ಅಂದ ಹಾಗೆ ಇದೇ ಚಿತ್ರದ ಬಗ್ಗೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿರುವ ಸಾಹಿತ್ಯಾಸಕ್ತ, ಲೇಖಕ ಜಿ. ಬಿ. ಹರೀಶ್ ತಾವು ಕಂಡ ಈ ಚಿತ್ರದ ಅನಿಸಿಕೆಯನ್ನು ಇಲ್ಲಿ ಬರೆದಿದ್ದಾರೆ. ಅದಕ್ಕೆ ನೀವೂ ಪ್ರತಿಕ್ರಿಯಿಸಿ. www.saangatya@gmail.com

slum-2

ಕನ್ನಡದಲ್ಲಿ ಹೆಚ್ಚಾಗಿ ಸಿನಿಮಾ ನೋಡದ ನಾನು ಆಗಾಗ್ಗೆ ಇಂಗ್ಲಿಷ್ ನ ಸಿನಿಮಾಗಳನ್ನು ನೋಡುವ ಸಾಹಸ ಮಾಡುತ್ತೇನೆ. ಅಂಥದ್ದೇ ಒಂದು ಸಾಹಸ “ಸ್ಲಂಡಾಗ್ ಮಿಲಿನಿಯೇರ್ ” ನೋಡಿದ್ದು. ಅಂದರೆ ನನಗೆ ಬಹಳ ಸಿನಿಮಾ ತಿಳೀತದೆ ಅಂತಲ್ಲಾ. ಅದೂ ಒಂದು ಅನುಭವ ಇರಲಿ ಎನ್ನುವುದು ನನ್ನ ಇರಾದೆ. ಮೊನ್ನೆ “ಸ್ಲಂಡಾಗ್ ಮಿಲಿನಿಯೇರ್” ಹೆಸರ ಕೇಳಿ ಅದು ಇಂಗ್ಲಿಷ್ ಸಿನಿಮಾ ಅಂತಲೇ ಭಾವಿಸಿದ್ದೆ. ಮನೆಗೆ ಡಿವಿಡಿ ತಂದು ನೋಡಿದ ಮೇಲೆ ಇದು ಹಿಂದಿ ಸಿನಿಮಾ ಹೌದು, ಇಂಗ್ಲಿಷ್ ನಲ್ಲಿದೆ ಅನ್ನೋದು ಗೊತ್ತಾಯ್ತು. ಸ್ಲಂನಲ್ಲಿ (ಕೊಳೆಗೇರಿ) ಬೆಳೆದ ಸಲೀಂ ಮತ್ತು ಲತಿಕಾ ಎಂಬಿಬ್ಬರು ಹಾಗೂ ಲತಿಕಾ ಎಂಬ ಹುಡುಗಿ…ಇವರ ಬದುಕಿನ ಸುತ್ತ ನಡೆಯುವ ಕಥೆಯಿದು.

ಎಸ್‌ಆರ್ ಕೆ sharukh khan ಮತ್ತು ಎಬಿಸಿ amiatab bacchan ಅವರ ಕೆಬಿಸಿ kaun banega karodpathi ಅಂತೆಯೇ ಅನಿಲ್ ಕಪೂರ್ ಸಹ ಈ ಸಿನಿಮಾದಲ್ಲಿ ಒಂದು ಕೆಬಿಸಿ (ಕೌನ್ ಬನೇಗಾ ಕರೋಡ್‌ಪತಿ?) ನಡೆಸುತ್ತಾನೆ. ಅದರಲ್ಲಿ, ಸ್ಲಂ ಬದುಕಿನಿಂದ ಮತ್ತು ಅಲ್ಲಿನ ರೌಡಿಸಂನಿಂದ ಹೊರಬಂದ ಮುಂಬೈನ ಕಾಲ್ ಸೆಂಟರ್ ನಲ್ಲಿ ಚಹಾ ಮಾಡಿ ಕೊಡುವ ಹುಡುಗ ಒಮ್ಮೆ ಈ ಕರೋಡ್ಪತಿ ಸ್ಪರ್ಧೆಗೆ ಆಯ್ಕೆಯಾಗುತ್ತಾನೆ.

ಅವನು ಪ್ರತಿ ಪ್ರಶ್ನೆಗೂ ಉತ್ತರ ಕೊಡುತ್ತಾ ಹೋದಂತೆ ಕಾರಕ್ರಮ ನಡೆಸಿಕೊಡೋ ಅನಿಲ್ ಕಪೂರ್ ಗೆ ಅಚ್ಚರಿಯಾಗುತ್ತದೆ. ಮಾಮೂಲಿ ಸ್ಲಂ ಹುಡುಗ ಇಷ್ಟೊಂದು ಚೆನ್ನಾಗಿ, ಸ್ಪಷ್ಟವಾಗಿ ಹಾಗೂ ಸರಿಯಾಗಿ ಉತ್ತರ ನೀಡಬಲ್ಲನೇ ? ಎಂಬುದೇ ಅವನ ಅಚ್ಚರಿಗೆ ಕಾರಣ. ಅದು ಬರಿಯ ಭಾಗಶಃ ಅಚ್ಚರಿಯಾಗಿ ಉಳಿಯುವುದಿಲ್ಲ. ಕೊನೆಯಲ್ಲಿ ಬಹುಮಾನ ಗೆದ್ದಾಗಲಂತೂ ಅನಿಲ್ ಕಪೂರ್ ‌ಗೆ ಅತ್ಯಾಶ್ಚರ್ಯ. ಆದರೆ ಹುಡುಗ ಕೇಳುವ ಪ್ರತಿ ಪ್ರಶ್ನೆಗೂ ನನ್ನ ಬದುಕಿನ ಅನುಭವದ ನೆಲೆಯಿಂದಲೇ ಉತ್ತರ ಆಯ್ದು ಆಯ್ದು ಕೊಡುತ್ತಾನೆ. ಅಂದರೆ ಅವನ ಬದುಕಿನ ಅನುಭವದ ಹಲವು ಅಧ್ಯಾಯಗಳ ಅನಾವರಣಗೊಳ್ಳುತ್ತಾ ಹೋಗುತ್ತದೆ. ಇದೇ ಕಥಾ ಹಂದರ. ಮಧ್ಯೆ ಮಧ್ಯೆ ಲತಿಕಾನೊಂದಿಗಿನ ನವಿರಾದ ದೃಶ್ಯಗಳೂ ಇವೆ. ಅವನ ಬದಲಾದ ಚಹರೆ, ಸ್ವಭಾವಗಳೂ ಅನಾವರಣಗೊಳ್ಳುತ್ತವೆ.

ಮುಂಬಯಿ ಕೊಳೆಗೇರಿಯ ಜನಾವೃಕ್ಷ jnaana vruksha kottaಕೂಟ ಜ್ಞಾನ ಫಲಗಳನ್ನು ದಿಕ್ಕಾಪಾಲಾದ ಮನಸ್ಥಿತಿಯಲ್ಲಿ, ಒಡೆದ ಗಾಜಿನ ಚೂರುಗಳನ್ನು ಜೋಡಿಸುವಂತೆ ಹುಡುಗ ಒಗ್ಗೂಡಿಸುತ್ತಾನೆ. ಇದು ಶಾಲೆ ಕಾಲೇಜುಗಳಲ್ಲಿ ಪಡೆದ ಸಾಮಾನ್ಯ ಜ್ಞಾನದ ಜ್ಞಾನವಲ್ಲ. ಬದಲಿಗೆ ಮುಂಬಯಿ ಮಹಾನಗರಿಯ ರೇಟ್, ಅಂಗಡಿ, ಹೋಟೆಲ್, ರೈಲುಗಳಲ್ಲಿ ಪಡೆದ ಜೀವಿತ jeevanta ಪಾಠಗಳು ಎಂಬುದೇ ಚಿತ್ರದ ವಿಶೇಷ. ಈ ಸಿನಿಮಾ ನೋಡಿದ ಮೇಲೆ ಯೋಚಿಸುತ್ತಾ koote. ಹುಡುಗನ ಯೌವ್ವನದ ಉದ್ವಿಗ್ನತೆ, ಹತಾಶೆಯನ್ನು ರೋಷ ದಹಿಸಿದ ಪರಿಸ್ಥಿತಿ, ಹುಡುಗ ಹುಡುಗಿಯ ಅವ್ಯಕ್ತ ಪ್ರೇಮ ಇವೆಲ್ಲಾ ಕುರಿತೇ ಯೋಚನೆಗಳು ತೇಲಿಬಂದವು.

ರಾತ್ರಿ ಹಾಗೇ ಮನೆಯಿಂದ ಹೊರಗೆ ಬಂದೆ. ಆಗಾಗಲೇ ಚಂದ್ರ ಅರ್ಧ ದಾರಿ ಪ್ರಯಾಣ ಮುಗಿಸಿದ್ದ. ಚಂದ್ರನ ಬೆಳಕು ಕತ್ತಲ ಆಕಾಶದ ಮೆಲೆ ಬಿದ್ದು ಹೇಗ್ಯಾಗೋ ಹರಡಿಕೊಂಡಿತ್ತು. ಕಲೆ, ಜೀವನ, ಸಾವು ಹಾಗೂ ಕೊಲೆ ನಡುವಿನ ವ್ಯತ್ಯಾಸ ಎಲ್ಲ ಮನಸ್ಸಿನಲ್ಲಿ ಕಲಸುಮೇಲೋಗರವಾಯ್ತು. ಜೀವನದ ವಾಸ್ತವ, ಕಲೆಯ ಕಲ್ಪನೆಗಿಂತ ಸುಂದರವಾಗದಿದ್ದರೆ ಏನು ಪ್ರಯೋಜನ ಎಂದು ಗೊಣಗಿಕೊಳ್ಳುತ್ತಾ ಮತ್ತೆ ಆಕಾಶವನ್ನೇ ದಿಟ್ಟಿಸುತ್ತಾ ನಿಂತೆ. ಯಾಕೋ ಮಿಲಿನಿಯೇರ್ ಮತ್ತು ಸ್ಲಂ ಡಾಗ್ ಪದಗಳ ಮಧ್ಯೆ ಹೊಸ ಅರ್ಥ ಕಾಣತೊಡಗಿತು.

ಈ ಸಿನಿಮಾ ಖಂಡಿತಾ ಹಿಂಸೆ ಹಾಗೂ ಅಧಿಕಾರ ಕೇಂದ್ರಗಳ ಮೇಲೆ ಮಾಡಿದ ವ್ಯಾಖ್ಯಾನ (ಕಾಮೆಂಟ್) ಎಂಬುದು ನನ್ನ ತಿಳುವಳಿಕೆ. ನಮ್ಮ ಸಂವೇದನೆಯನ್ನು ಚುಚ್ಚುವ ಶಕ್ತಿ ಇದಕ್ಕಿದೆ ಎಂಬುದು ನನ್ನ ಅನಿಸಿಕೆ.