ಕೈಯಿಂದ ಬರೆದ ಅದ್ಭುತ ವಿನ್ಯಾಸದ ದೊಡ್ಡ ಟೈಟಲ್ ಜೊತೆಯಲ್ಲೇ ಮುದ್ದಾದ ಅಕ್ಷರಗಳ ತಾಂತ್ರಿಕವರ್ಗದವರ ಹೆಸರುಗಳು..ಸಿನೆಮಾಗೆ ಸಂಬಂಧಪಟ್ಟಂತೆ ಕ್ಲೈಮಾಕ್ಸ್ ಜಲವರ್ಣ ದೃಶ್ಯಗಳು…ಹೀಗೆ ಹತ್ತು ಹಲವು ವಿಶಿಷ್ಟ…ಅದಕ್ಕಿಂತಲೂ ಹೆಚ್ಚಾಗಿ ಎಲ್ಲವೂ ಮಾನವ ಪ್ರತಿಭೆಯ ಅನಾವರಣ.

ಈ ಹೆಸರನ್ನು ದಕ್ಷಿಣ ಭಾರತದ ಪೋಸ್ಟರ್ ನೋಡುವ ಯಾವುದೇ ಪ್ರೇಕ್ಷಕ ಮರೆಯಲು ಸಾಧ್ಯವಿಲ್ಲ. 30-40 ವರ್ಷಗಳ ಹಿಂದಿನ ಸಿನಿಮಾ ಪೋಸ್ಟರ್ ಗಳನ್ನು ನೆನಪಿಸಿಕೊಳ್ಳಿ. ಕೈಯಿಂದ ಬರೆದ ಅದ್ಭುತ ವಿನ್ಯಾಸದ ದೊಡ್ಡ ಟೈಟಲ್ ಜೊತೆಯಲ್ಲೇ ಮುದ್ದಾದ ಅಕ್ಷರಗಳ ತಾಂತ್ರಿಕವರ್ಗದವರ ಹೆಸರುಗಳು..ಸಿನೆಮಾಗೆ ಸಂಬಂಧಪಟ್ಟಂತೆ ಕ್ಲೈಮಾಕ್ಸ್ ಜಲವರ್ಣ ದೃಶ್ಯಗಳು.ವಿಚಿತ್ರ ಆಕರ್ಷಕ ಬಣ್ಣಗಳ ನಾಯಕನ, ಅಥವಾ ನಾಯಕಿ ಪ್ರಧಾನ ಚಿತ್ರವಾದರೆ ನಾಯಕಿಯ ರೇಖಾ ಚಿತ್ರ .

ನಮ್ಮ ಬಾಲ್ಯದಲ್ಲಿ ಸಿನಿಮಾ ಪೋಸ್ಟರ್ ಗಳು ನಮಗೆ ಅದ್ಭುತ ಕಲಾವಿದನ
ಕಲಾಕೃತಿ ಗಳಂತ ಗೋಚರಿಸುತ್ತಿದ್ದವು .ಮತ್ತು ಅಂದಿನ ಪೋಸ್ಟರ್ ಕಲಾವಿದರಲ್ಲಿ ಗಂಗಾಧರ್ ನನ್ನ ಅತ್ಯಂತ ಮೆಚ್ಚಿನ ಕಲಾವಿದರಾಗಿದ್ದರು.ಈ ಪ್ಲಾಸ್ಟಿಕ್ ಪೋಸ್ಟರ್ ಯುಗ ಪ್ರಾರಂಭ ವಾಗುತ್ತಿದ್ದಂತೆ ಪೋಸ್ಟರ್ ಗಳಿಗೆ ಕಲಾ ಸ್ಪರ್ಶ ಕಮ್ಮಿಯಾಗುತ್ತ ಹೋಯಿತು, ಮತ್ತು ಜೊತೆಯಲ್ಲೇ ಈಶ್ವರ್,ಮಸ್ತಾನ್,ಸುರೇಶ,ಅಚು ಆಡ್ಸ್,ಪ್ರಕಾಶ್ ಚಿಕ್ಕ ಪಾಳ್ಯ ದಂತಹ ಕಲಾವಿದರ ಪೋಸ್ಟರ್ ಗಳು ಕಣ್ಣಿಗೆ ಬೀಳುತ್ತಿದ್ದವು.
srujan column new
ಗಂಗಾಧರ್ ‘ಹೆಸರಲ್ಲಿ ಒಂದು ಮೋಹಕತೆ ಇತ್ತು.ಕೇವಲ ಒಂದು ಅಡ್ಡವಾಗಿ ಸರಳ ರೇಖೆ ಎಳೆದು ಆಮೇಲೆ ಅದಕ್ಕೆ ಕೆಳಕ್ಕೆ ಸಣ್ಣ ರೇಖೆಗಳನ್ನು ಎಳೆಯುತ್ತಲೇ ನಾವೇ ಸ್ವಲ್ಪ ಹೊತ್ತು ಗಂಗಾಧರ್’ಗಳಾಗಿ ಹೋಗುತ್ತಿದ್ದವು.ಆಮೇಲೆ ನಮ್ಮ ಹೆಸರನ್ನು ಗಂಗಾಧರ್ ಶೈಲಿಯಲ್ಲಿ ಬರೆಯಲು ಅಭ್ಯಾಸ ಮಾಡುತ್ತಿದ್ದವು.

ಸಿನಿಮಾ ಪ್ರಚಾರ ಕಲೆಯಲ್ಲಿ ಉತ್ತುಂಗ ಶೃಂಗ ದಲ್ಲಿದ್ದ ಅದ್ವೀತಿಯ ಕಲಾವಿದ ಗಂಗಾಧರ್.ಕೇವಲ ಅವರ ಸಹಿ ನೋಡುತ್ತಿದ್ದಂತೆ ಅವರಲ್ಲಿನ ಕ್ರಿಯಾಶೀಲತೆಯನ್ನು ಅಂದಾಜು ಮಾಡಬಹುದಾಗಿದ್ದ ಗಂಗಾಧರ್ ಅಸಂಖ್ಯ ಚಿತ್ರ ಕಲಾವಿದರಿಗೆ ಸ್ಪೂರ್ತಿ ಯಾಗಿದ್ದರು. 1960 ರಿಂದ 80 ರವರೆಗೆ ದಕ್ಷಿಣದ ಎಲ್ಲ ಭಾಷೆಯ ಚಿತ್ರಗಳಿಗೆ ಪೋಸ್ಟರ್ ಕಲಾವಿದರಾಗಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಒತ್ತಿದ್ದ ಇವರು 2000 ಕ್ಕೂ ಚಿತ್ರಗಳಿಗೆ ಪ್ರಚಾರ ಕಲಾವಿದರಾಗಿದ್ದರು.ಡಾ.ರಾಜ್ ಚಿತ್ರವಾಗಲಿ,NTR ಚಿತ್ರವಾಗಲಿ,ಶಿವಾಜಿ ಗಣೇಶನ್ ಚಿತ್ರವಾಗಲಿ ಅದರಲ್ಲೂ ಪೌರಾಣಿಕ ಚಿತ್ರಗಳಾದರೆ ಮುಗಿದೇ ಹೋಯ್ತು ಗಂಗಾಧರ್ ಟಚ್ ಇಲ್ಲದೆ ಯಾವ ಸಿನಿಮಾ ಬಿಡುಗಡೆಯಾಗುತ್ತಿರಲಿಲ್ಲ.

GANG1 copy

ಪುಟ್ಟಣ್ಣ ನವರ ;ಮಾನಸ ಸರೋವರ’ದ ಪೋಸ್ಟರ್ ನಲ್ಲಿ ಶ್ರೀನಾಥ್,’ಅಂತ’ದ ಅಂಬರೀಶ್,ಕಾಮನ ಬಿಲ್ಲು ‘ನ ರಾಜ್ ,ಹಂತಕನ ಸಂಚು’ ದ ಫ್ರೆಂಚ್ ದಾಡಿ ಯ ವಿಷ್ಣು ,ಹೊಸ ಇತಿಹಾಸ ದ ‘ಟೈಗರ್ ಪ್ರಭಾಕರ್ ,ಚಾಣಕ್ಯ ಚಂದ್ರಗುಪ್ತ’ ದ ನಾಗೇಶ್ವರ ರಾವ್,ದಾನ ವೀರ ಶೂರ ಕರ್ಣದ ಎನ್.ಟಿ.ರಾಮರಾವ್ ಹೀಗೆ ಸಿನಿಮಾದ ಪಾತ್ರ ಗಳಿಗಿಂತ ಪೋಸ್ಟರ್ ಚಿತ್ರಗಳೇ ನಮ್ಮ ನೆನಪಲ್ಲಿ ಉಳಿಯುವಂತೆ ಚಿತ್ರಿಸುತ್ತಿದ್ದರು.

ಆ ಚೆಂದನೆಯ ನೀಳ ಕಾಲಿಗ್ರಾಫಿಕ್ ಕನ್ನಡ ,ತೆಲುಗು ಅಕ್ಷರಗಳು,ಉದ್ರೇಕಕಾರಿ ಕಡು ವರ್ಣ ಸಂಯೋಜನೆಗಳು,ಸರಳ ರೇಖಾ ಚಿತ್ರಗಳ ಸೊಗಸನ್ನು ನೀವು ಗಂಗಾಧರ ಪೋಸ್ಟರ್ಸ ನೋಡಿ ಅನುಭವಿಸಬೇಕು.

ಗಂಗಾಧರ್ ನಮ್ಮೊಂದಿಗೆ ಇಲ್ಲವೆನ್ನುವ ವಿಷಯ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. 2004 ಆಗಸ್ಟ್ 21 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಗಂಗಾಧರ್ ,ಎಲ್ಲಾ ಪ್ರತಿಭಾವಂತ ಕಲಾವಿದರ ನಿಧನದ ಸಾಧಾರಣ ಸುದ್ದಿಯಂತೆ ಇದು ಕೂಡ ಸುದ್ದಿಯಾಗಲೇ ಇಲ್ಲ.

ಪಶ್ಚಿಮ ಗೋದಾವರಿಯ ‘ಕಾಸ ಕೋಟಿ ಗಂಗಾಧರುದು’ ಆಮೇಲೆ ‘ಗಂಗಾಧರ್’ ಆಗುತ್ತಾರೆ.ಅಂದಿನ ಖ್ಯಾತ ಕಲಾವಿದರಾಗಿದ್ದ ‘ಕೇತಾ’ರಿಂದ ಚಿತ್ರ ಕಲೆಯನ್ನು ಗಂಗಾಧರ್ ಅಭ್ಯಸಿಸಿದ ನಂತರ ಅಂದು ಮದರಾಸಿನಿಂದ ಪ್ರಕಟ ವಾಗುತ್ತಿದ್ದ ‘ವಿಜಯ’,ಸ್ವಾತಿ,ಯುವ’ ಮಾಸಪತ್ರಿಕೆಗಳಲ್ಲಿ ಚಿತ್ರಕಲಾವಿದರಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ್ದರು.ಗಂಗಾಧರ್ ನಿಧನದ ಮುನ್ನ ತಮ್ಮ 66 ನೆಯ ವಯಸ್ಸಿನಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಮ ಕಾಲೀನ ಭಾರತೀಯ ಸಂಗೀತ ವಿದ್ವಾಂಸರ ವ್ಯಕ್ತಿ ಚಿತ್ರಗಳ ಸರಣಿ ಯನ್ನು ಪ್ರಾರಂಭಿಸಿದ್ದರು.

ಬರೀ ಕಲಾವಿದರಾಗಿರದೆ ಗಂಗಾಧರ್ ನಿರ್ದೇಶಿಸಿದ್ದ ತೆಲುಗು ಚಿತ್ರ ‘ಸಾಯಿ ಮಹಿಮಲು’ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು.ಅವರ ನಿರ್ದೇಶನದ ಮತ್ತೊಂದು ಮಕ್ಕಳ ಚಿತ್ರ ‘ಬಾಲ ಪ್ರಪಂಚಂ’ಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.ದೂರ ದರ್ಶನಕ್ಕಾಗಿ ‘ಶಾಂತಿ ಕಿರಣಂ’ಧಾರಾವಾಹಿ ನಿರ್ದೇಶಿಸಿ ಪ್ರಶಸ್ತಿಯನ್ನು ಪಡೆದಿದ್ದರು.

Advertisements