ಬಹುಶಃ ಭಾರತೀಯ ಚಿತ್ರರಂಗದ ಗಾನಕೋಗಿಲೆ ಲತಾ ಮಂಗೇಶ್ವರರ ಬಗ್ಗೆ ಕನ್ನಡದಲ್ಲಿ ಬರುತ್ತಿರುವ ಮೊದಲ ಪುಸ್ತಕ ಇದು ಇರಬೇಕು.

ವಿಜಯ ಕರ್ನಾಟಕದ ಸುದ್ದಿ ಸಂಪಾದಕ ವಸಂತ ನಾಡಿಗೇರರು ಬರೆದ “ಹಾಡುಹಕ್ಕಿಯ ಹೃದಯಗೀತೆ” ಮಂಗಳವಾರ (ಅ.27) ಸಂಜೆ 6 ಕ್ಕೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕೆಇಬಿಯ ಭವನದ ಸರ್.ಎಂ.ವಿ. ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.

ಗಾಯನ ಕ್ಷೇತ್ರದ ಮತ್ತೊಬ್ಬ ಧ್ರುವತಾರೆ ಎಸ್. ಪಿ. ಬಾಲಸುಬ್ರಹ್ಮಣ್ಯಂ ಕೃತಿಯನ್ನು ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ನಟಿ ಹಾಗೂ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷೆ ಜಯಮಾಲಾ, ನಟ ರಮೇಶ್ ಅರವಿಂದ್ ಭಾಗವಹಿಸುವರು. ವಿಜಯ ಕರ್ನಾಟಕದ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸುವರು.
invitation ವಸಂತ ನಾಡಿಗೇರರು, ವಿಜಯ ಕರ್ನಾಟಕದ ಸಿನಿಮಾ ಪುರವಣಿಯಲ್ಲಿ ಬರೆದ ಬರಹಗಳಿವು. ಗಾನ ಕೋಗಿಲೆಯ ಜೀವನ ಚರಿತ್ರೆ ಕುರಿತು ಬರಿದೇ ಮಾಹಿತಿಯಲ್ಲ ; ಒಂದು ಒಳ್ಳೆಯ ಅನುಭವದಂತೆ ಕಟ್ಟಿಕೊಟ್ಟಿದ್ದಾರೆ.

ಕೃತಿ ಬಿಡುಗಡೆಗೆ ಎಲ್ಲರಿಗೂ ಸ್ವಾಗತಿಸಿದ್ದಾರೆ ಲೇಖಕರು. ಸ್ಥಳ : ಸರ್.ಎಂ.ವಿ ಭವನ, ಕೆಇಬಿ ಸಂಘ ಕಟ್ಟಡ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು. ಕೃತಿ ಬಿಡುಗಡೆಯ ನಂತರ ಲೇಖಕರಿಗೆ ಶುಭಾಶಯ ಹೇಳಿ : 93431 09195.

Advertisements