿ-ಕುಂದಾಪುರ- ಗುರುರಾಜ್‌ಉಪ್ಪುಂದ 97431 70819, ಪುತ್ತೂರು-ರೋಹಿಣಾಕ್ಷ ಶಿರ್ಲಾಲು 94496 63744, ಮೂಡುಬಿದಿರೆ- ವಿಜಯ್ ಜೋಶಿ 98459 74719, ಬಾಗಲಕೋಟೆ-ರವಿರಾಜ್ ಗಲಗಲಿ 93433 81818, ದಾವಣಗೆರೆ-ರವೀಂದ್ರ ಅರಳಗುಪ್ಪಿ 94815 84447, ಬಳ್ಳಾರಿ, ಹೊಸಪೇಟೆ- ಸೃಜನ್ 94816 63379, ಹುಬ್ಬಳ್ಳಿ-ಧಾರವಾಡ-ರಾಜೀವ್ ಹೆಗಡೆ 91648 59664, ಹರ್ಷವರ್ಧನ್ ಶೀಲವಂತ-98865 21664

ಸಾಂಗತ್ಯ (ರಿ) ಹೆಸರಿಗೆ ಚೆಕ್ ಅಥವಾ ಡಿಡಿ ಮೂಲಕ ಚಂದಾ ಹಣವನ್ನು ನಮ್ಮ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಬೆಂಗಳೂರಿನಿಂದ ಹೊರಗಿರುವವರು ಚಂದಾದೊಂದಿಗೆ ೪೦ ರೂ. ಗಳನ್ನು ಸೇರಿಸಿ ಇಲ್ಲಿಗೆ ಕಳುಹಿಸಬೇಕು.
ವಿಳಾಸ : ನಂ.4, 2 ನೇ ಕ್ರಾಸ್, ಮಾರ್ಕಂ ರಸ್ತೆ, ಅಶೋಕನಗರ, ಬೆಂಗಳೂರು -560025. ಮಾಹಿತಿಗೆ saangatyamagazine@gmail.com

Advertisements