ಆಶಾ ಬೋಂಸ್ಲೆ ಬಗ್ಗೆ ಬರೆದ ಉಮೇಶ್ ದೇಸಾಯಿಯವರ ಲೇಖನವಿದು. ಮೊದಲ ಬಾರಿಗೆ ಸಾಂಗತ್ಯಕ್ಕೆ ಕಳುಹಿಸಿದ್ದಾರೆ. ಆಶಾ ಅವರಿಗೆ 63 ತುಂಬಿದ ಹಿನ್ನೆಲೆಯಲ್ಲಿ ಈ ಲೇಖನ ಪ್ರಕಟಿಸಲಾಗುತ್ತಿದೆ.

ಮೊನ್ನೆ ಟಿವಿಯಲ್ಲಿ ಆಶಾ ಮಾತನಾಡುತ್ತಿದ್ದರು. ಒಳಗಿನದ್ದೂ ಬಿಚ್ಚಿಡಬಹುದು ಎಂದು ಕಾದಿದ್ದೆ,ನಿರಾಸೆಯಾಯಿತು. ಅವರು ಅನುಭವಿಸಿದ್ದು ಅವರೇ ಹೇಳಬೇಕು. ಬೇರೆ ಯಾರೇ ಹೇಳಿದರೂ ಅದು ಗಾಸಿಪ್. ಆಶಾ ಏನೂ ಬದಲಾಗಿಲ್ಲ ಎಂಬುದು ಅಂದೇ ರಾತ್ರಿ ನಿರೂಪಿತವಾಯಿತು.

ಝೀ ಟಿವಿಯ ಲಿಟಲ್ ಚಾಂಪ್ ಕಾರ್ಯಕ್ರಮ. ಅವರೇ ಮುಖ್ಯ ಜಡ್ಜ್. ಶ್ರೇಯಸಿ ಎನ್ನೋ ಹನ್ನೆರಡು ವರ್ಷದ ಹುಡುಗಿ ಆಶಾ ಹಾಡಿದ ” ಪ್ಯಾರ್ ಕರನೆವಾಲೆ ಪ್ಯಾರ್ ಕರತೆ ಹೈ ಶಾನ್ ಸೆ ….” ಅಂದಾಗ ಎಲ್ಲರಿಗಿಂತ ಮೊದಲು ಎದ್ದು ನಿಂತು ಚಪ್ಪಾಳೆ ಹೊಡೆದರು..!
asha
ಆಶಾರ ಈ ಗುಣವೇ ಅವರ ದೌರ್ಬಲ್ಯ ಆಗಿತ್ತೇ? ಇತಿಹಾಸ ಸಾಕ್ಷಿ ಹೇಳುತ್ತದೆ. ಆಶಾರಿಂದ ಅನೇಕ ಗೀತೆಗಳು ಕಸಿಯಲ್ಪಟ್ಟಿವೆಯಂತೆ. ಪ್ರಮುಖ ಉದಾಹರಣೆ “ಏ ಮೇರೆ ವತನ್ ಕೆ ಲೋಗೋ…” ಹಾಡು.ಸಂಗೀತ ನಿರ್ದೇಶಕ ಸಿ. ರಾಮಚಂದ್ರ ಆಶಾರನ್ನು ಹಾಡಲು ಆಯ್ಕೆ ಮಾಡಿದ್ದ. ರೆಕಾರ್ಡಿಂಗ್ ವೇಳೆ ಲತಾರೂ ಸ್ಟುಡಿಯೋದಲ್ಲಿದ್ದಳು. ಆಶಾರಿಗೆ ಇರಿಸು ಮುರಿಸು.

ನಿಜವಾಗಿ ಲತಾರೇ ಈ ಹಾಡು ಹಾಡಬೇಕಿತ್ತು. ಆದರೆ ಸಿ.ರಾಮಚಂದ್ರಗೆ ಅದು ಇಷ್ಟ ಇರಲಿಲ್ಲ. ಅಳುಕುತ್ತ ಆಶಾ ಹಾಡಲು ಮೊದಲಿಟ್ಟರು. ಹಾಡು ಮುಂದುವರಿಸುವುದು ಅವರಿಗಾಗಲಿಲ್ಲ. ಹೊರಗಡೆ ಅಕ್ಕ ಕುಳಿತಿದ್ದಳು. ತನ್ನ ಜೀವನದ ಮಹತ್ತರ ಗೀತೆ ಇದು.

ಅದರೆ ಲತಾರ ಮುಖದಿಂದ ಹೊಮ್ಮಿದ ಭಾವ ಆಶಾರನ್ನು ಅಧೀರಗೊಳಿಸಿತು. ಹಾಡು ನಿಲ್ಲಿಸಿ ಹೊರಬಂದರು. ಸಿ. ರಾಮಚಂದ್ರರಿಗೆ
ದಿಗಿಲು…ಆಶಾ ಸೌಮ್ಯವಾಗಿ ಹೇಳಿದ್ಲು..” ಮಿ ಹೀ ಗಾಣ ಮಃಣೂ ತಾಯಿಲಾ ಅವಡತ್ ನಾಹಿ…..”. ಯಾಕೆ ಅವರು ಹಾಗೆ ಮಾಡಿದ್ಲು ಇದು ಅವರೇ ಹೇಳಬೇಕು. ಸಿ.ರಾಮಚಂದ್ರ ತನ್ನ ಆತ್ಮಚರಿತ್ರೆಯಲ್ಲಿ ಈ ಪ್ರಸಂಗ ದಾಖಲಿಸಿದ್ದಾರೆ.

ಹಿಂದಿ ಸಿನಿಮಾದ ಹಾಡಿನ ಇತಿಹಾಸ ಗಮನಿಸಿದರೆ ಅದು ಲತಾ ಹಾಗೂ ಆಶಾ ಮಧ್ಯೆಯೇ ಸುತ್ತುತ್ತದೆ. ಅದಾವ ಮಹಾರಾಯ ಆಶಾ ಬರಿ ಚೆಲ್ಲು ಚೆಲ್ಲು , ಕುಣಿತದ ಹಾಡಿಗೇ ಸರಿ ಎಂದು ನಿರ್ಧರಿಸಿದ್ದರೋ ಗೊತ್ತಿಲ್ಲ,

ನಿಯಮದಂತೆ ಇದನ್ನು ಪಾಲಿಸಲಾಗುತ್ತಿತ್ತು. ಈ ನಿಯಮ ಮೊದಲು ಮುರಿದವ ಎಸ್.ಡಿ. ಬರ್ಮನ್. ಬಂದಿನಿ ಚಿತ್ರದ ” ಅಬ್ ಕೆ ಬರಸ್ ಭೇಜ ಭೈಯಾಕೊ ಬಾಬುಲ್…” ಹಾಡಿಗೆ ಆಶಾ ಆತ್ಮವನ್ನೇ ಧಾರೆ ಎರೆದಿದ್ದರು. ಆದರೇನು ನಶೀಬು ಬದಲಾಗಲಿಲ್ಲ.

ಆಶಾ ಗೆ ಹಾಡು ಸಿಗುವುದೇ ಅಪರೂಪ. ಸಿಕ್ಕ ಹಾಡುಗಳಿಗೆ ಸರ್ವಸ್ವವನ್ನೂ ತುಂಬುತ್ತಿದ್ದರು. ಹಾಡು ಒಂದೊಂದು ಮುತ್ತಿನಂತೆ…..
” ಕಾಲಿ ಘಟಾ ಛಾಯೆ ಮೋರಾ ಜಿಯಾ ಘಬರಾಯೆ…..”
” ಆಯಿಯೇ ಮೆಹರಬಾ ಬೈಟಿಯೇ ಜಾನೆ ಜಾ….”
” ಶೋಖ್ ನಜರ್ ಕಿ ಬಿಜಲಿಯಾಂ……”
” ಸಾಕಿಯಾ ಆಜ್ ಮುಝೆ ನೀಂದ ನಹಿ ಆಯೇಗಿ…”
” ಯೇ ಹೈ ರೇಶಮಿ ಜುಲ್ಫೋಂಕಾ ಅಂಧೇರಾ ನ ಘಬರಾಯಿಯೇ….”

ಪಂಚಮ್ ಅವರ ಜೀವನದಲ್ಲಿ ಬಂದರು. ಇವರ ದನಿಗೆ ಹೊಸ ಆಯಾಮ ನೀಡಿದ. ದನಿಯ ಏರಿಳಿತ ಆಸ್ತಿ ಅನಿಸುವಂತೆ ಮಾಡಿದ. ಸ್ವತಃ ಆಶಾ ದಂಗಾದರು. ಈ ಜೋಡಿ ಹೊಸ ಪ್ರಯೋಗಗಳಿಗೆ ನಾಂದಿ ಹಾಡಿತು.

ತೀಸರಿ ಮಂಜಿಲ್ ನಿಂದ ಶುರುವಾಗಿದ್ದು ಇಜಾಜತ್ ವರೆಗೆ ನಿರಂತರವಾಗಿ ಪ್ರವಹಿಸಿತು. ಮುತ್ತುಗಳು ಬೇಜಾನ್ ಇವೆ. ಕೆಲ ಸ್ಯಾಂಪಲ್ ಗಳು ಹೀಗಿವೆ….
” ಆಆಜಾ ಆಆಜಾ ಮೈ ಹೂಂ ಪ್ಯಾರ ತೇರಾ…”
” ಪಿಯಾತೂ ಅಬ್ ತೊ ಆಜಾ….”
” ಆಜ್ ಕಿ ರಾತ್ ಕೋಯಿ ಆನೆ ಕೊ ಹೈ ರೆ ಬಾಬಾರೆ….”
” ಚುರಾಲಿಯಾ ನೆ ಹೈ ತುಮನೆ ಜೋ ದಿಲ್ ಕೊ….”
” ಕತರಾ ಕತರಾ ಬೆಹತಾ ಹೈ….”
asha bhosle ಹೆಲೆನ್, ಬಿಂದು, ಪದ್ಮಾಖನ್ನ ಅನೇಕ ಡ್ಯಾನ್ಸರ್ ಗಳ ಮೇಲೆ ಚಿತ್ರಿತವಾದ ಎಲ್ಲ  ಹಾಡುಗಳಿಗೂ ಆಶಾರ ಹಿನ್ನೆಲೆ ದನಿ ಜೀವಾಳ. ಈ ಪರಂಪರೆ ಮುರಿದವ  ಖಯ್ಯಾಮ್. ರೇಖಾ ಉಮ್ರಾವ್ ಜಾನ್ ಆಗಿ ನಟಿಸುತ್ತಾರೆ ಎಂದಾಗ  ಚಿತ್ರೋದ್ಯಮ ಹುಬ್ಬೇರಿಸಿತ್ತು. ಖಯ್ಯಾಮ್ ಆ ಚಿತ್ರದ ಹಾಡುಗಳನ್ನು ಆಶಾರಿಂದ  ಹಾಡಿಸುತ್ತಾನೆ ಅಂದಾಗ ಉದ್ಯಮದ ಮಂದಿ ದಂಗಾದರು. ಖಯ್ಯಾಮ್  ಉಮ್ರಾವ್ ಜಾನ್ ಬಗೆಗಿನ ಪುಸ್ತಕ ಆಶಾರಿಗೆ ಓದಲು ಕೊಟ್ಟರು. ಉಮ್ರಾವ್  ಜಾನ್ ಬಗ್ಗೆ ತಿಳಿದುಕೊಳ್ಳಲು ಅದು ನೆರವಾಯಿತು.ಅಭಿನಯಕ್ಕೆ ರೇಖಾ ರಾಷ್ಟ್ರೀಯ  ಪ್ರಶಸ್ತಿ ಪಡೆದರೆ ಆಶಾ “ದಿಲ್ ಚೀಜ್ ಕ್ಯಾ ಹೈ ಆಪ್ ಮೇರಿ ಜಾನ್ ಲಿಜೀಯೆ…” ಗೆ  ಮೊದಲಬಾರಿ ರಾಷ್ಟ್ರಪ್ರಶಸ್ತಿ
ಗಳಿಸಿಕೊಂಡರು.

ಆಶಾಗೆ ಒಂದು ಗುಣ ದೈವದತ್ತವಾಗಿ ಬಂದಿದೆ. ಬದಲಾವಣೆಗೆ ಬಹಳ ಬೇಗ  ಹೊಂದಿಕೊಳ್ಳುತ್ತಾರೆ. ಇಲ್ಲವಾದರೆ 62ರ ಹರೆಯದಲ್ಲಿ ಮಾದಕವಾಗಿ…” ತನಹಾ  ತನಹಾ ಯಹಾಂಪೇ ಜೀನಾ ಏ ಕೋಯಿ ಬಾತ್ ಹೈ…” ಅನ್ನಲಾಗುತ್ತಿತ್ತೇ…? ಅಲ್ಬಮ್ ನಲ್ಲೂ ಹಾಡಿ ಪರಾಕ್ರಮ ಮೆರೆದರು. “ಜಾನಮ್ ಸಮಝಾಕರೋ..” ಒಂದು ಕಾಲದ ಹಿಟ್ ಅಲ್ಬಮ್.

ಆಶಾ ಒಂದು ಶಮಾ ಇದ್ದಂತೆ.ಅನೇಕ ಯುಗ ಉರುಳಿವೆ ಆದರೂ ಅದು ಬೆಳಗುತ್ತಲೇ ಇದೆ.
ಅವರೇ ಹಾಡಿದ ಸಾಲು ಹೀಗಿದೆ….
“ಇಕ್ ಶಮ್ಮೆ ಪರೋಜಾಂಕೊ ಆಂಧಿಸೆ ಡರಾತೆ ಹೋ….
ಇಸ್ ಶಮ್ಮೆ ಪರೋಂಜಾಕೆ ಪರವಾನೆ ಹಜಾರೋಂ ಹೈ…”

Advertisements