ಸಾಂಗತ್ಯ ಕ್ರಿಯಾಶೀಲವಾಗಿ ಏಳು ತಿಂಗಳು ಕಳೆಯುತ್ತಿದೆ. ಇದುವರೆಗೆ ಹಲವು ರೀತಿಯ ಮಾಹಿತಿಗಳನ್ನು ಒದಗಿಸುತ್ತಿದೆ.
ಚಿತ್ರ ಅನಿಸಿಕೆ, ಚಿತ್ರ ಗ್ರಹಿಕೆ ಕುರಿತಾದ ಲೇಖನಗಳು ಒಂದೆಡೆ ನಮ್ಮ ಚಿತ್ರ ಭಾಷೆಯ ಗ್ರಹಿಕೆಯಲ್ಲಿ ಅಥವಾ ಅರ್ಥ ಮಾಡಿಕೊಳ್ಳುವಲ್ಲಿ ಊರುಗೋಲಿನಂತಾಗಿರಬಹುದು.

ಹಾಗೆಯೇ ಸಿನಿತಜ್ಞ ಪರಮೇಶ್ ಗುರುಸ್ವಾಮಿಯವರ ಕನ್ನಡ ಚಿತ್ರ ರಂಗದ ಬಗೆಗಿನ ಅಪರೂಪದ ಮಾಹಿತಿಯುಳ್ಳ ಅಂಕಣ, ಕಲಾವಿದ ಸೃಜನ್ ಅವರು ನೀಡುತ್ತಿರುವ ನಮ್ಮ ನೆರೆ-ಹೊರೆ ಭಾಷೆಯ ಅತ್ಯುತ್ತಮ ಚಲನಚಿತ್ರಗಳ ಬಗೆಗಿನ ಲೇಖನಮಾಲೆ ಹಾಗೂ ಹಾಲಿವುಡ್ ಸಿನಿಮಾಗಳ ಕುರಿತಾದ ಬೇಳೂರು ಸುದರ್ಶನರ ಅಂಕಣ ಜಗತ್ತಿನ ಚಿತ್ರರಂಗದ ಮಾಹಿತಿ ಒದಗಿಸುತ್ತಿದೆ.

ಇದಲ್ಲದೇ, ಹಲವು ಲೇಖಕರು ಬರೆಯುತ್ತಿರುವ ಚಿತ್ರ ಅನಿಸಿಕೆಗಳು, ನಿರ್ದೇಶಕರ ಬಗೆಗಿನ ಮಾಹಿತಿ (ನಿರ್ದೇಶಕರ ಡೈರಿ), ಸಂದರ್ಶನಗಳು, ಹೊಸ ಸಿನಿಮಾಗಳ ಬಗೆಗಿನ ಮಾಹಿತಿ ಎಲ್ಲವೂ ನಿರಂತರವಾಗಿ ನಡೆದಿದೆ. ಎಲ್ಲರಿಗೂ ಸಾಂಗತ್ಯ ಧನ್ಯವಾದ ಹೇಳುತ್ತದೆ.

ಇದೇ ಸಂದರ್ಭದಲ್ಲಿ ಸಾಂಗತ್ಯ ಮತ್ತಷ್ಟು ಹೊಸತಿನೊಂದಿಗೆ ನಿತ್ಯವೂ ನಿಮ್ಮನ್ನು ಮುಖಾಮುಖಿಯಾಗಬೇಕೆಂದುಕೊಂಡಿದೆ. ಜತೆಗೆ ಕನ್ನಡದಲ್ಲಿ ಜಾಗತಿಕ ಸಿನಿಮಾದ ಬಗೆಗಿನ ಮಾಹಿತಿ ಹಾಗೂ ಸೌಂದರ್ಯವನ್ನು ಹಿಡಿದು ಕೊಡಬೇಕೆಂದು ಪ್ರಯತ್ನಿಸುತ್ತಿದೆ. ಈ ನೆಲೆಯಲ್ಲಿ “ಚಿತ್ರ ಖಜಾನೆ” ಯನ್ನು ಪುನಾರಂರಭಿಸುತ್ತಿದೆ. ಅದಕ್ಕೆ ನೀವು ಕಂಡ ಸಿನಿಮಾಗಳ ಬಗೆಗಿನ ಮಾಹಿತಿ (ಸಿನಿಮಾ ಬಿಡುಗಡೆಯಾದ ವರ್ಷ, ನಿರ್ದೇಶಕರು, ನಿರ್ಮಾಪಕರು, ಛಾಯಾಗ್ರಾಹಕರ ಹೆಸರು, ತಾರಾಗಣ ವಿವರ ಹಾಗೂ ಸಿನಿಮಾ ಕುರಿತು ಕೇವಲ ಐದಾರು ಸಾಲುಗಳ ವಿವರ)ಯನ್ನು ದಯವಿಟ್ಟು ಕಳುಹಿಸಿಕೊಡಿ. ಅವುಗಳನ್ನು ನಮ್ಮ ಚಿತ್ರ ಖಜಾನೆಯ ಕೋಶಕ್ಕೆ ಬಳಸಿಕೊಳ್ಳಲಾಗುವುದು. ಅಲ್ಲದೇ, “ಡಸ್ಟ್ ಬಿನ್” ಅಂಕಣಕ್ಕೂ ಕೆಟ್ಟ ಸಿನಿಮಾಗಳ ಬಗ್ಗೆ ಕಳಿಸಿಕೊಡಿ.

ಇದರೊಂದಿಗೆ ಸಾಂಗತ್ಯ ಇನ್ನೇನು ನೀಡಬೇಕು ? ಯಾವ ರೀತಿ ಇನ್ನಷ್ಟು ಮಹತ್ವ ಪೂರ್ಣಗೊಳಿಸಬಹುದು ? ಎಂಬುದಕ್ಕೆ ಸಲಹೆ ನೀಡಿ. ನಿಮ್ಮ ಸಲಹೆಗಳನ್ನು saangatya@gmail.com ಅಥವಾ saangatyaciniblog@gmail.com ಗೆ ಕಳಿಸಿಕೊಡಿ.
ಸಂ.