ಹೊಸ ಸಿನಿಮಾ ‘ಆಗ್ಯಾತ್” ಬಿಡುಗಡೆಯಾಗಿದೆ. ರಾಂಗೋಪಾಲ್ ವರ್ಮ ಯಾವಾಗಲೂ ಚಿತ್ರ ಪ್ರಚಾರಕ್ಕೆ ಒಂದು ತಂತ್ರ ಹೊಸೆದೇ ಹೊಸೆಯುತ್ತಾರೆ. ಈ ಬಾರಿಯೂ ಹೊಸ ತಂತ್ರವಿದೆ.

ಪ್ರೇಕ್ಷಕರನ್ನು ಹೆದರಿಸುವ ಸಿನಿಮಾಗಳನ್ನು ನಿರ್ದೇಶಿಸುವ ರಾಮ್ ಗೋಪಾಲ್ ವರ್ಮಾ ಮತ್ತೊಂದು ಹಾರರ್ ಚಿತ್ರ ಸಿದ್ಧಪಡಿಸಿದ್ದಾರೆ. ವರ್ಮಾರ ಹೊಸ ಚಿತ್ರ ಅಗ್ಯಾತ್ ಶುಕ್ರವಾರ ತೆರೆ ಕಂಡಿದೆ. ಶ್ರೀಲಂಕಾದ ಅರಣ್ಯದಲ್ಲಿ ಚಿತ್ರಿಸಲಾಗಿರುವ ಈ ಚಿತ್ರ ಯಥಾ ಪ್ರಕಾರ ಅಜ್ಞಾತ ವಸ್ತುವೊಂದು ಚಿತ್ರ ನಿರ್ಮಾಣ ತಂಡದ ಸದಸ್ಯರನ್ನು ಕೊಲ್ಲುವ ಕತೆ ಹೊಂದಿದೆ.
13b ನಿತಿನ್, ಪ್ರಿಯಾಂಕಾ ಕೊಠಾರಿ, ಗೌತಮ್, ರವಿ  ಕಾಳೆಯಂತಹ ಆಫ್ ಬೀಟ್ ತಾರೆಗಳು  ಚಿತ್ರದಲ್ಲಿದ್ದಾರೆ. ಚಿತ್ರ ನಿರ್ಮಾಣವಾಗಿ ಹಲವು  ತಿಂಗಳುಗಳೇ ಕಳೆದಿವೆ, ಈ ಮಧ್ಯೆ ವರ್ಮಾ ಫೂಂಕ್  ಹಾಗೂ ರಣ್ ಚಿತ್ರದಲ್ಲಿ ವರ್ಮಾ  ತೊಡಗಿಸಿಕೊಂಡಿದ್ದರಿಂದ ಬಿಡುಗಡೆ ವಿಳಂಬವಾಗಿದೆ.  ರಿಡ್ಲಿ ಸ್ಕಾಟ್‌ರ ಏಲಿಯನ್ ಹಾಗೂ ಜಾನ್  ಕಾರ್ಪೆಂಟರ್, ಬ್ಲೇರ್ ವಿತ್ ಪ್ರೆಸೆಂಟ್‌ನಂತಹ ಚಿತ್ರಗಳ ಮೂಲಕ ಪ್ರಭಾವಿತರಾಗಿರುವ ವರ್ಮಾ ಹೊಸ ಕತೆ, ವಿಭಿನ್ನ ನಿರೂಪಣೆಯ ಮೂಲಕ ಜನರನ್ನು ಹೆದರಿಸಲಿದ್ದೇನೆ ಎನ್ನುತ್ತಾರೆ ರಾಮ್‌ಗೋಪಾಲ್. ಈ ಮೊದಲು ಫೂಕ್, ಡರ್ನಾ ಮನಾ ಹೈ ನಂತಹ ಚಿತ್ರಗಳಲ್ಲೂ ಇದೇ ವಿಧಾನ ಬಳಸಿದ್ದರು ವರ್ಮಾ.
15b
ಚಿತ್ರದ ಪ್ರಚಾರಕ್ಕಾಗಿ ಹೊಸ ತಂತ್ರವೊಂದನ್ನೂ ವರ್ಮಾ ಕಂಡುಕೊಂಡಿದ್ದಾರೆ. ತಮ್ಮಂತೆ ಪ್ರೇಕ್ಷಕರನ್ನು ಬೆದರಿಸಬಲ್ಲ ನಿರ್ದೇಶಕನ ತಲಾಶ್ ಈ ಚಿತ್ರದ ಮೂಲಕ ನಡೆಸಲಿದ್ದಾರೆ. ಹೊಸ ಹಾರರ್ ನಿರ್ದೇಶಕನ ಹುಡುಕಾಟಕ್ಕಾಗಿ ಅಗ್ಯಾತ್ ಸ್ಪರ್ಧೆ ಆಯೋಜಿಸಲಾಗಿದ್ದು, ಭಾವಿ ನಿರ್ದೇಶಕರಾಗಬಯಸುವವರು ಹ್ಯಾಂಡಿ ಕ್ಯಾಮ್, ಮೊಬೈಲ್, ಡಿಜಿಟಲ್ ಕ್ಯಾಮೆರಾ ಅಥವಾ ಇನ್ನಾವುದೇ ಕ್ಯಾಮೆರಾ ಬಳಸಿ ಚಿಕ್ಕ ಹಾರರ್ ಚಿತ್ರವೊಂದನ್ನು ನಿರ್ಮಿಸಿ ಡಿವಿಡಿ ಅಥವಾ ಕೊರಿಯರ್ ಮೂಲಕ ವರ್ಮಾಗೆ ಕಳುಹಿಸಬೇಕು. ಆಯ್ಕೆಯಾದವರಿಗೆ ವರ್ಮಾರ ಮುಂದಿನ ಹಾರರ್ ಚಿತ್ರ ನಿರ್ದೇಶಿಸುವ ಸುಯೋಗ.

ಈ ಬಗ್ಗೆ ಮಾಹಿತಿಗಾಗಿ http://www.agyat-theunknown.com ಜಾಲಾಡಬೇಕು. ಬಹು ನಿರೀಕ್ಷಿತ ಫೂಂಕ್ ಚಿತ್ರದ ಪ್ರಚಾರಕ್ಕಾಗಿ ಹೊಸ ತಂತ್ರವನ್ನು ವರ್ಮಾ ಬಳಸಿದ್ದರು. ಚಿತ್ರವನ್ನು ಒಬ್ಬರೇ ಸಿನಿಮಾ ಮಂದಿರದಲ್ಲಿ ನೋಡಿದರೆ ಬಹುಮಾನವನ್ನೂ ನೀಡುವುದಾಗಿ ಘೋಷಿಸಿದ್ದರು. ಬೆಂಗಳೂರಿನ ಯುವಕನೊಬ್ಬ ಈ ಸಾಹಸ ಮಾಡಿ ಪ್ರಚಾರವನ್ನೂ ಪಡೆದುಕೊಂಡಿದ್ದರು. ಅಂದ ಹಾಗೆ ಅಗ್ಯಾತ್ ಪ್ರೇಕ್ಷಕರನ್ನು ಬೆದರಿಸುತ್ತದೋ ಅಥವಾ ಚಿತ್ರವೇ ಅಜ್ಞಾತವಾಗುತ್ತದೋ ಎನ್ನುವುದು ಸದ್ಯ ಮಟ್ಟಿಗೆ ಕುತೂಹಲಕ್ಕೆ ಕಾರಣವಾಗಿದೆ.

Advertisements