ಜುಲೈ ತಿಂಗಳಿನಲ್ಲಿ ಮಲೆನಾಡಿನಲ್ಲಿ ಮಳೆ ಸುರಿಯುವ ಸಮಯ. 

ಅದರಷ್ಟಕ್ಕೇ ಅದು ಸುರಿಯುತ್ತಿರುತ್ತದೆ ಹೊರಗೆ, ನಾವು ನಮ್ಮಷ್ಟಕ್ಕೆ ಇರುತ್ತೇವೆ ಒಳಗೆ.

ಜುಲೈನಲ್ಲಿ ಸಾಂಗತ್ಯ ಹಮ್ಮಿಕೊಳ್ಳು ಯೋಜಿಸಿರುವ ಚಿತ್ರೋತ್ಸವ ಅಂಥದು.  ಈಗಾಗಲೇ ಪೂರ್ವ ಸಿದ್ಧತೆ ಆರಂಭವಾಗಿದೆ. ತೋರಿಸುವ ಚಿತ್ರಗಳ ಪಟ್ಟಿ, ಆಗಬೇಕಾದ ಚರ್ಚೆಗಳ ಪಟ್ಟಿ…ಹೀಗೆ ಹಲವು ಪಟ್ಟಿಗಳೂ ಸಿದ್ಧವಾಗುತ್ತಿವೆ. ಕಳೆದ ಬರಿಯ ಯಶಸ್ಸು ಒಂದೆಡೆ ಹುಮ್ಮಸ್ಸು ಹೆಚ್ಚಿಸಿರುವುದೂ ನಿಜ, ಹಾಗೆಯೇ ಹೊಣೆಯನ್ನೂ ಸಹ.   

ನಮಗಾಗಿ ಕಾದಿರುವ ಕುಪ್ಪಳ್ಳಿ
ನಮಗಾಗಿ ಕಾದಿರುವ ಕುಪ್ಪಳ್ಳಿ

ಈ ಬಾರಿ ನಮ್ಮ ಉತ್ಸವಕ್ಕೆ ಕರೆಯುವ ಅತಿಥಿಗಳನ್ನೂ ಸಂಪರ್ಕಿಸಲಾಗುತ್ತಿದೆ. ಅದರ ವಿವರಗಳು ಸದ್ಯವೇ ಲಭ್ಯ. ಜತೆಗೆ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ…ಹೀಗೆ ಹಲವು ಕಡೆಯಿಂದ ಬರುವ ಆಸಕ್ತರು ಯಾರಲ್ಲಿ ನೋಂದಾಯಿಸಿಕೊಳ್ಳಬೇಕು..ಇತ್ಯಾದಿ ವಿವರಗಳನ್ನೂ ಪ್ರಕಟಗೊಳ್ಳಲಿದೆ.

 ಈಗ ಸಿನಿಮಾಗಳ ವಿಷಯ. ನಮ್ಮ ಮೊದಲ ಚಿತ್ರೋತ್ಸವದಲ್ಲಿ ಆಯ್ಕೆ ಮಾಡಿದ ಎಂಟೂ ಚಿತ್ರಗಳು ವಿಭಿನ್ನವಾಗಿದ್ದವು ಹಾಗೂ ಬಹುತೇಕ ಮಂದಿ ನೋಡದ ಚಿತ್ರಗಳಾಗಿದ್ದವು. ಅಂದರೆ, ನೋಡಲಿಕ್ಕೂ ಹೊಸತು. ಚರ್ಚಿಸಲಿಕ್ಕೂ ಹೊಸತು.  ಅಂತೆಯೇ ಈಗಲೂ ಒಳ್ಳೊಳ್ಳೆ ಚಿತ್ರಗಳ ಪ್ರದರ್ಶನಕ್ಕೆ ತಯಾರಾಗಿದ್ದೇವೆ. ನಾವು ಒಂದಿಷ್ಟು ಸಿನಿಮಾಗಳನ್ನು ಆಯ್ಕೆ ಮಾಡಿದ್ದೇವೆ. ಆದರೆ, ಒಳ್ಳೆಯ ಫಿಲ್ಮ್ ಗಳ ಪಟ್ಟಿಯಿದ್ದರೆ ದಯವಿಟ್ಟು ನೀಡಿ, ಸಲಹೆ ನೀಡಿ. ಅದನ್ನೂ ಸೇರಿಸಿಕೊಳ್ಳಲಾಗುವುದು.  ಬಹಳ ಅಪರೂಪದ ಹಾಗೂ ವಿಭಿನ್ನ ನೆಲೆಯ ಯಾವುದೇ ಭಾಷೆಯ ಚಿತ್ರಗಳಾದರೂ ಪರವಾಗಿಲ್ಲ. ಅಲ್ಲದೇ, ಡಾಕ್ಯುಮೆಂಟರಿಗಳಿದ್ದರೂ ಹೇಳಿ.   

ಜನವರಿಯಲ್ಲಿ ನಡೆದ ಮೊದಲ ಚಿತ್ರೋತ್ಸವವನ್ನು ಉದ್ಘಾಟಿಸುತ್ತಿರುವ ಸಿನಿತಜ್ಞ ಪರಮೇಶ್ ಗುರುಸ್ವಾಮಿ ಮತ್ತು ಕುಪ್ಪಳ್ಳಿ ಕುವೆಂಪು ಟ್ರಸ್ಟ್ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್.
ಜನವರಿಯಲ್ಲಿ ನಡೆದ ಮೊದಲ ಚಿತ್ರೋತ್ಸವವನ್ನು ಉದ್ಘಾಟಿಸುತ್ತಿರುವ ಸಿನಿತಜ್ಞ ಪರಮೇಶ್ ಗುರುಸ್ವಾಮಿ ಮತ್ತು ಕುಪ್ಪಳ್ಳಿ ಕುವೆಂಪು ಟ್ರಸ್ಟ್ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್.

ಒಂದುವೇಳೆ, ನೀವು ನೋಡಿದ ಅತ್ಯಂತ ಕೆಟ್ಟ ಚಿತ್ರ (ಉದಾಹರಣೆಗೆ ನಮ್ಮ ಡಸ್ಟ್ ಬಿನ್ ಗೆ ಹಾಕುವಂಥದ್ದು) ಯಾವ ನೆಲೆಯಿಂದಲೂ ಅದು ತಕ್ಕುದಾದುದಲ್ಲ ಎನ್ನುವ ಚಿತ್ರವಿದ್ದರೆ ಅದನ್ನೂ ಹೇಳಿ. ಅದರ ಪಟ್ಟಿಯನ್ನೂ ಸಿದ್ಧಪಡಿಸಿಕೊಳ್ಳುತ್ತೇವೆ. ನಮ್ಮ ಡಸ್ಟ್ ಬಿನ್‌ಗೆ ಐಟಂ ಆಗುತ್ತದೆ. 

ಎರಡನೇ ಬಾರಿಗೆ ನಡೆಸುತ್ತಿರುವ ಉತ್ಸವದಲ್ಲಿ, ಒಳ್ಳೆಯ ಡಾಕ್ಯುಮೆಂಟರಿ, ಕಿರುಚಿತ್ರ (ಇಪ್ಪತ್ತು ನಿಮಿಷದೊಳಗಿನ)ಗಳಿದ್ದರೆ ಕಳುಹಿಸಬಹುದು. ನಮ್ಮ ತಜ್ಞರ ತಂಡ ಆಯ್ಕೆ ಮಾಡಿದ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.

 ದಯವಿಟ್ಟು ಒಳ್ಳೆಯ ಫಿಲ್ಮ್ ಗಳಿದ್ದರೆ ಹೇಳಿ.