ಸಾಂಗತ್ಯ ತಂಡದ ಮೊದಲ ವೇದಿಕೆ ಸಿದ್ಧವಾಗಿದೆ. ಜ. ೩ ಮತ್ತು ೪ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ‘ನಮ್ಮ ಚಿತ್ರೋತ್ಸವ’ ಸಂಘಟಿಸುತ್ತಿದ್ದೇವೆ.  ಕುವೆಂಪು ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಕಡಿದಾಳ್ ಪ್ರಕಾಶ್ ಉದ್ಘಾಟಿಸುವರು. ಸಿನಿಮಾ ರಂಗದ ಪರಮೇಶ್ವರ ನಮ್ಮೊಂದಿಗಿರುವರು. ನೀವೆಲ್ಲರೂ ಬನ್ನಿ.

ಅಂದ ಹಾಗೆ ಸಾಂಗತ್ಯ ಹತ್ತು ಹಲವು ನೆಲೆಗಳಲ್ಲಿ ಒಳ್ಳೆ ಸಿನಿಮಾಗಳನ್ನು  ನೋಡುವ ಅಭ್ಯಾಸವನ್ನು ಬೆಳೆಸುವತ್ತ ಮುಖಿಯಾಗಿರುವ ತಂಡ. ಬಹಳ ಆಸಕ್ತಿದಾಯಕ ಸಂಗತಿಯೆಂದರೆ ಜೊತೆಯಾಗಿ ನಾಲ್ಕು ಹೆಜ್ಜೆಯನ್ನು ಇಡುತ್ತೇವೆ. ಅಂದರೆ ನಾವು ಮತ್ತು ನೀವು.