ಶ್ರೀಮುಖ ಕಯ್ಯಾರ ಕಿಞ್ಞಣ್ಣ ರೈ ಕುರಿತ ಸಾಕ್ಷ್ಯಚಿತ್ರ. ಮಂಗಳೂರಿನ ದೃಶ್ಯ ಕ್ರಿಯೇಷನ್ಸ್ ರೂಪಿಸಿದೆ. ಆ ಕುರಿತು ಹೇಮಶ್ರಿ ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಈ ಸಾಕ್ಷ್ಯಚಿತ್ರ ತಯಾರಾದದ್ದು 2005 ರಲ್ಲಿ. ಇದನ್ನು ನಿರ್ಮಿಸಿದ್ದು ಮಂಗಳೂರಿನ ದೃಶ್ಯ ಕ್ರಿಯೇಷನ್ಸ್.
ಡಾ ಕಯ್ಯಾರ ಕಿಞ್ಞಣ್ಣ ರೈ ಅವರ ಬದುಕು, ಬರಹ ಮತ್ತು ಹೋರಾಟಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಈ 27 ನಿಮಿಷಗಳ ಸಾಕ್ಷ್ಯಚಿತ್ರ.

ಕಾಸರಗೋಡು ಕನ್ನಡನಾಡು ಎನ್ನುವ ಕನಸನ್ನು ಆರಲು ಬಿಡದೆ ತನ್ನ ಬರಹ ಬದುಕನ್ನು ಗಡಿನಾಡಿನ ಹೋರಾಟಕ್ಕೆ ಪಣ ಇಟ್ಟ ಕಯ್ಯಾರರು ಅಪ್ಪಟ ಗಾಂಧೀವಾದಿ.
kayyaraಕಯ್ಯಾರರ ಮುಂದಿನ ಪೀಳಿಗೆಗೆ ಅವರ ಹೋರಾಟದ ಕಾವು ತಲುಪಲಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದುವರೆಗೂ ಕರ್ನಾಟಕ ಗಡಿನಾಡು ಸಮಸ್ಯೆ ಬೂದಿ ಮುಚ್ಚಿದ ಕೆಂಡವಾಗಿಯೇ ಉಳಿದುಕೊಂಡಿದೆ. ಪ್ರಸ್ತುತ ರಾಜಕೀಯ, ಪ್ರಾದೇಶಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಗಡಿನಾಡು ಸಮಸ್ಯೆ ಪರಿಹಾರವಾಗುವುದು ದೂರದ ಮಾತಷ್ಟೇ ಅಲ್ಲ ಅದು ಸಮಸ್ಯೆಯನ್ನು ಸರಳಗೊಳಿಸುವ ಪ್ರಕ್ರಿಯೆಯಾಗದೆ ಇನ್ನಷ್ಟು ಗೊಂದಲದ ಗೂಡನ್ನಾಗಿಸುವುದರಲ್ಲಿ ಸಂಶಯವಿಲ್ಲ.

ಈ ಹಿನ್ನೆಲೆಯಲ್ಲಿ ಕಯ್ಯಾರರ ಏಕವ್ಯಕ್ತಿ ಹೋರಾಟ ಅರ್ಥ ಕಳೆದುಕೊಂಡಿರುವುದು ವಿಷಾದ. ಆದರೂ, ತಾನು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ತಮ್ಮ ತೊಂಬತ್ತನಾಲ್ಕರ ಇಳಿವಯಸ್ಸಿನಲ್ಲೂ ಯುವ ಜನಾಂಗಕ್ಕೆ ಸ್ಪೂರ್ತಿ, ಉತ್ಸಾಹದ ಚಿಲುಮೆಯಾಗಿದ್ದಾರೆ ಕಯ್ಯಾರ ಕಿಞ್ಞಣ್ಣ ರೈ.
ಮೊದಲನೇ ಭಾಗದ ಸಂಪರ್ಕಕೊಂಡಿ
ಎರಡನೇ ಭಾಗ
ಮೂರನೇ ಭಾಗ
ನಾಲ್ಕನೇ ಭಾಗ