ಸುಚಿತ್ರಾ ಬಾಲಜಗತ್ ಮತ್ತು ಸುಚಿತ್ರಾ ಫಿಲಂ ಮತ್ತು ಕಲ್ಚರಲ್ ಅಕಾಡೆಮಿ ಸಂಯುಕ್ತವಾಗಿ ಜೂ. ೧೯ ರಿಂದ ೨೬ ರವರೆಗೆ ವಿಶೇಷ ಚಿತ್ರಗಳ ಪ್ರದರ್ಶನ ಏರ್ಪಡಿಸಿದೆ.
ಜೂ. ೧೯ ರಂದು ಸಂಜೆ ೬.೪೫ ಕ್ಕೆ “ರಿವರ್’ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಚಿತ್ರದ ವಿಶೇಷವೆಂದರೆ ಇದರ ನಿರ್ದೇಶನ ಜೀನ್ ರೀನೊಯರ್‌ರದ್ದು. ಆದರೆ ಪ್ರಸಿದ್ಧ ನಿರ್ದೇಶಕ ಸತ್ಯಜಿತ್ ರೇ ಈ ಚಿತ್ರ ನಿರ್ಮಿಸುವಾಗ ರೀನೋಯರ್‌ನಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.
ಜೂ. ೨೦ ರಂದು ಸಂಜೆ ೬. ೪೫ ಕ್ಕೆ ಜೀನ್ ರಿನೋಯರ್ ನ “ದಿ ಲೋವರ್ ಡೆಪ್ತ್ಸ್’ ಪ್ರದರ್ಶಿತವಾಗಲಿದೆ. ಜೂ. ೨೧ ರಂದು ಬೆಳಗ್ಗೆ ೧೦. ೩೦ ಕ್ಕೆ ಇದೇ ಮ್ಯಾಕ್ಸಿಂ ಗಾರ್ಕಿಯ “ದಿ ಲೋವರ್ ಡೆಪ್ತ್ಸ್’ ಅಳವಡಿಸಿಕೊಂಡು ಇಂದಿನ ಆರ್ಥಿಕ ಹಿಂಜರಿತ ಸನ್ನಿವೇಶಗಳಿಗೆ ಹೊಂದಿಸಿ ಮೈಸೂರು ಹುಡುಗರು ರೂಪಿಸಿದ “ಜಾಗ ದೊರೆಯುತ್ತದೆ’ ಚಿತ್ರವನ್ನು ವೀಕ್ಷಿಸಬಹುದು.
ಈ ಚಿತ್ರದ ವಿಶೇಷವೆಂದರೆ ಮೈಸೂರು ಹುಡುಗರೇ ಸೇರಿ ಹಣ ಹೊಂದಿಸಿ ೩ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವುದು. ಇದರ ನಿರ್ದೇಶನ ಎನ್.ಎಸ್. ಇಸ್ಲಾವುದ್ದೀನ್.
ಮತ್ತೆ ಜೂ. ೨೫ ರಂದು ಸಂಜೆ ೬. ೪೫ ಕ್ಕೆ ಆಲ್‌ಫ್ರೆಡ್ ಹಿಚ್ಕಾಕ್ ನ “ರಿಚ್ ಆಂಡ್ ಸ್ಟ್ರೇಂಜ್’ ಚಿತ್ರ ಪ್ರದರ್ಶಿತವಾದರೆ, ಜೂ. ೨೬ ರಂದು ಪುನಾ ಹಿಚ್ಕಾಕ್‌ನ ಮತ್ತೊಂದು ಚಿತ್ರ “ಮ್ಯಾಂಕ್ಸ್ ಮ್ಯಾನ್’ ನೋಡಬಹುದು. ಮಾಹಿತಿಗೆ ಸುಚಿತ್ರಾ ಫಿಲಂ ಸೊಸೈಟಿ, ೩೬, ಬಿ. ವಿ. ಕಾರಂತ ರಸ್ತೆ (ಒಂಬತ್ತನೆ ಮುಖ್ಯರಸ್ತೆ), ಬನಶಂಕರಿ ಎರಡನೇ ಹಂತ, ಬೆಂಗಳೂರು. ದೂ : ೨೬೬೦೧೦೬೪.

ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಹೆಸರಾಂತ ನಿರ್ದೇಶಕ ಜೀನ್ ರಿನೋಯೆರ್ ನ “ರಿವರ್ ” ಚಿತ್ರ ಪ್ರದರ್ಶಿತವಾಗುತ್ತಿದೆ. ಇದರಲ್ಲಿ ನಮ್ಮ ಬಂಗಾಳವಿದೆ…ಅದಕ್ಕಿಂತಲೂ ಹೆಚ್ಚಾಗಿ ದಿಗ್ಗಜ ಸತ್ಯಜಿತ್ ರೇ ಸಹಾಯಕ ನಿರ್ದೇಶಕರಾಗಿ ಈ ಚಿತ್ರಕ್ಕೆ ದುಡಿದಿದ್ದಾರೆ.

ಸುಚಿತ್ರಾ ಬಾಲಜಗತ್ ಮತ್ತು ಸುಚಿತ್ರಾ ಫಿಲಂ ಮತ್ತು ಕಲ್ಚರಲ್ ಅಕಾಡೆಮಿ ಸಂಯುಕ್ತವಾಗಿ ಜೂ. 19 ರಿಂದ 26 ರವರೆಗೆ ವಿಶೇಷ ಚಿತ್ರಗಳ ಪ್ರದರ್ಶನ ಏರ್ಪಡಿಸಿದೆ.

ಜೀನ್ ಲಿನೋಯರ್
ಜೀನ್ ಲಿನೋಯರ್

ಜೂ. 19 ರಂದು ಸಂಜೆ 6.45 ಕ್ಕೆ “ರಿವರ್’  ಚಿತ್ರ ಪ್ರದರ್ಶನಗೊಳ್ಳಲಿದೆ. ಈ  ಚಿತ್ರದ  ವಿಶೇಷವೆಂದರೆ ಇದರ ನಿರ್ದೇಶನ ಜೀನ್  ರೀನೊಯರ್‌ರದ್ದು. ಆದರೆ  ಪ್ರಸಿದ್ಧ  ನಿರ್ದೇಶಕ ಸತ್ಯಜಿತ್ ರೇ ಈ ಚಿತ್ರ  ನಿರ್ಮಿಸುವಾಗ ರೀನೋಯರ್‌ನಲ್ಲಿ  ಸಹ  ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ಜೂ. 20 ರಂದು ಸಂಜೆ 6.45 ಕ್ಕೆ ಜೀನ್ ರಿನೋಯರ್ ನ “ದಿ ಲೋವರ್ ಡೆಪ್ತ್ಸ್”  ಪ್ರದರ್ಶಿತವಾಗಲಿದೆ. ಜೂ. 21 ರಂದು ಬೆಳಗ್ಗೆ 10.30 ಕ್ಕೆ ಇದೇ ಮ್ಯಾಕ್ಸಿಂ  ಗಾರ್ಕಿಯ “ದಿ ಲೋವರ್ ಡೆಪ್ತ್ಸ್’ ಅಳವಡಿಸಿಕೊಂಡು ಇಂದಿನ ಆರ್ಥಿಕ ಹಿಂಜರಿತ ಸನ್ನಿವೇಶಗಳಿಗೆ ಹೊಂದಿಸಿ ಮೈಸೂರು ಹುಡುಗರು ರೂಪಿಸಿದ “ಜಾಗ ದೊರೆಯುತ್ತದೆ’ ಚಿತ್ರವನ್ನು ವೀಕ್ಷಿಸಬಹುದು.

jean
ಈ ಚಿತ್ರದ ವಿಶೇಷವೆಂದರೆ ಮೈಸೂರು ಹುಡುಗರೇ ಸೇರಿ ಹಣ ಹೊಂದಿಸಿ 3 ಲಕ್ಷ  ರೂ. ವೆಚ್ಚದಲ್ಲಿ ನಿರ್ಮಿಸಿರುವುದು. ಇದರ ನಿರ್ದೇಶನ ಎನ್.ಎಸ್. ಇಸ್ಲಾವುದ್ದೀನ್.

ಮತ್ತೆ ಜೂ. 25 ರಂದು ಸಂಜೆ 6.45 ಕ್ಕೆ ಆಲ್‌ಫ್ರೆಡ್ ಹಿಚ್ಕಾಕ್ ನ “ರಿಚ್ ಆಂಡ್  ಸ್ಟ್ರೇಂಜ್ ” ಚಿತ್ರ ಪ್ರದರ್ಶಿತವಾದರೆ, ಜೂ. 26 ರಂದು ಪುನಾ ಹಿಚ್ಕಾಕ್‌ನ  ಮತ್ತೊಂದು ಚಿತ್ರ “ಮ್ಯಾಂಕ್ಸ್ ಮ್ಯಾನ್’ ನೋಡಬಹುದು. ಮಾಹಿತಿಗೆ ಸುಚಿತ್ರಾ  ಫಿಲಂ ಸೊಸೈಟಿ, 36, ಬಿ. ವಿ. ಕಾರಂತ ರಸ್ತೆ (ಒಂಬತ್ತನೆ ಮುಖ್ಯರಸ್ತೆ),  ಬನಶಂಕರಿ ಎರಡನೇ ಹಂತ, ಬೆಂಗಳೂರು. ದೂ : 26601064.

Advertisements