ಸ್ಲಂಡಾಗ್ ಮಿಲಿನಿಯೇರ್ ಪ್ರಶಸ್ತಿಯೇನೋ ಗೆದ್ದಿದೆ. ಆದರೆ ಅದರ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯ ಕೇಳಿಬರುತ್ತಿವೆ. ಕೆಲವರು ‘ಚಿತ್ರ ಚೆನ್ನಾಗಿದೆ’ ಎಂದರೆ, ಮತ್ತೆ ಕೆಲವರು ‘ಪರವಾಗಿಲ್ಲ’ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಕೆಲವು ಮಂದಿ ಭಾರತದ ಮಂದಿಗೆ ಪ್ರಶಸ್ತಿ ಬಂತು ಎಂದು ಹಿಗ್ಗಿದರೆ, ಇನ್ನೂ ಹಲವರು ‘ಭಾರತೀಯರನ್ನು ಕೀಳಾಗಿ ಚಿತ್ರಿಸಲಾಗಿದೆ’ ಎಂದು ಟೀಕಿಸುತ್ತಿದ್ದಾರೆ.
ಈ ಮಧ್ಯೆ ೨೦೦೭ ರ ಅತ್ಯುತ್ತಮ ಚಿತ್ರ ಅಮೀರ್ ಖಾನ್ ರ ‘ತಾರೇ ಜಮೀನ್ ಪರ್’ ಚಿತ್ರ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗುವಲ್ಲಿ ಸೋತಿತು. ಆದರೆ ‘ಸ್ಲಂಡಾಗ್ ಮಿಲಿನಿಯೇರ್’ ಗೆ ಈಗಾಗಲೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದೆ. ಕಾರಣ, ಭಾರತೀಯರನ್ನು ಟೀಕಿಸಿರುವುದಕ್ಕೆ, ಅದರ ನಿರ್ದೇಶಕ ಪಾಶ್ಚಾತ್ಯ ರಾಷ್ಟ್ರದವನಾಗಿದ್ದಕ್ಕೆ, ಅಲ್ಲೂ ಜನಾಂಗೀಯ ತಾರತಮ್ಯ…ಹೀಗೆಲ್ಲಾ ಟೀಕೆ ಆರಂಭವಾಗಿದೆ. ಈ ಕುರಿತು ಚಿತ್ರ ನೋಡಿದವರು ತಮ್ಮ ತಮ್ಮ ಅನಿಸಿಕೆಯನ್ನು www.saangatya@gmail.com ಗೆ ಬರೆಯಬಹುದು.
ಸ್ಲಂ ಡಾಗ್ ಮಿಲಿನಿಯೇರ್ ಇಂಗ್ಲಿಶ್ ಆವೃತ್ತಿ ಸಿಕ್ಕಿತು. ನೋಡಿದೆ. ಕೊಳಕು ಅನಿಸಿದರೂ ವಾಸ್ತವಿಕ ಅಂಶಗಳು ಧಾರಾಳವಾಗಿದೆ.
ಒಂದಂತೂ ನಿಜ… ಭಾರತದ ‘ಪಾಸಿಟಿವ್ ಅಪ್ರೋಚ್’ ಅಥವಾ ಕನ್ಸ್ಟ್ರಕ್ಟಿವ್’ ಸಿನೆಮಾಗಳಿಗೆ ಪ್ರಶಸ್ತಿ ಖಂಡಿತ ಬರೋದಿಲ್ಲ. ಸಿನೆಮಾ ಮಾತ್ರವಲ್ಲ, ಸಾಹಿತ್ಯದ ವಿಷಯದಲ್ಲೂ ಹಾಗೇ. ಎಷ್ಟು ಕೊಳಕಾಗಿ ಚಿತ್ರಿಸುತ್ತೀರೋ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟು ಹೆಚ್ಚು ಬಹುಮಾನ ಪಡೆಯುವಿರಿ…
ಈ ಕಾರಣದಿಂದಾಗಿಯೇ ‘ಲಗಾನ್’ ‘ತಾರೇ ಜಮೀನ್ ಪರ್’ ರೀತಿಯ ಚಿತ್ರಗಳಿಗೆ ಅವಾರ್ಡು ಸಿಗದೆಹೋಗುವುದು.
ಎಲ್ಲ ದೇಶಗಳ- ಭಾಶೆಗಳ ಸಿನೆಮಾ ಹಣೆಬರಹವೂ ಹೀಗೇ ಇದೆಯಾ? ತಿಳಿದವರು ದಯವಿಟ್ಟು ಹೇಳಿ…
ನಮ್ಮ ನೃತ್ಯ ಸಂಗೀತ ತುಂಬಿರುವ ಚಿತ್ರಗಳನ್ನು ಜಗತ್ತು ಅರ್ಥೈಸಿಕೊಳ್ಳಲು ಸಾಧ್ಯವೇ ಇಲ್ಲ. ಆ ಕಾರಣಕ್ಕಾಗಿಯೇ ಅವುಗಳಿಗೆ ಜಾಗತಿಕ ಮನ್ನಣೆ ಸಿಗುವುದಿಲ್ಲ.
ಹಾಗಂತ ಆಸ್ಕರ್ ಪ್ರಶಸ್ತಿ ಸಿಗುವುದು ಮಹಾನ್ ಸಾಧನೆಯೇನಲ್ಲ. PR ಮತ್ತು marketing techniqueಗಳು ತಿಳಿದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಆಸ್ಕರ್ ಜ್ಯೂರಿ ಸದಸ್ಯರಿಗೆ ಯಾಕೆ ಆ ಚಿತ್ರಕ್ಕೆ ಪ್ರಶಸ್ತಿ ಸಿಗಬೇಕು ಎಂದು ಮನದಟ್ಟು ಮಾಡಿಸುವಲ್ಲಿ ಚಿತ್ರ ನಿರ್ಮಾಪಕರು ಯಶಸ್ವಿಯಾದರೆ ಆಸ್ಕರ್ ದೊರೆಯುವುದು ಕಷ್ಟವೇನಲ್ಲ. ಆದರೆ ಅದೇ ಕಷ್ಟದ ಕೆಲಸ. Because we dwell in different psyche and mindsets.
ಅಂತರಾಷ್ಟ್ರೀಯ ಮಟ್ಟ ಯಾಕೆ, ನಮ್ಮ ರಾಷ್ಟ್ರೀಯ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಾಡು ಇದೇ ಅಲ್ವಾ. ಪ್ರಶಸ್ತಿ ಬಂದಂತಹ ಹಲವು ಚಿತ್ರಗಳು ಥಿಯೇಟರ್ ಮುಖವನ್ನೇ ನೋಡುವುದಿಲ್ಲ. ಜನರು ಚಿತ್ರಗಳನ್ನು ನೋಡದೇ ಇದ್ದಲ್ಲಿ ಅವು ಹೇಗೆ ತಾನೇ mass mediaದ ಅಂಗವಾಗುತ್ತವೆ. ನನಗಂತೂ ಅರ್ಥವಾಗುವುದಿಲ್ಲ.
ನಮ್ಮಲ್ಲಿ independent ಚಿತ್ರಗಳ ಪ್ರದರ್ಶನ ವ್ಯವಸ್ಥೆಯೇ ಇಲ್ಲವಲ್ಲ. film festival ಗಳೂ ಜನರನ್ನು ತಲುಪುವುದಿಲ್ಲ.
film club , film society ಗಳೂ ಸೀಮಿತ ಪ್ರೇಕ್ಷಕರನ್ನು ಮುಟ್ಟುತ್ತವೆ.
ಆದರೆ ಇಲ್ಲಿ (ಅಮೆರಿಕಾದಲ್ಲಿ) ನಾನು ನೋಡಿದ ಮಟ್ಟಿಗೆ, documentary filmsಗಳಿಂದ ಹಿಡಿದು independent foreign filmsಗಳೂ ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಅವಕ್ಕೆ ನಿಬಂಧನೆಗಳೇನಾದರೂ ಇವೆಯಾ ತಿಳಿದಿಲ್ಲ. ಆದರೂ ಜನರಿಗೆ ಎಟಕುವ ಹತ್ತಿರದಲ್ಲೇ ಚಲನಚಿತ್ರಗಳು ಇವೆ.