ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಸುದ್ದಿ ಸಚಿತ್ರ’ Category

26/11 ರ ನೆನಪಿಗೊಂದು “ವೀ ಸಲ್ಯೂಟ್” ವೀಡಿಯೊ ಚಿತ್ರ

with one comment

ಕಾರ್ತಿಕ್ ಪರಾಡ್ಕರ್, ಎಂಎಸ್ಸಿ ಎಲೆಕ್ಟ್ರಾನಿಕ್ಸ್ ಮೀಡಿಯಾದ ವಿದ್ಯಾರ್ಥಿ. ಬೆಂಗಳೂರು ವಿವಿ ಯಲ್ಲಿ ಕಲಿಕೆ. ಸಿನಿಮಾ ಅವರ ಹುಚ್ಚು. “ಸೀಕ್ರೇಟ್ ಆಫ್ ಸೈಲೆನ್ಸ್” ಎಂಬ ಇಪ್ಪತ್ತು ನಿಮಿಷಗಳ ಕಿರು ಚಿತ್ರವನ್ನು ರೂಪಿಸಿದರು. ನಂತರ ದಕ್ಷಿಣ ಕನ್ನಡ ಜಿಲ್ಲೆಯ ನಾಗಮಂಡಲ ಕುರಿತು ಸಾಕ್ಷ್ಯಚಿತ್ರವನ್ನು ತಯಾರಿಸಿದರು.

ಈಗ 2008 ರ ನವೆಂಬರ್ 26 ರಂದು ಮುಂಬಯಿ ಮೇಲೆ ನಡೆದ ಉಗ್ರಗಾಮಿಗಳ ದಾಳಿಯಲ್ಲಿ ಹತರಾದ ವೀರರಿಗೆ ವಂದನೆ ಸಲ್ಲಿಸಲು ಒಂದು ಚಿಕ್ಕ ವೀಡಿಯೋಚಿತ್ರ ರೂಪಿಸಿದ್ದಾರೆ. ನಮ್ಮ ದೇಶವನ್ನು ನಾವು ಎಷ್ಟು ಪ್ರೀತಿಸುತ್ತೇವೆ ಎನ್ನುವುದನ್ನು ಹಾಡಿನ ಮೂಲಕ ಅನಾವರಣಗೊಳಿಸುತ್ತಲೇ, ಉಗ್ರರ ವಿರುದ್ಧದ ಸೆಣಸಿನಲ್ಲಿ ಹೋರಾಡಿ ಪ್ರಾಣತೆತ್ತ ಎನ್ ಜಿ ಒ ಕಮ್ಯಾಂಡರ್ಸ್ ರಿಗೆ ಅರ್ಪಿಸಿದ್ದಾರೆ. ಇದರ ಪರಿಕಲ್ಪನೆ ಮತ್ತು ಸಂಕಲನ ಪರಾಡ್ಕರ್ ಅವರದ್ದು.

ಇಲ್ಲಿ ಅದರ ಲಿಂಕ್ ಹಾಕಲಾಗಿದೆ. ನೋಡಿ, ಹೇಗಿದೆ ಹೇಳಿ. ವೀಡಿಯೊ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ.

ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ ಮತ್ತು ಬೆಳ್ಳಿ ಸಾಕ್ಷಿ

without comments

ಚಲನಚಿತ್ರ ಅಕಾಡೆಮಿ ಕೋಲಾರದ ಕೈವಾರದಲ್ಲಿ ಮೂರು ದಿನಗಳ ಬೆಳ್ಳಿ ಮಂಡಲ ಕಾರ್ಯಾಗಾರ ಏರ್ಪಡಿಸಿತ್ತು. ಚಲನಚಿತ್ರ ಸಮಾಜಗಳ ರಚನೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರ. ಅದರ ವರದಿ ಹಾಗೂ ಶಿಬಿರಾರ್ಥಿಯಲ್ಲಿ ಒಬ್ಬರಾದ ಶಿವಮೊಗ್ಗದ ದಿ ಹಿಂದೂ ಪತ್ರಿಕೆಯ ಛಾಯಾಗ್ರಾಹಕ ವೈದ್ಯ ಅವರು ಕಳಿಸಿಕೊಟ್ಟ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಹೊಸ ಸಾಹಸಕ್ಕೆ ಕೈ ಹಾಕಿದೆ.
“ಬೆಳ್ಳಿ ಮಂಡಲ’ದ ಹೆಸರಿನಲ್ಲಿ ರಾಜ್ಯಾದ್ಯಂತ ಫಿಲ್ಮ್ ಸೊಸೈಟಿಗಳನ್ನು ಹುಟ್ಟು ಹಾಕಲು ಹೊರಟಿದೆ. ಆ ಮೂಲಕ ಒಳ್ಳೆಯ ಚಲನಚಿತ್ರಗಳನ್ನು ನೋಡಲು ಇರುವ ನಿರ್ವಾತವನ್ನು ನಿವಾರಿಸುವುದು ಅಕಾಡೆಮಿಯ ಉದ್ದೇಶ.

ಹೊಸ ನೆಲೆಯ ಚಿತ್ರಗಳು ಹಾಗೂ ಪ್ರಯೋಗಾತ್ಮಕ ಚಲನಚಿತ್ರಗಳು ಸಾಮಾನ್ಯವಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗದು. ಒಂದುವೇಳೆ ಬಿಡುಗಡೆಯಾದರೂ ಎಂದಿನ (ರೆಗ್ಯುಲರ್) ಚಲನಚಿತ್ರಗಳಷ್ಟು ಪ್ರಚಾರ ಇತ್ಯಾದಿ ಇರದು. ಹಾಗಾಗಿ ಅದು ಬಂದದ್ದೂ ತಿಳಿಯವುದಿಲ್ಲ, ಹೋದದ್ದೂ ತಿಳಿಯುವುದಿಲ್ಲ ಎಂಬ ಆರೋಪವಿದೆ. ಇಂಥ ಆರೋಪಗಳ ನಿವಾರಣೆ ಹಾಗೂ ಉತ್ತಮ ಚಲನಚಿತ್ರಗಳಿಗೆ ವೇದಿಕೆಯಾಗಿಸಲು ಫಿಲ್ಮ್ ಸೊಸೈಟಿಯನ್ನು ಸ್ಥಾಪಿಸಲು ಹೊರಟಿದೆ ಅಕಾಡೆಮಿ.

ಇದಕ್ಕೆ ಪೂರಕವೆಂಬಂತೆ ಆ. 20 ರಿಂದ 22 ರವರೆಗೆ ಕೋಲಾರ ಜಿಲ್ಲೆಯ ಕೈವಾರ ಕ್ಷೇತ್ರದಲ್ಲಿ “ಬೆಳ್ಳಿಮಂಡಲ’ ಕುರಿತೇ ರಾಜ್ಯದ ಎಲ್ಲ ಜಿಲ್ಲೆಯ ಕೆಲ ಆಸಕ್ತರನ್ನು ಕರೆಸಿ ಕಾರ್ಯಾಗಾರವನ್ನು ನಡೆಸಿತು. ಆ ಕಾರ್ಯಾಗಾರದಲ್ಲಿ ಬೆಳ್ಳಿಮಂಡಲ ಅಂದರೆ ಫಿಲ್ಮ್ ಸೊಸೈಟಿಗಳ ಸ್ಥಾಪನೆ, ಸಂರಚನೆ, ಕಾರ್ಯ ನಿರ್ವಹಿಸುವ ರೀತಿ ಹಾಗೂ ಅವುಗಳ ಹೊಣೆಗಾರಿಕೆ…ಇತ್ಯಾದಿಗಳನ್ನು ವಿವರಿಸಲಾಯಿತು.

ಅದಷ್ಟೇ ಕಾರ್ಯಾಗಾರ ಮುಗಿಯಲಿಲ್ಲ. ಮೂರು ದಿನಗಳಲ್ಲಿ ಎಂ.ಎಸ್. ಸತ್ಯು ಅವರ “ಬರ’, ಗಿರೀಶ್ ಕಾಸರವಳ್ಳಿಯವರ “ದ್ವೀಪ’, ಟಿ.ಎಸ್. ನಾಗಾಭರಣರ “ನಾಗಮಂಡಲ’, “ಇನ್‌ಜಾ’, “ವೇರ್ ದ ಗ್ರೀನ್ ಆಂಟ್ಸ್ ಡ್ರೀಮ್’, “ಇನ್ಸಿಂಡೆಟ್ ಅಟ್ ಔಲ್ಕ್ರೀಕ್’ ಸಿನಿಮಾಗಳನ್ನು ಪ್ರದರ್ಶಿಸಲಾಯಿತು. ಪ್ರತಿ ಚಿತ್ರದ ನಂತರವೂ ಚರ್ಚೆಗಳನ್ನು ಸಂಘಟಿಸಲಾಗಿತ್ತು. Read the rest of this entry »

ಚಿತ್ರೋತ್ಸವದ ಮತ್ತಷ್ಟು ಫೋಟೋಗಳು

with 4 comments

ಗೆಳೆಯ ಅಕ್ಷಯ್ ಹೆಗಡೆ ಮತ್ತು ಮಹೇಶ್ ಹೆಗಡೆ ಅವರು ಕಳಿಸಿದ ಫೋಟೋಗಳನ್ನು ಇಲ್ಲಿ ಹಾಕಲಾಗಿದೆ. ಸಾಂಗತ್ಯ ಚಿತ್ರೋತ್ಸವದ ಸಂಭ್ರಮವನ್ನು ಈ ಫೋಟೋಗಳು ಹಿಡಿದು ಕೊಡಲಿವೆ. ನೋಡಿ, ಪ್ರತಿಕ್ರಿಯಿಸಿ.

2ಶ್ರೀ ಪರಮೇಶ್ ಗುರುಸ್ವಾಮಿಯವರಿಂದ ಚಿತ್ರೋತ್ಸವ ಉದ್ಘಾಟನೆ

4ಶ್ರೀ ವಾದಿರಾಜ್  ಅವರಿಂದ ಜ್ಯೋತಿ ಪ್ರಜ್ವಲನೆ

10ವಿರಾಮದಲ್ಲಿ ಒಂದು ಹರಟೆ. ಘನಶ್ಯಾಂ, ಡಾ, ಜಿ. ಬಿ. ಹರೀಶ್, ಸುಧೀರ್ ಕುಮಾರ್ ಮುರೊಳ್ಳಿ, ಕೆ. ಟಿ. ಕೃಷ್ಣಮೂರ್ತಿ

41ಚರ್ಚೆಯಲ್ಲಿ ಕುಮಾರಸ್ವಾಮಿ, ಶಿಶಿರ್ ಹೆಗಡೆ, ಚೈತನ್ಯ ಹೆಗಡೆ, ರಾಕೇಶ್ ಕುಮಾರ್ ಕಮ್ಮಜೆ, ವಿಜಯ್ ಜೋಶಿ.

42ಚರ್ಚೆಯಲ್ಲಿ ವಿವರಿಸುತ್ತಿರುವ ಪರಮೇಶ್ ಗುರುಸ್ವಾಮಿ, ಉಳಿದವರು ವಿಜಯ್ ಜೋಶಿ, ಈಶ್ವರಚಂದ್ರ, ಘನಶ್ಯಾಮ,ಕೆ.ಟಿ. ಕೃಷ್ಣಮೂರ್ತಿ.

44ಕವಿತಾ ಹೆಗಡೆ, ಹರ್ಷ ಹೆಗಡೆ, ಕಲ್ಲರೆ ಮಹೇಶ್ ಇರಬೇಕು (ಮುಖ ತೋರದವರು)ಜತೆಗೆ ಚೈತನ್ಯ.

52ಸಂವಾದದಲ್ಲಿ ನಿರ್ದೇಶಕ ಗುರುಪ್ರಸಾದ್, ಪರಮೇಶ್ ಗುರುಸ್ವಾಮಿ.

56ಸಭಾ ಕಾರ್ಯಕ್ರಮದಲ್ಲಿ ಉತ್ಸವದಲ್ಲಿ ಪಾಲ್ಗೊಂಡವರು.

59ಸಮಾರೋಪ ಸಮಾರಂಭದಲ್ಲಿ ಗುರುಪ್ರಸಾದ್ ಮಾತನಾಡುತ್ತಿರುವುದು. ಜತೆಗಿರುವವರು ಪರಮೇಶ್ ಗುರುಸ್ವಾಮಿ ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಟ್ರಸ್ಟಿ ಕಡಿದಾಳ್ ಪ್ರಕಾಶ್. ಮತ್ತಷ್ಟು ಫೋಟೋಗಳು ಹಾಗೂ ಚರ್ಚೆ, ಸಂವಾದದ ವರದಿಗಳನ್ನು ಸದ್ಯವೇ ನಿರೀಕ್ಷಿಸಿ.

Written by saangatya

August 12, 2009 at 11:27 am

ಕಬಡ್ಡಿ ಚಿತ್ರ ಪ್ರದರ್ಶನ ಮತ್ತು ಸಂವಾದ ಆ. 9 ರಂದು

with one comment

ಕಬಡ್ಡಿ ಚಲನಚಿತ್ರದ ಬಗ್ಗೆ ಒಳ್ಳೆಯ ಪ್ರಯತ್ನ. ಹಾಗಾಗಿ ಸಂವಾದ. ಕಾಂ ನವರು ಬಾದಾಮಿ ಹೌಸ್ ನಲ್ಲಿ ಆ. 9 ರಂದು ಸಂವಾದ ಏರ್ಪಡಿಸಿದ್ದಾರೆ. ಅದರಲ್ಲಿ ಆಸಕ್ತರು ಪಾಲ್ಗೊಳ್ಳಬಹುದು. ಈ ಕಾರಣದಿಂದ ಸಂವಾದ.ಕಾಂನವರು ಕಳಿಸಿದ ಮಾಹಿತಿ ಇಲ್ಲಿ ಹಾಕಿದ್ದೇವೆ.
‘ಕಬಡ್ಡಿ’ ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಇದೇ ಭಾನುವಾರ(ದಿನಾಂಕ:09/08/2009) ಮಧ್ಯಾಹ್ನ ೨ ಗಂಟೆಗೆ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕರು, ನಿರ್ಮಾಪಕರು, ನಟರಾದಿಯಾಗಿ ಎಲ್ಲರೂ ಇರುತ್ತಾರೆ. ನಾಡಿನ ಸಾರಸ್ವತರೂ ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸ್ಥಳ: ಬಾದಾಮಿ ಹೌಸ್, ಕಾರ್ಪೋರೇಶನ್ ಎದುರು.
ನಿಮಗೆ ಭಾಗವಹಿಸುವ ಆಸಕ್ತಿಯಿದ್ದಲ್ಲಿ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ನಿಮ್ಮ ಆಸನವನ್ನು ಕಾದಿರಿಸಿಕೊಳ್ಳಿ.

ಬೆಂಗಳೂರು
-97317 55966   (BTM, HSR, Electronic City, Ring Road, Kumaara Svaami Lyt.)
-99004 39930  (Jayanagara, J P Nagara, Koramangala)
-94481 71069    (Banashankari, Basavana gudi, v v pura ಇತ್ಯಾದಿ )
-94804 94135     (ಬೆಂಗಳೂರು ಉತ್ತರ)

Written by saangatya

August 5, 2009 at 3:11 pm

ಸುಚಿತ್ರಾದಲ್ಲಿ ಜೀನ್ ರಿನೋಯೆರ್ ನ “ರಿವರ್”

without comments

ಸುಚಿತ್ರಾ ಬಾಲಜಗತ್ ಮತ್ತು ಸುಚಿತ್ರಾ ಫಿಲಂ ಮತ್ತು ಕಲ್ಚರಲ್ ಅಕಾಡೆಮಿ ಸಂಯುಕ್ತವಾಗಿ ಜೂ. ೧೯ ರಿಂದ ೨೬ ರವರೆಗೆ ವಿಶೇಷ ಚಿತ್ರಗಳ ಪ್ರದರ್ಶನ ಏರ್ಪಡಿಸಿದೆ.
ಜೂ. ೧೯ ರಂದು ಸಂಜೆ ೬.೪೫ ಕ್ಕೆ “ರಿವರ್’ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಚಿತ್ರದ ವಿಶೇಷವೆಂದರೆ ಇದರ ನಿರ್ದೇಶನ ಜೀನ್ ರೀನೊಯರ್‌ರದ್ದು. ಆದರೆ ಪ್ರಸಿದ್ಧ ನಿರ್ದೇಶಕ ಸತ್ಯಜಿತ್ ರೇ ಈ ಚಿತ್ರ ನಿರ್ಮಿಸುವಾಗ ರೀನೋಯರ್‌ನಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.
ಜೂ. ೨೦ ರಂದು ಸಂಜೆ ೬. ೪೫ ಕ್ಕೆ ಜೀನ್ ರಿನೋಯರ್ ನ “ದಿ ಲೋವರ್ ಡೆಪ್ತ್ಸ್’ ಪ್ರದರ್ಶಿತವಾಗಲಿದೆ. ಜೂ. ೨೧ ರಂದು ಬೆಳಗ್ಗೆ ೧೦. ೩೦ ಕ್ಕೆ ಇದೇ ಮ್ಯಾಕ್ಸಿಂ ಗಾರ್ಕಿಯ “ದಿ ಲೋವರ್ ಡೆಪ್ತ್ಸ್’ ಅಳವಡಿಸಿಕೊಂಡು ಇಂದಿನ ಆರ್ಥಿಕ ಹಿಂಜರಿತ ಸನ್ನಿವೇಶಗಳಿಗೆ ಹೊಂದಿಸಿ ಮೈಸೂರು ಹುಡುಗರು ರೂಪಿಸಿದ “ಜಾಗ ದೊರೆಯುತ್ತದೆ’ ಚಿತ್ರವನ್ನು ವೀಕ್ಷಿಸಬಹುದು.
ಈ ಚಿತ್ರದ ವಿಶೇಷವೆಂದರೆ ಮೈಸೂರು ಹುಡುಗರೇ ಸೇರಿ ಹಣ ಹೊಂದಿಸಿ ೩ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವುದು. ಇದರ ನಿರ್ದೇಶನ ಎನ್.ಎಸ್. ಇಸ್ಲಾವುದ್ದೀನ್.
ಮತ್ತೆ ಜೂ. ೨೫ ರಂದು ಸಂಜೆ ೬. ೪೫ ಕ್ಕೆ ಆಲ್‌ಫ್ರೆಡ್ ಹಿಚ್ಕಾಕ್ ನ “ರಿಚ್ ಆಂಡ್ ಸ್ಟ್ರೇಂಜ್’ ಚಿತ್ರ ಪ್ರದರ್ಶಿತವಾದರೆ, ಜೂ. ೨೬ ರಂದು ಪುನಾ ಹಿಚ್ಕಾಕ್‌ನ ಮತ್ತೊಂದು ಚಿತ್ರ “ಮ್ಯಾಂಕ್ಸ್ ಮ್ಯಾನ್’ ನೋಡಬಹುದು. ಮಾಹಿತಿಗೆ ಸುಚಿತ್ರಾ ಫಿಲಂ ಸೊಸೈಟಿ, ೩೬, ಬಿ. ವಿ. ಕಾರಂತ ರಸ್ತೆ (ಒಂಬತ್ತನೆ ಮುಖ್ಯರಸ್ತೆ), ಬನಶಂಕರಿ ಎರಡನೇ ಹಂತ, ಬೆಂಗಳೂರು. ದೂ : ೨೬೬೦೧೦೬೪.

ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಹೆಸರಾಂತ ನಿರ್ದೇಶಕ ಜೀನ್ ರಿನೋಯೆರ್ ನ “ರಿವರ್ ” ಚಿತ್ರ ಪ್ರದರ್ಶಿತವಾಗುತ್ತಿದೆ. ಇದರಲ್ಲಿ ನಮ್ಮ ಬಂಗಾಳವಿದೆ…ಅದಕ್ಕಿಂತಲೂ ಹೆಚ್ಚಾಗಿ ದಿಗ್ಗಜ ಸತ್ಯಜಿತ್ ರೇ ಸಹಾಯಕ ನಿರ್ದೇಶಕರಾಗಿ ಈ ಚಿತ್ರಕ್ಕೆ ದುಡಿದಿದ್ದಾರೆ.

ಸುಚಿತ್ರಾ ಬಾಲಜಗತ್ ಮತ್ತು ಸುಚಿತ್ರಾ ಫಿಲಂ ಮತ್ತು ಕಲ್ಚರಲ್ ಅಕಾಡೆಮಿ ಸಂಯುಕ್ತವಾಗಿ ಜೂ. 19 ರಿಂದ 26 ರವರೆಗೆ ವಿಶೇಷ ಚಿತ್ರಗಳ ಪ್ರದರ್ಶನ ಏರ್ಪಡಿಸಿದೆ.

ಜೀನ್ ಲಿನೋಯರ್

ಜೀನ್ ಲಿನೋಯರ್

ಜೂ. 19 ರಂದು ಸಂಜೆ 6.45 ಕ್ಕೆ “ರಿವರ್’  ಚಿತ್ರ ಪ್ರದರ್ಶನಗೊಳ್ಳಲಿದೆ. ಈ  ಚಿತ್ರದ  ವಿಶೇಷವೆಂದರೆ ಇದರ ನಿರ್ದೇಶನ ಜೀನ್  ರೀನೊಯರ್‌ರದ್ದು. ಆದರೆ  ಪ್ರಸಿದ್ಧ  ನಿರ್ದೇಶಕ ಸತ್ಯಜಿತ್ ರೇ ಈ ಚಿತ್ರ  ನಿರ್ಮಿಸುವಾಗ ರೀನೋಯರ್‌ನಲ್ಲಿ  ಸಹ  ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ಜೂ. 20 ರಂದು ಸಂಜೆ 6.45 ಕ್ಕೆ ಜೀನ್ ರಿನೋಯರ್ ನ “ದಿ ಲೋವರ್ ಡೆಪ್ತ್ಸ್”  ಪ್ರದರ್ಶಿತವಾಗಲಿದೆ. ಜೂ. 21 ರಂದು ಬೆಳಗ್ಗೆ 10.30 ಕ್ಕೆ ಇದೇ ಮ್ಯಾಕ್ಸಿಂ  ಗಾರ್ಕಿಯ “ದಿ ಲೋವರ್ ಡೆಪ್ತ್ಸ್’ ಅಳವಡಿಸಿಕೊಂಡು ಇಂದಿನ ಆರ್ಥಿಕ ಹಿಂಜರಿತ ಸನ್ನಿವೇಶಗಳಿಗೆ ಹೊಂದಿಸಿ ಮೈಸೂರು ಹುಡುಗರು ರೂಪಿಸಿದ “ಜಾಗ ದೊರೆಯುತ್ತದೆ’ ಚಿತ್ರವನ್ನು ವೀಕ್ಷಿಸಬಹುದು.

jean
ಈ ಚಿತ್ರದ ವಿಶೇಷವೆಂದರೆ ಮೈಸೂರು ಹುಡುಗರೇ ಸೇರಿ ಹಣ ಹೊಂದಿಸಿ 3 ಲಕ್ಷ  ರೂ. ವೆಚ್ಚದಲ್ಲಿ ನಿರ್ಮಿಸಿರುವುದು. ಇದರ ನಿರ್ದೇಶನ ಎನ್.ಎಸ್. ಇಸ್ಲಾವುದ್ದೀನ್.

ಮತ್ತೆ ಜೂ. 25 ರಂದು ಸಂಜೆ 6.45 ಕ್ಕೆ ಆಲ್‌ಫ್ರೆಡ್ ಹಿಚ್ಕಾಕ್ ನ “ರಿಚ್ ಆಂಡ್  ಸ್ಟ್ರೇಂಜ್ ” ಚಿತ್ರ ಪ್ರದರ್ಶಿತವಾದರೆ, ಜೂ. 26 ರಂದು ಪುನಾ ಹಿಚ್ಕಾಕ್‌ನ  ಮತ್ತೊಂದು ಚಿತ್ರ “ಮ್ಯಾಂಕ್ಸ್ ಮ್ಯಾನ್’ ನೋಡಬಹುದು. ಮಾಹಿತಿಗೆ ಸುಚಿತ್ರಾ  ಫಿಲಂ ಸೊಸೈಟಿ, 36, ಬಿ. ವಿ. ಕಾರಂತ ರಸ್ತೆ (ಒಂಬತ್ತನೆ ಮುಖ್ಯರಸ್ತೆ),  ಬನಶಂಕರಿ ಎರಡನೇ ಹಂತ, ಬೆಂಗಳೂರು. ದೂ : 26601064.