ನಗುತ್ತಲೇ, ನಗಿಸುತ್ತಲೇ ಸಾಮಾಜಿಕ ಲೋಪದೋಷಗಳನ್ನು ಎತ್ತಿ ತೋರಿಸಿದ ಸಿನಿಮಾಗಳನ್ನು ನಿರ್ಮಿಸಿದ / ನಿರ್ದೇಶಿಸಿದ ಕೆಲವೇ ಭಾರತೀಯರಲ್ಲಿ ಮಾಸ್ಟರ್ ವಿನಾಯಕ್ ಒಬ್ಬರು.

ಸಾಧಾರಣ ಯುವಕನಾದ ಆಡಂಬರ್ ತೀವ್ರ ಕಾಮನೆಗಳ ವ್ಯಕ್ತಿ. ಒಂದು ಭಾಷಣದಿಂದ ಉತ್ತೇಜಿತನಾದ ಆಡಂಬರ್ ಹನುಮಾನ್ ಜಯಂತಿಯ ಉತ್ಸವದಲ್ಲಿ ತಾನೂ ಕೂಡ ಥಟ್ಟನೇ ಬ್ರಹ್ಮಚಾರಿಯಾಗಿಯೇ ಬದುಕಬೇಕೆಂಬ ಮಹತ್ವಾಕಾಂಕ್ಷೆ ಮೂಡುತ್ತದೆ.
ಜೊತೆಗೆ ದೇಶಭಕ್ತ ಜಟಾಶಂಕರ್ (ಜಾವ್ಡೆಕರ್)ರಂತಹ ಭಾಷಣದ ಹುಚ್ಚು ಬೇರೆ ಹಿಡಿದಿತ್ತು. ತನ್ನ ಮನೆಗೆ ಹೋಗುತ್ತಲೇ ರೂಮಲ್ಲಿದ್ದ ರೂಪಸಿಯರ ಚಲನಚಿತ್ರ ನಟಿಯರ ಪೋಸ್ಟರ್‌ಗಳನ್ನು ಕಿತ್ತೆಸೆಯುತ್ತಾನೆ. ಬ್ರಹ್ಮಚರ್ಯ ಪಾಲಿಸಲು ಚಂಡಿರಾಮ್ ಆಶ್ರಮ ಸೇರುತ್ತಾನೆ.bhramachari

ಇಲ್ಲಿ ವಿಧಿಯಾಟ ನೋಡಿ. ವಿಸಿಟಿಂಗ್ ಅರಣ್ಯಾಧಿಕಾರಿಯೊಬ್ಬರ ಚೆಂದನೆಯ ಬೆಡಗಿ ಕಿಶೋರಿಯ ಸುಶ್ರಾವ್ಯ ಹಾಡಿಗೆ ಮೋಡಿಯಾಗುವ ಆಡಂಬರ್‌ಗೆ ಅಂದಿನಿಂದ ಅಕೆಯೇ ಜಗತ್ತಾಗುತ್ತದೆ. ಆಕೆಯ ಪ್ರೇಮಪಾಶದಲ್ಲಿ ಪರವಶನಾಗುತ್ತಾನೆ. ಇದು 1932 ರಲ್ಲಿ ತೆರೆಕಂಡ ‘ಮರಾಠಿ ಸೂಪರ್ ಡೂಪರ್ ಚಲನಚಿತ್ರ ಬ್ರಹ್ಮಚಾರಿ’ ಚಿತ್ರದ ನಾಲ್ಕು ಸಾಲಿನ ಕಥೆ !

ಅದ್ಬುತವಾದ ಹಾಸ್ಯ, ರಮ್ಯ ಸಂಭಾಷಣೆಗಳು, ರೊಮ್ಯಾಂಟಿಕ್ ದೃಶ್ಯಗಳು….ಮರಾಠಿ ಮತ್ತು ಹಿಂದಿಯಲ್ಲಿ ತಯಾರಾಗಿದ್ದ ಬ್ರಹ್ಮಚಾರಿ’ ಚಿತ್ರದಲ್ಲಿ ಮಡಿವಂತಿಕೆಯನ್ನೂ, ಓಬಿರಾಯನ (?) ಕಾಲದ ನಂಬಿಕೆಗಳನ್ನು ಗಾಳಿಗೆ ತೂರಿತ್ತು. ಇಡೀ ಚಿತ್ರ ಹಾಗೆ ನೋಡಿದರೆ ಅಪ್ಪಟ ಹಾಸ್ಯ ಚಿತ್ರದಂತೆಯೇ ಜನ ಎಂಜಾಯ್ ಮಾಡಿದ್ದರು. ಚಿತ್ರದ ಸ್ಕೀನ್ ಪ್ಲೇ ಹಾಗೂ ಸ್ಕ್ರಿಪ್ಟ್ ಲೇಖಕರಾದ ಅತ್ರಿಯವರ ಕಳಕಳಿಯನ್ನು ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ಗುರುತಿಸಬಹುದು.

ಚಂಡೀರಾಮ್‌ನ ಪಾತ್ರದಲ್ಲಿ ದಾಮುನ್ನ ಮಾಳ್‌ವಾಂಕರ್ ಜೀವಿಸಿದ್ದಾರೆ. ನಾಯಕಿ ಮೀನಾಕ್ಷಿಯ ಮೊದಲ ಚಿತ್ರವಾದರೂ ನಂತರ ಆಕೆ ‘ದೇವತಾ’, ಬ್ರಾಂಡೀಚಿ ಬಾಟ್ಲಿ (1938) ಹಾಗೂ ಅರ್ಧಾಂಗಿ (1940) ಚಿತ್ರಗಳಿಂದ ಬೇಡಿಕೆ ಆಕಾಶ ಮುಟ್ಟಿತ್ತು.

ಮುಂಬೈನಲ್ಲಿ 25 ವಾರ, ಪುಣೆಯಲ್ಲಿ 52 ವಾರ ಓಡಿದ್ದ ಬ್ರಹ್ಮಾಚಾರಿ ಚಿತ್ರ ಮೊತ್ತ ಮೊದಲ ದಾಖಲೆಗಳ ಚಿತ್ರ ! ಚಿತ್ರದ ಇನ್ನೊಂದು ದಾಖಲೆಯೆಂದರೆ ಆ ಸಮಯದಲ್ಲೇ ಮೀನಾಕ್ಷಿ ಹಾಡೊಂದರಲ್ಲಿ ಈಜುಡುಗೆ ತೊಡುವುದು !

ವಿನಾಯಕ್ ಪ್ರತಿಸಲ ಹೀಗೆಯೇ ಹೇಳುತ್ತಾರೆ. ‘ಸಿನಿಮಾವನ್ನು ವಿನೋದಕ್ಕಾಗಿ ಹಣಕ್ಕಾಗಿ ಮಾಡಬಾರದು. ಸಾಮಾಜಿಕ ಕಳಕಳಿ ಇರುವ ಚಿತ್ರ ಮಾಡಿ ;ಚಲನ ಚಿತ್ರಗಳನ್ನು ಪ್ರಜಾ ಹಿತಕ್ಕಾಗಿ ಬಳಸೋಣ ಎನ್ನುತ್ತಿದ್ದರು. ಇಲ್ಲಿ ನಾವು ವಿನಾಯಕ್ ತಮ್ಮ ವೃತ್ತಿ ಬದುಕನ್ನು ಅಧ್ಯಾಪಕರಾಗಿ ಪ್ರಾರಂಭಿಸಿದ್ದಾರೆಂಬುದನ್ನು ನೆನಪಿಸಿಕೊಳ್ಳಬಹುದು.

1949 ರಲ್ಲಿ ತೆಲುಗಿನಲ್ಲಿ ತೆರೆಕಂಡ ಗೃಹ ಪ್ರವೇಶಂ ಚಿತ್ರದಲ್ಲಿ ಕೂಡಾ ಇಡೀ ಬ್ರಹ್ಮಚಾರಿ ಚಿತ್ರದ ಛಾಯೆಗಳು ಇದ್ದವು. ಮತ್ತು ಆ ಚಿತ್ರದಲ್ಲಿ ನಟಿಸಿ ನಿರ್ದೇಶಿಸಿದ್ದ ಎಲ್. ವಿ. ಪ್ರಸಾದ್ ಎಲ್ಲೂ ಈ ಚಿತ್ರದ ಬಗ್ಗೆ ಹೇಳುವುದಿಲ್ಲ. ಅದೂ ಅಲ್ಲದೇ ಚಿತ್ರ ಸ್ಕ್ರಿಪ್ಟ್ ಬರೆದದ್ದು ತೆಲುಗಿನ ಖ್ಯಾತ ಬರಹಗಾರ ತ್ರಿಪುರನೇನಿ ಶ್ರೀನಿವಾಸ್ !
srujan column new
ಆದರೆ ವಿನಾಯಕ್‌ರು ಮಾಥ್ರ ತಮ್ಮೆಲ್ಲಾ ಚಿತ್ರಗಳಿಗೆ ಮರಾಠಿಯ ಖ್ಯಾತ ಕೃತಿಗಳನ್ನೇ ಆರಿಸಿಕೊಳ್ಳುತ್ತಿದ್ದರು. ಅವರ ಬಹುಪಾಲು ಚಿತ್ರಗಳು ಆಚಾರ್ಯ ಅತ್ರೆ, ಬೋಕಿಲ್, ಸಿ. ವೈ. ಜೋಷಿ, ಬಾವ್ ಡೇಕರ್, ಬಿ. ವಿ. ನಾಡಕರ್ಣಿ ಯಂತ ಹೆಸರಾಂತ ಲೇಖಕರ ಕೃತಿಗಳಾಗಿದ್ದವು.

ಜಿಡ್ಡು ಕೃಷ್ಣಮೂರ್ತಿ ಅವರ ತಾತ್ವಿಕ ಮಾರ್ಗದೆಡೆ ಆಕರ್ಷಿತರಾಗಿದ್ದ ವಿನಾಯಕ್ ತಮ್ಮ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಹರಿಜನ ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು. ವಿ. ಶಾಂತರಾಮ್ ವಿನಾಯಕರನ್ನು 1932 ರಲ್ಲೇ ‘ಅಯೋಧ್ಯಕೇ ರಾಜಾ’ (ಹಿಂದಿ ಮತ್ತು ಮರಾಠಿ) ಚಿತ್ರದಿಂದ ಬೆಳ್ಳಿ ತೆರೆಗೆ ಪರಿಚಯಿಸಿದ್ದರು. ನಂತರ ಬಂದ ‘ಜಲಿ ನಿಶಾನ್’ ಮಾಯಾ ಮಶ್ಚಿಂದ್ರ, ಸೈರಂಧ್ರಿ (ಭಾರತದ ಮೊದಲ ಕಲರ್ ಚಿತ್ರ) ಚಿತ್ರಗಳಿಂದ ಸಾಕಷ್ಟು ಮಿಂಚಿದ್ದರು.

1934 ರಲ್ಲೇ ವಿನಾಯಕ್ ‘ವಿಲಾಸೀ ಈಶ್ವರ್’ ಚಿತ್ರ ನಿರ್ದೇಶಿಸಿದ್ದರು. ‘ಹಂಸ್’ ಪಿಕ್ಚರ್ಸ್ ಸ್ಥಾಪಿಸಿದ ಮೇಲೆ ತಮ್ಮದೇ ಬ್ಯಾನರ್ ಅಡಿಯಲ್ಲಿ ‘ಲೂಯಾ’ ಸಿನಿಮಾ ತೆಗೆದು ಮತ್ತಷ್ಟು ಖ್ಯಾತರಾಗಿದ್ದರು. ಅರ್ಧಾಂಗಿ (1940) ಅದ್ಭುತ ಯಶಸ್ಸು ಕಂಡ ಚಿತ್ರ. ಅದೇ ವರ್ಷ ಆ ಚಿತ್ರ ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣಗೊಂಡು ಅಭೂತ ಪೂರ್ಣ ಯಶಸ್ಸು ಪಡೆದ ಚಿತ್ರ. ಅತ್ಯಂತ ಅಚ್ಚರಿಯ ಹಾಗೂ ಎಲ್ಲರೂ ಒಪ್ಪಬಹುದಾದ ಸಂಗತಿಯೆಂದರೆ 1940-50 ರ ದಶಕದಲ್ಲಿ ಸಾಕಷ್ಟು ತೆಲುಗು ಹಾಗೂ ತಮಿಳು ಕೌಟುಂಬಿಕ / ಸಾಮಾಜಿಕ ಚಿತ್ರಗಳ ಮಾತೃಕೆಗಳು ವಿನಾಯಕ್ ಯಶಸ್ವೀ ಮರಾಠಿ ಚಿತ್ರಗಳಾಗಿದ್ದವು.

ತಾರಾಗಣ :ಮಾಸ್ಟರ್ ವಿನಾಯಕ್, ಮೀನಾಕ್ಷಿ, ದಾಮುನ್ನ ಮಾಳವಾಂಕರ್ ಹಾಗೂ ಜಾವ್ಡೆಕರ್.
ನಿರ್ದೇಶನ : ಮಾಸ್ಟರ್ ವಿನಾಯಕ್, ಸ್ಕ್ರೀನ್ ಪ್ಲೇ : ಅತ್ರಿ ಪಿ. ಕೆ., ಸಂಭಾಷಣೆ : ಪಂಡಿತ್ ಇಂದ್ರ, ಸಿನಿಮಾಟೋಗ್ರಫಿ : ಪಾಂಡುರಂಗನಾಯಕ್, ಸಂಗೀತ : ದಾದಾ ಚಂಡೇಕರ್

Advertisements