ಸಾಂಗತ್ಯದ ಬಹುದೊಡ್ಡ ಕನಸು “ಮ್ಯಾಗಜೈನ್”. ಅದೀಗ ಸಾಕಾರಗೊಳ್ಳುವ ದಿನ ಬಂದಿದೆ.

ಏ. 24 ರಂದು ಸಂಜೆ 5 ಗಂಟೆಗೆ ಬಾದಾಮಿ ಹೌಸ್ ನಲ್ಲಿ ನಮ್ಮ ಮ್ಯಾಗಜೈನ್ ನ ಪ್ರಥಮ ಸಂಚಿಕೆ ಬಿಡುಗಡೆ ಸಮಾರಂಭ.

ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಸಂಚಿಕೆಯನ್ನು ಬಿಡುಗಡೆ ಮಾಡುವರು. ನಿರ್ದೇಶಕ ಗುರುಪ್ರಸಾದ್, ವಿಮರ್ಶಕಿ ಡಾ. ವಿಜಯಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ. ಎಸ್. ನಾಗಾಭರಣ ಭಾಗವಹಿಸುವರು. ಸಾಂಗತ್ಯ (ರಿ) ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಪರಮೇಶ್ವರ ಗುರುಸ್ವಾಮಿ ಉಪಸ್ಥಿತರಿರುವರು. ನೀವೆಲ್ಲಾ ತಪ್ಪದೇ ಬನ್ನಿ.

ಸುಮಾರು ಏಳು ತಿಂಗಳ ಹಿಂದೆ ಕಂಡ ಕನಸು. ಇದುವರೆಗೆ ಕನ್ನಡದಲ್ಲಿ ಸಿನಿಮಾದ ಬಗೆಗೇ ಗಂಭೀರ ಸಂವಾದವನ್ನು ನಡೆಸಬಹುದಾದ ಮ್ಯಾಗಜೈನ್ ಇರಲಿಲ್ಲ. ಸಾಹಿತ್ಯದ ನೆಲೆಯಲ್ಲಿ ಬೇಕಾದಷ್ಟು ಇಂಥ ಪ್ರಯತ್ನಗಳು ನಡೆದಿವೆ.

ಸಾಂಗತ್ಯ ಬ್ಲಾಗ್ ಗೆ ಸಿಕ್ಕ ಪ್ರೋತ್ಸಾಹ ಕಂಡು ಮ್ಯಾಗಜೈನ್ ಪ್ರಕಟಣೆಗೆ ಮುಂದಾಗಿದ್ದೆವು. ಬಹಳಷ್ಟು ಪ್ರೋತ್ಸಾಹ ಸಿಕ್ಕಿದ್ದು ಖುಷಿಯಾಗಿದೆ. ವಾರ್ಷಿಕ ಚಂದಾ 250 ರೂ.ಗಳು. ಆಸಕ್ತರು 94807 97113, 99804 57812.

Advertisements