ಇದು ಸಂತೋಷದ ಸುದ್ದಿ. ಸಾಂಗತ್ಯ ಪತ್ರಿಕೆಯ ಕುರಿತಾಗಿ ಕೊಟ್ಟ ಹೇಳಿಕೆಗೆ ಈ ಮೂಲಕ ಸಿಕ್ಕ ಪ್ರತಿಕ್ರಿಯೆ ನಿರೀಕ್ಷೆಗಿಂತಲೂ ಮಿಗಿಲಾಗಿದೆ. ವಾರ್ಷಿಕ ಚಂದಾ ನೀಡಬೇಕು, ಪತ್ರಿಕೆ ಮನೆಬಾಗಿಲಿಗೆ ತಲುಪಬೇಕು ಅನ್ನುವುದಕ್ಕಿಂತ ಹೆಚ್ಚಾಗಿ ‘ಇದು ಕೊಡು-ಕೊಳ್ಳುವ ವ್ಯವಹಾರವೊಂದೆ ಅಲ್ಲ’ ಎಂಬಂತೆ ಕೇಳಿದವರೆಲ್ಲರಿಂದ ಪ್ರೋತ್ಸಾಹದ ಮಾತು ಬಂದಿದೆ. ಆಪ್ತವಾದ ಮಾತುಕತೆ ನಡೆದಿದೆ.

ನಿಮ್ಮೆಲ್ಲರಿಗೂ ಸಾಂಗತ್ಯ ಋಣಿ.

ನಾವು ಒಂದೊಂದು ಹಂತವನ್ನೂ ದಾಟುತ್ತಿದ್ದೇವೆ. ಇನ್ನು ಕೆಲವು ದಿನಗಳಲ್ಲಿ ಸಂಪೂರ್ಣ ವಿಷಯದೊಂಡಿದೆ ನಿಮ್ಮ ಮುಂದೆ ಬಂದು ‘ಹೀಗ್ಹೀಗೆ’ ಅನ್ನುವುದು ಬಾಕಿಯಿದೆ ಅಷ್ಟೇ. ಈ ವರೆಗೆ ನಮ್ಮನ್ನು ಸಂಪರ್ಕಿಸಿದವರೆಲ್ಲರಿಗೂ ಸಂಪೂರ್ಣ ವಿವರಗಳನ್ನೊಳಗೊಂಡ ಮಿಂಚಂಚೆ ತಲುಪಿಸುತ್ತೇವೆ. ಉಳಿದಂತೆ ಬ್ಲಾಗು, ಫೋನು… ಇದ್ದೇ ಇದೆ.

ಸಧ್ಯಕ್ಕೀಗ Magazine ಪಡೆಯಬಯಸುವವರಿಗಾಗಿ ‘Online Subscription’ ವ್ಯವಸ್ಥೆ ಮಾಡುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ 9480797113/9343381802 ಸಂಪರ್ಕಿಸಬಹುದು.