ಕನಸು ಕಾಣಲು ಹಣ ನೀಡಬೇಕಿಲ್ಲ, ಆದರೆ ಅದು ವಾಸ್ತವವಾಗಿರಬೇಕು. ಇದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಶ್ಯಾಂ ಬೆನಗಲ್ ಅನಿಸಿಕೆ. ಅವರು ನಡೆದಿದ್ದೂ ಹಾಗೆ, ೧೯೭೦ರಲ್ಲಿ ಚಿತ್ರ ನಿರ್ದೇಶಿಸುವುದಕ್ಕಿಂತಲೂ ಹಣ ಹೊಂದಿಸುವುದು ಕಷ್ಟದ ಮಾತಾಗಿತ್ತು. ಈ ಸಂದರ್ಭದಲ್ಲಿ ಶ್ಯಾಮ್ ಐಡಿಯಾ ಮಾಡಿದರು. ಗುಜರಾತ್‌ನ ಆಣಂದ್‌ನಲ್ಲಿ ನಡೆದ ಹಾಲು ಉದ್ಯಮದ ಅಭಿವೃದ್ಧಿ ಗಾಥೆಯನ್ನು ಸಿನಿಮಾ ಮಾಡುವ ಉದ್ದೇಶ ಅವರಿಗಿತ್ತು. ಆದರೆ ಹಣವಿರಲಿಲ್ಲ, ಅದಕ್ಕಾಗಿ ರಾಜ್ಯದ ೫ ಲಕ್ಷ ಹಾಲು ಉತ್ಪಾದಕರಿಂದ ತಲಾ ೨ ರೂ. ಸಂಗ್ರಹಿಸಿ ಮಂಥನ್ ಸಿನಿಮಾ ನಿರ್ದೇಶಿಸಿದರು. ಹಾಲು ಉತ್ಪಾದಕರು ಹಣ ನೀಡಿದ್ದಷ್ಟೇ ಅಲ್ಲ ಟ್ರಕ್, ಟ್ರ್ಯಾಕ್ಟರ್‌ಗಳಲ್ಲಿ ಬಂದು ಸಿನಿಮಾ ನೋಡಿದರು, ಪರಿಣಾಮ ಚಿತ್ರ ಹಿಟ್ ಆಯಿತು, ಪ್ರಶಸ್ತಿಯನ್ನೂ ತಂದುಕೊಟ್ಟಿತು.
ಡಿ.೧೪, ೧೯೩೪ರಲ್ಲಿ ಆಂಧ್ರ ಪ್ರದೇಶದ ಸಿಕಂದರಾಬಾದ್‌ನ ತ್ರಿಮುಲಗರಿಯಲ್ಲಿ ಜನಿಸಿದ ಶ್ಯಾಮ್ ಸಿನಿಮಾದ ಅ, ಆ, ಇ, ಈ ಅಕ್ಷರಾಭ್ಯಾಸ ತಂದೆಯಿಂದ ಕಲಿತರು. ಶ್ಯಾಮ್ ತಾಯಿ ಖ್ಯಾತ ನಿರ್ದೇಶಕ, ನಟ ಗುರುದತ್‌ರ ಸಂಬಂಯೂ ಹೌದು. ಮನೆಯಲ್ಲಿ ತಂದೆಯ ಬಳಿಯಿದ್ದ ೧೬ ಎಂ.ಎಂ.ಕೆಮೆರಾದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಈ ಪುಟ್ಟ ನಿರ್ದೇಶಕ ಹೈದರಾಬಾದ್‌ನ ಒಸ್ಮಾನಿಯಾ ವಿಶ್ವವಿದ್ಯಾಲಯದ ನಿಜಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು.
೧೯೫೯ರಲ್ಲಿ ಖ್ಯಾತ ಜಾಹೀರಾತು ಸಂಸ್ಥೆ ಲಿಂಟಾಸ್‌ನಲ್ಲಿ ಜಾಹೀರಾತುಗಳ ಸ್ಕ್ರೀನ್ ಪ್ಲೇ ಬರೆಯುವ ಹೊಣೆಗಾರಿಕೆ ಹೊಂದಿದ್ದ ಶ್ಯಾಮ್ ಕೆಲ ವರ್ಷಗಳಲ್ಲಿ ಮುಖ್ಯಸ್ಥನ ಸ್ಥಾನಕ್ಕೇರಿದರು. ಇಷ್ಟರಲ್ಲೆ ಮೊದಲ ಸಾಕ್ಷ್ಯ ಚಿತ್ರ ಘೇರ್ ಬೇಥಾ ಗಂಗೆ (೧೯೬೨) ಸಿದ್ಧಗೊಂಡಿತು. ಗುಜರಾತಿ ಭಾಷೆಯ ಈ ಚಿತ್ರ ಶ್ಯಾಮ್‌ರಿಗೆ ಚಿತ್ರ ನಿರ್ಮಾಣದಲ್ಲಿ ಆಸಕ್ತಿ ಮೂಡಿಸಿತು. ಆದರೆ ಮೊದಲ ಚಿತ್ರ ನಿರ್ದೇಶನಕ್ಕೆ ಅವರು ತೆಗೆದುಕೊಂಡ ಅವ ಭರ್ತಿ ೧೦ ವರ್ಷ.
ಈ ನಡುವೆ ಎಎಸ್‌ಪಿ ಎಂಬ ಜಾಹೀರಾತು ಸಂಸ್ಥೆ ಸ್ಥಾಪಿಸಿದ ಶ್ಯಾಮ್ ೯೦೦ಕ್ಕೂ ಹೆಚ್ಚು ಸಾಕ್ಷ್ಯಚಿತ್ರ ಹಾಗೂ ಜಾಹೀರಾತು ನಿರ್ಮಿಸಿದರು. ೧೯೬೬ರಿಂದ ೧೯೭೩ರವರೆಗೆ ಫಿಲ್ಮ್ ಆಂಡ್ ಟೆಲಿವಿಶನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ೧೯೬೭ರಲ್ಲಿ ಅವರ ಚೈಲ್ಡ್ ಆಫ್ ದಿ ಸ್ಟ್ರೀಟ್ ಅಪಾರ ಖ್ಯಾತಿ ಹಾಗೂ ಹೆಸರು ತಂದು ಕೊಟ್ಟಿತು. ಈ ಸಂದರ್ಭದಲ್ಲಿ ಹೋಮಿ ಬಾಬಾ ಫೆಲೋಶಿಪ್ ಪಡೆದ ಅವರು ನ್ಯೂಯಾರ್ಕ್‌ನಲ್ಲಿ ಕಿರುತೆರೆಯಲ್ಲಿ ಚಿಕ್ಕಮಕ್ಕಳ ಸಾಕ್ಷ್ಯ ಚಿತ್ರಗಳ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಮುಂಬೈಗೆ ವಾಪಸ್ಸಾದ ನಂತರ ಶ್ಯಾಮ್‌ರ ಮೊದಲ ಚಿತ್ರಕ್ಕೆ ಕಾಲ ಕೂಡಿ ಬಂತು. ೧೯೭೩ರಲ್ಲಿ ಅಂಕುರ್ ಚಿತ್ರದ ಮೂಲಕ ನಿರ್ದೇಶಕರಾದರು. ಅನಂತ್ ನಾಗ್, ಶಬಾನಾ ಆಜ್ಮಿ ಅಭಿನಯದ ಈ ಚಿತ್ರ ಪ್ರೇಕ್ಷಕರು ಹಾಗೂ ವಿಮರ್ಶಕರಿಗೆ ಮೆಚ್ಚುಗೆಯಾಯಿತು. ಚಿತ್ರಕ್ಕಾಗಿ ೧೯೭೫ರಲ್ಲಿ ಎರಡನೆಯ ಅತ್ಯುತ್ತಮ ಚಿತ್ರ ಹಾಗೂ ಶಬಾನಾ ಆಜ್ಮಿ ಉತ್ತಮ ನಟಿ ಪ್ರಶಸ್ತಿ ಪಡೆದರು.
ಶ್ಯಾಮ್‌ರ ಚಿತ್ರಗಳಲ್ಲಿ ಗಾಢ ವರ್ಣದ ಬಳಕೆ ವಿಶೇಷವಾಗಿದೆ. ವೃತ್ತಿಯ ಆರಂಭದಲ್ಲಿ ಅವರು ನಿರ್ದೇಶಿಸಿದ ಚಿತ್ರಗಳಲ್ಲಿ ಸಂಗೀತ ಹಿನ್ನೆಲೆಯಾಗಿ ಮಾತ್ರ ಬಳಕೆಯಾಗಿತ್ತು. ಆದರೆ ನಂತರದ ಚಿತ್ರಗಳಲ್ಲಿ ಸಂಗೀತಕ್ಕೂ ಪ್ರಾಧಾನ್ಯತೆ ದೊರೆತಿತ್ತು ಅವರಲ್ಲಿ ಬದಲಾಗುವ ಮನೋಭಾವದ ಪ್ರತೀಕ. ಅನೈತಿಕ ಸಂಬಂಧ, ಅಸ್ಪ್ರಶ್ಯತೆಯ ಅಂಕುರ್ ಚಿತ್ರದಲ್ಲಿ ಅವರು ಹಾವು, ಹಳದಿ ಬಣ್ಣ ಹಾಗೂ ಭೂಮಿಯನ್ನು ಕಾಮದ ರೂಪಕಗಳಾಗಿ ಬಳಸಿದ್ದಾರೆ.
ನಿಶಾಂತ್ ಚಿತ್ರದಲ್ಲಿ ಅತ್ಯಾಚಾರಕ್ಕೊಳಗಾಗುವ ಶಿಕ್ಷಕನ ಪತ್ನಿ ನ್ಯಾಯಕ್ಕಾಗಿ ಮೊರೆಯಿಡುವ ಆರ್ತನಾದವಿದೆ. ಭೂಮಿಕಾ ಚಿತ್ರದಲ್ಲಿ ಮರಾಠಿ ರಂಗ ನಟಿಯೊಬ್ಬಳ ಜೀವನದ ಆಡಂಬರ ಹಾಗೂ ಖಿನ್ನತೆ ಪ್ರತಿಬಿಂಬವಾಗಿವೆ. ಶ್ಯಾಮ್ ಕೇವಲ ಕಲಾತ್ಮಕವಲ್ಲ, ಕಮರ್ಶಿಯಲ್ ಚಿತ್ರಗಳಿಗೂ ಕೆಮೆರಾ ಹಿಡಿದಿದ್ದಾರೆ. ಶಶಿ ಕಪೂರ್ ನಾಯಕತ್ವದ ಜುನೂನ್, ಜುಬೇದಾನಲ್ಲಿ ಕರಿಷ್ಮಾ ಕಪೂರ್ ನಾಯಕಿಯಾಗಿದ್ದಾರೆ. ಇತ್ತೀಚೆಗೆ ವೆಲ್ ಕಮ್ ಟು ಸಜ್ಜನ್‌ಪುರ್ ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆಗೂ ಅವಕಾಶ ನೀಡಿದ್ದಾರೆ.
ಸಾಮಾಜಿಕ ಸಮಸ್ಯೆಗಳನ್ನು ಭಾವನಾತ್ಮಕವಾಗಿ ನಿರೂಪಿಸುವುದು ಶ್ಯಾಮ್‌ಗೆ ಒಲಿದ ಕಲೆ. ವೇಶ್ಯಾವಾಟಿಕೆ ಕುರಿತ ಮಂಡಿ, ಪೋರ್ಚುಗೀಸರ ಆಳ್ವಿಕೆಯ ದಿನಗಳ ತ್ರಿಕಾಲ್, ಸೂರಜ್ ಕಾ ಸಾತ್ವಾ ಘೋಡಾ, ೧೮೫೭ರ ಪ್ರೇಮ ಕಥೆಯ ಕಲಿಯುಗ್ ಶ್ಯಾಮ್ ಕ್ರಿಯಾಶೀಲತೆಗೆ ಉದಾಹರಣೆಗಳು. ಈಗ ಹಾಲಿವುಡ್, ಬಾಲಿವುಡ್‌ನಲ್ಲಿ ನಿರ್ಮಿತವಾಗುತ್ತಿರುವ ಸರಣಿ ಚಿತ್ರಗಳಿಗೆ ಆ ಕಾಲದಲ್ಲಿಯೇ ಶಂಕುಸ್ಥಾಪನೆ ಮಾಡಿದ್ದು ಈ ನಿರ್ದೇಶಕ. ಸರ್ದಾರಿ ಬೇಗಮ್, ಜುಬೇದಾ ಚಿತ್ರಗಳು ಹಾಗೂ ದೂರದರ್ಶನಕ್ಕಾಗಿ ನಿರ್ಮಿಸಿದ ರೈಲ್ವೆ ಇತಿಹಾಸದ ಯಾತ್ರಾ, ಜವಾಹರ್‌ಲಾಲ್ ನೆಹರೂ ಬರೆದ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದ ಭಾರತ್ ಏಕ ಖೋಜ್ ಸರಣಿಗಳು ವಿಶಿಷ್ಟ ಹಾಗೂ ವಿಭಿನ್ನ.
ಜೀವನ್ಮುಖಿ ಶ್ಯಾಮ್ ಆ ಕಾಲದಲ್ಲಿ ಹಂಗಿತ್ತು, ಈ ಕಾಲ ಹೀಗಿದೆ ಎಂದು ಜರಿಯುವವರಲ್ಲ. ಕಾಲಕ್ಕೆ ತಕ್ಕಂತೆ ಚಿತ್ರ ನಿರ್ಮಿಸುವ ಅವರು ಸದಾ ಹೊಸತನ್ನು ಹುಡುಕುವವರು. ಅದಕ್ಕಾಗಿಯೆ ಅವರು ಹಿರಿಯರಿಗೂ, ಚಿಕ್ಕವರಿಗೂ ಸಮಕಾಲೀನರು.
ನಿರ್ದೇಶಿಸಿದ ಚಿತ್ರಗಳು : ಅಂಕುರ್ (೧೯೭೩), ನಿಶಾಂತ್ (೧೯೭೫), ಮಂಥನ್ (೧೯೭೬), ಭೂಮಿಕಾ (೧೯೭೭), ಜುನೂನ್ (೧೯೭೮), ಕಲಯುಗ್ (೧೯೮೧), ಮಂಡಿ (೧೯೮೩), ತ್ರಿಕಾಲ್ (೧೯೮೫), ಸೂರಜ್ ಕಾ ಸಾತ್ವಾ ಘೋಡಾ (೧೯೯೨), ಮಮ್ಮೊ (೧೯೯೫), ಸರ್ದಾರಿ ಬೇಗಮ್ (೧೯೯೬), ದ ಮೇಕಿಂಗ್ ಆಫ್ ಮಹಾತ್ಮಾ (೧೯೯೬), ಸಮರ್ (೧೯೯೯), ಜುಬೇದಾ (೨೦೦೧),  ದ ಫಾರ್‌ಗಾಟನ್ ಹಿರೋ (೨೦೦೫), ವೆಲಕಮ್ ಟು ಸಜ್ಜನಪುರ್ (೨೦೦೮).
ಸಾಕ್ಷ್ಯ ಚಿತ್ರಗಳು : ಯಾತ್ರಾ, ಚೈಲ್ಡ್ ಆಫ್ ದಿ ಸ್ಟ್ರೀಟ್, ಭಾರತ್ ಏಕ್ ಖೋಜ್, ಸುಸ್ಮಾನ್, ನೆಹರೂ, ನೇಚರ್ ಸಿಂಫನಿ, ಸತ್ಯಜಿತ್ ರೇ.
ಪ್ರಶಸ್ತಿಗಳು : ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (೨೦೦೭), ೧೯೭೫ ರಿಂದ ೨೦೦೧ರವರೆಗೆ ೧೫ ರಾಷ್ಟ್ರೀಯ ಪ್ರಶಸ್ತಿಗಳು, ಪದ್ಮಶ್ರೀ, ಜುನೂನ್, ಕಲಯುಗ್ ಚಿತ್ರಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿ, ನಿಶಾಂತ್ ಚಿತ್ರಕ್ಕೆ ಗೋಲ್ಡನ್ ಪಾಮ್ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಪದ್ಮಭೂಷಣ, ಇಂದಿರಾ ಗಾಂ ರಾಷ್ಟ್ರೀಯ ಏಕತೆ ಪ್ರಶಸ್ತಿ.

ಕನಸು ಒಂದು ಭ್ರಮೆ ಎಂಬ ವ್ಯಾಖ್ಯಾನ ಇರುವ ಹೊತ್ತಿನಲ್ಲಿ ಕನಸು ವಾಸ್ತವದ್ದಾಗಿರಬೇಕು ಎಂದು ವ್ಯಾಖ್ಯಾನಕ್ಕೇ ಹೊಸ ರೀತಿಯ ಕೋನ ಒದಗಿಸಿದವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಶ್ಯಾಮ್ ಬೆನಗಲ್ ಎನ್ನುತ್ತಾರೆ ಪತ್ರಕರ್ತ ರವಿರಾಜ್ ಗಲಗಲಿ “ನಿರ್ದೇಶಕರ ಡೈರಿ” ಅಂಕಣದಲ್ಲಿ.  ನಿರ್ದೇಶಕರ ಡೈರಿ- ನಮ್ಮ ಮೆಚ್ಚಿನ ನಿರ್ದೇಶಕರ ಬಗ್ಗೆ ವಿವರಿಸುವ ಅಂಕಣ.  ಇದಕ್ಕೆ ಎಲ್ಲರೂ ಬರೆಯಬಹುದು. ನೀವು ನಿಮ್ಮ ನೆಚ್ಚಿನ ನಿರ್ದೇಶಕರ ಬಗ್ಗೆ ಮಾಹಿತಿಪೂರ್ಣ ಲೇಖನವನ್ನು ನಮಗೆ ಮೇಲ್ ಮಾಡಿ.

ಕನಸು ಕಾಣಲು ಹಣ ನೀಡಬೇಕಿಲ್ಲ, ಆದರೆ ಅದು ವಾಸ್ತವವಾಗಿರಬೇಕು. ಇದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಶ್ಯಾಂ ಬೆನಗಲ್ ಅನಿಸಿಕೆ. ಅವರು ನಡೆದಿದ್ದೂ ಹಾಗೆ, 1970 ರಲ್ಲಿ ಚಿತ್ರ ನಿರ್ದೇಶಿಸುವುದಕ್ಕಿಂತಲೂ ಹಣ ಹೊಂದಿಸುವುದು ಕಷ್ಟದ ಮಾತಾಗಿತ್ತು. ಈ ಸಂದರ್ಭದಲ್ಲಿ ಶ್ಯಾಮ್ ಐಡಿಯಾ ಮಾಡಿದರು. ಗುಜರಾತ್‌ನ ಆಣಂದ್‌ನಲ್ಲಿ ನಡೆದ ಹಾಲು ಉದ್ಯಮದ ಅಭಿವೃದ್ಧಿ ಗಾಥೆಯನ್ನು ಸಿನಿಮಾ ಮಾಡುವ ಉದ್ದೇಶ ಅವರಿಗಿತ್ತು. ಆದರೆ ಹಣವಿರಲಿಲ್ಲ, ಅದಕ್ಕಾಗಿ ರಾಜ್ಯದ 5 ಲಕ್ಷ ಹಾಲು ಉತ್ಪಾದಕರಿಂದ ತಲಾ 2 ರೂ. ಸಂಗ್ರಹಿಸಿ ಮಂಥನ್ ಸಿನಿಮಾ ನಿರ್ದೇಶಿಸಿದರು. ಹಾಲು ಉತ್ಪಾದಕರು ಹಣ ನೀಡಿದ್ದಷ್ಟೇ ಅಲ್ಲ ಟ್ರಕ್, ಟ್ರ್ಯಾಕ್ಟರ್‌ಗಳಲ್ಲಿ ಬಂದು ಸಿನಿಮಾ ನೋಡಿದರು, ಪರಿಣಾಮ ಚಿತ್ರ ಹಿಟ್ ಆಯಿತು, ಪ್ರಶಸ್ತಿಯನ್ನೂ ತಂದುಕೊಟ್ಟಿತು.

directors dairy copy 1

ಡಿ. 14, 1934 ರಲ್ಲಿ ಆಂಧ್ರ ಪ್ರದೇಶದ ಸಿಕಂದರಾಬಾದ್‌ನ  ತ್ರಿಮುಲಗರಿಯಲ್ಲಿ ಜನಿಸಿದ ಶ್ಯಾಮ್ ಸಿನಿಮಾದ ಅ, ಆ, ಇ, ಈ  ಅಕ್ಷರಾಭ್ಯಾಸ ತಂದೆಯಿಂದ ಕಲಿತರು. ಶ್ಯಾಮ್ ತಾಯಿ ಖ್ಯಾತ  ನಿರ್ದೇಶಕ, ನಟ ಗುರುದತ್‌ರ ಸಂಬಂಧಿಯೂ ಹೌದು. ಮನೆಯಲ್ಲಿ  ತಂದೆಯ ಬಳಿಯಿದ್ದ 16 ಎಂ.ಎಂ. ಕ್ಯಾಮೆರಾದಲ್ಲಿ ಚಿತ್ರೀಕರಣ  ನಡೆಸುತ್ತಿದ್ದ ಈ ಪುಟ್ಟ ನಿರ್ದೇಶಕ ಹೈದರಾಬಾದ್‌ನ ಒಸ್ಮಾನಿಯಾ  ವಿಶ್ವವಿದ್ಯಾಲಯದ ನಿಜಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು.

1959 ರಲ್ಲಿ ಖ್ಯಾತ ಜಾಹೀರಾತು ಸಂಸ್ಥೆ ಲಿಂಟಾಸ್‌ನಲ್ಲಿ ಜಾಹೀರಾತುಗಳ ಸ್ಕ್ರೀನ್ ಪ್ಲೇ ಬರೆಯುವ ಹೊಣೆಗಾರಿಕೆ ಹೊಂದಿದ್ದ ಶ್ಯಾಮ್ ಕೆಲ ವರ್ಷಗಳಲ್ಲಿ ಮುಖ್ಯಸ್ಥನ ಸ್ಥಾನಕ್ಕೇರಿದರು. ಇಷ್ಟರಲ್ಲೆ ಮೊದಲ ಸಾಕ್ಷ್ಯ ಚಿತ್ರ ಘೇರ್ ಬೇಥಾ ಗಂಗೆ (1962) ಸಿದ್ಧಗೊಂಡಿತು. ಗುಜರಾತಿ ಭಾಷೆಯ ಈ ಚಿತ್ರ ಶ್ಯಾಮ್‌ರಿಗೆ ಚಿತ್ರ ನಿರ್ಮಾಣದಲ್ಲಿ ಆಸಕ್ತಿ ಮೂಡಿಸಿತು. ಆದರೆ ಮೊದಲ ಚಿತ್ರ ನಿರ್ದೇಶನಕ್ಕೆ ಅವರು ತೆಗೆದುಕೊಂಡ ಅವ ಭರ್ತಿ 10 ವರ್ಷ.

shyam Benegal-11

ಈ ನಡುವೆ ಎಎಸ್‌ಪಿ ಎಂಬ ಜಾಹೀರಾತು ಸಂಸ್ಥೆ  ಸ್ಥಾಪಿಸಿದ ಶ್ಯಾಮ್ 900ಕ್ಕೂ ಹೆಚ್ಚು ಸಾಕ್ಷ್ಯಚಿತ್ರ  ಹಾಗೂ ಜಾಹೀರಾತು ನಿರ್ಮಿಸಿದರು. 1966 ರಿಂದ  1973 ರವರೆಗೆ ಫಿಲ್ಮ್ ಆಂಡ್ ಟೆಲಿವಿಶನ್  ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿಯೂ  ಕಾರ್ಯನಿರ್ವಹಿಸಿದರು. 1967 ರಲ್ಲಿ ಅವರ ಚೈಲ್ಡ್  ಆಫ್ ದಿ ಸ್ಟ್ರೀಟ್ ಅಪಾರ ಖ್ಯಾತಿ ಹಾಗೂ ಹೆಸರು  ತಂದು ಕೊಟ್ಟಿತು. ಈ ಸಂದರ್ಭದಲ್ಲಿ ಹೋಮಿ  ಬಾಬಾ ಫೆಲೋಶಿಪ್ ಪಡೆದ ಅವರು  ನ್ಯೂಯಾರ್ಕ್‌ನಲ್ಲಿ ಕಿರುತೆರೆಯಲ್ಲಿ ಚಿಕ್ಕಮಕ್ಕಳ  ಸಾಕ್ಷ್ಯ ಚಿತ್ರಗಳ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಮುಂಬೈಗೆ ವಾಪಸ್ಸಾದ ನಂತರ ಶ್ಯಾಮ್‌ರ ಮೊದಲ ಚಿತ್ರಕ್ಕೆ ಕಾಲ ಕೂಡಿ ಬಂತು. 1973 ರಲ್ಲಿ ಅಂಕುರ್ ಚಿತ್ರದ ಮೂಲಕ ನಿರ್ದೇಶಕರಾದರು. ಅನಂತ್ ನಾಗ್, ಶಬಾನಾ ಆಜ್ಮಿ ಅಭಿನಯದ ಈ ಚಿತ್ರ ಪ್ರೇಕ್ಷಕರು ಹಾಗೂ ವಿಮರ್ಶಕರಿಗೆ ಮೆಚ್ಚುಗೆಯಾಯಿತು. ಚಿತ್ರಕ್ಕಾಗಿ 1975 ರಲ್ಲಿ ಎರಡನೆಯ ಅತ್ಯುತ್ತಮ ಚಿತ್ರ ಹಾಗೂ ಶಬಾನಾ ಆಜ್ಮಿ ಉತ್ತಮ ನಟಿ ಪ್ರಶಸ್ತಿ ಪಡೆದರು.

ಶ್ಯಾಮ್‌ರ ಚಿತ್ರಗಳಲ್ಲಿ ಗಾಢ ವರ್ಣದ ಬಳಕೆ ವಿಶೇಷ. ವೃತ್ತಿಯ ಆರಂಭದಲ್ಲಿ ಅವರು ನಿರ್ದೇಶಿಸಿದ ಚಿತ್ರಗಳಲ್ಲಿ ಸಂಗೀತ ಹಿನ್ನೆಲೆಯಾಗಿ ಮಾತ್ರ ಬಳಕೆಯಾಗಿತ್ತು. ಆದರೆ ನಂತರದ ಚಿತ್ರಗಳಲ್ಲಿ ಸಂಗೀತಕ್ಕೂ ಪ್ರಾಧಾನ್ಯ ದೊರೆತಿತ್ತು. ಅವರಲ್ಲಿ ಬದಲಾಗುವ ಮನೋಭಾವದ ಪ್ರತೀಕ. ಅನೈತಿಕ ಸಂಬಂಧ, ಅಸ್ಪ್ರಶ್ಯತೆಯ ಅಂಕುರ್ ಚಿತ್ರದಲ್ಲಿ ಅವರು ಹಾವು, ಹಳದಿ ಬಣ್ಣ ಹಾಗೂ ಭೂಮಿಯನ್ನು ಕಾಮದ ರೂಪಕಗಳಾಗಿ ಬಳಸಿದ್ದಾರೆ.

ನಿಶಾಂತ್ ಚಿತ್ರದಲ್ಲಿ ಅತ್ಯಾಚಾರಕ್ಕೊಳಗಾಗುವ ಶಿಕ್ಷಕನ ಪತ್ನಿ ನ್ಯಾಯಕ್ಕಾಗಿ ಮೊರೆಯಿಡುವ ಆರ್ತನಾದವಿದೆ. ಭೂಮಿಕಾ ಚಿತ್ರದಲ್ಲಿ ಮರಾಠಿ ರಂಗ ನಟಿಯೊಬ್ಬಳ ಜೀವನದ ಆಡಂಬರ ಹಾಗೂ ಖಿನ್ನತೆ ಪ್ರತಿಬಿಂಬವಾಗಿವೆ. ಶ್ಯಾಮ್ ಕೇವಲ ಕಲಾತ್ಮಕವಲ್ಲ, ಕಮರ್ಶಿಯಲ್ ಚಿತ್ರಗಳಿಗೂ ಕೆಮೆರಾ ಹಿಡಿದಿದ್ದಾರೆ. ಶಶಿ ಕಪೂರ್ ನಾಯಕತ್ವದ ಜುನೂನ್, ಜುಬೇದಾನಲ್ಲಿ ಕರಿಷ್ಮಾ ಕಪೂರ್ ನಾಯಕಿಯಾಗಿದ್ದಾರೆ. ಇತ್ತೀಚೆಗೆ ವೆಲ್ ಕಮ್ ಟು ಸಜ್ಜನ್‌ಪುರ್ ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆಗೂ ಅವಕಾಶ ನೀಡಿದ್ದಾರೆ.

shyam benegal-2 new

ಸಾಮಾಜಿಕ ಸಮಸ್ಯೆಗಳನ್ನು ಭಾವನಾತ್ಮಕವಾಗಿ ನಿರೂಪಿಸುವುದು ಶ್ಯಾಮ್‌ಗೆ ಒಲಿದ ಕಲೆ. ವೇಶ್ಯಾವಾಟಿಕೆ ಕುರಿತ ಮಂಡಿ, ಪೋರ್ಚುಗೀಸರ ಆಳ್ವಿಕೆಯ ದಿನಗಳ ತ್ರಿಕಾಲ್, ಸೂರಜ್ ಕಾ ಸಾತ್ವಾ ಘೋಡಾ, 1857 ರ ಪ್ರೇಮ ಕಥೆಯ ಕಲಿಯುಗ್ ಶ್ಯಾಮ್ ಕ್ರಿಯಾಶೀಲತೆಗೆ ಉದಾಹರಣೆಗಳು. ಈಗ ಹಾಲಿವುಡ್, ಬಾಲಿವುಡ್‌ನಲ್ಲಿ ನಿರ್ಮಿತವಾಗುತ್ತಿರುವ ಸರಣಿ ಚಿತ್ರಗಳಿಗೆ ಆ ಕಾಲದಲ್ಲಿಯೇ ಶಂಕುಸ್ಥಾಪನೆ ಮಾಡಿದ್ದು ಈ ನಿರ್ದೇಶಕ. ಸರ್ದಾರಿ ಬೇಗಮ್, ಜುಬೇದಾ ಚಿತ್ರಗಳು ಹಾಗೂ ದೂರದರ್ಶನಕ್ಕಾಗಿ ನಿರ್ಮಿಸಿದ ರೈಲ್ವೆ ಇತಿಹಾಸದ ಯಾತ್ರಾ, ಜವಾಹರ್‌ಲಾಲ್ ನೆಹರೂ ಬರೆದ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದ ಭಾರತ್ ಏಕ ಖೋಜ್ ಸರಣಿಗಳು ವಿಶಿಷ್ಟ ಹಾಗೂ ವಿಭಿನ್ನ.

ಜೀವನ್ಮುಖಿ ಶ್ಯಾಮ್ ಆ ಕಾಲದಲ್ಲಿ ಹಂಗಿತ್ತು, ಈ ಕಾಲ ಹೀಗಿದೆ ಎಂದು ಜರಿಯುವವರಲ್ಲ. ಕಾಲಕ್ಕೆ ತಕ್ಕಂತೆ ಚಿತ್ರ ನಿರ್ಮಿಸುವ ಅವರು ಸದಾ ಹೊಸತನ್ನು ಹುಡುಕುವವರು. ಅದಕ್ಕಾಗಿಯೆ ಅವರು ಹಿರಿಯರಿಗೂ, ಚಿಕ್ಕವರಿಗೂ ಸಮಕಾಲೀನರು.

ನಿರ್ದೇಶಿಸಿದ ಚಿತ್ರಗಳು : ಅಂಕುರ್ (1973), ನಿಶಾಂತ್ (1975), ಮಂಥನ್ (1976), ಭೂಮಿಕಾ (1977), ಜುನೂನ್ (1978), ಕಲಿಯುಗ್ (1981), ಮಂಡಿ (1983), ತ್ರಿಕಾಲ್ (1985), ಸೂರಜ್ ಕಾ ಸಾತ್ವಾ ಘೋಡಾ (1992), ಮಮ್ಮೊ (1995), ಸರ್ದಾರಿ ಬೇಗಮ್ (1996), ದ ಮೇಕಿಂಗ್ ಆಫ್ ಮಹಾತ್ಮಾ (1996), ಸಮರ್ (1999), ಜುಬೇದಾ (2001),  ದ ಫಾರ್ ಗಾಟನ್ ಹೀರೋ (2005), ವೆಲಕಮ್ ಟು ಸಜ್ಜನಪುರ್ (2008).

ಸಾಕ್ಷ್ಯ ಚಿತ್ರಗಳು : ಯಾತ್ರಾ, ಚೈಲ್ಡ್ ಆಫ್ ದಿ ಸ್ಟ್ರೀಟ್, ಭಾರತ್ ಏಕ್ ಖೋಜ್, ಸುಸ್ಮಾನ್, ನೆಹರೂ, ನೇಚರ್ ಸಿಂಫನಿ, ಸತ್ಯಜಿತ್ ರೇ.

ಪ್ರಶಸ್ತಿಗಳು : ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2007), 1975 ರಿಂದ 2001ರವರೆಗೆ 15 ರಾಷ್ಟ್ರೀಯ ಪ್ರಶಸ್ತಿಗಳು, ಪದ್ಮಶ್ರೀ, ಜುನೂನ್, ಕಲಯುಗ್ ಚಿತ್ರಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿ, ನಿಶಾಂತ್ ಚಿತ್ರಕ್ಕೆ ಗೋಲ್ಡನ್ ಪಾಮ್ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಪದ್ಮಭೂಷಣ, ಇಂದಿರಾ  ಗಾಂಧಿ ರಾಷ್ಟ್ರೀಯ ಏಕತೆ ಪ್ರಶಸ್ತಿ.

Advertisements