imm

ನಾವು “ಜಂಗಲ್ ಬುಕ್” ನೋಡಿದ್ದೇವೆ. ಅದರಲ್ಲಿ ಮರದಿಂದ ಮರಕ್ಕೆ ಜಿಗಿಯುವ ಹುಡುಗನ ಕಂಡು ಖುಷಿಯಾಗಿತ್ತು. ಯಾರೆಂದು ತಿಳಿದಿರಲಿಲ್ಲ, ಭಾರತೀಯನಂತೆ ತೋರಿತ್ತು. ಆದರೆ, ಅವನು ಬರಿಯ ಭಾರತೀಯನಲ್ಲ. ನಮ್ಮೂರಿನವನೇ…ಅಂದರೆ ಕರ್ನಾಟಕದ ಮೈಸೂರಿನವನು.

ಹಾಲಿವುಡ್ ನ ಹೆಸರಾಂತ ನಟ “ಸಾಬು ದಸ್ತಗೀರ್’ ಭಾರತೀಯ. ಅದರಲ್ಲೂ ನಮ್ಮ ರಾಜ್ಯದ ಮೈಸೂರಿನವನು. ಅಮೆರಿಕದ ಹಾಲಿವುಡ್ ಸಾಮ್ರಾಜ್ಯದಲ್ಲಿ ರಾಜನಂತೆಯೇ ಮರೆದ ಈತ, ಮಾವುತನ ಮಗ. ಮೈಸೂರು ಜಿಲ್ಲೆಯ ಕಾರಾಪುರದ ಕಾಡಿನಲ್ಲಿ 1927 ರಲ್ಲಿ ಹುಟ್ಟಿದವ.

1924 ರವರೆಗೆ ರಾಜ್ಯದಲ್ಲಿ (ಕರ್ನಾಟಕದ ನೆಲದಲ್ಲಿ) ಸುಮಾರು 175 ಚಿತ್ರಗಳು ತಯಾರಾಗಿದ್ದವು. ಎಲ್ಲವೂ ಮೂಕಿ ಚಿತ್ರಗಳೇ. ಟಾಕಿ ಚಿತ್ರದ ಪೈಕಿ ಭಕ್ತ ಧ್ರುವ ಮೊದಲು ಚಿತ್ರೀಕರಣ ಆರಂಭಿಸಿದರೂ, ಬಿಡುಗಡೆಯಾದದ್ದು ಸತಿ ಸುಲೋಚನ. ಚಿತ್ರರಂಗದ ಲೆಕ್ಕಾಚಾರದಲ್ಲಿ ಚಿತ್ರೀಕರಣ ಆರಂಭಿಸಿದ್ದು ಮೊದಲಲ್ಲ, ಬಿಡುಗಡೆಯಾದದ್ದು. ಅದೇ ಅಲ್ಲಿನ ತಾಂತ್ರಿಕ ಅಂಶ.
sabuelep
1936 ರಲ್ಲಿ ಬ್ರಿಟಿಷ್ ಫಿಲ್ಮ್ ಪ್ರೊಡ್ಯೂಶರ್ ಅಲೆಕ್ಸಾಂಡರ್ ಕೊರಡ ನಿರ್ಧರಿಸಿದ್ದ. ಆಗ ಆ ದೇಶದಲ್ಲಿ ಚಿತ್ರ ಸಾಮ್ರಾಜ್ಯದ ಮೊಗಲ್ ಎಂದೇ ಖ್ಯಾತಿಯಾಗಿದ್ದವ. ರುಡಾಲ್ಪ್ ಕ್ಲಿಪ್ಪಿಂಗ್ ಬರೆದ ಕಥೆ”ಟೂಮೈ ಆಫ್ ದಿ ಎಲಿಫೆಂಟ್ಸ್’ ಅನ್ನು ಈತ “ಎಲಿಫೆಂಟ್ ಬಾಯ್’ ಆಗಿ ಚಿತ್ರ ನಿರ್ಮಿಸಲು ಯೋಜಿಸಿದ್ದ. ಅದಕ್ಕೊಬ್ಬ ಹುಡುಗ ಬೇಕಿತ್ತು, ಸಾಹಸಿಗನಾಗಿರಬೇಕಿತ್ತು. ಸರಿ, ನಿರ್ದೇಶಕ ರಾಬರ್ಟ್ ಫ್ಲಹರ್ಟಿಯನ್ನು ಸೂಕ್ತ ನಟನಿಗಾಗಿ ಹುಡುಕಿಸಲು ಕಳಿಸಿದ್ದ. ಹುಡಗನಿಗಾಗಿ ಊರೂರು ಅಲೆದವನು ರಾಬರ್ಟ್.

ರಾಬರ್ಟ್ ಫ್ಲಹರ್ಟಿ ಅದುವರೆಗೆ ಕಥಾಚಿತ್ರವನ್ನು ಮಾಡಿರಲಿಲ್ಲ. ಆದರೆ ಸಾಕ್ಷ್ಯ ಚಿತ್ರದ ಪಿತಾಮಹನೆಂದೆ ಹೆಸರಾಗಿದ್ದ. “ನಾನೂಕ್ ಆಫ್ ದಿ ನಾರ್ತ್’(1922) ಸಾಕ್ಷ್ಯಚಿತ್ರ ನಿರ್ಮಿಸಿ ಹೆಸರಾಗಿದ್ದ. ಅದುವರೆಗೆ ಸಾಕ್ಷ್ಯಚಿತ್ರವೆಂಬ ಪ್ರಕಾರ ಇನ್ನೂ ಪರಿಗಣಿತವಾಗಿರಲಿಲ್ಲ. ರಾಬರ್ಟ್ ಹೀಗೇ ಹುಡುಕಿ, ಹುಡುಕಿ ಕೊನೆಗೆ ಮೈಸೂರಿನ ಅರಮನೆ ನೋಡಲು ಬಂದ. ಅಲ್ಲೇ ಪಕ್ಕದಲ್ಲಿ ಆನೆ ಕರೋಟಿ (ಆನೆಗಳನ್ನು ಕಟ್ಟುವ ಸ್ಥಳ)ಯಲ್ಲಿ ಒಬ್ಬ 13 ವರ್ಷದ ಹುಡುಗ ಆನೆಯೊಂದಿಗೆ ಬಿದ್ದು ಒದ್ದಾಡುತ್ತಿದ್ದನಂತೆ.
guruswamy coloumn copy
ಆನೆ ಸೊಂಡಿಲು ಹಿಡಿದು, ಮೇಲೆ ಹತ್ತಿ, ಕೆಳಗಿಳಿದು, ಬಾಲ ಹಿಡಿದು…ಹೀಗೆ. ಇದನ್ನು ಕಂಡು ಆಶ್ಚರ್ಯ ಪಟ್ಟ. ಅಷ್ಟೇ ಅಲ್ಲ, ತಮ್ಮ ಚಿತ್ರಕ್ಕೆ ಇವನೇ ಯೋಗ್ಯ ಎನಿಸಿತು. ಹುಡುಗನನ್ನು ತಮ್ಮೊಂದಿಗೆ ಕರೆದೊಯ್ಯುವ ನಿರ್ಧಾರಕ್ಕೆ ಬಂದು ಸಂಬಂಧಿಕರನ್ನು ಹಿಡಿದು ಸಾಬುವೊಂದಿಗೇ ಹೊರಟೇ ಬಿಟ್ಟ.

ಸಾಬುವಿನ ಅಪ್ಪ ಬದುಕಿರಲಿಲ್ಲ. ಕಾರಾಪುರದ ಕಾಡಿನಲ್ಲಿ ಆನೆಯ ಮಾವುತನ ಕುಟುಂಬ. 1936 ರ ಸುಮಾರಿನಲ್ಲಿ ಅತ್ತ ಸಾಗಿದವ ಮತ್ತೆ ವಾಪಸು ತಿರುಗಿ ನೋಡಲಿಲ್ಲ. ಹಾಲಿವುಡ್ ಹಾಗೂ ಬ್ರಿಟನ್ ಫಿಲ್ಮ್ ಇಂಡಸ್ತ್ರಿಯಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ. ಆ ಪೈಕಿ ಎಲಿಫೆಂಟ್ ಬಾಯ್ 1937 ರ ಏಪ್ರಿಲ್ 5ರಂದು ಅಮೆರಿಕದಲ್ಲಿ ಬಿಡುಗಡೆಗೊಂಡಿತು. ನಂತರ ಥೀಫ್ ಆಫ್ ಬಾಗ್ದಾದ್ (1940), ಜಂಗಲ್ ಬುಕ್ (1942), ಅರೇಬಿಯನ್ ನೈಟ್ಸ್(1942) ಸೇರಿದಂತೆ 27 ಚಿತ್ರಗಳಲ್ಲಿ ನಟಿಸಿದ.
D11659
ಹೆಸರು, ಹಣ ಎಲ್ಲವನ್ನೂ ಗಳಿಸಿದ. ಅಮೆರಿಕದ ನಟಿ ಮರ್ಲಿನ್ ಕೂಪರ್ ಅವಳನ್ನು ಮದುವೆಯಾಗಿ ಎರಡು ಮಕ್ಕಳ ಪಡೆದ. ಪೌಲ್ ಸಾಬು 1980 ರಲ್ಲಿ ರಾಕ್ ಬ್ಯಾಂಡ್ ಸ್ಥಾಪಿಸಿ ಪಾಪ್‌ಸಿಂಗರ್ ಆದ. ಜಾಸ್ಮಿನ್ ಸಾಬು ಸಿನಿಮಾಗಳಲ್ಲಿ ಪ್ರಾಣಿಗಳ ರಿಂಗ್ ಮಾಸ್ಟರ್‌ನಂತೆ ದುಡಿದು 2001 ರಲ್ಲಿ ಸತ್ತಳು. ಸಾಬು ದಸ್ತಗೀರ್ ಸಹ 1963 ರ ಡಿಸೆಂಬರ್ 2 ರಂದು ಮರಣಹೊಂದಿದ.

ಇವನು ಮೊದಲು ಪಾಶ್ಚಾತ್ಯ ಜಗತ್ತಿಗೆ ರಫ್ತಾದ ಭಾರತದ ಹೀರೋ. ಅಂದರೆ ಹಾಲಿವುಡ್‌ನಲ್ಲಿ ಪ್ರಸಿದ್ಧನಾದ ಮೊದಲ ಭಾರತದ ಹೀರೋ (ನಾಯಕ ನಟ). ತನ್ನ್ನ ನಟನೆಯಲ್ಲದೇ ಮಾದರಿ ಎನಿಸಿದ್ದು ಅಲ್ಲಿನ ಪ್ರಜೆಯಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದು. ಅದಕ್ಕೆ ಅಲ್ಲಿನ ಸರಕಾರವೂ ಶೌರ‍್ಯ ಮತ್ತು ಸಾಹಸ ಪ್ರಶಸ್ತಿ ನೀಡಿ ಗೌರವಿಸಿತು. ಅಷ್ಟಕ್ಕೇ ಮುಗಿಯಲಿಲ್ಲ. ಅಮೆರಿಕದ ಚರಿತ್ರೆಯನ್ನು ಅಜರಾಮರಗೊಳಿಸಿದ ದಿಗ್ಗಜರಿಗೆ ಸಲ್ಲಿಸುವ ಗೌರವ ಸಲ್ಲಿಸಿದೆ. ಅದೆಂದರೆ ಅಮೆರಿಕದ ಫಾರೆಸ್ಟ್ ಲಾನ್ ಮೆಮೋರಿಯಲ್ ಪಾರ್ಕ್ ಎಂಬಲ್ಲಿ ಅವನ ಸಮಾಧಿ ಮಾಡಲಾಗಿದೆ. ಆ ಮೂಲಕ ನೆನಪನ್ನು ಹಸಿರಾಗಿಸಿದ್ದು, ಇಂದಿಗೂ ಅದನ್ನು ನೋಡಬಹುದು.
images
ತನ್ನ ನಟನೆ, ಸೌಜನ್ಯ, ದೇಹದಾರ್ಢ್ಯದಿಂದಲೂ ಹಲವರ ಕಣ್ಮಣಿಯಾಗಿದ್ದ. ಸ್ವತಃ ಹಾಲಿವುಡ್ ನಟರೇ ಮೆಚ್ಚಿಕೊಂಡಿದ್ದರು ಈತನನ್ನು. ಮಕ್ಕಳು ಸದಾ ಇಷ್ಟ ಪಡುವ “ಜಂಗಲ್ ಬುಕ್’ ಈತನದ್ದೇ ಮೊದಲಿನದು.

Advertisements