ಸಾಂಗತ್ಯ ಹೊಸತು ಮತ್ತು ಹಳತು ಚಿತ್ರಗಳ ಬಗ್ಗೆ ಬರೆಯುತ್ತಲೇ, ಚಿತ್ರ ನೋಡುವ ಬಗೆ, ತಾಂತ್ರಿಕ ಅಂಶಗಳತ್ತ ಸಿದ್ಧತೆ ನಡೆಸುತ್ತಿದೆ. ಮುಂದಿನ ಚಿತ್ರೋತ್ಸವ ಈ ದಿಸೆಯಲ್ಲೇ ಕೇಂದ್ರೀಕೃತವಾಗಿರಬೇಕೆಂದು ಆಲೋಚಿಸಲಾಗುತ್ತಿದೆ. 

paramesh

ಜತೆಗೆ ಒಂದಷ್ಟು ಸಾಕ್ಷ್ಯಚಿತ್ರ, ಕಿರುಚಿತ್ರಗಳಿಗೂ ವೇದಿಕೆ ಕಲ್ಪಿಸಬೇಕೆಂದೂ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಸದ್ಯವೇ ಎಲ್ಲರಿಗೂ ಮಾಹಿತಿ ನೀಡಲಾಗುವುದು. 

ಈ ಮಧ್ಯೆ ಸಂತೋಷಕರವಾದ ಸಂಗತಿಯೆಂದರೆ ಕನ್ನಡ ಚಿತ್ರರಂಗದ ಕೆಲವು ಸ್ಮರಣೀಯ ಗಳಿಗೆ ಎನ್ನುವುದಕ್ಕಿಂತಲೂ ಚಿತ್ರರಂಗದೊಳಗಿನ ಬಹಳಷ್ಟು ಹೊಸ ಸಂಗತಿಗಳನ್ನು ಸಾಂಗತ್ಯ ಹಂಚಿಕೊಳ್ಳಬೇಕೆಂದು ಯೋಚಿಸುತ್ತಿದೆ.

ಶ್ರೀ ಪರಮೇಶ್ ಗುರುಸ್ವಾಮಿಯವರು ಸಿನಿತಜ್ಞರು. ಅದರಲ್ಲೂ ಹಿರಿ ತಲೆಮಾರಿನವರೊಂದಿಗೆ ದುಡಿದವರು. ಇಷ್ಟಕ್ಕೇ ಮುಗಿಯುವುದಿಲ್ಲ. ಬಹಳ ಮುಖ್ಯವಾಗಿ ಒಂದು ಚಿತ್ರದ ಸನ್ನಿವೇಶ ಹೇಳಿ, ಸಿನಿಮಾ ಬಗ್ಗೆ ಕೇಳಿದರೆ ವಿವರಿಸಬಲ್ಲರು. ಅಷ್ಟೊಂದು ಮಾಹಿತಿಯಿದೆ. ಕನ್ನಡ ಚಿತ್ರರಂಗವಲ್ಲದೇ, ರಷ್ಯಾ, ಬಂಗಾಳಿ..ಹೀಗೆ ಜಾಗತಿಕ ಸಿನಿಮಾ ಜಗತ್ತನ್ನು ಕಂಡಿದ್ದಾರೆ. 

ಆ ಸಿನಿಮಾದ ಕಥೆಗಿಂತಲೂ, ಅದರ ಬಗೆಗೇ ಇರುವ ಕಥೆಗಳು ಅವರಲ್ಲಿವೆ. ಇತ್ತೀಚೆಗೆ ಸಿಕ್ಕಿದ್ದರು. ಹೀಗೆ ಚರ್ಚಿಸುತ್ತಾ ಬಂದಾಗ, ಸಾಂಗತ್ಯಕ್ಕೆ ಆಗಾಗ್ಗೆ ಇಂಥ ಹತ್ತು ಹಲವು ಸಂಗತಿಗಳನ್ನು ತೆರೆದಿಡಲು ಒಪ್ಪಿದ್ದಾರೆ. ಸದಾ ಬ್ಯುಸಿಯಿರುವ  ಅವರನ್ನು ಹಿಡಿಯುವುದೇ ಕಷ್ಟ. 

ಸಿಕ್ಕಿದಾಗ ಸಾಂಗತ್ಯ ಬಿಡಬಾರದೆಂದೂ ನಿರ್ಧರಿಸಿದೆ. ಪೀಡಿಸಿಯಾದರೂ ಸಂಗತಿಗಳನ್ನು ದಾಖಲಿಸಬೇಕೆಂದಿದೆ. ಆ ನಿಟ್ಟಿನಲ್ಲಿ ಈಗಾಗಲೇ ಎರಡು ಕಂತುಗಳನ್ನು ಸಂಗ್ರಹಿಸಿದೆ. ಸದ್ಯವೇ ಅದು ಪ್ರಕಟವಾಗಲಿದೆ. ಬಹಳ ಕುತೂಹಲ ಎನಿಸುವ ಸಂಗತಿಗಳವು. 

ಹೀಗೆ ಪರಮೇಶ್ ಗುರುಸ್ವಾಮಿಯವರು ನಮ್ಮ ಚಿತ್ರೋತ್ಸವವನ್ನೂ ನಡೆಸಿಕೊಟ್ಟವರು. ಉತ್ಸವದಲ್ಲಿ ಸಿನಿಮಾಗಳ ತಾಂತ್ರಿಕ ಅಂಶಗಳ ಕುರಿತು ವಿವರಿಸಿದವರು. ಅವರಿಗೆ ಸಾಂಗತ್ಯ ಸದಾ ಧನ್ಯವಾದ ಹೇಳುತ್ತದೆ.