ಕನ್ನಡ ಚಲನಚಿತ್ರ ಜಗತ್ತಿಗೆ ಮತ್ತೆ ಅಭಿನಂದನೆ ಸಲ್ಲಿಸುವ ಸಂದರ್ಭವಿದು.

2008 ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಅಭಯ ಸಿಂಹ ನಿರ್ದೇಶನದ “ಗುಬ್ಬಚ್ಚಿಗಳು” ಹಾಗೂ ಪಿ. ಶೇಷಾದ್ರಿ ನಿರ್ದೇಶಿಸಿದ “ವಿಮುಕ್ತಿ” ಚಿತ್ರಗಳಿಗೆ ಪ್ರಶಸ್ತಿ ಸಂದಿದೆ.

ಹಾಗೆಯೇ ತುಳು ಭಾಷೆಯ “ಗಗ್ಗರ” ಚಿತ್ರಕ್ಕೂ ಪ್ರಶಸ್ತಿ ಸಂದಾಯವಾಗಿದೆ. ಇತ್ತೀಚೆಗಷ್ಟೇ ಪ್ರಕಾಶ್ ರೈ ಮತ್ತು ಉಮಾಶ್ರೀ ಅತ್ಯುತ್ತಮ ನಟ, ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಜತೆಗೆ ಎರಡು ದಿನಗಳ ಹಿಂದಷ್ಟೆ ಕನ್ನಡದ ಹೆಸರಾಂತ ಸಿನಿಛಾಯಾಗ್ರಾಹಕ ವಿ. ಕೆ. ಮೂರ್ತಿಯವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿತ್ತು.

ಈಗ ಮತ್ತೆ ಪ್ರಶಸ್ತಿಗೆ ಭಾಜನರಾಗಿ ಕನ್ನಡದ ಕೀರ್ತಿಯನ್ನು ಎತ್ತಿ ಹಿಡಿದ ಅಭಯಸಿಂಹ, ಪಿ. ಶೇಷಾದ್ರಿ ಹಾಗೂ ಎರಡೂ ಚಿತ್ರ ತಂಡಕ್ಕೆ ಸಾಂಗತ್ಯದ ವತಿಯಿಂದ ಅಭಿನಂದನೆಗಳು.