‘ಶ್ವಾಸ್” ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದ ಮೊದಲ ಮರಾಠಿ ಚಿತ್ರ. ಐದು ದಶಕಗಳ ನಂತರ ಪುನಾ ಮರಾಠಿ ಚಿತ್ರರಂಗಕ್ಕೆ ವೈಭವ ತಂದುಕೊಟ್ಟ ಚಿತ್ರ ಎನ್ನುತ್ತಾರೆ ಸೃಜನ್.

ಶ್ವಾಸ್’ 2004 ರಲ್ಲಿ ಮರಾಠಿಯಲ್ಲಿ ತೆರೆ ಕಂಡ ಅದ್ಭುತ ಚಿತ್ರ. ಆಸ್ಕರ್ ಗೆ ಎಂಟ್ರಿ ಪಡೆದ ಮೊತ್ತ ಮೊದಲ ಮರಾಠಿ ಚಿತ್ರ ಕೂಡ. 50 ವರ್ಷಗಳ ಹಿಂದೆ ‘ಶ್ಯಾಮ್ ಚಿ ಆಯಿ’ ಚಿತ್ರಕ್ಕೆ ರಾಷ್ಟ್ರದ ‘ಅತ್ಯುತ್ತಮ  ಚಿತ್ರ ಪ್ರಶಸ್ತಿಯನ್ನು ಬಿಟ್ಟರೆ ‘ಶ್ವಾಸ್’ 5 ದಶಕಗಳ ನಂತರ ಪುನಃ ಆ ವೈಭವ ವನ್ನು  ಮರಾಠಿ ಚಿತ್ರ ರಂಗಕ್ಕೆತಂದು ಕೊಟ್ಟಿದೆ. ಜೊತೆಗೆ  32 ಪ್ರಶಸ್ತಿಗಳನ್ನೂ ಪಡೆದು ಮರಾಠಿ ಚಿತ್ರರಂಗದಲ್ಲೇ ದಾಖಲೆ ನಿರ್ಮಿಸಿದೆ.

ತಮಾಷೆ ಎಂದರೆ ಚಿತ್ರದ ನಿರ್ಮಾಪಕರು ವಿಶ್ವನಾಥ್ ರಾಮಕೃಷ್ಣ ನಾಯಕ ಕನ್ನಡಿಗರು.ಮುಂಬೈ ನಲ್ಲಿ ಅವರು ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾಗ ಅವರ ಆಫೀಸ್ ಗೆ  ಮರಾಠಿ ರಂಗ ಭೂಮಿಯ ಖ್ಯಾತ ನಟರು,ನಿರ್ದೇಶಕರೂ ಆಗಿದ್ದ ಅರುಣ್  ನಾಲವಾಡೆ ಒಮ್ಮೆ  ಇನ್ ಕಂ ಟ್ಯಾಕ್ಸ್ ಫೈಲ್ ಮಾಡಲು ಬರುತ್ತಾರೆ.ತುಂಬಾ ಸಹಜವಾಗೇ ರಾಮಕ್ರಿಷ್ಣರಿಂದ  ಸಿನಿಮಾ ಮಾಡಬೇಕೆಂದಿದ್ದ ವಿಷಯ ತಿಳಿಯುತ್ತಿದ್ದಂತೆ ನಾಲವಾಡೆಯವರು ಮರು ದಿನ  ೧೫ ವರ್ಷ ಹಿಂದೆ ನಡೆದಿದ್ದ ವಾಸ್ತವ ಘಟನೆ ಆಧಾರಿತ ಮಾಧವಿ ಘರ್ಪುರೆ ಬರೆದ ಕಥೆ ತರುತ್ತಾರೆ.ನಂತರ ದ ಘಟನೆಗಳು ಸಿನಿಮಾ ಮಾದರಿಯಲ್ಲೇ ಚಕ ಚಕನೆ ನಡೆದು ಹೋಗುತ್ತವೆ,ವಿಶ್ವನಾಥರು ತಮ್ಮಸಮಾನ ಅಭಿರುಚಿಯ  ಸ್ನೇಹಿತರನ್ನು ಚಿತ್ರ ನಿರ್ಮಾಣಕ್ಕೆ ಸೇರಿಸಿಕೊಳ್ಳುತ್ತಾರೆ.ನಿರ್ಮಾಪಕರ ಮಾತಿಗೆ ನಾಲ ವಾಡೆಯವರು ನಿರ್ದೇಶನ ನಿರಾಕರಿಸುತ್ತಾರೆ.ಮತ್ತು ಅವರ ಕಸಿನ್ ಮತ್ತು ಮರಾಠಿ ರಂಗಭೂಮಿಯ ನಟ ನಿರ್ದೇಶಕರಾದ ಸಂದೀಪ್ ಸಾವಂತ್ ರನ್ನು ಸಲಹೆ ಮಾಡುತ್ತಾರೆ.

5

ಚಿತ್ರಕ್ಕೆ’ಶ್ವಾಸ್’ಎಂದು ನಾಮಕರಣವೂ ಆಗುತ್ತದೆ.ಸಂದೀಪರ  ಪೂರ್ಣ ವೃತ್ತಿಪರ ಟೀಂ 31 ದಿನಗಳ  ಶೆಡ್ಯೂಲ್ ನಲ್ಲಿ  ಕೊಂಕಣ್,ರತ್ನಗಿರಿ,ಚಿತ್ರದುರ್ಗ ಗಳಲ್ಲಿ ಚಿತ್ರೀಕರಣ  ಮಾಡುತ್ತಾರೆ.ಆಸ್ಪತ್ರೆಯ ದೃಶ್ಯಗಳನ್ನು ಪುಣೆಯ ಕೆ.ಎಂ  .  ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ್ದರು. ಚಿತ್ರೀಕರಣದ ಒಟ್ಟು ಸಮಯ  6  ತಿಂಗಳು. ಸಿಂಗ್ ಸನ್ ಎಫೆಕ್ಟ್ ಬಳಸಿ ಚಿತ್ರೀಕರಣ  ಮಾಡಿದ್ದರಿಂದ ಪ್ರತ್ಯೇಕ ಡಬ್ಬಿಂಗ್ ಅವಶ್ಯಕತೆ ಇರಲಿಲ್ಲ. 35 ಲಕ್ಷ  ರೂಪಾಯಿಗಳಲ್ಲಿ ಇಡೀ ಸಿನಿಮಾ ಸಿದ್ಧವಾಗಿತ್ತು ನೋಡಿ. ಸಿನಿಮಾ ಏಪ್ರಿಲ್ 9 ಕ್ಕೆ ಬಿಡುಗಡೆಯಾದರೂ ಇಡೀ  ಮಹಾರಾಷ್ಟ್ರದಲ್ಲಿ ಚಿತ್ರಕ್ಕೆ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಬಂದಿರಲಿಲ್ಲ. ಆಗಸ್ಟ್ 14 ಕ್ಕೆ ‘ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿ ಬರುತ್ತಿದ್ದಂತೆ ‘ಶ್ವಾಸ್ ಗೆ ಪ್ರೇಕ್ಷಕರ ಮಹಾಪೂರ.ಇಡೀ ದೇಶದ ತುಂಬಾ ‘ಶ್ವಾಸ್’!ಅಲ್ಲಿಂದ ಬರಿ ಇತಿಹಾಸ ನಿರ್ಮಿಸಿತು.ದೇಶದ 32 ಪ್ರತಿಷ್ಟಿ ತ ಅವಾರ್ಡುಗಳು ಬೆನ್ನಲ್ಲೇ ಬಂದವು.

ಶ್ವಾಸ್’ ಚಿತ್ರದಲ್ಲಿ ಮಹಾರಾಷ್ಟ್ರದ ತೀರ ಹಿಂದುಳಿದ ಗ್ರಾಮದ ಬಾಲಕ ಪರಶುರಾಮ ಹೆಸರಿನ ಪರ್ಶ್ಯಾ ನಿಗೆ ತುಂಬಾ ಅಪರೂಪದ ಕಾಯಿಲೆ Retino blastoma ಹೆಸರಿನ  ಕಣ್ಣಿನ ಕ್ಯಾನ್ಸರ್ ಬಂದಿರುತ್ತದೆ.ಇಲಾಜಿಗೆಂದು ಅವನ ಅಜ್ಜ (ಅರುಣ್ ನಾಲವಾಡೆ )ಮುಂಬೈ ಗೆ ತರುತ್ತಾನೆ.ಮುಂಬೈನ ಆಸ್ಪತ್ರೆಯಲ್ಲಿ ಪರ್ಶ್ಯಾನ ಸಂಬಂದಿ ವೈದ್ಯ ದಿವಾಕರ್, ಅಡ್ಮಿಟ್ ಆದ ನಂತರ ಕೆಲವು ಕಾಗದಗಳಲ್ಲಿ ಶಸ್ತ್ರಚಿಕಿತ್ಸೆಗೂ ಮಗುವಿಗೂ ಯಾವುದೇ ಸಂಬಂಧವಿಲ್ಲವೆಂದು ಸಹಿ ಮಾಡಿಸಿಕೊಳ್ಳುವಾಗ ಇಬ್ಬರೂ ಕಸಿ ವಿಸಿಯಾಗುತ್ತಾರೆ.ಆಸ್ಪತ್ರೆಯಲ್ಲಿನ ವೈದ್ಯಕೀಯ ಸಮಾಜ ಸೇವಕಿ(ಅಮೃತ ಸುಭಾಶ್)ಅಜ್ಜ ಮೊಮ್ಮಗರಿಗೆ ಧೈರ್ಯ ತುಂಬುತ್ತಾಳೆ.ಮಾನಸಿಕ ಸ್ಥೈರ್ಯ ನೀಡುತ್ತಾಳೆ. srujan column new

ವೈದ್ಯರು ಹೇಳುವ ಪ್ರಕಾರ ಪರ್ಶ್ಯಾ ಜೀವಂತ ಉಳಿಯ ಬೇಕೆಂದರೆ ಅವನ ದೃಷ್ಟಿಯನ್ನು ತೆಗೆಯಲೇ ಬೇಕಾಗುತ್ತದೆ. ಸಂಧಿಗ್ಧದ ಅಜ್ಜ..ಮುಗ್ಧ ಪರ್ಶ್ಯಾ ಇಬ್ಬರನ್ನು ನೋಡುತ್ತಾನಿಂತ ಆ ಹೆಣ್ಣುಮಗಳು ಎಂಥ ಎದೆ ತಟ್ಟುವ ಸ್ಥಿತಿ.ತಕ್ಷಣ ಆ ಹೆಣ್ಣುಮಗಳು ಆ ಇಬ್ಬರಿಗೂ ವಾಸ್ತವ ಹೇಳುವ ಪರಿ ಎಂಥವರನ್ನು ಒಂದು ಕ್ಷಣ ಕಣ್ಣು ಒದ್ದೆ ಮಾಡುತ್ತದೆ.ಕಾರಣಾಂತರದಿಂದ ಶಸ್ತ್ರ ಚಿಕಿತ್ಸೆ ಒಂದು ದಿನ ಮುಂದೂಡಿದಾಗ ಅಜ್ಜನ ಆನಂದ ಕ್ಕೆ ಪಾರವೇ ಇಲ್ಲದಂತಾಗುತ್ತದೆ.ತಕ್ಷಣ ಆತ ಪರ್ಶ್ಯಾನನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಮಾಯವಾಗಿಬಿಡುತ್ತಾನೆ.ಪರ್ಶ್ಯಾ ನಿಗೆ ಶಾಶ್ವತ ತೆರೆ ಬೀಳಲಿರುವ ಬೆಳಕಿನ ನಾಳೆ ಗಳನ್ನು ಇಂದೇ ತೋರಿಸಬೇಕೆಂಬ ಹಠ ಅಜ್ಜನಿಗೆ.ತನ್ನ ಕಣ್ಣ ಜಗತ್ತನ್ನು ಅಜ್ಜ ಪರ್ಶ್ಯಾನಿಗೆ ತೋರಿಸುವ ರೀತಿ ಎಂಥವರನ್ನೂ ಬೆರಗು ಗೊಳಿಸುತ್ತದೆ.ಏಕೆಂದರೆ ಆ ಮಗು ನೋಡುವ ಹಕ್ಕಿ , ಭೂಮಿ,ಮನುಷ್ಯರು,ಸುತ್ತಲಿನ ಜಗತ್ತು ಎಲ್ಲವೂ ಅಂದೇ  ಕೊನೆ. ನಾಳೆಯಿಂದ ಪರ್ಶ್ಯಾ ಕೇವಲ ಧ್ವನಿಯಿಂದ,ಸ್ಪರ್ಶದಿಂದ,ವಾಸನೆಯಿಂದಲೇ ಬದುಕಬೇಕಾಗುತ್ತದೆ ಮತ್ತು ಸಂಬಂಧಗಳನ್ನು ಹುಡುಕಬೇಕಾಗುತ್ತದೆ.

sandeepಕೊನೆಯಲ್ಲಿ ಕಪ್ಪು ಕನ್ನಡಕದ ಪರ್ಶ್ಯಾ ಮತ್ತು ಅಜ್ಜ ದೋಣಿಯೊಂದರಲ್ಲಿ ಇಳಿದು ಊರಕಡೆ ನಡೆಯುತ್ತಾ ತನ್ನ ಜನರನ್ನು ನೋಡುವ ದೃಶ್ಯವಂತೂ ಶ್ವಾಸ್’ಚಿತ್ರಕ್ಕೆ ಅತಂತ ಪರಿಣಾಮಕಾರಿಯಾಗಿದೆ.

ನಿರ್ದೇಶನ:ಸಂದೀಪ್ ಸಾವಂತ್, ನಿರ್ಮಾಪಕರು:ದೇವಿದಾಸ್  ಬಾಪಟ್,ರಾಜನ ಚೆಲ್ಕರ್,ದೀಪಕ್ ಚೌದರಿ,ನರೆಶ್ಚಂದ್ರ  ಜೈನ್,ಅರುಣ್ ನಲವಾಡೆ,ರಾಮಕೃಷ್ಣ, ತಾರಾಗಣ : ನಾಯಕ-  ಮೋಹನ್ ಪರಬ್ ಮತ್ತು ಸಂದೀಪ್ ಸಾವಂತ್, ಸಂಕಲನ:ನೀರಜ್ ವರಾಲಿಯ, ಭಾಷೆ:ಮರಾಠಿ, ಸಮಯ : 107ನಿಮಿಷಗಳು.ಬಿಡುಗಡೆ : ಏಪ್ರಿಲ್-2004, ಸಿನೆಮಾಟೋಗ್ರಫಿ :ಸಂಜಯ್ ಮೆಮಾನೆ, ಕಥೆ: ಮಾಧವಿ ಘರ್ಪುರೆ.

Advertisements