ಸಾಂಗತ್ಯದ ಸಂಚಿಕೆ ಹೇಗಿರುತ್ತೆ ?

ಇದು ಸಾಂಗತ್ಯ ಮ್ಯಾಗಜೈನ್ ಬಿಡುಗಡೆಯ ದಿನಾಂಕ ಘೋಷಿಸುತ್ತಿದ್ದಂತೆ ವ್ಯಕ್ತವಾಗುತ್ತಿರುವ ಪ್ರಶ್ನೆಗಳು. ನಮಗೆ ಬಂದಿರುವ ಮೇಲ್ ಗಳು ಮತ್ತು ದೂರವಾಣಿ ಕರೆಗಳಲ್ಲಿ ಇದೇ ಪ್ರಶ್ನೆ ಬಹುಮುಖ್ಯವಾಗಿತ್ತು. ಈಗಾಗಲೇ ಮೊದಲ ಸಂಚಿಕೆ ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ. ಒಟ್ಟು 112 ಪುಟಗಳ ಮ್ಯಾಗಜೈನ್ ನಲ್ಲಿ ನಿಮಗೆ ಮೂರು ತಿಂಗಳು ಕುಳಿತು ಓದಬೇಕಾದಷ್ಟು ಸರಕುಗಳಿವೆ.

ಈ ಮೊದಲೇ ತಿಳಿಸಿದಂತೆ ಸಾಂಗತ್ಯ ಮ್ಯಾಗಜೈನ್ ನ ಪ್ರಯತ್ನ ಸಿನಿಮಾ ಭಾಷೆಯನ್ನು ಅರ್ಥೈಸುವ ಪ್ರಯತ್ನ ಹಾಗೂ ಸಿನಿಮಾ ಮಾಧ್ಯಮ ಕುರಿತು ಒಂದು ಅವ್ಯಕ್ತವಾದ ಪ್ರೀತಿಯನ್ನು ಹುಟ್ಟಿಸುವುದು. ರಾಜ್ಯಾದ್ಯಂತ ಇರುವ ಸಿನಿಮಾಸಕ್ತರನ್ನು ತಲುಪುವ ಮೂಲಕ ಸಂವಾದ ಸಾಧ್ಯತೆಯನ್ನು ಸೃಷ್ಟಿಸುವುದು. ಈ ನೆಲೆಯಲ್ಲೇ ಮ್ಯಾಗಜೈನ್ ರೂಪುಗೊಂಡಿದೆ.

ಸಾಂಗತ್ಯಕ್ಕೆ ಒಬ್ಬ ಒಳ್ಳೆಯ ನಿರ್ದೇಶಕರನ್ನು ರೂಪಿಸುವುದಕ್ಕಿಂತಲೂ, ಅತ್ಯುತ್ತಮ ಪ್ರೇಕ್ಷಕರನ್ನು ಸೃಷ್ಟಿಸುವುದು ಸುಲಭ ಎಂಬುದರ ಮೇಲೆಯೇ ನಂಬಿಕೆ. ಹಾಗಾಗಿ ಪ್ರಬುದ್ಧ ಪ್ರೇಕ್ಷಕರನ್ನು ರೂಪಿಸುವತ್ತ ಮುಖ ಮಾಡಿ ನಮ್ಮ ಮ್ಯಾಗಜೈನ್ ಹೊರಟಿದೆ. ಅದಕ್ಕೆ ತಕ್ಕಂತೆ ಲೇಖನಗಳನ್ನು ಸಂಗ್ರಹಿಸಲಾಗಿದೆ.

ಮೊದಲ ಸಂಚಿಕೆಯಲ್ಲಿ ಏನಿದೆ ?
ಸುಮಾರು 20 ಕ್ಕೂ ಹೆಚ್ಚು ಲೇಖನಗಳು. ಒಂದು ಒಳ್ಳೆಯ ಸಿನಿಮಾ ಎಂದರೆ ಏನು ಎಂಬ ವ್ಯಾಖ್ಯಾನದಿಂದ ಹಿಡಿದು, ಇಂದಿನ ಕಲಾತ್ಮಕ, ವಾಣಿಜ್ಯಾತ್ಮಕ ವ್ಯಾಖ್ಯಾನಗಳಲ್ಲಿ ಬರುತ್ತಿರುವ ಸಿನಿಮಾಗಳ ಬಗ್ಗೆ ನೋಟಗಳು, ಸೌಂದರ್ಯ ಮೀಮಾಂಸೆಯ ಕೊರತೆಯಿಂದ ನಲುಗುತ್ತಿರುವ ಚಿತ್ರಗಳ ಕುರಿತ ವಿಶ್ಲೇಷಣೆ, ಬಾಲಿವುಡ್ ಗಳ ಪ್ರಯೋಗಗಳು, ನಮಗೆಂಥ ಸಿನಿಮಾ ಬೇಕೆಂಬ ಅಭಿಪ್ರಾಯ, ಸಿನಿಮಾ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ತಾಂತ್ರಿಕ ಲೇಖನಗಳು, ಸಿನಿಮಾದ ಭಾವಯಾನ…ಹೀಗೇ ದುರಂತ ನಾಯಕಿಯೊಬ್ಬಳ ಪದ್ಯಗಳು…ಹತ್ತಾರು ವೈವಿಧ್ಯಗಳು. ಅತ್ಯಂತ ಗಂಭೀರ ಲೇಖನಗಳಿಂದ ಹಿಡಿದು, ಒಳ್ಳೊಳ್ಳೆ ಚಿತ್ರಗಳ ಕುರಿತ ಪುಟ್ಟ ಪುಟ್ಟ ಮಾಹಿತಿ ಎಲ್ಲವೂ ಇದರಲ್ಲಿ ಲಭ್ಯ. ಬಹಳ ಮುಖ್ಯವಾಗಿ ಅಭಿನಯ ಕುರಿತ ಪ್ರಬುದ್ಧ ಸಂವಾದವೂ ಇದೆ.

ಬಹಳ ಮುಖ್ಯವಾಗಿ ನಮ್ಮ ಸಂಚಿಕೆಗಳನ್ನು ಈಗಾಗಲೇ ಸಿನಿಮಾದ ಬಗ್ಗೆ ಸಾಕಷ್ಟು ತಿಳಿದವರಿಗೂ ಓದಲು ಹೂರಣವಿದೆ, ಹಾಗೆಯೇ ಈಗ ಸಿನಿಮಾ ಭಾಷೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಮಂದಿಗೂ ಅವಕಾಶವಿದೆ. ಇದರ ಮಧ್ಯೆ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುವ ಮಂದಿಗೂ, ವಿದ್ಯಾರ್ಥಿಗಳಿಗೂ ಸಾಕಷ್ಟು ಮಾಹಿತಿ ಲಭ್ಯ. ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ಈ ಸಂಚಿಕೆಯಲ್ಲಿ ಹೊಸ ಬರಹಗಾರರನ್ನೂ ಬೆಳೆಸುವ ಆಶಯವೂ ಇದೆ. ಹಾಗಾಗಿ ಹೊಸಬರೂ ಇದಕ್ಕೆ ಬರೆಯಬಹುದು. ವಾರ್ಷಿಕ ಚಂದಾ 250 ರೂ.

ಏಪ್ರಿಲ್ 24 ರಂದು ಸಂಜೆ 5 ಕ್ಕೆ ಬೆಂಗಳೂರಿನ ಬಾದಾಮಿ ಹೌಸ್ ನಲ್ಲಿ ಬಿಡುಗಡೆಗೊಳ್ಳಲಿದೆ. ಸಮಾರಂಭಕ್ಕೆ ದಯವಿಟ್ಟು ಬನ್ನಿ, ಮರೆಯಬೇಡಿ. ನಿಮ್ಮ ಗೆಳೆಯರಿಗೂ ಹೇಳಿ. ಚಂದಾ ಮತ್ತಿತರ ಮಾಹಿತಿಗೆ 94807 97113, 99804 57812. ನಿಮ್ಮ ಅಭಿಪ್ರಾಯವನ್ನು ಇದಕ್ಕೆ ಕಳುಹಿಸಿ saangatyamagazine@gmail.com |

Advertisements