ಸಾಂಗತ್ಯದ ಮೂರನೇ ಚಿತ್ರೋತ್ಸವ ಜನವರಿ 16 ಮತ್ತು 17 ರಂದು ಕುಪ್ಪಳ್ಳಿಯಲ್ಲಿ ನಡೆಯಲಿದೆ.

ಈಗಾಗಲೇ ಎರಡು ಚಿತ್ರೋತ್ಸವಗಳು ಒಳ್ಳೆಯ ಅನುಭವವನ್ನು ಕಟ್ಟಿಕೊಟ್ಟಿದ್ದು, ಜನವರಿ 2 ನೇ ತಾರೀಕಿಗೆ ಸಾಂಗತ್ಯಕ್ಕೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರಗಳ ಪ್ರದರ್ಶನ, ಅವುಗಳ ಕುರಿತ ಚರ್ಚೆ, ಸಿನಿಮಾ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಎಲ್ಲವೂ ಉತ್ಸವದಲ್ಲಿ ಒದಗಿಸಲಾಗುವುದು.

ಜನವರಿ 16 ರಂದು ಬೆಳಗ್ಗೆ 10 ಕ್ಕೆ ಉತ್ಸವ ಉದ್ಘಾಟನೆಗೊಳ್ಳಲಿದ್ದು, ನಂತರ ಸಾಕ್ಷ್ಯಚಿತ್ರಗಳನ್ನು ಒಳಗೊಂಡಂತೆ ಸುಮಾರು ಎಂಟು ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಜನವರಿ 17 ರ ಸಂಜೆ 5 ಕ್ಕೆ ಉತ್ಸವ ಸಮಾರೋಪಗೊಳ್ಳಲಿದೆ. ಉತ್ಸವಕ್ಕೆ ನಮ್ಮೊಂದಿಗೆ ಅನುಭವವನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರ ನಿರ್ದೇಶಕರನ್ನು ಸಂಪರ್ಕಿಸಲಾಗಿದೆ. ಸದ್ಯವೇ ಅವರಿಂದ ಪ್ರತಿಕ್ರಿಯೆ ಲಭ್ಯವಾಗಲಿದೆ.

ಉತ್ಸವಕ್ಕೆ ಸಂಬಂಧಿಸಿದಂತೆ ಏನಾದರೂ ಸಲಹೆಗಳಿದ್ದರೆ ಶೀಘ್ರವೇ ನಮಗೆ ಕಳುಹಿಸಬಹುದು. ನಮ್ಮ ಮೇಲ್ ವಿಳಾಸ saangatya@gmail.com .ಹಾಗೆಯೇ ಅತ್ಯುತ್ತಮ ಚಿತ್ರಗಳಿದ್ದರೆ ಅವುಗಳ ಹೆಸರನ್ನೂ ನಮಗೆ ಕಳುಹಿಸಬಹುದು. ದಯವಿಟ್ಟು ನಿಮ್ಮೆಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮ ನಿರೀಕ್ಷೆ. ಸದ್ಯವೇ ಪ್ರದೇಶವಾರು ನಿಮ್ಮ ಹೆಸರು ನೋಂದಣಿಗೆ ಸಂಪರ್ಕ ಸಂಖ್ಯೆಗಳನ್ನು ಪ್ರಕಟಿಸಲಾಗುವುದು.