ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಸಿನಿಮಾ "ಸ್ಕೋಪ್"’ Category

ಮೊದಲ ಚಿತ್ರದ ಕೊನೆಯ ಕಂತು

with one comment

 

ಅಪ್ಪ ಮಗನ ಪಯಣದುದ್ದಕ್ಕೂ ಜೊತೆಯಲ್ಲಿ ನಾಯಿ ಭೌತಿಕವಾಗಿ ಇರುತ್ತದೆ. ಈ ಹೆಂಗಸಿನ ಇರವು ತಾಯಿಯಾಗಿ ಹೆಂಡತಿಯಾಗಿ ಅವರಿಬ್ಬರ ನೆನಪುಗಳ ಅನೇಕ ಫ್ಲಾಶ್ ಬ್ಯಾಕ್‌ಗಳಲ್ಲಿ ವ್ಯಕ್ತವಾಗುತ್ತದೆ. ಅವರಿಬ್ಬರ ಬದುಕಿನಲ್ಲಿ ಅವಳು ಅವಿಭಾಜ್ಯ. ಅವರಿಬ್ಬರ ಬದುಕಿನ ಒಳ ಸೆಲೆ ಅವಳೆ. ಒಂದು, ಎರಡು, ಮೂರು ಹೆಚ್ಚೆಂದರೆ ನಾಲ್ಕು ಷಾಟ್‌ಗಳಲ್ಲಿ ನೆನಪಾಗಿ ಬರುವ ಈ ಫ್ಲಾಶ್ ಬ್ಯಾಕ್‌ಗಳು ಅವಳ ಪಾತ್ರವನ್ನು ಹೆಚ್ಚು ಹೆಚ್ಚು ಸ್ಪಷ್ಟಗೊಳಿಸುತ್ತವೆ.  
ಮನೆ ಬಿಟ್ಟವರು ಪರ್ವತ ಶ್ರೇಣಿಯನ್ನು ಹತ್ತುವುದು ಮುಂದಿನ ಕಥೆ. ಇಲ್ಲಿ ಪರ್ವತ ಶ್ರೇಣಿಯ ಅಗಾಧತೆಯನ್ನು ಸೌಂದರ್ಯವನ್ನು ಸೆರೆ ಹಿಡಿಯುವುದರೊಂದಿಗೆ ಇವರಿಬ್ಬರು ಹುಲು ಮಾನವರ ಬೆಟ್ಟವೇರುವ ದಣಿವು ಶ್ರಮವನ್ನು ಲೇಖನಿಯ ಮೂಲಕ ವಿವರಿಸಿ ವರ್ಣಿಸುವ ಸಾಮರ್ಥ್ಯದಲ್ಲೇ ಕ್ಯಾಮೆರ ಮೂಲಕ ಹಿಡಿದಿಟ್ಟಿದ್ದಾನೆ. ಹೀಗೆ ಕ್ಯಾಮೆರಾವನ್ನು ಲೇಖನಿಯಂತೆ ಬಳಸುವ ಮೂಲಕ ಪ್ರೇಕ್ಷಕರಲ್ಲೂ ಬೆಟ್ಟವೇರುವ ಶ್ರಮ ಮತ್ತು ದಣಿವಿನ ಅನುಭವವನ್ನು ಉಂಟು ಮಾಡಿದ್ದಾನೆ. ಚಿತ್ರವೊಂದನ್ನು ನೋಡುವಾಗ ಪ್ರೇಕ್ಷಕರು ತಾದಾತ್ಮ್ಯದಲ್ಲಿ ಪಾತ್ರಗಳ ಭಾವನೆಗಳನ್ನು ಅನುಭವಗಳನ್ನು ತಮ್ಮಲ್ಲಿ ಆವಾಹಿಸಿಕೊಳ್ಳುವುದು ಬೇರೆ. ಇಲ್ಲಿ ಪ್ರೇಕ್ಷಕರ ಸಂವೇದನಾ ಸಾಮರ್ಥ್ಯವನ್ನವಲಂಬಿಸಿ ಆವಾಹಿತ ಭಾವನೆ ಮತ್ತು ಅನುಭವಗಳು ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ವ್ಯತ್ಯಾಸವಾಗುತ್ತವೆ. ಪೋಸ್ಟ್‌ಮನ್ ಇನ್ ದಿ ಮೌಂಟೈನ್ಸ್ ಚಿತ್ರದ ಈ ಭಾಗದಲ್ಲಿ ಚಿತ್ರೀಕರಣ ಮತ್ತು ಸಂಕಲನಗಳ ಮೇಲೆ ನಿರ್ದೇಶಕ ಹೊಂದಿರುವ ಹಿಡಿತ ಎಷ್ಟೆಂದರೆ
ಅವನು ಹೇಳ ಬೇಕಾದ್ದನ್ನು ಕರಾರುವಾಕ್ಕಾಗಿ ಪ್ರೇಕ್ಷರಿಗೆ ತಲುಪಿಸುತ್ತಾನೆ.  
ಕ್ಯಾಮೆರ ಲೇಖನವಾಗುವ ಬಗ್ಗೆ ಇಲ್ಲೆ ಒಂದೆರಡು ಮಾತು. ಪ್ರಾರಂಭದಲ್ಲಿ ಸಿನೆಮಾವನ್ನ ಬಹಳ ನಿಕೃಷ್ಟವಾಗಿ ಕಾಣಲಾಗುತ್ತಿತ್ತು. ಸಿನೆಮಾ ಹುಟ್ಟಿಕೊಂಡ ಸಮಯದಲ್ಲಿ ಪೇಂಟಿಂಗ್, ಛಾಯಾಗ್ರಹಣ, ನಾಟಕ, ಸಂಗೀತ, ಶಿಲ್ಪ ಮತ್ತು ಬರವಣಿಗೆಯನ್ನು ಕಲೆಗಳೆಂದು ಪರಿಗಣಿಸುತ್ತಿದ್ದರು. ಸಿನೆಮಾವನ್ನು ಇವೆಲ್ಲವುಗಳ ಸಂಕರ ಎಂದು ತುಚ್ಚವಾಗಿ ಕಾಣಲಾಗುತ್ತಿತ್ತು. ಅಂಥ ಸಂದರ್ಭದಲ್ಲಿ ಸಿನೆಮಾದ ತೆಕ್ಕೆಗೆ ಸಿಕ್ಕಿಕೊಂಡವನು ಡೇವಿಡ್ ವಾರ್ಕ್ ಗ್ರಿಫಿತ್. ನಾಟಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದವನು. ತನ್ನ ಹೆಸರನ್ನು ತಾನು ಶ್ರೇಷ್ಠವಾದದ್ದು ಎಂದು ನಂಬಿಕೊಂಡಿದ್ದ ನಾಟಕ ಕ್ಷೇತ್ರಕ್ಕೆ ಮೀಸಲಾಗಿಟ್ಟು ಲಾರೆನ್ಸ್ ಗ್ರಿಫಿತ್ ಎಂಬ ಇನ್ನೊಂದು ಹೆಸರಿನಿಂದ ಸಿನೆಮಾ ಕ್ಷೇತ್ರ ಸೇರುತ್ತಾನೆ. ಸಿನಿಮಾ ಮಾಧ್ಯಮ ಆಗ ತಾನೆ ಕಥನ ತಂತ್ರವನ್ನು ರೂಢಿಸಿಕೊಳ್ಳುತ್ತಿತ್ತು. ಸಿನೆಮಾದ ಮೊದಲ ಷೋಮ್ಯಾನ್ ಎನಿಸಿದ ಫ್ರಾನ್ಸಿನ ಜಾರ್ಜ್ ಮೇಲಿ, ಮೊದಲ ಕಥೆಗಾರನೆನಿಸಿದ ಅಮೆರಿಕದ ಎಡ್ವಿನ್ ಪೋರ್ಟರ್ ಮತ್ತು ಬ್ರಿಟನ್ನಿನ ಬ್ರೈಟನ್ ಸ್ಕೂಲಿನ ಗಂಭೀರ ಸಿನೆಪ್ರಯೋಗಿ ಸಿಸಿಲ್ ಹೆಪ್‌ವರ್ತ್ ಮೊದಲಾದವರು ಸಿನೆಮಾ ಕಥನ ತಂತ್ರವನ್ನು ಅಂಬೆಗಾಲಿಡುವ ಸ್ಥಿತಿಗೆ ತಂದಿದ್ದರು. ಪೋರ್ಟರನ ಗರಡಿಯಲ್ಲಿ ಪಳಗಿದ್ದ ಗ್ರಿಫಿತ್ ಹೊಸ ಹೊಸ ಚಿತ್ರೀಕರಣ ಮತ್ತು ಸಂಕಲನ ತಂತ್ರಗಳನ್ನು ಅಗತ್ಯಕ್ಕೆ ಅನುಗುಣವಾಗಿ ಆವಿಷ್ಕರಿಸಿಕೊಂಡು ಇತರರ ಆವಿಷ್ಕಾರಗಳನ್ನು ರೂಢಿಸಿಕೊಂಡು ಚಲನಚಿತ್ರ ಭಾಷೆಯನ್ನ ಅದರ ವ್ಯಾಕರಣವನ್ನ ರೂಪಿಸಿದ. ಅವನನ್ನ ಚಲನಚಿತ್ರ ಪಿತಾಮಹ ಎಂದೇ ಗುರುತಿಸಲಾಗುತ್ತದೆ. ಅಂದು ಅವನು ರೂಪಿಸಿದ ಬಹತೇಕ ತಂತ್ರಗಳು ಇಂದೂ ಚಿತ್ರ ತಯಾರಿಕೆಯ ಮೂಲಭೂತ ನಿಯಮಗಳಾಗಿವೆ. ಎಷ್ಟರ ಮಟ್ಟಿಗೆಂದರೆ ಜಗತ್ತಿನಲ್ಲಿ ಯಾರೇ ನಿರ್ದೇಶಕ ಅಥವ ನಿರ್ದೇಶಕಿ ಚಿತ್ರ ತಯಾರಿಕೆಯಲ್ಲಿ ತೊಡಗಿದ್ದರೆ ಅವರ ಹೆಗಲ ಮೆಲೆ ಕುಳಿತು ಅವರನ್ನು ಗ್ರಿಫಿತ್  ನಿರ್ದೇಶಿಸುತ್ತಿರುತ್ತಾನೆ ಎಂಬ ಮಾತಿದೆ. ಇವನು ರೂಪಿಸಿದ ಸಂಕಲನ ತಂತ್ರಗಳಿಂದ ಪ್ರಭಾವಿತರಾದ ಅಂದಿನ ಸೋವಿಯೆತ್ ಒಕ್ಕೂಟದ ನಿರ್ದೇಶಕರು ತಮ್ಮ ಸಂಕಲನ ಪ್ರಯೋಗಗಳು ಮತ್ತು ಆವಿಷ್ಕಾರಗಳ ಮೂಲಕ ಸಿನೆಮಾಕ್ಕೆ ಕಾವ್ಯದ ಆಯಾಮವನ್ನು ಸೃಷ್ಟಿಸಿದರು. ಇಂದ್ರಿಯಗಳ ಮೂಲಕ ಸಂವಹನಿಸಿ ಪ್ರೇಕ್ಷಕರನ್ನು ತಲುಪುತ್ತಿದ್ದ ಸಿನೆಮಾವನ್ನು ಪ್ರೇಕ್ಷಕರ ನಾಡಿಗಳಿಗೇ ರಕ್ತಕ್ಕೇ ನೇರವಾಗಿ ತಟ್ಟಿ ತೀವ್ರತರ ಸಂವೇದನೆಯನ್ನ ಉಂಟು ಮಾಡಿದರು. ಗ್ರಿಫಿತ್ತನ ಚಿತ್ರೀಕರಣ ತಂತ್ರಗಳನ್ನು ಎತ್ತಿಕೊಂಡು ಜರ್ಮನಿಯ ಚಲನಚಿತ್ರ ತಯಾರಕರು ರಿಯಲಿಸಂ(ವಾಸ್ತವವಾದಿ) ಮತ್ತು ಫ್ಯಾಂಟಸಿ(ಭ್ರಮಾತ್ಮಕ ಕಲ್ಪನೆಗಳ) ಪ್ರಕಾರಗಳನ್ನು ಹುಟ್ಟು ಹಾಕಿದರು. ಚಲನಚಿತ್ರ ಇತಿಹಾಸದಲ್ಲಿ ಈ ಘಟ್ಟವನ್ನು ಜರ್ಮನಿಯ ಸುವರ್ಣ ಯುಗ ಎಂದೇ ಗುರುತಿಸಲಾಗಿದೆ. ಈ ಯುಗದ ವಾಸ್ತವವಾದಿ ಜರ್ಮನ್ ಚಿತ್ರ ತಯಾರಕರು ಪಾತ್ರಗಳನ್ನು, ಪಾತ್ರಗಳ ಮಾನಸಿಕ ಮತ್ತು ಭೌತಿಕ ಆಯಾಮಗಳನ್ನು ಮತ್ತು ಸನ್ನಿವೇಶಗಳನ್ನು ಸಂವಹನಿಸಲು ರೂಢಿಸಿದ ಚಿತ್ರೀಕರಣ ತಂತ್ರಗಳನ್ನು ಕಂಡ ಚಲನಚಿತ್ರ ವಿದ್ವಾಂಸರು ಜರ್ಮನಿಯ ಸುವರ್ಣ ಯುಗದ ವಾಸ್ತವವಾದಿ ನಿರ್ದೇಶಕರು ಕ್ಯಾಮೆರಾವನ್ನೆ ಲೇಖನಿ ಮಾಡಿಕೊಂಡರು ಎಂದು ಕರೆದಿದ್ದಾರೆ.  
ಈಗ ಪೋಸ್ಟ್‌ಮನ್ ಇನ್ ದಿ ಮೌಂಟೈನ್ಸ್ಗೆ ಬರೋಣ. ನಸುಕಿನಲ್ಲಿ ಮನೆಯಿಂದ ಹೊರಟು ಮೊದಲ ಗ್ರಾಮವನ್ನು ತಲುಪುವವರೆಗೆ ಇವರಿಬ್ಬರು ಪರ್ವತ ಶ್ರೇಣಿಗಳಲ್ಲಿ ಪಯಣ ಮಾಡುತ್ತಾರೆ. ೮೪ ನಿಮಿಷಗಳ ಅವಧಿಯ ಚಿತ್ರದಲ್ಲಿ ಪರ್ವತಗಳನ್ನು ಏರುವ ಈ ಭಾಗ ೧೦ ನಿಮಿಷವಿದೆ. ಮಧ್ಯೆ ಒಂದು ಕಡೆ ಮಗನಿಗೆ ತಾನು ಬಾಲಕನಾಗಿದ್ದಾಗ ಅಪ್ಪ ಡ್ಯೂಟಿಯಿಂದ ಮನೆಗೆ ಬರುವುದು ತನಗೆ ಆಟದ ಗನ್ ಕೊಡುವುದು ೨೬ ಸೆಕೆಂಡ್‌ಗಳ ಫ್ಲಾಷ್ ಬ್ಯಾಕಿನಲ್ಲಿ ನೆನಪಾಗುತ್ತದೆ. ಇನ್ನೊಂದು ಕಡೆ ಕಡಿದಾದ ಸೋಪಾನವನ್ನು ಏರುವಾಗ ಮೇಲಿನಿಂದ ಇಳಿದು ಬರುತ್ತಿರುವ ಒಬ್ಬ ಗಂಡಸು ಮತ್ತು ಒಬ್ಬ ಹೆಂಗಸನ್ನು ಎದುರಾಗುವುದು ಬಿಟ್ಟರೆ ಇನ್ನೊಂದು ನರಪಿಳ್ಳೆಯ ಸುಳಿವಿಲ್ಲ. ಅವರೊಡನೆ ಸಂಭಾಷಣೆಯೂ ಇಲ್ಲ. ಸಂಭಾಷಣೆ ಏನಿದ್ದರೂ ಇವರಿಬ್ಬರ ನಡುವೆ ಮಾತ್ರ ನಡೆಯುತ್ತದೆ. ಮತ್ತೆ ಆಗೊಮ್ಮೆ ಈಗೊಮ್ಮೆ ನಾಯಿಯನ್ನುದ್ದೇಶಿಸಿ ಅವರಾಡುವ ಮಾತುಗಳು ಅಷ್ಡೆ. ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಅಲ್ಲಲ್ಲಿ ಮಗನ ಧ್ವನಿ ವಿವರಣೆಯನ್ನ, ಅವನ ಅನಿಸಿಕೆಗಳನ್ನ ಪ್ರೇಕ್ಷಕರಿಗೆ ಸ್ವಗತದಲ್ಲಿ  ಹೇಳುತ್ತಿರುತ್ತದೆ. ಈ ತಂತ್ರ ಚಿತ್ರದುದ್ದಕ್ಕೂ ಪ್ರೇಕ್ಷಕನ(ಳ)ನ್ನು ಪಯಣದಲ್ಲಿ ಅಪ್ಪ ಮಗ ಮತ್ತು ನಾಯಿಯ ಸಂಗಾತಿಯನ್ನಾಗಿಸಿ ಬಿಡುತ್ತದೆ. ಇಲ್ಲಿಯೂ ಮಧ್ಯೆ ಮಧ್ಯೆ ಮಗನ ಧ್ವನಿ ವಿವರಣೆ ನೀಡುತ್ತದೆ.     
ಎರಡು ಮೂರು ಕಲ್ಲುಗಳನ್ನು ಒಂದೊಂದು ಹಂತಗಳಾಗಿ ಜೋಡಿಸಿರುವ ಕಡಿದಾದ ಸೋಪಾನ. ಆ ಮೆಟ್ಟಿಲ ಕಲ್ಲಿನ ಮೇಲೆ ಹತ್ತುತ್ತಿರುವ ಇವರ ಕಾಲಿನ ಕ್ಲೋಸ್ ಅಪ್ ಷಾಟ್‌ಗಳು. ಅವರ ಹಿಂದೆಯೇ ಹತ್ತುತ್ತಿರುವ ಕ್ಯಾಮೆರ. ಏದುಸಿರು ಬಿಡುವ ಕ್ಯಾಮೆರದ ತುಯ್ದಾಟ, ಅವರಿಬ್ಬರನ್ನು ದಣಿವಿನಿಂದಲೇ ಹಿಂಬಾಲಿಸಿ ಅವರು ನಿಂತಾಗ ತಾನೂ ನಿಲ್ಲುವ ಕ್ಯಾಮೆರಾ, ಅವರು ಸುಧಾರಿಸಿಕೊಳ್ಳುವಾಗ ಸ್ಟಡಿಯಾಗಿ ತಾನೂ ಸಧಾರಿಸಿಕೊಳ್ಳುವ ಕ್ಯಾಮೆರ, ಮೆಟ್ಟಿಲುಗಳನ್ನು ಏರುವಾಗ ಅವರಿಬ್ಬರ ಓಲಾಟ ಮತ್ತು ತುಯ್ದಾಟವನ್ನು ತಾನೂ ಓಲಾಡುತ್ತ ತುಯ್ದಾಡುತ್ತಲೇ ಸೆರೆ ಹಿಡಿಯುವ ಕ್ಯಾಮೆರ. ಟ್ರ್ಯಾಕ್, ಟಿಲ್ಟ್, ಪ್ಯಾನ್ ಮತ್ತು ಫಾಲೊ ಷಾಟ್‌ಗಳು. ಪಾತ್ರಗಳ ದೃಷ್ಟಿ ಕೋನಗಳಲ್ಲಿ ಮತ್ತು ಸಹಪಯಣಿಗರ ಸ್ಥಾನದಲ್ಲಿರುವ  ಪ್ರೇಕ್ಷಕರ ದೃಷ್ಟಿಕೋನಗಳಲ್ಲಿ ತೆಗೆದಿರುವ ಷಾಟ್‌ಗಳು. ಹೀಗೆ ಕ್ಯಾಮೆರಾದ ವಿವಿಧ ರೀತಿಯ ಚಲನವಲನಗಳು ಮತ್ತು ಪೊಸಿಷನ್‌ಗಳು ಪ್ರೇಕ್ಷರಿಗೆ ಪಾತ್ರಗಳ ದಣಿವು ಆಯಾಸಗಳನ್ನು ಕರಾರುವಾಕ್ಕಾಗಿ ಸಂವಹಿನಿಸುತ್ತವೆ. ಪರ್ವತ ಹತ್ತುವ ಅನುಭವವನ್ನು ಪ್ರೇಕ್ಷರಿಗೂ ದಕ್ಕುವಂತೆ ಮಾಡುತ್ತವೆ. ಸ್ಟಡಿ ಇರುವ ಕ್ಯಾಮೆರಾದ ಮುಂದೆ ಹತ್ತುತ್ತಾ ಇಳಿಯುತ್ತಾ ಅವರಿಬ್ಬರು ಪ್ರತ್ಯಕ್ಷವಾಗುತ್ತಾರೆ ಮಾಯವಾಗುತ್ತಾರೆ. ಗುಡ್ಡದ ಮೇಲಿನಿಂದ, ಕೆಳಗಿನಿಂದ, ಬೆಟ್ಟ ಗುಡ್ಡಗಳ ನಡುವೆ ಹಾವಿನಂತೆ ಸಾಗುವ ಅಂಕುಡೊಂಕು ದಾರಿಗಳಲ್ಲಿ ಎಕ್ಸ್ಟ್ರೀಮ್ ಲಾಂಗ್ ಷಾಟ್‌ಗಳಲ್ಲಿ ಇರುವೆಗಳಿಗಿಂತ ಚಿಕ್ಕದಾದ ಬಿಂದುಗಳಂತೆ ಚಲಿಸುವ, ಕ್ಲೋಸ್ ಷಾಟ್‌ಗಳಲ್ಲಿ ಅವರಿಬ್ಬರ ಮತ್ತು ನಾಯಿಯ ಮನೋ ವ್ಯಾಪಾರವನ್ನು ದೈಹಿಕ ದಣಿವನ್ನು ಮತ್ತು ನಿಸರ್ಗವನ್ನು ಸೆರೆ ಹಿಡಿಯುವ ಮೂಲಕ ಹತ್ತು ನಿಮಿಷಗಳ ಅಪ್ಪ ಮಗ ಮತ್ತು ನಾಯಿಯ ಪಯಣವನ್ನು ಯಾವುದೇ ಲೇಖನಿಗೂ ಕಡಿಮೆಯಿಲ್ಲದಂತೆ ವಿವರಣಾತ್ಮಕವಾಗಿ ಕಟ್ಟಿ ಕೊಡುತ್ತಾನೆ ನಿರ್ದೇಶಕ. ಈ ಭಾಗದಲ್ಲಿ ಲವಲವಿಕೆಯಿಂದ, ಉತ್ಸಾಹದಿಂದ ಮತ್ತು ಬಳಲಿಕೆಯಿಂದ ಎಲ್ಲವನ್ನು ಸೆರೆ ಹಿಡಿಯುವ ಕ್ಯಾಮೆರಾ ಮುಂದೆ ಕುರುಡಿ ಅಜ್ಜಿಯ ಪ್ರಸಂಗದಲ್ಲಿ ತಟಸ್ಥವಾಗಿ ಕಲಾವಿದರ ಪ್ರತಿಭೆ ಪಾತ್ರಗಳ ಭಾವನೆಗಳನ್ನು ಪ್ರಕಟಿಸಲು ಅನುವು ಮಾಡಿಕೊಡುತ್ತದೆ.  
ಅಜ್ಜಿ ಮನೆಯ ದೃಶ್ಯದಲ್ಲಿ ನಾಲ್ಕೂ ಜನ ಚೆನ್ನಾಗಿ ಅಭಿನಯಿಸಿದ್ದಾರೆ. ಅಪ್ಪ ಮಗ ನಾಯಿ ಮತ್ತು ಅಜ್ಜಿಯ ಪಾತ್ರಧಾರಿಗಳು ಒಂದು ತೂಕ ಹೆಚ್ಚಿಲ್ಲದಂತೆ ಒಂದು ತೂಕ ಕಡಿಮೆಯಿಲ್ಲದಂತೆ ಅಭಿನಯಿಸಿದ್ದಾರೆ. ಸನ್ನಿವೇಶವೇ ಹಾಗಿದೆ. ಒಬ್ಬಂಟಿ ಕುರುಡಿ ಅಜ್ಜಿ ದೊಡ್ಡ ಮನೆಯ ಬಾಗಿಲಿನ ಒಳಭಾಗದಲ್ಲಿ ಕುಳಿತು ನೂಲುಗಳನ್ನು ಬಿಡಿಸುತ್ತಿರುತ್ತಾಳೆ. ಅವಳು ಯಾರದೋ ಬರವಿನ ನಿರೀಕ್ಷೆಯ ದ್ದಾಳೆ. ನಾಯಿ ಬರುತ್ತದೆ. ಬಂದ್ಯಾ? ಅಂತ ಅದರ ಹೆಸರಿಡಿದು ಕರೆಯುತ್ತಾಳೆ. ಅಜ್ಜಿಯ ಎಡ ಭುಜದ ಸಜೆಷನ್ ಷಾಟ್‌ನಲ್ಲಿ ಅವಳ ಮುಂದೆ ನಾಯಿ ಗರ್ಭಗುಡಿಯ ಮುಂದಿನ ಬಸವನಂತೆ ಕುಳಿತಿದೆ. ಅದರ ಹಿಂದಿನಿಂದ ಅಪ್ಪ ಮಗ ಕೆಳಗಿನಿಂದ ಹತ್ತುತ್ತ ಮೇಲೆ ಬರುತ್ತಾರೆ. ಇಡೀ ಪ್ರಸಂಗದಲ್ಲಿ ಅವಳು ಕುಳಿತ ಕಡೆಯಿಂದ ಏಳುವುದಿಲ್ಲ. ಪೋಸ್ಟ್‌ಮ್ಯಾನನ ಮಗ ಬಂದಿರುವುದು ಅವಳಿಗೆ ಮೊದಲು ಗೊತ್ತಾಗುವುದಿಲ್ಲ. ನಾಯಿಗೆಂದು ಒಂದು ತುಣುಕು ಮೂಳೆಯನ್ನ ಎಸೆಯುತ್ತಾಳೆ. ಅದು ಬಂದು ಮಗನ ಕಾಲುಗಳ ನಡುವೆ ಬೀಳುತ್ತದೆ. ಹರೆಯದ ಧೋರಣೆಯಲ್ಲಿ ಮಗ ಅದನ್ನು ಉಡಾಫೆಯಿಂದ ನಾಯಿಯ ಕಡೆಗೆ ಒದೆಯುತ್ತಾನೆ. ಕುರುಡಿ ಅಜ್ಜಿಗೆ ಲಕೋಟೆ ಬಂದಿದೆ. ಅದರಲ್ಲಿ ಮೊಮ್ಮಗ ಖಾಲಿ ಹಾಳೆಯ ಮಡಿಕೆಯಲ್ಲಿ ಕಳಿಸಿರುವ ಹಣವಿದೆ. ಮೊಮ್ಮಗ ಕಳಿಸಿರುವ ಕವರನ್ನು ಪಡೆದುಕೊಂಡು ಅದೇ ತನ್ನ ಮೊಮ್ಮಗನೇನೊ ಅನ್ನುವಷ್ಟು ಕಕ್ಕುಲತೆಯಿಂದ ತೊಡೆಯ ಮೇಲಿಟ್ಟುಕೊಂಡು ನೇವರಿಸುತ್ತಾಳೆ. ಅಜ್ಜಿಯರು ಎಳೆಯ ಮೊಮ್ಮಗುವನ್ನು ಸ್ನಾನ ಮಾಡಿಸುವಾಗ ನೇವರಿಸುತ್ತಾರಲ್ಲ ಹಾಗೆ. ಇಡೀ ವಿದ್ಯಮಾನವನ್ನು ಕತೂಹಲದಿಂದ ನೋಡುತ್ತಿದ್ದ ಮಗ ಮುಂದಕ್ಕೆ ಬರುತ್ತಾನೆ. ಅಜ್ಜಿಯ ತನ್ಮಯತೆಗೆ ಭಂಗವಾಗುತ್ತದೆ. ಯಾರು? ವಿಲೇಜ್ ಅಕೌಂಟೆಂಟ? ಎಂದು ಕೇಳುತ್ತಾಳೆ. ಪೋಸ್ಟ್‌ಮ್ಯಾನ್ ಮಗನ ಪರಿಚಯ ಮಾಡಿಕೊಡುತ್ತಾನೆ. ಇನ್ನು ಮುಂದೆ ತನ್ನ ಬದಲು ಅವನು ಬರುತ್ತಾನೆ ಎಂದು ತಿಳಿಸುತ್ತಾನೆ. ನಂತರ ಅಜ್ಜಿ ಲಕೋಟೆಯನ್ನು ತಳಮಳದಿಂದ ಸ್ವಲ್ಪ ಹೊತ್ತು ಕೈಯಲ್ಲಿ ಹಿಡಿದು ನಿಧಾನವಾಗಿ ಇಡೀ ಲಕೋಟೆಯನ್ನ ನೇವರಿಸಿ ನಿಧಾನಕ್ಕೆ ಹರಿದು ಬಿಡಿಸುತ್ತಾಳೆ. ಅದೇ ಆಸ್ಥೆಯಿಂದ ಒಳಗೆ ಮಡಿಸಿಟ್ಟಿದ್ದ ಖಾಲಿ ಹಾಳೆಯನ್ನು ಬಿಡಿಸಿ ಒಳಗಿದ್ದ ನೋಟನ್ನು ತೆಗೆದು ಮೊಮ್ಮಗನ ಮುಖವನ್ನೇ ತಡವಿದಂತೆ ತಡವಿ ಧರಿಸಿರುವ ಬಟ್ಟೆಯೊಳಗೆ ಇಟ್ಟುಕೊಳ್ಳುತ್ತಾಳೆ. ಖಾಲಿ ಹಾಳೆಯನ್ನು ಓದು ಎಂಬಂತೆ ಅಪ್ಪನ ಕೈಗಿಡುತ್ತಾಳೆ. ಅವನು ಖಾಲಿ ಹಾಳೆಯಲ್ಲಿ ಇಲ್ಲದ್ದನ್ನು ಅವನ ಪ್ರಕಾರ ಅಜ್ಜಿಯ ಮನಸ್ಸಿಗೆ ನೆಮ್ಮದಿ ಕೊಡಬಹುದು ಎನ್ನುವ ವಿಷಯವನ್ನು ಓದಿದಂತೆ ಹೇಳುತ್ತಾನೆ. ತನ್ನದೇ ಸವಕಲು ಕಾಳಜಿಗಳನ್ನು ಅವಳ ಮೊಮ್ಮಗ ಬರೆದಿರುವಂತೆ ಓದುತ್ತಾನೆ. ಈ ನಾಟಕವನ್ನು ನೋಡುತ್ತಿರುವ ಮಗನಿಗೆ ಗೊಂದಲ ಮತ್ತು ಅಸಮಾಧಾನ. ಹೊಸ ಜಿಲ್ಲೆಯಲ್ಲಿ ಕೆಲಸ ಜಾಸ್ತಿ, ಬರಬೇಕೆಂದರೆ ಆಗುತ್ತಿಲ್ಲ. ಏನಾದರೂ ಬೇಕಾದರೆ ಅಂಚೆಯವನು ಸಹಾಯ ಮಾಡುತ್ತಾನೆ. ಎಂದು ಅಪ್ಪ ಓದಿದಂತೆ ಮಾಡುತ್ತಾನೆ. ಅದಕ್ಕೆ ಅಜ್ಜಿ, ಇದೆಲ್ಲವನ್ನು ನೀನು ಮೊದಲೇ ಓದಿದ್ದೆ. ಇದನ್ನು ಎಷ್ಟು ಸಾರಿ ಕೇಳಿದ್ದೇನೆ ಎನ್ನುತ್ತಾಳೆ. ಆಗ ಅಪ್ಪ ತನ್ನ ಮಗನನ್ನು ಕರೆದು ಓದಿದಂತೆ ಮಾಡು ಎಂದು ಸನ್ನೆ ಮಾಡುತ್ತ ಇನ್ನು ನನ್ನ ಮಗ ಓದುತ್ತಾನೆ ಎಂದು ತಾನು ಎದ್ದು ಮಗನ ಕೈಗೆ ಆ ಖಾಲಿ ಹಾಳೆಯನ್ನು ಕೊಟ್ಟು ಅವಳ ಮುಂದೆ ತಾನಿದ್ದ ಸ್ಥಾನದಲ್ಲಿ ಕೂರಿಸುತ್ತಾನೆ. ಇಷ್ಟು ಹೊತ್ತೂ ಈ ನಾಟಕವನ್ನು ಅಸಮಾಧಾನದಿಂದಲೇ ಗಮನಿಸುತ್ತಿದ್ದ ಮಗ ಸುಳ್ಳು ಓದಲು ಇಷ್ಟ ಪಡುವುದಿಲ್ಲ. ಅಪ್ಪನ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದಲೇ ಓದುತ್ತಾನೆ. ಅಪ್ಪನಿಗಿಂತ ಮಗನ ಗ್ರಹಿಕೆ ಮತ್ತು ಮನಸ್ಥಿತಿ ಬೇರೆ. ಇಲ್ಲಿ ಹೊಸ ಜಿಲ್ಲೆಯಲ್ಲಿ ಬಹಳ ಚೆನ್ನಾಗಿದೆ. ಅಲ್ಲಿ ಪರ್ವತಗಳಲ್ಲಿ ಜೀವನ ಕಷ್ಟಕರ. ಇವನು ಓದಿದಂತೆ ಹೇಳುವುದು ಅಜ್ಜಿಗೆ ದುಃಖ ತರಿಸುತ್ತದೆ. ನಿನ್ನನ್ನು ನಾನು ಕರೆಸಿಕೊಳ್ಳ ಬೇಕಿತ್ತು. ಎಂದಾಗ ಅಜ್ಜಿಗೆ ದುಃಖ ಒತ್ತರಿಸಿ ಬರುತ್ತದೆ. ಆ ತರ ಹೇಳ ಬೇಡ ಎಂದು ಸೂಚಿಸಲು ಪ್ರಯತ್ನಿಸುತ್ತಿದ್ದ ಅಪ್ಪ ಇಲ್ಲಿಗೆ ಮಗನ ಭುಜವನ್ನ ಮುಟ್ಟಿ ಎಚ್ಚರಿಸುತ್ತಾನೆ. ಮಗ ತಲೆ ಎತ್ತಿ ಅಜ್ಜಿಯ ಮುಖ ನೋಡುತ್ತಾನೆ. ಅಲ್ಲಿ ದುಃಖ ಮಡುಗಟ್ಟಿ ಇನ್ನೇನು ಅಳುವಾಗಿ ಉಮ್ಮಳಿಸುವಂತಿದೆ. ಆಗ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ನಿನಗೆ ಒಳ್ಳೆಯ ಆರೋಗ್ಯ ಮತ್ತೆ ಎಲ್ಲವು ಚೆನ್ನಾಗಿರಲಿ. ಎಂದು ಮುಗಿಸುತ್ತಾನೆ. ಸ್ವಲ್ಪ ಹೊತ್ತು ಮೌನ. ಅಜಿ, ಅಷ್ಟೇನಾ ಅಂತ ಹೇಳಿ ಕವರನ್ನು ಅವನಿಗೆ ಕೊಡುತ್ತಾಳೆ. ಅದರೋಲಗೆ ಆ ಖಾಲಿ ಕಾಗದವನ್ನು ಇರಿಸಿ ಅಜ್ಜಿಯ ಕೈಗಿಡುತ್ತಾನೆ. ನಿರ್ದೇಶಕ ಇಲ್ಲಿ ಆಳವಾದ ಅವ್ಯಕ್ತ ನೋವಿನಂತೆ ಭಾಸವಾಗುವ ಕೊಳಲ ದ್ವನಿಯನ್ನು ಬಳಸುತ್ತಾನೆ. ಪ್ರೇಕ್ಷಕರಿಗೆ ಅವರಿಬ್ಬರೇ ನಿಜವಾದ ಅಜ್ಜಿ ಮೊಮ್ಮಗ ಅನಿಸಿಬಿಡುತ್ತದೆ. ಅಪ್ಪ, ನಾವಿನ್ನು ಹೊರಡುತ್ತೇವೆ. ನಿನ್ನ ಮೊಮ್ಮಗನಿಗೆ ಕಾಗದ ನಾನಾಗಲೆ ಬರೆದಿದ್ದೇನೆ ಅಂದಾಗ ಅಜ್ಜಿ, ನಿನ್ನ ಮಗನೇ ಬರೆಯಲಿ. ನನ್ನ ಮೊಮ್ಮಗನೇ ಮಾತಾಡಿದಂತಾಯಿತು ನನಗೆ ಅನ್ನುತ್ತಾಳೆ. ಮಗ ಈಗ ಮೊದಲಿನಷ್ಟು ಬಿಗುವಾಗಿಲ್ಲ. ಅಜ್ಜಿಯ ಕೈಗಳನ್ನು ಮುಟ್ಟಿ ನಿನ್ನ ನೋಡೋಕೆ ಬರ‍್ತಾ ಇರ‍್ತೀನಿ ಅನ್ನುತ್ತಾನೆ. ಆಗಾಗ್ಗೆ ಬರ‍್ತಾ ಇರು. ನನಗೆ ಕಾಗದಗಳಿರುತ್ತವೆ ಅನ್ನುತ್ತದೆ ಅಜ್ಜಿ.   
ಐವತ್ತು ಷಾಟ್‌ಗಳಿರುವ ಈ ದೃಶ್ಯದಲ್ಲಿ ೨೮ ಕ್ಲೋಸ್ ಅಪ್‌ಗಳಿವೆ. ಈ ಕ್ಲೋಸ್ ಅಪ್‌ಗಳಲ್ಲಿ ಅಪ್ಪ, ಮಗ ಮತ್ತು ಕುರುಡಿ ಅಜ್ಜಿಯ ಭಾವನೆಗಳನ್ನು, ಸೂಕ್ಷ್ಮ ಸಂವೇದನೆಗಳನ್ನು ಸೆರೆ ಹಿಡಿಯಲಾಗಿದೆ. ಕಲಾವಿದರ ಅಭಿನಯ ಮಾತ್ರವಲ್ಲ ಚಿತ್ರೀಕರಣ ತಂತ್ರವೂ ದೃಶ್ಯದ ಮೂಡನ್ನು ಪಾತ್ರಗಳ ಕ್ಷಣಕ್ಷಣದ ಸಂಚಾರಿ ಭಾವಗಳನ್ನು ಪರಿಣಾಮಕಾರಿಯಾಗಿ ಸೃಷ್ಟಿಸಿ ಕೊಡುತ್ತದೆ. ಮಗನ ಕ್ಲೋಸ್ ಅಪ್‌ಗಳು ದೃಶ್ಯದ ಪ್ರಾರಂಭದಲ್ಲಿ ಅವನ ಉಡಾಫೆತನವನ್ನ, ಕುತೂಹಲವನ್ನ ಕ್ಯಾಮೆರಾ ಚಲನೆಯಲ್ಲಿ, ಚಲನೆಯ ಜಗ್ಗು(ರಿeಡಿಞ)ವಿಕೆಯಲ್ಲಿ ಮೂರ್ತೀಕರಿಸುತ್ತವೆ. ಈ ದೃಶ್ಯದಲ್ಲಿ ಅವನಲ್ಲುಂಟಾಗುವ ಪ್ರಬುದ್ಧತೆಯನ್ನು ಅಜ್ಜಿಯ ಕೈ ಹಿಡಿದುಕೊಳ್ಳುವಾಗ ಸ್ಥಿರ ಕ್ಯಾಮೆರಾ ಚಿತ್ರೀಕರಣದ ಮೂಲಕ ಸಾಧಿಸಲಾಗಿದೆ. ಕುರುಡಿ ಅಜ್ಜಿಯ ವಿವಿಧ ಕೋನಗಳ ಕ್ಲೋಸ್ ಅಪ್‌ಗಳು ಬೆಳಕು ನೆರಳಿನ ವಿವಿಧ ವಿನ್ಯಾಸಗಳನ್ನು ದುಡಿಸಿಕೊಳ್ಳುವ ಮೂಲಕ ಅವಳ ತೀವ್ರತರ ಸಂಚಾರೀ ಭಾವಗಳನ್ನು ಮತ್ತು ಇಡೀ ದೃಶ್ಯದ ಸ್ಥಾಯಿಯಾದ ಕರುಣ ರಸವನ್ನು ರೂಪಿಸುತ್ತವೆ.  
ಇನ್ನು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಿರುವ ಚಿತ್ರೀಕರಣ ಮತ್ತು ಸಂಕಲನ ಕೌಶಲ ಕುರಿತು ಒಂದು ಪ್ರಸಂಗದ ಬಗ್ಗೆ ಹೇಳಿ ಈ ಲೇಖನವನ್ನ ಮುಗಿಸುತ್ತೇನೆ. ಇವರಿಬ್ಬರು ಎತ್ತರ ಪ್ರದೇಶದ ದೊಡ್ಡ ಕಟ್ಟಡದಲ್ಲಿ ಸುಧಾರಿಸಿಕೊಳ್ಳುತ್ತಿರುವಾಗ ಮಗನ ಅಚಾತುರ್ಯದಿಂದಾಗಿ ಕೆಲವು ಪತ್ರಗಳು ಗಾಳಿಗೆ ಹಾರಿ ಹೋಗುತ್ತವೆ. ಅವುಗಳನ್ನು ರಕ್ಷಿಸಿಕೊಳ್ಳುವ ಪ್ರಸಂಗ ಇದು. ಈ ಪ್ರಸಂಗದಲ್ಲಿ ಪತ್ರಗಳು ಹಾರಿ ಹೋಗುವಲ್ಲಿಂದ ಕೊನೆಯ ಪತ್ರವನ್ನು ರಕ್ಷಿಸಿಕೊಳ್ಳುವವರೆಗಿನ ಘಟನೆ ಕೇವಲ ೩೫ ಸೆಕೆಂಡುಗಳಿವೆ. ೩೫ ಸೆಕೆಂಡುಗಳಲ್ಲಿ ೧೮ ಷಾಟ್‌ಗಳಿವೆ. ೬ ಸೆಕೆಂಡಿನ ಒಂದು ಮತ್ತು ೩ ಸೆಕೆಂಡಿನ ೩ ಷಾಟ್‌ಗಳೊಂದಿಗೆ ಅ ಸಂದರ್ಭದ ತುರ್ತನ್ನು ಹಿಡಿದಿಡಿವ ಉಳಿದ ೧೪ ಷಾಟ್‌ಗಳು ಚಿತ್ರೀಕರಣ ಮತ್ತು ಸಂಕಲನ ಕೌಶಲಗಳಿಗೆ ಉತ್ತಮ ಉದಾಹರಣೆಯಾಗಿದೆ. ಮಗ ಬಾಲ್ಕನಿಯಂಥ ಬಹಳ ಉದ್ದವಾದ ಆ ಕಾರಿಡಾರಿನ ಗೋಡೆ ಬದಿಯ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಾನೆ. ಎದುರಿನ ಕಟಾಂಜನದ ಪಕ್ಕ ಕಂಬಕ್ಕೆ ಒರಗಿಕೊಂಡು ಅಪ್ಪ ತನ್ನ ಮಂಡಿ ನೋವನ್ನು ಅನುಭವಿಸುತ್ತ ಶಮನಗೊಳಿಸಲು ಪ್ರಯತ್ನಿಸುತ್ತ ಕುಳಿತಿದ್ದಾನೆ.  ಅಲ್ಲಿಟ್ಟಿರುವ ನೀರನ್ನು ಕುಡಿದು ನಾಯಿಗೂ ಕುಡಿಸಿ ಮಗ, ಮುಂದೆ ವಿಲೇವಾರಿ ಮಾಡಬೇಕಾದ ಪತ್ರಗಳನ್ನು ವಿಂಗಡಿಸುವ ಪ್ರಯತ್ನದಲ್ಲಿ ಒಂದಷ್ಟು ಪತ್ರಗಳನ್ನು ಪಕ್ಕದಲ್ಲೆ ಇರುವ ಪೋಸ್ಟ್ ಬ್ಯಾಗಿನ ಮೇಲೆ ಇಡುತ್ತಾನೆ. ಗಾಳಿ ಜೋರಾಗಿ ಬೀಸುವ ಶಬ್ದ ಕೇಳಿಸುತ್ತಿದ್ದ ಹಾಗೇ ಅವನ ತಲೆ ಕೂದಲು ಗಾಳಿಗೆ ಹಾರುತ್ತದೆ. ಏನಾಗುತ್ತಿದೆ ಎಂದು ಅರಿವಾಗುವುದರೊಳಗೆ ಪೋಸ್ಟ್ ಬ್ಯಾಗಿನ ಮೇಲಿಟ್ಟಿದ್ದ ಪತ್ರಗಳು ಗಾಳಿಯ ರಭಸಕ್ಕೆ ಹಾರಿ ಹೋಗುತ್ತವೆ. ಆ ಕಡೆ ಕುಳಿತಿದ್ದ ಅಪ್ಪ ಗಾಳಿಯಲ್ಲಿ ಹಾರಿ ಹೋಗುತ್ತಿರುವ ಪತ್ರಗಳನ್ನು ನೋಡುತ್ತಾನೆ. ಎದ್ದು ಆ ದಿಕ್ಕಿಗೆ ಫ್ರೇಮ್‌ನಿಂದ ಎಕ್ಸಿಟ್ ಆಗುತ್ತಾನೆ. ಮುಂದಿನ ಲಾಂಗ್ ಷಾಟ್‌ನಲ್ಲಿ ಉದ್ದಕ್ಕಿರುವ ಕಾರಿಡಾರ್‌ನಲ್ಲಿ ಪತ್ರಗಳು ಹಾರಿ ಹೋಗುತ್ತಿವೆ. ಫ್ರೇಮ್ ಒಳಕ್ಕೆ ಓಡುತ್ತಲೆ ಎಂಟರ್ ಆಗಿ ಅವುಗಳ ಹಿಂದೆ ಓಡುತ್ತಾನೆ. ಅವನ ಹಿಂದೆಯೇ ನಾಯಿ ಓಡುತ್ತದೆ. ಈ ಷಾಟ್‌ನಿಂದ ಮೊದಲ ಪತ್ರವನ್ನು ರಕ್ಷಿಸುವವರೆಗೆ ಚಿತ್ರೀಕರಣಕ್ಕೆ ಬಳಸಿರುವ ವಿವಿಧ ವೈಡ್ ಆಂಗಲ್ ಲೆನ್ಸ್‌ಗಳಿಂದ ಒಂದು ರೀತಿ ಸರ್ರಿಯಲಿಸ್ಟಿಕ್ ಎಫೆಕ್ಟ್ ದೊರಕಿ ಕಥನದಲ್ಲಿ ಟೆನ್ಶನ್ ಸೃಷ್ಟಿಯಾಗುತ್ತದೆ. ನಿರ್ದೇಶಕನ ಸಿನೆತಾಂತ್ರಿಕತೆಯ ಕೈ ಚಳಕವನ್ನು ಕೊನೆಯ ಪತ್ರದ ರಕ್ಷಣೆಯ ನಿರೂಪಣೆಯಲ್ಲಿ ಕಾಣಬಹುದು.  ಮೂರು ಷಾಟ್‌ಗಳ ಚಿತ್ರೀಕರಣ ಮತ್ತು ಕರಾರುವಾಕ್ಕಾದ ಸಂಕಲನಗಳಲ್ಲಿ ಇದನ್ನು ಸಾಧಿಸಿದ್ದಾನೆ. ಅಪ್ಪ ಮತ್ತು ನಾಯಿ ಲಾಂಗ್ ಷಾಟ್‌ನಲ್ಲಿ ಕ್ಯಾಮೆರಾದ ಒಂದು ಬದಿಯಿಂದ ಓಡಿ ಬಂದು ಮುಂದಿನಿಂದ ಸಾಗುತ್ತಾರೆ. ಷಾಟ್‌ನ ಕೊನೆಯಲ್ಲಿ ಅವರು ಹತ್ತಿರ ಓಡುತ್ತಿರುವುದರಿಂದಾಗಿ ನಾಯಿಯ ಕ್ಲೋಸ್ ಅಪ್ ಆಗುತ್ತದೆ. ಪಕ್ಕದಲ್ಲಿ ಓಡುತ್ತಿರುವ ಅಪ್ಪನ ಕಾಲುಗಳು ಮಾತ್ರ ಕಾಣಿಸುತ್ತವೆ. ಮುಂದಿನ ಷಾಟ್‌ನಲ್ಲಿ ಕ್ಯಾಮೆರಾ ಕಾರಿಡಾರಿನ ಗೋಡೆ ಮತ್ತು ಕಟಾಂಜನದ ಮಧ್ಯೆ ನೆಲಮಟ್ಟದಲ್ಲಿದೆ. ಮಿಡ್ ಷಾಟಿನಲ್ಲಿ ಕ್ಯಾಮೆರಾ ಕಡೆಗೆ ಓಡಿ ಬರುವ ನಾಯಿ ಹತ್ತಿರ ಬರುತ್ತಿದ್ದ ಹಾಗೆ ಕ್ಲೋಸ್ ಆಪ್ ಆಗಿ ಕ್ಯಾಮೆರಾದ ಮೇಲಕ್ಕೆ ನೆಗೆದು ಮಾಯವಾಗುತ್ತದೆ. ಅದರ ಹಿಂದಿನೆರಡೂ ಕಾಲುಗಳು ಫ್ರೇಮಿನಿಂದ ಮೇಲೆ ಹೋದೊಡನೆ ಮುಂದಿನ ಷಾಟ್ ಕಟ್ ಆಗುತ್ತದೆ. ಈಗ ಕ್ಯಾಮೆರಾ ಕಟಾಂಜನದ ಬಳಿ ನೆಲಮಟ್ಟದಲ್ಲಿದೆ. ಆದರೆ ಅತಿ ಲೋ ಆಂಗಲ್‌ನಲ್ಲಿದ್ದು ಕಟ್ಟಡದ ಸೀಲಿಂಗ್ ಕಾಣುತ್ತಿದೆ. ಬಾಯಲ್ಲಿ ಪತ್ರವನ್ನು ಕಚ್ಚಿ ಹಿಡಿದಿರುವ ನಾಯಿ ಫ್ರೇಮಿನ ಎಡ ಮೇಲ್ಭಾಗದಿಂದ ಎಂಟ್ರಿಯಾಗಿ ಹಾರಿಕೊಂಡೆ ಇಳಿಯುತ್ತದೆ. ಓಟದ ಸ್ಪರ್ಧೆಯಲ್ಲಿ ಜಯಶಾಲಿಯಾದ ಕ್ರೀಡಾ ಪಟು ಎದೆಯ ಮೇಲೇ ಫಿನಿಶಿಂಗ್ ರಿಬ್ಬನ್ನನ್ನು ಹೊತ್ತು ಓಟ ಮುಗಿಸಿದಂತೆ. ಇಡೀ ಸನ್ನಿವೇಶವನ್ನು ಯಾವುದೇ ಯುದ್ಧದ ಸನ್ನಿವೇಶದ ಅಥವಾ ಪ್ರಾಣ ರಕ್ಷಣೆಯ ಸನ್ನಿವೇಶದ ಬಿಗುವು, ತುರ್ತು ಮತ್ತು ಉಸಿರುಗಟ್ಟಿಸುವ ಅಂಶಗಳೊಂದಿಗೆ ನಿರ್ದೇಶಕ ನಿರೂಪಿಸಿದ್ದಾನೆ. ಇಲ್ಲಿನ ಅದ್ಭುತ ರಸಕ್ಕೆ ಪೂರಕವಾದ ಶಬ್ದ ಸಂಯೋಜನೆಯನ್ನು ಸಹ ಮಾಡಿದ್ದಾನೆ. 
ಈ ಚಿತ್ರದ ಬಗ್ಗೆ, ಚಿತ್ರದ ತಾಂತ್ರಿಕ ಆಂಶಗಳ ಬಗ್ಗೆ ಹೇಳಬಹುದಾದ್ದು ಇನ್ನೂ ಬಹಳಷ್ಟಿದೆ. ಈ ಚಿತ್ರದಲ್ಲಿನ ನೀರು, ಮಂಜು, ಮಳೆಗಳ ಬಗ್ಗೆ, ಚಿತ್ರದುದ್ದಕ್ಕೂ ಬಳಸಿರುವ ಶಬ್ದಗಳ ಬಗ್ಗೆ, ಗಿಡ ಮರ ಗುಡ್ಡಗಳ ಬಗ್ಗೆ, ಅಪ್ಪ ಮಗನ ಚರ್ಚೆಗಳು ಫ್ಲಾಷ್ ಬ್ಯಾಕ್‌ಗಳು ಮಗನ ಸ್ವಗತಗಳು ಕಥಾನಕದ ಹಂದರಕ್ಕೆ ಆಯಾಮಗಳನ್ನು ರಕ್ತ ಮಾಂಸಗಳನ್ನು ತುಂಬುವ ಹಾಗೆ ಪುಷ್ಟೀಕರಿಸುವ ಬಗ್ಗೆ, ಬೆಳಕಿನ ಮತ್ತು ಬಣ್ಣಗಳ ವಿನ್ಯಾಸದ ಬಗ್ಗೆ, ದೃಶ್ಯ ಸಂಯೋಜನೆಯ ಬಗ್ಗೆ, ಚೈನಾದ ಕಮ್ಯೂನಿಸ್ಟ್ ವ್ಯವಸ್ಥೆಯ ಮೇಲೆ ಈ ಚಿತ್ರವು ಸೂಕ್ಷ್ಮವಾಗಿ ಚಿಕಿತ್ಸಕ ಬೆಳಕನ್ನು ಚೆಲ್ಲುವ ಬಗ್ಗೆ,  ಇಲ್ಲವೇ ಇಲ್ಲ ಅನ್ನಿಸವಷ್ಟು ಗೌಣವಾದ ಲೋಪ ದೋಷಗಳ ಬಗ್ಗೆ ಹೇಳಬೇಕಾದ್ದು ಬಹಳಷ್ಟಿದೆ. ಈಗಾಗಲೆ ಲೇಖನ ದೀರ್ಘವಾಗಿ ಬಿಟ್ಟಿರುವುದರಿಂದ ಇಲ್ಲಿಗೆ ನಿಲ್ಲಿಸುತ್ತೇನೆ.  

ನಿರ್ದೇಶಕನ ಸಿನಿ ತಾಂತ್ರಿಕತೆಯ ಕೈ ಚಳಕವನ್ನು ಕೊನೆಯ ಪತ್ರದ ರಕ್ಷಣೆಯ ನಿರೂಪಣೆಯಲ್ಲಿ ಕಾಣಬಹುದು.  ಮೂರು ಷಾಟ್‌ಗಳ ಚಿತ್ರೀಕರಣ ಮತ್ತು ಕರಾರುವಾಕ್ಕಾದ ಸಂಕಲನಗಳಲ್ಲಿ ಇದನ್ನು ಸಾಧಿಸಿದ್ದಾನೆ-ಇದು ಈ ಸಿನಿಮಾದ ಕುರಿತ ಕೊನೆಯ ಕಂತು. ಒಂದು ಚಿತ್ರವನ್ನು ಶೈಕ್ಷಣಿಕ ನೆಲೆಯಲ್ಲಿ ಕಂಡು ಅಧ್ಯಯನ ಮಾಡಿಕೊಟ್ಟ ಪರಮೇಶ್ವರ ಗುರುಸ್ವಾಮಿಯವರಿಗೆ ಧನ್ಯವಾದಗಳು. 

ಅಪ್ಪ ಮಗನ ಪಯಣದುದ್ದಕ್ಕೂ ಜೊತೆಯಲ್ಲಿ ನಾಯಿ ಭೌತಿಕವಾಗಿ ಇರುತ್ತದೆ. ಈ ಹೆಂಗಸಿನ ಇರವು ತಾಯಿಯಾಗಿ ಹೆಂಡತಿಯಾಗಿ ಅವರಿಬ್ಬರ ನೆನಪುಗಳ ಅನೇಕ ಫ್ಲಾಶ್ ಬ್ಯಾಕ್‌ಗಳಲ್ಲಿ ವ್ಯಕ್ತವಾಗುತ್ತದೆ. ಅವರಿಬ್ಬರ ಬದುಕಿನಲ್ಲಿ ಅವಳು ಅವಿಭಾಜ್ಯ. ಅವರಿಬ್ಬರ ಬದುಕಿನ ಒಳ ಸೆಲೆ ಅವಳೆ. ಒಂದು, ಎರಡು, ಮೂರು ಹೆಚ್ಚೆಂದರೆ ನಾಲ್ಕು ಷಾಟ್‌ಗಳಲ್ಲಿ ನೆನಪಾಗಿ ಬರುವ ಈ ಫ್ಲಾಶ್ ಬ್ಯಾಕ್‌ಗಳು ಅವಳ ಪಾತ್ರವನ್ನು ಹೆಚ್ಚು ಹೆಚ್ಚು ಸ್ಪಷ್ಟಗೊಳಿಸುತ್ತವೆ.  

ಮನೆ ಬಿಟ್ಟವರು ಪರ್ವತ ಶ್ರೇಣಿಯನ್ನು ಹತ್ತುವುದು ಮುಂದಿನ ಕಥೆ. ಇಲ್ಲಿ ಪರ್ವತ ಶ್ರೇಣಿಯ ಅಗಾಧತೆಯನ್ನು ಸೌಂದರ್ಯವನ್ನು ಸೆರೆ ಹಿಡಿಯುವುದರೊಂದಿಗೆ ಇವರಿಬ್ಬರು ಹುಲು ಮಾನವರ ಬೆಟ್ಟವೇರುವ ದಣಿವು ಶ್ರಮವನ್ನು ಲೇಖನಿಯ ಮೂಲಕ ವಿವರಿಸಿ ವರ್ಣಿಸುವ ಸಾಮರ್ಥ್ಯದಲ್ಲೇ ಕ್ಯಾಮೆರ ಮೂಲಕ ಹಿಡಿದಿಟ್ಟಿದ್ದಾನೆ. ಹೀಗೆ ಕ್ಯಾಮೆರಾವನ್ನು ಲೇಖನಿಯಂತೆ ಬಳಸುವ ಮೂಲಕ ಪ್ರೇಕ್ಷಕರಲ್ಲೂ ಬೆಟ್ಟವೇರುವ ಶ್ರಮ ಮತ್ತು ದಣಿವಿನ ಅನುಭವವನ್ನು ಉಂಟು ಮಾಡಿದ್ದಾನೆ. ಚಿತ್ರವೊಂದನ್ನು ನೋಡುವಾಗ ಪ್ರೇಕ್ಷಕರು ತಾದಾತ್ಮ್ಯದಲ್ಲಿ ಪಾತ್ರಗಳ ಭಾವನೆಗಳನ್ನು ಅನುಭವಗಳನ್ನು ತಮ್ಮಲ್ಲಿ ಆವಾಹಿಸಿಕೊಳ್ಳುವುದು ಬೇರೆ. ಇಲ್ಲಿ ಪ್ರೇಕ್ಷಕರ ಸಂವೇದನಾ ಸಾಮರ್ಥ್ಯವನ್ನವಲಂಬಿಸಿ ಆವಾಹಿತ ಭಾವನೆ ಮತ್ತು ಅನುಭವಗಳು ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ವ್ಯತ್ಯಾಸವಾಗುತ್ತವೆ. ಪೋಸ್ಟ್‌ಮನ್ ಇನ್ ದಿ ಮೌಂಟೈನ್ಸ್ ಚಿತ್ರದ ಈ ಭಾಗದಲ್ಲಿ ಚಿತ್ರೀಕರಣ ಮತ್ತು ಸಂಕಲನಗಳ ಮೇಲೆ ನಿರ್ದೇಶಕ ಹೊಂದಿರುವ ಹಿಡಿತ ಎಷ್ಟೆಂದರೆ

ಅವನು ಹೇಳ ಬೇಕಾದ್ದನ್ನು ಕರಾರುವಾಕ್ಕಾಗಿ ಪ್ರೇಕ್ಷರಿಗೆ ತಲುಪಿಸುತ್ತಾನೆ.  

ಕ್ಯಾಮೆರಾ ಲೇಖನವಾಗುವ ಬಗ್ಗೆ ಇಲ್ಲೆ ಒಂದೆರಡು ಮಾತು. ಪ್ರಾರಂಭದಲ್ಲಿ ಸಿನೆಮಾವನ್ನ ಬಹಳ ನಿಕೃಷ್ಟವಾಗಿ ಕಾಣಲಾಗುತ್ತಿತ್ತು. ಸಿನೆಮಾ ಹುಟ್ಟಿಕೊಂಡ ಸಮಯದಲ್ಲಿ ಪೇಂಟಿಂಗ್, ಛಾಯಾಗ್ರಹಣ, ನಾಟಕ, ಸಂಗೀತ, ಶಿಲ್ಪ ಮತ್ತು ಬರವಣಿಗೆಯನ್ನು ಕಲೆಗಳೆಂದು ಪರಿಗಣಿಸುತ್ತಿದ್ದರು. ಸಿನೆಮಾವನ್ನು ಇವೆಲ್ಲವುಗಳ ಸಂಕರ ಎಂದು ತುಚ್ಚವಾಗಿ ಕಾಣಲಾಗುತ್ತಿತ್ತು. ಅಂಥ ಸಂದರ್ಭದಲ್ಲಿ ಸಿನೆಮಾದ ತೆಕ್ಕೆಗೆ ಸಿಕ್ಕಿಕೊಂಡವನು ಡೇವಿಡ್ ವಾರ್ಕ್ ಗ್ರಿಫಿತ್. ನಾಟಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದವನು. ತನ್ನ ಹೆಸರನ್ನು ತಾನು ಶ್ರೇಷ್ಠವಾದದ್ದು ಎಂದು ನಂಬಿಕೊಂಡಿದ್ದ ನಾಟಕ ಕ್ಷೇತ್ರಕ್ಕೆ ಮೀಸಲಾಗಿಟ್ಟು ಲಾರೆನ್ಸ್ ಗ್ರಿಫಿತ್ ಎಂಬ ಇನ್ನೊಂದು ಹೆಸರಿನಿಂದ ಸಿನೆಮಾ ಕ್ಷೇತ್ರ ಸೇರುತ್ತಾನೆ. ಸಿನಿಮಾ ಮಾಧ್ಯಮ ಆಗ ತಾನೆ ಕಥನ ತಂತ್ರವನ್ನು ರೂಢಿಸಿಕೊಳ್ಳುತ್ತಿತ್ತು. ಸಿನೆಮಾದ ಮೊದಲ ಷೋಮ್ಯಾನ್ ಎನಿಸಿದ ಫ್ರಾನ್ಸಿನ ಜಾರ್ಜ್ ಮೇಲಿ, ಮೊದಲ ಕಥೆಗಾರನೆನಿಸಿದ ಅಮೆರಿಕದ ಎಡ್ವಿನ್ ಪೋರ್ಟರ್ ಮತ್ತು ಬ್ರಿಟನ್ನಿನ ಬ್ರೈಟನ್ ಸ್ಕೂಲಿನ ಗಂಭೀರ ಸಿನೆಪ್ರಯೋಗಿ ಸಿಸಿಲ್ ಹೆಪ್‌ವರ್ತ್ ಮೊದಲಾದವರು ಸಿನೆಮಾ ಕಥನ ತಂತ್ರವನ್ನು ಅಂಬೆಗಾಲಿಡುವ ಸ್ಥಿತಿಗೆ ತಂದಿದ್ದರು. ಪೋರ್ಟರನ ಗರಡಿಯಲ್ಲಿ ಪಳಗಿದ್ದ ಗ್ರಿಫಿತ್ ಹೊಸ ಹೊಸ ಚಿತ್ರೀಕರಣ ಮತ್ತು ಸಂಕಲನ ತಂತ್ರಗಳನ್ನು ಅಗತ್ಯಕ್ಕೆ ಅನುಗುಣವಾಗಿ ಆವಿಷ್ಕರಿಸಿಕೊಂಡು ಇತರರ ಆವಿಷ್ಕಾರಗಳನ್ನು ರೂಢಿಸಿಕೊಂಡು ಚಲನಚಿತ್ರ ಭಾಷೆಯನ್ನ ಅದರ ವ್ಯಾಕರಣವನ್ನ ರೂಪಿಸಿದ.

ಅವನನ್ನು ಚಲನಚಿತ್ರ ಪಿತಾಮಹ ಎಂದೇ ಗುರುತಿಸಲಾಗುತ್ತದೆ. ಅಂದು ಅವನು ರೂಪಿಸಿದ ಬಹತೇಕ ತಂತ್ರಗಳು ಇಂದೂ ಚಿತ್ರ ತಯಾರಿಕೆಯ ಮೂಲಭೂತ ನಿಯಮಗಳಾಗಿವೆ. ಎಷ್ಟರ ಮಟ್ಟಿಗೆಂದರೆ ಜಗತ್ತಿನಲ್ಲಿ ಯಾರೇ ನಿರ್ದೇಶಕ ಅಥವ ನಿರ್ದೇಶಕಿ ಚಿತ್ರ ತಯಾರಿಕೆಯಲ್ಲಿ ತೊಡಗಿದ್ದರೆ ಅವರ ಹೆಗಲ ಮೆಲೆ ಕುಳಿತು ಅವರನ್ನು ಗ್ರಿಫಿತ್  ನಿರ್ದೇಶಿಸುತ್ತಿರುತ್ತಾನೆ ಎಂಬ ಮಾತಿದೆ. ಇವನು ರೂಪಿಸಿದ ಸಂಕಲನ ತಂತ್ರಗಳಿಂದ ಪ್ರಭಾವಿತರಾದ ಅಂದಿನ ಸೋವಿಯೆತ್ ಒಕ್ಕೂಟದ ನಿರ್ದೇಶಕರು ತಮ್ಮ ಸಂಕಲನ ಪ್ರಯೋಗಗಳು ಮತ್ತು ಆವಿಷ್ಕಾರಗಳ ಮೂಲಕ ಸಿನೆಮಾಕ್ಕೆ ಕಾವ್ಯದ ಆಯಾಮವನ್ನು ಸೃಷ್ಟಿಸಿದರು. ಇಂದ್ರಿಯಗಳ ಮೂಲಕ ಸಂವಹನಿಸಿ ಪ್ರೇಕ್ಷಕರನ್ನು ತಲುಪುತ್ತಿದ್ದ ಸಿನೆಮಾವನ್ನು ಪ್ರೇಕ್ಷಕರ ನಾಡಿಗಳಿಗೇ ರಕ್ತಕ್ಕೇ ನೇರವಾಗಿ ತಟ್ಟಿ ತೀವ್ರತರ ಸಂವೇದನೆಯನ್ನ ಉಂಟು ಮಾಡಿದರು.

ಗ್ರಿಫಿತ್ತನ ಚಿತ್ರೀಕರಣ ತಂತ್ರಗಳನ್ನು ಎತ್ತಿಕೊಂಡು ಜರ್ಮನಿಯ ಚಲನಚಿತ್ರ ತಯಾರಕರು ರಿಯಲಿಸಂ(ವಾಸ್ತವವಾದಿ) ಮತ್ತು ಫ್ಯಾಂಟಸಿ(ಭ್ರಮಾತ್ಮಕ ಕಲ್ಪನೆಗಳ) ಪ್ರಕಾರಗಳನ್ನು ಹುಟ್ಟು ಹಾಕಿದರು. ಚಲನಚಿತ್ರ ಇತಿಹಾಸದಲ್ಲಿ ಈ ಘಟ್ಟವನ್ನು ಜರ್ಮನಿಯ ಸುವರ್ಣ ಯುಗ ಎಂದೇ ಗುರುತಿಸಲಾಗಿದೆ. ಈ ಯುಗದ ವಾಸ್ತವವಾದಿ ಜರ್ಮನ್ ಚಿತ್ರ ತಯಾರಕರು ಪಾತ್ರಗಳನ್ನು, ಪಾತ್ರಗಳ ಮಾನಸಿಕ ಮತ್ತು ಭೌತಿಕ ಆಯಾಮಗಳನ್ನು ಮತ್ತು ಸನ್ನಿವೇಶಗಳನ್ನು ಸಂವಹನಿಸಲು ರೂಢಿಸಿದ ಚಿತ್ರೀಕರಣ ತಂತ್ರಗಳನ್ನು ಕಂಡ ಚಲನಚಿತ್ರ ವಿದ್ವಾಂಸರು ಜರ್ಮನಿಯ ಸುವರ್ಣ ಯುಗದ ವಾಸ್ತವವಾದಿ ನಿರ್ದೇಶಕರು ಕ್ಯಾಮೆರಾವನ್ನೆ ಲೇಖನಿ ಮಾಡಿಕೊಂಡರು ಎಂದು ಕರೆದಿದ್ದಾರೆ.  

ಈಗ ಪೋಸ್ಟ್‌ಮನ್ ಇನ್ ದಿ ಮೌಂಟೈನ್ಸ್ಗೆ ಬರೋಣ. ನಸುಕಿನಲ್ಲಿ ಮನೆಯಿಂದ ಹೊರಟು ಮೊದಲ ಗ್ರಾಮವನ್ನು ತಲುಪುವವರೆಗೆ ಇವರಿಬ್ಬರು ಪರ್ವತ ಶ್ರೇಣಿಗಳಲ್ಲಿ ಪಯಣ ಮಾಡುತ್ತಾರೆ. 84 ನಿಮಿಷಗಳ ಅವಧಿಯ ಚಿತ್ರದಲ್ಲಿ ಪರ್ವತಗಳನ್ನು ಏರುವ ಈ ಭಾಗ 10 ನಿಮಿಷವಿದೆ. ಮಧ್ಯೆ ಒಂದು ಕಡೆ ಮಗನಿಗೆ ತಾನು ಬಾಲಕನಾಗಿದ್ದಾಗ ಅಪ್ಪ ಡ್ಯೂಟಿಯಿಂದ ಮನೆಗೆ ಬರುವುದು ತನಗೆ ಆಟದ ಗನ್ ಕೊಡುವುದು 26 ಸೆಕೆಂಡ್‌ಗಳ ಫ್ಲಾಷ್ ಬ್ಯಾಕಿನಲ್ಲಿ ನೆನಪಾಗುತ್ತದೆ. ಇನ್ನೊಂದು ಕಡೆ ಕಡಿದಾದ ಸೋಪಾನವನ್ನು ಏರುವಾಗ ಮೇಲಿನಿಂದ ಇಳಿದು ಬರುತ್ತಿರುವ ಒಬ್ಬ ಗಂಡಸು ಮತ್ತು ಒಬ್ಬ ಹೆಂಗಸನ್ನು ಎದುರಾಗುವುದು ಬಿಟ್ಟರೆ ಇನ್ನೊಂದು ನರಪಿಳ್ಳೆಯ ಸುಳಿವಿಲ್ಲ. ಅವರೊಡನೆ ಸಂಭಾಷಣೆಯೂ ಇಲ್ಲ. ಸಂಭಾಷಣೆ ಏನಿದ್ದರೂ ಇವರಿಬ್ಬರ ನಡುವೆ ಮಾತ್ರ ನಡೆಯುತ್ತದೆ. ಮತ್ತೆ ಆಗೊಮ್ಮೆ ಈಗೊಮ್ಮೆ ನಾಯಿಯನ್ನುದ್ದೇಶಿಸಿ ಅವರಾಡುವ ಮಾತುಗಳು ಅಷ್ಡೆ. ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಅಲ್ಲಲ್ಲಿ ಮಗನ ಧ್ವನಿ ವಿವರಣೆಯನ್ನ, ಅವನ ಅನಿಸಿಕೆಗಳನ್ನ ಪ್ರೇಕ್ಷಕರಿಗೆ ಸ್ವಗತದಲ್ಲಿ  ಹೇಳುತ್ತಿರುತ್ತದೆ. ಈ ತಂತ್ರ ಚಿತ್ರದುದ್ದಕ್ಕೂ ಪ್ರೇಕ್ಷಕನ(ಳ)ನ್ನು ಪಯಣದಲ್ಲಿ ಅಪ್ಪ ಮಗ ಮತ್ತು ನಾಯಿಯ ಸಂಗಾತಿಯನ್ನಾಗಿಸಿ ಬಿಡುತ್ತದೆ. ಇಲ್ಲಿಯೂ ಮಧ್ಯೆ ಮಧ್ಯೆ ಮಗನ ಧ್ವನಿ ವಿವರಣೆ ನೀಡುತ್ತದೆ.     

ಎರಡು ಮೂರು ಕಲ್ಲುಗಳನ್ನು ಒಂದೊಂದು ಹಂತಗಳಾಗಿ ಜೋಡಿಸಿರುವ ಕಡಿದಾದ ಸೋಪಾನ. ಆ ಮೆಟ್ಟಿಲ ಕಲ್ಲಿನ ಮೇಲೆ ಹತ್ತುತ್ತಿರುವ ಇವರ ಕಾಲಿನ ಕ್ಲೋಸ್ ಅಪ್ ಷಾಟ್‌ಗಳು. ಅವರ ಹಿಂದೆಯೇ ಹತ್ತುತ್ತಿರುವ ಕ್ಯಾಮೆರ. ಏದುಸಿರು ಬಿಡುವ ಕ್ಯಾಮೆರದ ತುಯ್ದಾಟ, ಅವರಿಬ್ಬರನ್ನು ದಣಿವಿನಿಂದಲೇ ಹಿಂಬಾಲಿಸಿ ಅವರು ನಿಂತಾಗ ತಾನೂ ನಿಲ್ಲುವ ಕ್ಯಾಮೆರಾ, ಅವರು ಸುಧಾರಿಸಿಕೊಳ್ಳುವಾಗ ಸ್ಟಡಿಯಾಗಿ ತಾನೂ ಸಧಾರಿಸಿಕೊಳ್ಳುವ ಕ್ಯಾಮೆರ, ಮೆಟ್ಟಿಲುಗಳನ್ನು ಏರುವಾಗ ಅವರಿಬ್ಬರ ಓಲಾಟ ಮತ್ತು ತುಯ್ದಾಟವನ್ನು ತಾನೂ ಓಲಾಡುತ್ತ ತುಯ್ದಾಡುತ್ತಲೇ ಸೆರೆ ಹಿಡಿಯುವ ಕ್ಯಾಮೆರಾ, ಟ್ರ್ಯಾಕ್, ಟಿಲ್ಟ್, ಪ್ಯಾನ್ ಮತ್ತು ಫಾಲೊ ಷಾಟ್‌ಗಳು. ಪಾತ್ರಗಳ ದೃಷ್ಟಿ ಕೋನಗಳಲ್ಲಿ ಮತ್ತು ಸಹಪಯಣಿಗರ ಸ್ಥಾನದಲ್ಲಿರುವ  ಪ್ರೇಕ್ಷಕರ ದೃಷ್ಟಿಕೋನಗಳಲ್ಲಿ ತೆಗೆದಿರುವ ಷಾಟ್‌ಗಳು. ಹೀಗೆ ಕ್ಯಾಮೆರಾದ ವಿವಿಧ ರೀತಿಯ ಚಲನವಲನಗಳು ಮತ್ತು ಪೊಸಿಷನ್‌ಗಳು ಪ್ರೇಕ್ಷರಿಗೆ ಪಾತ್ರಗಳ ದಣಿವು ಆಯಾಸಗಳನ್ನು ಕರಾರುವಾಕ್ಕಾಗಿ ಸಂವಹಿನಿಸುತ್ತವೆ. ಪರ್ವತ ಹತ್ತುವ ಅನುಭವವನ್ನು ಪ್ರೇಕ್ಷರಿಗೂ ದಕ್ಕುವಂತೆ ಮಾಡುತ್ತವೆ.

ಸ್ಟಡಿ ಇರುವ ಕ್ಯಾಮೆರಾದ ಮುಂದೆ ಹತ್ತುತ್ತಾ ಇಳಿಯುತ್ತಾ ಅವರಿಬ್ಬರು ಪ್ರತ್ಯಕ್ಷವಾಗುತ್ತಾರೆ ಮಾಯವಾಗುತ್ತಾರೆ. ಗುಡ್ಡದ ಮೇಲಿನಿಂದ, ಕೆಳಗಿನಿಂದ, ಬೆಟ್ಟ ಗುಡ್ಡಗಳ ನಡುವೆ ಹಾವಿನಂತೆ ಸಾಗುವ ಅಂಕುಡೊಂಕು ದಾರಿಗಳಲ್ಲಿ ಎಕ್ಸ್ಟ್ರೀಮ್ ಲಾಂಗ್ ಷಾಟ್‌ಗಳಲ್ಲಿ ಇರುವೆಗಳಿಗಿಂತ ಚಿಕ್ಕದಾದ ಬಿಂದುಗಳಂತೆ ಚಲಿಸುವ, ಕ್ಲೋಸ್ ಷಾಟ್‌ಗಳಲ್ಲಿ ಅವರಿಬ್ಬರ ಮತ್ತು ನಾಯಿಯ ಮನೋ ವ್ಯಾಪಾರವನ್ನು ದೈಹಿಕ ದಣಿವನ್ನು ಮತ್ತು ನಿಸರ್ಗವನ್ನು ಸೆರೆ ಹಿಡಿಯುವ ಮೂಲಕ ಹತ್ತು ನಿಮಿಷಗಳ ಅಪ್ಪ ಮಗ ಮತ್ತು ನಾಯಿಯ ಪಯಣವನ್ನು ಯಾವುದೇ ಲೇಖನಿಗೂ ಕಡಿಮೆಯಿಲ್ಲದಂತೆ ವಿವರಣಾತ್ಮಕವಾಗಿ ಕಟ್ಟಿ ಕೊಡುತ್ತಾನೆ ನಿರ್ದೇಶಕ. ಈ ಭಾಗದಲ್ಲಿ ಲವಲವಿಕೆಯಿಂದ, ಉತ್ಸಾಹದಿಂದ ಮತ್ತು ಬಳಲಿಕೆಯಿಂದ ಎಲ್ಲವನ್ನು ಸೆರೆ ಹಿಡಿಯುವ ಕ್ಯಾಮೆರಾ ಮುಂದೆ ಕುರುಡಿ ಅಜ್ಜಿಯ ಪ್ರಸಂಗದಲ್ಲಿ ತಟಸ್ಥವಾಗಿ ಕಲಾವಿದರ ಪ್ರತಿಭೆ ಪಾತ್ರಗಳ ಭಾವನೆಗಳನ್ನು ಪ್ರಕಟಿಸಲು ಅನುವು ಮಾಡಿಕೊಡುತ್ತದೆ.  

ಅಜ್ಜಿ ಮನೆಯ ದೃಶ್ಯದಲ್ಲಿ ನಾಲ್ಕೂ ಜನ ಚೆನ್ನಾಗಿ ಅಭಿನಯಿಸಿದ್ದಾರೆ. ಅಪ್ಪ ಮಗ ನಾಯಿ ಮತ್ತು ಅಜ್ಜಿಯ ಪಾತ್ರಧಾರಿಗಳು ಒಂದು ತೂಕ ಹೆಚ್ಚಿಲ್ಲದಂತೆ ಒಂದು ತೂಕ ಕಡಿಮೆಯಿಲ್ಲದಂತೆ ಅಭಿನಯಿಸಿದ್ದಾರೆ. ಸನ್ನಿವೇಶವೇ ಹಾಗಿದೆ. ಒಬ್ಬಂಟಿ ಕುರುಡಿ ಅಜ್ಜಿ ದೊಡ್ಡ ಮನೆಯ ಬಾಗಿಲಿನ ಒಳಭಾಗದಲ್ಲಿ ಕುಳಿತು ನೂಲುಗಳನ್ನು ಬಿಡಿಸುತ್ತಿರುತ್ತಾಳೆ. ಅವಳು ಯಾರದೋ ಬರವಿನ ನಿರೀಕ್ಷೆಯಲ್ಲಿದ್ದಾಳೆ. ನಾಯಿ ಬರುತ್ತದೆ. ಬಂದ್ಯಾ? ಅಂತ ಅದರ ಹೆಸರಿಡಿದು ಕರೆಯುತ್ತಾಳೆ. ಅಜ್ಜಿಯ ಎಡ ಭುಜದ ಸಜೆಷನ್ ಷಾಟ್‌ನಲ್ಲಿ ಅವಳ ಮುಂದೆ ನಾಯಿ ಗರ್ಭಗುಡಿಯ ಮುಂದಿನ ಬಸವನಂತೆ ಕುಳಿತಿದೆ. ಅದರ ಹಿಂದಿನಿಂದ ಅಪ್ಪ ಮಗ ಕೆಳಗಿನಿಂದ ಹತ್ತುತ್ತ ಮೇಲೆ ಬರುತ್ತಾರೆ. ಇಡೀ ಪ್ರಸಂಗದಲ್ಲಿ ಅವಳು ಕುಳಿತ ಕಡೆಯಿಂದ ಏಳುವುದಿಲ್ಲ. ಪೋಸ್ಟ್‌ಮ್ಯಾನನ ಮಗ ಬಂದಿರುವುದು ಅವಳಿಗೆ ಮೊದಲು ಗೊತ್ತಾಗುವುದಿಲ್ಲ. ನಾಯಿಗೆಂದು ಒಂದು ತುಣುಕು ಮೂಳೆಯನ್ನ ಎಸೆಯುತ್ತಾಳೆ. ಅದು ಬಂದು ಮಗನ ಕಾಲುಗಳ ನಡುವೆ ಬೀಳುತ್ತದೆ. ಹರೆಯದ ಧೋರಣೆಯಲ್ಲಿ ಮಗ ಅದನ್ನು ಉಡಾಫೆಯಿಂದ ನಾಯಿಯ ಕಡೆಗೆ ಒದೆಯುತ್ತಾನೆ. ಕುರುಡಿ ಅಜ್ಜಿಗೆ ಲಕೋಟೆ ಬಂದಿದೆ. ಅದರಲ್ಲಿ ಮೊಮ್ಮಗ ಖಾಲಿ ಹಾಳೆಯ ಮಡಿಕೆಯಲ್ಲಿ ಕಳಿಸಿರುವ ಹಣವಿದೆ. ಮೊಮ್ಮಗ ಕಳಿಸಿರುವ ಕವರನ್ನು ಪಡೆದುಕೊಂಡು ಅದೇ ತನ್ನ ಮೊಮ್ಮಗನೇನೊ ಅನ್ನುವಷ್ಟು ಕಕ್ಕುಲತೆಯಿಂದ ತೊಡೆಯ ಮೇಲಿಟ್ಟುಕೊಂಡು ನೇವರಿಸುತ್ತಾಳೆ. ಅಜ್ಜಿಯರು ಎಳೆಯ ಮೊಮ್ಮಗುವನ್ನು ಸ್ನಾನ ಮಾಡಿಸುವಾಗ ನೇವರಿಸುತ್ತಾರಲ್ಲ ಹಾಗೆ. ಇಡೀ ವಿದ್ಯಮಾನವನ್ನು ಕತೂಹಲದಿಂದ ನೋಡುತ್ತಿದ್ದ ಮಗ ಮುಂದಕ್ಕೆ ಬರುತ್ತಾನೆ. ಅಜ್ಜಿಯ ತನ್ಮಯತೆಗೆ ಭಂಗವಾಗುತ್ತದೆ. ಯಾರು? ವಿಲೇಜ್ ಅಕೌಂಟೆಂಟ? ಎಂದು ಕೇಳುತ್ತಾಳೆ. ಪೋಸ್ಟ್‌ಮ್ಯಾನ್ ಮಗನ ಪರಿಚಯ ಮಾಡಿಕೊಡುತ್ತಾನೆ. ಇನ್ನು ಮುಂದೆ ತನ್ನ ಬದಲು ಅವನು ಬರುತ್ತಾನೆ ಎಂದು ತಿಳಿಸುತ್ತಾನೆ. ನಂತರ ಅಜ್ಜಿ ಲಕೋಟೆಯನ್ನು ತಳಮಳದಿಂದ ಸ್ವಲ್ಪ ಹೊತ್ತು ಕೈಯಲ್ಲಿ ಹಿಡಿದು ನಿಧಾನವಾಗಿ ಇಡೀ ಲಕೋಟೆಯನ್ನ ನೇವರಿಸಿ ನಿಧಾನಕ್ಕೆ ಹರಿದು ಬಿಡಿಸುತ್ತಾಳೆ. ಅದೇ ಆಸ್ಥೆಯಿಂದ ಒಳಗೆ ಮಡಿಸಿಟ್ಟಿದ್ದ ಖಾಲಿ ಹಾಳೆಯನ್ನು ಬಿಡಿಸಿ ಒಳಗಿದ್ದ ನೋಟನ್ನು ತೆಗೆದು ಮೊಮ್ಮಗನ ಮುಖವನ್ನೇ ತಡವಿದಂತೆ ತಡವಿ ಧರಿಸಿರುವ ಬಟ್ಟೆಯೊಳಗೆ ಇಟ್ಟುಕೊಳ್ಳುತ್ತಾಳೆ.

ಖಾಲಿ ಹಾಳೆಯನ್ನು ಓದು ಎಂಬಂತೆ ಅಪ್ಪನ ಕೈಗಿಡುತ್ತಾಳೆ. ಅವನು ಖಾಲಿ ಹಾಳೆಯಲ್ಲಿ ಇಲ್ಲದ್ದನ್ನು ಅವನ ಪ್ರಕಾರ ಅಜ್ಜಿಯ ಮನಸ್ಸಿಗೆ ನೆಮ್ಮದಿ ಕೊಡಬಹುದು ಎನ್ನುವ ವಿಷಯವನ್ನು ಓದಿದಂತೆ ಹೇಳುತ್ತಾನೆ. ತನ್ನದೇ ಸವಕಲು ಕಾಳಜಿಗಳನ್ನು ಅವಳ ಮೊಮ್ಮಗ ಬರೆದಿರುವಂತೆ ಓದುತ್ತಾನೆ. ಈ ನಾಟಕವನ್ನು ನೋಡುತ್ತಿರುವ ಮಗನಿಗೆ ಗೊಂದಲ ಮತ್ತು ಅಸಮಾಧಾನ. ಹೊಸ ಜಿಲ್ಲೆಯಲ್ಲಿ ಕೆಲಸ ಜಾಸ್ತಿ, ಬರಬೇಕೆಂದರೆ ಆಗುತ್ತಿಲ್ಲ. ಏನಾದರೂ ಬೇಕಾದರೆ ಅಂಚೆಯವನು ಸಹಾಯ ಮಾಡುತ್ತಾನೆ. ಎಂದು ಅಪ್ಪ ಓದಿದಂತೆ ಮಾಡುತ್ತಾನೆ. ಅದಕ್ಕೆ ಅಜ್ಜಿ, ಇದೆಲ್ಲವನ್ನು ನೀನು ಮೊದಲೇ ಓದಿದ್ದೆ. ಇದನ್ನು ಎಷ್ಟು ಸಾರಿ ಕೇಳಿದ್ದೇನೆ ಎನ್ನುತ್ತಾಳೆ. ಆಗ ಅಪ್ಪ ತನ್ನ ಮಗನನ್ನು ಕರೆದು ಓದಿದಂತೆ ಮಾಡು ಎಂದು ಸನ್ನೆ ಮಾಡುತ್ತ ಇನ್ನು ನನ್ನ ಮಗ ಓದುತ್ತಾನೆ ಎಂದು ತಾನು ಎದ್ದು ಮಗನ ಕೈಗೆ ಆ ಖಾಲಿ ಹಾಳೆಯನ್ನು ಕೊಟ್ಟು ಅವಳ ಮುಂದೆ ತಾನಿದ್ದ ಸ್ಥಾನದಲ್ಲಿ ಕೂರಿಸುತ್ತಾನೆ. ಇಷ್ಟು ಹೊತ್ತೂ ಈ ನಾಟಕವನ್ನು ಅಸಮಾಧಾನದಿಂದಲೇ ಗಮನಿಸುತ್ತಿದ್ದ ಮಗ ಸುಳ್ಳು ಓದಲು ಇಷ್ಟ ಪಡುವುದಿಲ್ಲ. ಅಪ್ಪನ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದಲೇ ಓದುತ್ತಾನೆ. ಅಪ್ಪನಿಗಿಂತ ಮಗನ ಗ್ರಹಿಕೆ ಮತ್ತು ಮನಸ್ಥಿತಿ ಬೇರೆ.

ಇಲ್ಲಿ ಹೊಸ ಜಿಲ್ಲೆಯಲ್ಲಿ ಬಹಳ ಚೆನ್ನಾಗಿದೆ. ಅಲ್ಲಿ ಪರ್ವತಗಳಲ್ಲಿ ಜೀವನ ಕಷ್ಟಕರ. ಇವನು ಓದಿದಂತೆ ಹೇಳುವುದು ಅಜ್ಜಿಗೆ ದುಃಖ ತರಿಸುತ್ತದೆ. ನಿನ್ನನ್ನು ನಾನು ಕರೆಸಿಕೊಳ್ಳ ಬೇಕಿತ್ತು. ಎಂದಾಗ ಅಜ್ಜಿಗೆ ದುಃಖ ಒತ್ತರಿಸಿ ಬರುತ್ತದೆ. ಆ ತರ ಹೇಳ ಬೇಡ ಎಂದು ಸೂಚಿಸಲು ಪ್ರಯತ್ನಿಸುತ್ತಿದ್ದ ಅಪ್ಪ ಇಲ್ಲಿಗೆ ಮಗನ ಭುಜವನ್ನ ಮುಟ್ಟಿ ಎಚ್ಚರಿಸುತ್ತಾನೆ. ಮಗ ತಲೆ ಎತ್ತಿ ಅಜ್ಜಿಯ ಮುಖ ನೋಡುತ್ತಾನೆ. ಅಲ್ಲಿ ದುಃಖ ಮಡುಗಟ್ಟಿ ಇನ್ನೇನು ಅಳುವಾಗಿ ಉಮ್ಮಳಿಸುವಂತಿದೆ. ಆಗ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ನಿನಗೆ ಒಳ್ಳೆಯ ಆರೋಗ್ಯ ಮತ್ತೆ ಎಲ್ಲವು ಚೆನ್ನಾಗಿರಲಿ. ಎಂದು ಮುಗಿಸುತ್ತಾನೆ. ಸ್ವಲ್ಪ ಹೊತ್ತು ಮೌನ. ಅಜಿ, ಅಷ್ಟೇನಾ ಅಂತ ಹೇಳಿ ಕವರನ್ನು ಅವನಿಗೆ ಕೊಡುತ್ತಾಳೆ. ಅದರೋಲಗೆ ಆ ಖಾಲಿ ಕಾಗದವನ್ನು ಇರಿಸಿ ಅಜ್ಜಿಯ ಕೈಗಿಡುತ್ತಾನೆ. ನಿರ್ದೇಶಕ ಇಲ್ಲಿ ಆಳವಾದ ಅವ್ಯಕ್ತ ನೋವಿನಂತೆ ಭಾಸವಾಗುವ ಕೊಳಲ ದ್ವನಿಯನ್ನು ಬಳಸುತ್ತಾನೆ. ಪ್ರೇಕ್ಷಕರಿಗೆ ಅವರಿಬ್ಬರೇ ನಿಜವಾದ ಅಜ್ಜಿ ಮೊಮ್ಮಗ ಅನಿಸಿಬಿಡುತ್ತದೆ. ಅಪ್ಪ, ನಾವಿನ್ನು ಹೊರಡುತ್ತೇವೆ. ನಿನ್ನ ಮೊಮ್ಮಗನಿಗೆ ಕಾಗದ ನಾನಾಗಲೆ ಬರೆದಿದ್ದೇನೆ ಅಂದಾಗ ಅಜ್ಜಿ, ನಿನ್ನ ಮಗನೇ ಬರೆಯಲಿ. ನನ್ನ ಮೊಮ್ಮಗನೇ ಮಾತಾಡಿದಂತಾಯಿತು ನನಗೆ ಅನ್ನುತ್ತಾಳೆ. ಮಗ ಈಗ ಮೊದಲಿನಷ್ಟು ಬಿಗುವಾಗಿಲ್ಲ. ಅಜ್ಜಿಯ ಕೈಗಳನ್ನು ಮುಟ್ಟಿ ನಿನ್ನ ನೋಡೋಕೆ ಬರ್ತಾತಾ ಇರ್ತೀನಿ ಅನ್ನುತ್ತಾನೆ. ಆಗಾಗ್ಗೆ ಬರ್ತಾ ಇರು. ನನಗೆ ಕಾಗದಗಳಿರುತ್ತವೆ ಅನ್ನುತ್ತದೆ ಅಜ್ಜಿ.   

ಐವತ್ತು ಷಾಟ್‌ಗಳಿರುವ ಈ ದೃಶ್ಯದಲ್ಲಿ 28 ಕ್ಲೋಸ್ ಅಪ್‌ಗಳಿವೆ. ಈ ಕ್ಲೋಸ್ ಅಪ್‌ಗಳಲ್ಲಿ ಅಪ್ಪ, ಮಗ ಮತ್ತು ಕುರುಡಿ ಅಜ್ಜಿಯ ಭಾವನೆಗಳನ್ನು, ಸೂಕ್ಷ್ಮ ಸಂವೇದನೆಗಳನ್ನು ಸೆರೆ ಹಿಡಿಯಲಾಗಿದೆ. ಕಲಾವಿದರ ಅಭಿನಯ ಮಾತ್ರವಲ್ಲ ಚಿತ್ರೀಕರಣ ತಂತ್ರವೂ ದೃಶ್ಯದ ಮೂಡನ್ನು ಪಾತ್ರಗಳ ಕ್ಷಣಕ್ಷಣದ ಸಂಚಾರಿ ಭಾವಗಳನ್ನು ಪರಿಣಾಮಕಾರಿಯಾಗಿ ಸೃಷ್ಟಿಸಿ ಕೊಡುತ್ತದೆ. ಮಗನ ಕ್ಲೋಸ್ ಅಪ್‌ಗಳು ದೃಶ್ಯದ ಪ್ರಾರಂಭದಲ್ಲಿ ಅವನ ಉಡಾಫೆತನವನ್ನ, ಕುತೂಹಲವನ್ನ ಕ್ಯಾಮೆರಾ ಚಲನೆಯಲ್ಲಿ, ಚಲನೆಯ ಜಗ್ಗು(jerk)ವಿಕೆಯಲ್ಲಿ ಮೂರ್ತೀಕರಿಸುತ್ತವೆ. ಈ ದೃಶ್ಯದಲ್ಲಿ ಅವನಲ್ಲುಂಟಾಗುವ ಪ್ರಬುದ್ಧತೆಯನ್ನು ಅಜ್ಜಿಯ ಕೈ ಹಿಡಿದುಕೊಳ್ಳುವಾಗ ಸ್ಥಿರ ಕ್ಯಾಮೆರಾ ಚಿತ್ರೀಕರಣದ ಮೂಲಕ ಸಾಧಿಸಲಾಗಿದೆ. ಕುರುಡಿ ಅಜ್ಜಿಯ ವಿವಿಧ ಕೋನಗಳ ಕ್ಲೋಸ್ ಅಪ್‌ಗಳು ಬೆಳಕು ನೆರಳಿನ ವಿವಿಧ ವಿನ್ಯಾಸಗಳನ್ನು ದುಡಿಸಿಕೊಳ್ಳುವ ಮೂಲಕ ಅವಳ ತೀವ್ರತರ ಸಂಚಾರೀ ಭಾವಗಳನ್ನು ಮತ್ತು ಇಡೀ ದೃಶ್ಯದ ಸ್ಥಾಯಿಯಾದ ಕರುಣ ರಸವನ್ನು ರೂಪಿಸುತ್ತವೆ.  

ಇನ್ನು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಿರುವ ಚಿತ್ರೀಕರಣ ಮತ್ತು ಸಂಕಲನ ಕೌಶಲ ಕುರಿತು ಒಂದು ಪ್ರಸಂಗದ ಬಗ್ಗೆ ಹೇಳಿ ಈ ಲೇಖನವನ್ನ ಮುಗಿಸುತ್ತೇನೆ. ಇವರಿಬ್ಬರು ಎತ್ತರ ಪ್ರದೇಶದ ದೊಡ್ಡ ಕಟ್ಟಡದಲ್ಲಿ ಸುಧಾರಿಸಿಕೊಳ್ಳುತ್ತಿರುವಾಗ ಮಗನ ಅಚಾತುರ್ಯದಿಂದಾಗಿ ಕೆಲವು ಪತ್ರಗಳು ಗಾಳಿಗೆ ಹಾರಿ ಹೋಗುತ್ತವೆ. ಅವುಗಳನ್ನು ರಕ್ಷಿಸಿಕೊಳ್ಳುವ ಪ್ರಸಂಗ ಇದು. ಈ ಪ್ರಸಂಗದಲ್ಲಿ ಪತ್ರಗಳು ಹಾರಿ ಹೋಗುವಲ್ಲಿಂದ ಕೊನೆಯ ಪತ್ರವನ್ನು ರಕ್ಷಿಸಿಕೊಳ್ಳುವವರೆಗಿನ ಘಟನೆ ಕೇವಲ 35 ಸೆಕೆಂಡುಗಳಿವೆ. 35ಸೆಕೆಂಡುಗಳಲ್ಲಿ 18 ಷಾಟ್‌ಗಳಿವೆ. 6 ಸೆಕೆಂಡಿನ ಒಂದು ಮತ್ತು 3 ಸೆಕೆಂಡಿನ 3 ಷಾಟ್‌ಗಳೊಂದಿಗೆ ಅ ಸಂದರ್ಭದ ತುರ್ತನ್ನು ಹಿಡಿದಿಡಿವ ಉಳಿದ 14 ಷಾಟ್‌ಗಳು ಚಿತ್ರೀಕರಣ ಮತ್ತು ಸಂಕಲನ ಕೌಶಲಗಳಿಗೆ ಉತ್ತಮ ಉದಾಹರಣೆಯಾಗಿದೆ.

ಮಗ ಬಾಲ್ಕನಿಯಂಥ ಬಹಳ ಉದ್ದವಾದ ಆ ಕಾರಿಡಾರಿನ ಗೋಡೆ ಬದಿಯ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಾನೆ. ಎದುರಿನ ಕಟಾಂಜನದ ಪಕ್ಕ ಕಂಬಕ್ಕೆ ಒರಗಿಕೊಂಡು ಅಪ್ಪ ತನ್ನ ಮಂಡಿ ನೋವನ್ನು ಅನುಭವಿಸುತ್ತ ಶಮನಗೊಳಿಸಲು ಪ್ರಯತ್ನಿಸುತ್ತ ಕುಳಿತಿದ್ದಾನೆ.  ಅಲ್ಲಿಟ್ಟಿರುವ ನೀರನ್ನು ಕುಡಿದು ನಾಯಿಗೂ ಕುಡಿಸಿ ಮಗ, ಮುಂದೆ ವಿಲೇವಾರಿ ಮಾಡಬೇಕಾದ ಪತ್ರಗಳನ್ನು ವಿಂಗಡಿಸುವ ಪ್ರಯತ್ನದಲ್ಲಿ ಒಂದಷ್ಟು ಪತ್ರಗಳನ್ನು ಪಕ್ಕದಲ್ಲೆ ಇರುವ ಪೋಸ್ಟ್ ಬ್ಯಾಗಿನ ಮೇಲೆ ಇಡುತ್ತಾನೆ. ಗಾಳಿ ಜೋರಾಗಿ ಬೀಸುವ ಶಬ್ದ ಕೇಳಿಸುತ್ತಿದ್ದ ಹಾಗೇ ಅವನ ತಲೆ ಕೂದಲು ಗಾಳಿಗೆ ಹಾರುತ್ತದೆ. ಏನಾಗುತ್ತಿದೆ ಎಂದು ಅರಿವಾಗುವುದರೊಳಗೆ ಪೋಸ್ಟ್ ಬ್ಯಾಗಿನ ಮೇಲಿಟ್ಟಿದ್ದ ಪತ್ರಗಳು ಗಾಳಿಯ ರಭಸಕ್ಕೆ ಹಾರಿ ಹೋಗುತ್ತವೆ.

ಆ ಕಡೆ ಕುಳಿತಿದ್ದ ಅಪ್ಪ ಗಾಳಿಯಲ್ಲಿ ಹಾರಿ ಹೋಗುತ್ತಿರುವ ಪತ್ರಗಳನ್ನು ನೋಡುತ್ತಾನೆ. ಎದ್ದು ಆ ದಿಕ್ಕಿಗೆ ಫ್ರೇಮ್‌ನಿಂದ ಎಕ್ಸಿಟ್ ಆಗುತ್ತಾನೆ. ಮುಂದಿನ ಲಾಂಗ್ ಷಾಟ್‌ನಲ್ಲಿ ಉದ್ದಕ್ಕಿರುವ ಕಾರಿಡಾರ್ ನಲ್ಲಿ ಪತ್ರಗಳು ಹಾರಿ ಹೋಗುತ್ತಿವೆ. ಫ್ರೇಮ್ ಒಳಕ್ಕೆ ಓಡುತ್ತಲೆ ಎಂಟರ್ ಆಗಿ ಅವುಗಳ ಹಿಂದೆ ಓಡುತ್ತಾನೆ. ಅವನ ಹಿಂದೆಯೇ ನಾಯಿ ಓಡುತ್ತದೆ. ಈ ಷಾಟ್‌ನಿಂದ ಮೊದಲ ಪತ್ರವನ್ನು ರಕ್ಷಿಸುವವರೆಗೆ ಚಿತ್ರೀಕರಣಕ್ಕೆ ಬಳಸಿರುವ ವಿವಿಧ ವೈಡ್ ಆಂಗಲ್ ಲೆನ್ಸ್‌ಗಳಿಂದ ಒಂದು ರೀತಿ ಸರ್ರಿಯಲಿಸ್ಟಿಕ್ ಎಫೆಕ್ಟ್ ದೊರಕಿ ಕಥನದಲ್ಲಿ ಟೆನ್ಶನ್ ಸೃಷ್ಟಿಯಾಗುತ್ತದೆ.

ನಿರ್ದೇಶಕನ ಸಿನಿ ತಾಂತ್ರಿಕತೆಯ ಕೈ ಚಳಕವನ್ನು ಕೊನೆಯ ಪತ್ರದ ರಕ್ಷಣೆಯ ನಿರೂಪಣೆಯಲ್ಲಿ ಕಾಣಬಹುದು.  ಮೂರು ಷಾಟ್‌ಗಳ ಚಿತ್ರೀಕರಣ ಮತ್ತು ಕರಾರುವಾಕ್ಕಾದ ಸಂಕಲನಗಳಲ್ಲಿ ಇದನ್ನು ಸಾಧಿಸಿದ್ದಾನೆ. ಅಪ್ಪ ಮತ್ತು ನಾಯಿ ಲಾಂಗ್ ಷಾಟ್‌ನಲ್ಲಿ ಕ್ಯಾಮೆರಾದ ಒಂದು ಬದಿಯಿಂದ ಓಡಿ ಬಂದು ಮುಂದಿನಿಂದ ಸಾಗುತ್ತಾರೆ. ಷಾಟ್‌ನ ಕೊನೆಯಲ್ಲಿ ಅವರು ಹತ್ತಿರ ಓಡುತ್ತಿರುವುದರಿಂದಾಗಿ ನಾಯಿಯ ಕ್ಲೋಸ್ ಅಪ್ ಆಗುತ್ತದೆ. ಪಕ್ಕದಲ್ಲಿ ಓಡುತ್ತಿರುವ ಅಪ್ಪನ ಕಾಲುಗಳು ಮಾತ್ರ ಕಾಣಿಸುತ್ತವೆ. ಮುಂದಿನ ಷಾಟ್‌ನಲ್ಲಿ ಕ್ಯಾಮೆರಾ ಕಾರಿಡಾರಿನ ಗೋಡೆ ಮತ್ತು ಕಟಾಂಜನದ ಮಧ್ಯೆ ನೆಲಮಟ್ಟದಲ್ಲಿದೆ. ಮಿಡ್ ಷಾಟಿನಲ್ಲಿ ಕ್ಯಾಮೆರಾ ಕಡೆಗೆ ಓಡಿ ಬರುವ ನಾಯಿ ಹತ್ತಿರ ಬರುತ್ತಿದ್ದ ಹಾಗೆ ಕ್ಲೋಸ್ ಆಪ್ ಆಗಿ ಕ್ಯಾಮೆರಾದ ಮೇಲಕ್ಕೆ ನೆಗೆದು ಮಾಯವಾಗುತ್ತದೆ. ಅದರ ಹಿಂದಿನೆರಡೂ ಕಾಲುಗಳು ಫ್ರೇಮಿನಿಂದ ಮೇಲೆ ಹೋದೊಡನೆ ಮುಂದಿನ ಷಾಟ್ ಕಟ್ ಆಗುತ್ತದೆ. ಈಗ ಕ್ಯಾಮೆರಾ ಕಟಾಂಜನದ ಬಳಿ ನೆಲಮಟ್ಟದಲ್ಲಿದೆ. ಆದರೆ ಅತಿ ಲೋ ಆಂಗಲ್‌ನಲ್ಲಿದ್ದು ಕಟ್ಟಡದ ಸೀಲಿಂಗ್ ಕಾಣುತ್ತಿದೆ. ಬಾಯಲ್ಲಿ ಪತ್ರವನ್ನು ಕಚ್ಚಿ ಹಿಡಿದಿರುವ ನಾಯಿ ಫ್ರೇಮಿನ ಎಡ ಮೇಲ್ಭಾಗದಿಂದ ಎಂಟ್ರಿಯಾಗಿ ಹಾರಿಕೊಂಡೆ ಇಳಿಯುತ್ತದೆ. ಓಟದ ಸ್ಪರ್ಧೆಯಲ್ಲಿ ಜಯಶಾಲಿಯಾದ ಕ್ರೀಡಾ ಪಟು ಎದೆಯ ಮೇಲೇ ಫಿನಿಶಿಂಗ್ ರಿಬ್ಬನ್ನನ್ನು ಹೊತ್ತು ಓಟ ಮುಗಿಸಿದಂತೆ. ಇಡೀ ಸನ್ನಿವೇಶವನ್ನು ಯಾವುದೇ ಯುದ್ಧದ ಸನ್ನಿವೇಶದ ಅಥವಾ ಪ್ರಾಣ ರಕ್ಷಣೆಯ ಸನ್ನಿವೇಶದ ಬಿಗುವು, ತುರ್ತು ಮತ್ತು ಉಸಿರುಗಟ್ಟಿಸುವ ಅಂಶಗಳೊಂದಿಗೆ ನಿರ್ದೇಶಕ ನಿರೂಪಿಸಿದ್ದಾನೆ. ಇಲ್ಲಿನ ಅದ್ಭುತ ರಸಕ್ಕೆ ಪೂರಕವಾದ ಶಬ್ದ ಸಂಯೋಜನೆಯನ್ನು ಸಹ ಮಾಡಿದ್ದಾನೆ. 

ಈ ಚಿತ್ರದ ಬಗ್ಗೆ, ಚಿತ್ರದ ತಾಂತ್ರಿಕ ಆಂಶಗಳ ಬಗ್ಗೆ ಹೇಳಬಹುದಾದ್ದು ಇನ್ನೂ ಬಹಳಷ್ಟಿದೆ. ಈ ಚಿತ್ರದಲ್ಲಿನ ನೀರು, ಮಂಜು, ಮಳೆಗಳ ಬಗ್ಗೆ, ಚಿತ್ರದುದ್ದಕ್ಕೂ ಬಳಸಿರುವ ಶಬ್ದಗಳ ಬಗ್ಗೆ, ಗಿಡ ಮರ ಗುಡ್ಡಗಳ ಬಗ್ಗೆ, ಅಪ್ಪ ಮಗನ ಚರ್ಚೆಗಳು ಫ್ಲಾಷ್ ಬ್ಯಾಕ್‌ಗಳು ಮಗನ ಸ್ವಗತಗಳು ಕಥಾನಕದ ಹಂದರಕ್ಕೆ ಆಯಾಮಗಳನ್ನು ರಕ್ತ ಮಾಂಸಗಳನ್ನು ತುಂಬುವ ಹಾಗೆ ಪುಷ್ಟೀಕರಿಸುವ ಬಗ್ಗೆ, ಬೆಳಕಿನ ಮತ್ತು ಬಣ್ಣಗಳ ವಿನ್ಯಾಸದ ಬಗ್ಗೆ, ದೃಶ್ಯ ಸಂಯೋಜನೆಯ ಬಗ್ಗೆ, ಚೈನಾದ ಕಮ್ಯೂನಿಸ್ಟ್ ವ್ಯವಸ್ಥೆಯ ಮೇಲೆ ಈ ಚಿತ್ರವು ಸೂಕ್ಷ್ಮವಾಗಿ ಚಿಕಿತ್ಸಕ ಬೆಳಕನ್ನು ಚೆಲ್ಲುವ ಬಗ್ಗೆ,  ಇಲ್ಲವೇ ಇಲ್ಲ ಅನ್ನಿಸವಷ್ಟು ಗೌಣವಾದ ಲೋಪ ದೋಷಗಳ ಬಗ್ಗೆ ಹೇಳಬೇಕಾದ್ದು ಬಹಳಷ್ಟಿದೆ. ಈಗಾಗಲೆ ಲೇಖನ ದೀರ್ಘವಾಗಿ ಬಿಟ್ಟಿರುವುದರಿಂದ ಇಲ್ಲಿಗೆ ನಿಲ್ಲಿಸುತ್ತೇನೆ.

Written by saangatya

May 25, 2009 at 9:01 am

ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್- ಮೂರನೇ ಕಂತು

without comments

ಹುಡುಗಿಯರು ಮುಂದೆ ಸಾಗಿದ ಮೇಲೆ ಇವರ ಪಯಣ ಮುಂದುವರೆಯುತ್ತದೆ. ಗುಡ್ಡ ಹತ್ತುತ್ತ ಮಗ ಅಪ್ಪನಿಗೆ ಹೇಳುತ್ತಾನೆ, ಚಿಕ್ಕವನಾಗಿದ್ದಾಗ ಅಮ್ಮ ಪರ್ವತಗಳಲ್ಲಿನ ಕಥೆಗಳನ್ನು ಹೇಳುತ್ತಿದ್ದಳು. ಪರ್ವತಗಳಲ್ಲಿ ಯಾಕೆ ಜನ ವಾಸಿಸುತ್ತಾರೆ ಅಂತ ನಾನು ಕೇಳಿದ್ದೆ.  ಅಪರಾಧಿ ಭಾವನೆಯಿಂದ ಕೂಡಿದ ಅಪ್ಪ ಕಾತರದಿಂದ ಕೇಳುತ್ತಾನೆ, ಅವಳು ಏನಂದಳು?. ಅವರು ಶೂ ಒಳಗೆ ಕಾಲಿರುವಂತೆ ನೆಮ್ಮದಿಯಾಗಿ ಅಲ್ಲಿ ವಾಸಿಸುತ್ತಾರೆ ಎಂದಳು.  ಅಪ್ಪನ ಮುಖ ಖಿನ್ನವಾಗುತ್ತದೆ. ಅಳುದನಿಯಲ್ಲಿ, ನಿನ್ನಮ್ಮ ನನ್ನನ್ನ ಮದುವೆಯಾದ ಮೇಲೆ ಒಬ್ಬಂಟಿಯಾಗೇ ಬದುಕಿದಳು ಎನ್ನುತ್ತಾನೆ. ಅದಕ್ಕೆ ಮಗ, ನಿನಗೆ ನಿನ್ನದೇ ಕಷ್ಟಗಳಿದ್ದುವು ಎಂದು ಹೇಳಿ ಅಪ್ಪ ಹುಡುಗಿಯ ಬಗ್ಗೆ ಕೇಳಿದಾಗಿನಿಂದ ತನ್ನ ಕೈಯಲ್ಲಿ ಅದೊಂದು ತನ್ನೊಳಗಿನ ತುಮುಲಗಳ ಹೊಡೆತಕ್ಕೆ ಆಸರೆಯೇನೋ ಎಂಬಂತೆ ಹಿಡಿದುಕೊಂಡಿದ್ದ ಕಾಗದದಿಂದ ರ‍್ಯಾಕೆಟ್ ಮಾಡಿ ಎಸೆಯುತ್ತಾನೆ. ಅದು ನಿಧಾನಕ್ಕೆ ಗಾಳಿಯಲ್ಲಿ ತೇಲುತ್ತ ತುಯ್ಯತ್ತಾ ಕಣಿವೆಗೆ ಇಳಿಯುತ್ತದೆ.  
ಈ ಕಾಗದದ ರ‍್ಯಾಕೆಟ್ ಮೊದಲೊಮ್ಮೆ ಬಂದಿರುತ್ತದೆ. ಕುರುಡು ಅಜ್ಜಿಯನ್ನು ಬೀಳ್ಕೊಂಡ ಮೇಲೆ ಮುಂದಿನ ದಾರಿಯಲ್ಲಿ ಸಾಗುವಾಗ ಮಗ, ಅಜ್ಜಿಯ ಕೈಯಲ್ಲಿ ತನ್ನ ಕೈ ಇದ್ದಾಗ ಅಮ್ಮನ ನೆನಪಾಯಿತೆಂದುಕೊಂಡು ತಾನು ಚಿಕ್ಕವನಿದ್ದಾಗ ಅಮ್ಮನ ನಗು ಮುಖವನ್ನು ನೋಡಲು ಇಷ್ಟ ಪಡುತ್ತಿದ್ದದ್ದಾಗಿ ಸ್ವಗತದಲ್ಲಿ ಹೇಳುತ್ತಾನೆ. ಆಗ ಬರುವ ಫ್ಲಾಷ್ ಬ್ಯಾಕ್‌ನಲ್ಲಿ ಅವನು ಚಿಕ್ಕ ಹುಡುಗ. ಅಪ್ಪ ಅಮ್ಮ ಅವನು ಬತ್ತದ ಪೈರಿನ ನಡುವೆ ಸಂತಸವಾಗಿ ಆಡುತ್ತಿರುತ್ತಾರೆ. ಅಪ್ಪ ಒಂದು ಕಾಗದದ ರ‍್ಯಾಕೆಟ್ ಎಸೆಯುತ್ತಾನೆ. ಅದು ರೊಯ್ ಎಂದು ಹಾರಿ ಇವನ ಮುಖದ ಮುಂದೆ ವೇಗವಾಗಿ ಹಾದು ಹೋಗುತ್ತದೆ. ಕ್ಲೋಸ್ ಷಾಟ್‌ನಲ್ಲಿ ಅವನಮ್ಮನ ಅತ್ಯಂತ ಸಂತಸದ ಮುಖ ಕಾಣಿಸುತ್ತದೆ. ನಾವು ಮೂವರೂ ಒಟ್ಟಿಗಿದ್ದಾಗ ಅವಳಲ್ಲಿ ಅತ್ಯಂತ ಸಂತಸದ ನಗು ಇರುತ್ತಿತ್ತು ಎಂದು ನೆನೆಸಿಕೊಳ್ಳುತ್ತಾನೆ. ಅದೇ ರ‍್ಯಾಕೆಟ್ ಇಲ್ಲಿ ಮಗನ ಕೈಯಿಂದ ನಿಧಾನಕ್ಕೆ ತುಯ್ಯುತ್ತಾ ಕಣಿವೆಯ ಆಳಕ್ಕಿಳಿಯುತ್ತದೆ. 
ಪಯಣದ ಕೊನೆಯ ಹಂತವಾಗಿ ಇಬ್ಬರೂ ಗುಡ್ಡದ ಮನೆಯೊಂದಕ್ಕೆ ಬರುತ್ತಾರೆ. ಅಲ್ಲೊಬ್ಬಳು ಮಗ್ಗದ ಮೇಲೆ ಕುಳಿತು ನೇಯುತ್ತಿರುತ್ತಾಳೆ. ಅಲ್ಲಿ ಬಟವಾಡೆ ಮಾಡುಬೇಕಾದ ಕಾಗದ ಪತ್ರವಿಲ್ಲ. ಆ ಮನೆಯಳಕ್ಕೆ ಕಾಲಿಡುತ್ತಲೇ ಅಪ್ಪ, ಹೇಗಿದ್ದೀಯ ಅಕ್ಕ? ಅನ್ನುತ್ತ ಒಳ ಬರುತ್ತಾನೆ. ಅವಳು ನೀನು ಹೇಗಿದೀಯ? ಎಂದು ಕೇಳುತ್ತಾಳೆ. ಇವನು ನನ್ನ ಮಗ. ನನ್ನ ಬದಲಿಗೆ ಅಂಚೆ ಬಟವಾಡೆ ಮಾಡಲು ಬರುತ್ತಾನೆ. ಇಲ್ಲಿ ತಂಗಬೇಕಾದಾಗ ನಿನಗೆ ತೊಂದರೆ ಕೊಡುತ್ತಾನೆ ಎಂದು ತಿಳಿಸುತ್ತಾನೆ. ತೊಂದರೆ ಏನಿಲ್ಲ. ಇರಿ. ನಿಮಗೆ ನೀರು ಬಿಸಿ ಮಾಡುತ್ತೇನೆ ಅನ್ನುತ್ತಾಳೆ. ಇದು ಮಲೆನಾಡಿನ ಆತಿಥ್ಯ. ಅಪ್ಪ ಮಗ ಇಬ್ಬರೂ ಮರಿಗೆಯಲ್ಲಿರುವ ಬಿಸಿ ನೀರಿನಲ್ಲಿ ಕಾಲಿಟ್ಟುಕೊಂಡು ದಣಿವಾರಿಸಿಕೊಳ್ಳುತ್ತಿರುವಾಗ ಮಗ ಹೇಳುತ್ತಾನೆ, ತಲತಲಾಂತರದಿಂದ ಇವರು ಇಲ್ಲೇ ಬದುಕುತ್ತಿದ್ದಾರೆ. ಅದಕ್ಕೆ ಅಪ್ಪ, ಅಷ್ಟೇ ಅಲ್ಲ. ಅವರಲ್ಲಿ ಉನ್ನತ ಮೌಲ್ಯಗಳಿವೆ. ಶ್ರಮ ಜೀವನ ಉನ್ನತ ಮೌಲ್ಯಗಳನ್ನ ಕೊಡುತ್ತದೆ. ಉನ್ನತ ಮೌಲ್ಯಗಳು ಜನರನ್ನು ದುಡಿದು ಸಾಧಿಸುವಂತೆ ಮಾಡುತ್ತದೆ. ಉನ್ನತ ಮೌಲ್ಯಗಳಿಲ್ಲದ ಸಂತೋಷದ ಬದಕೂ ರಂಗನ್ನು ಕಳೆದುಕೊಳ್ಳುತ್ತದೆ.  
ಚಿತ್ರದ ಪ್ರಾರಂಭದಲ್ಲಿ ಪಯಣಕ್ಕೆ ಸಿದ್ಧತೆ ಮಾಡಿಕೊಂಡಂತೆ ಈಗಲೂ ಮಲಗುವ ಮೊದಲು ಪತ್ರಗಳನ್ನು ಬಂಡಲುಗಳನ್ನು ಜೋಡಿಸಿಕೊಂಡು ಸಿದ್ಧ ಮಾಡಿಕೊಳ್ಳುತ್ತಾರೆ. ಮಗ ಸಂಬಂಧ ಪಟ್ಟ ಎಂಟ್ರಿಗಳನ್ನು ಮಾಡಿಕೊಳ್ಳುತ್ತಾನೆ. ಚಿತ್ರದ ಪ್ರಾರಂಭದಲ್ಲಿ ಅಪ್ಪ ಒಬ್ಬನೇ ಎಲ್ಲವನ್ನೂ ಮಾಡಿರುತ್ತಾನೆ. ಮಗ ಮೆಕ್ಕೆ ಜೋಳದ ತೆನೆಯಿಂದ ಕಾಳುಗಳನ್ನು ಕಚ್ಚಿ ತಿನ್ನುತ್ತ ಹುಡುಗುತನದಿಂದ ಓಡಾಡಿಕೊಂಡಿರುತ್ತಾನೆ. ಒಂದು ರೀತಿ ಪಿಕ್ನಿಕ್‌ಗೆ ಹೊರಡಲು ಅಪ್ಪ ರೆಡಿ ಮಾಡುತ್ತಿದ್ದರೆ ಮಗ ಉತ್ಸಾಹದಿಂದ ಓಡಾಡುವ ಹಾಗೆ. ಆದರೆ ಈಗ ಮಗ ಈ ಎರಡು ಹಗಲು ಎರಡು ರಾತ್ರಿಯ ಪಯಣದಿಂದಾಗಿ ಪ್ರಬುದ್ಧನಾಗಿದ್ದಾನೆ. ಪ್ಯಾಕ್ ಮಾಡುವುದರಲ್ಲಿ ತಾನೂ ಜವಾಬ್ದಾರಿಯುತ ಮನುಷ್ಯನಂತೆ ತೊಡಗಿಕೊಂಡಿದ್ದಾನೆ. ಪ್ಯಾಕ್ ಮಾಡುತ್ತಲೇ ಅಪ್ಪನಿಗೆ ಮನೆ ಕಡೆಯ ವಿಷಯಗಳನ್ನ, ತಮ್ಮ ಹಳ್ಳಿಯ ಪರಿಸ್ಥಿತಿಯನ್ನು, ಒಲ್ಳೆಯ ಮತ್ತು ಕೆಟ್ಟ ವ್ಯಕ್ತಿಗಳನ್ನು ವಿವರಿಸಿ ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಾಕೀತು ಮಾಡುತ್ತ್ತಾನೆ. ಚಳಿಗಾಲದಲ್ಲಿ ಅಮ್ಮನಿಗೆ ಕೆಮ್ಮು ಬರುತ್ತದೆ. ಪಟ್ಟಣಕ್ಕೆ ಕರೆದುಕೊಂಡು ಹೋಗಿ ಚೆಕ್ ಮಾಡಿಸೆಂದು ಹೇಳಿ ಅಪ್ಪನಿಂದ ಮಾಡಿಸುತ್ತೇನೆಂಬ ಮಾತು ಪಡೆಯುತ್ತಾನೆ. ಬತ್ತದ ಗದ್ದೆಯನ್ನು ಯಾರಿಗೋ ಮಾಡಲು ವಹಿಸಿರುವುದಾಗಿ ಹೇಳಿ ನೀನು ನೀರಿನಲ್ಲಿ ಕೆಲಸ ಮಾಡಬೇಡ ಎಂದು ಅಪ್ಪನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾನೆ. ಮನೆವಾರ್ತೆಯ ಪರಿಚಯ ಮಾಡಿಸಿ ಅದರ ಜವಾಬ್ದಾರಿ ಹೊರಿಸುತ್ತ್ತಾನೆ. ಬೆಳಿಗ್ಗೆ ಬೇಗ ಹೊರಡಬೇಕು ನಾನು ಮಲಗುತ್ತೇನೆಂದು ಮಲಗುತ್ತಾನೆ. ತಾನು ಪೈಪ್ ಸೇದಿ ಮಲಗುತ್ತೇನೆಂದು ಪೈಪ್ ಸೇದುತ್ತಾ ಎಳೆಯ ಮಗುವಿನಂತೆ ದಣಿವಿನಿಂದಾಗಿ ಅಸ್ತವ್ಯಸ್ತವಾಗಿ ಮಲಗಿರುವ ಮಗನನ್ನು ನೋಡುತ್ತಾನೆ. ಕಟ್ಟಿಟ್ಟಿರುವ ಪೋಸ್ಟ್ ಬ್ಯಾಗನ್ನು ನೋಡುತ್ತಾನೆ. ತನ್ನ ಜವಾಬ್ದಾರಿಯನ್ನು ಸರಿಯಾದ ಕೈಗೆ ಹಸ್ತಾಂತರಿಸಿದ ಸಂತೃಪ್ತಿ ಅವನ ಮೊಗದಲ್ಲಿ. ಮಗನ ಪಕ್ಕ ಮಲಗುತ್ತಾನೆ. ಹಾಗೇ ತಾನು ಕೆಲಸದ ಪಯಣ ಮುಗಿಸಿ (ಆಗೆಲ್ಲ ಮೂರು ತಿಂಗಳು ಹಿಡಿಯುತ್ತಿತ್ತು ಒಂದೊಂದು ಸರ್ಕೀಟ್‌ಗಳು.) ಕಾಯುತ್ತಲೇ ಬೆಳೆದ ಮಗನ ದೃಶ್ಯಗಳು ಅವನ ಮನದಲ್ಲಿ ಮೂಡುತ್ತವೆ.  
ಇನ್ನು ಚಿತ್ರೀಕರಣಕ್ಕೆ ಬರೋಣ. ಮಲೆನಾಡ ಹಸಿರು ಸಿರಿಯನ್ನು ಈ ಚಿತ್ರದಲ್ಲಿ ನಿರ್ದೇಶಕ ತುಂಬಿ ತುಳುಕುವಂತೆ ಹಿಡಿದಿಟ್ಟಿದ್ದಾನೆ. ಮಲೆನಾಡಿನ ಪ್ರಕೃತಿಯನ್ನು ಕ್ಯಾಮೆರಾದಲ್ಲಿ ಮೊಗೆದು ಮೊಗೆದು ಕೊಟ್ಟಿದ್ದಾನೆ.  ಕ್ರಿಕೆಟ್‌ನಲ್ಲಿ ಪುಸ್ತಕದಲ್ಲಿರುವ ಷಾಟ್‌ಗಳನ್ನೆಲ್ಲ ಹೊಡೆದು ತೋರಿಸಿದರು ಎನ್ನುತ್ತಾರಲ್ಲ ನಮ್ಮ ದ್ರಾವಿಡ್ ಮತ್ತು ವಿಶ್ವನಾಥ್‌ರವರ ಬಗ್ಗೆ, ಹಾಗೆ ಪರ್ವತ ಶ್ರೇಣಿಗಳಲ್ಲಿ ಸಿನೆಮಾಟೊಗ್ರಫಿ ಪುಸ್ತಕದಲ್ಲಿರುವ ಷಾಟ್‌ಗಳನ್ನು ಸಾಬೀತು ಪಡಿಸಿದ್ದಾನೆ. ಎಲ್ಲೂ ಕಥನದ ಅಗತ್ಯವನ್ನು ಮೀರಿಲ್ಲ. ಗುಡ್ಡ, ಬೆಟ್ಟ, ಕಣಿವೆ, ಗದ್ದೆ, ಗ್ರಾಮದ ಓಣಿಗಳಲ್ಲಿ ಸಾಗುವ ಮೂವರ ಪಯಣದಲ್ಲಿ ಪ್ರೇಕ್ಷಕರನ್ನು ಸಹ ತನ್ನ ಚಿತ್ರೀಕರಣ ತಂತ್ರದಿಂದ ಜೊತೆಗಾರರನ್ನಾಗಿಸಿದ್ದಾನೆ. ಸನ್ನಿವೇಶಗಳ ಭಾವನೆಗಳನ್ನು ಪಾತ್ರಗಳ ಅನುಭವಗಳನ್ನು ಪ್ರೇಕ್ಷಕರಿಗೆ ಸಂವಹನಿಸಲು ಚಿತ್ರೀಕರಣ ತಂತ್ರಗಳನ್ನು ಯಶಸ್ವಿಯಾಗಿ ದುಡಿಸಿಕೊಂಡಿದ್ದಾನೆ.  
ಒಂದು ಸನ್ನಿವೇಶದ ಮೂಡನ್ನು, ಪಾತ್ರದ ಅನುಭವಗಳನ್ನು ಮತ್ತು ಒಳತೋಟಿಗಳನ್ನು ಅವುಗಳೆಲ್ಲ ಸೂಕ್ಷ್ಮತೆಗಳೊಂದಿಗೆ ವರ್ಣಿಸಿ ವಿವರಿಸುವುದು ಬರವಣಿಗೆಗೆ ಹೋಲಿಸಿದರೆ ಸಿನೆಮಾದಲ್ಲಿ ಬಹಳ ಕಷ್ಟ. ಸಿನೆಮಾದಲ್ಲಿ ಮಾಧ್ಯಮದಲ್ಲೇ ಅಂತರ್ಗತವಾಗಿರುವ ತಾಂತ್ರಿಕತೆಯಿಂದಾಗಿ ಸಂವಹನ ಪ್ರಕ್ರಿಯೆ ಬಹಳ ಸಂಕೀರ್ಣ. ಸಿನೆಮಾ ತಂತ್ರಜ್ಞಾನದ ಮೇಲೆ ಮಾಸ್ಟರಿ ಇದ್ದರೆ ಮಾತ್ರ ಅದು ಸಾಧ್ಯ. ಈ ಚಿತ್ರದ ಪ್ರಾರಂಭದಲ್ಲಿ ಪಯಣದ ಸಿದ್ಧತೆಯ ದೃಶ್ಯವನ್ನೆ ನೋಡೋಣ. ಅಪ್ಪ ಪ್ರೊಫೆಷನಲ್ ಆಗಿ ತನ್ಮಯತೆಯಿಂದ ಕಾಗದಪತ್ರಗಳನ್ನು, ಪತ್ರಿಕೆಗಳನ್ನು ವಿಂಗಡಿಸಿ ಪೋಸ್ಟ್‌ಬ್ಯಾಗಿನೊಳಗೆ ಜೋಡಿಸಿಡುತ್ತಾನೆ. ಮಗನಿಗೆ ಸಹಾಯವಾಗಲೆಂದು ಪಯಣಿಸ ಬೇಕಿರುವ ರೂಟ್ ಮ್ಯಾಪ್ ತಂದು ಮಗನಿಗೆ ವಿವರಿಸುತ್ತಾನೆ. ಮಗ ಮೆಕ್ಕೆ ಜೋಳದ ತೆನೆಯನ್ನು ಕಚ್ಚಿ ತಿನ್ನುತ್ತ ಹುಡುಗತನದಲ್ಲೇ ಉತ್ಸಾಹದಿಂದ ಅಂಚೆ ಪೇದೆಯ ಕ್ಯಾಪನ್ನು ಧರಸಿ ಕನ್ನಡಿಯಲ್ಲಿ ನೋಡಿಕೊಳ್ಳತ್ತ ತನ್ನ ಯೂನಿಫಾರ್ಮ್ ಬರುವುದು ತಡವಾಗುತ್ತದೆ. ಅಪ್ಪನ ಯೂನಿಫಾರ್ಮ್ ತನಗೆ ಸಡಿಲ. ಎಂದು ಅಲ್ಲೆ ಓಡಾಡುತ್ತಾನೆ. ಅಡುಗೆ ಮುಗಿಯುವಾಗ ಒಗ್ಗರಣೆ ಹಾಕಲು ಸಹಾಯ ಮಾಡಿದ ಹಾಗೆ ಕೊನೆಯ ಒಂದೆರಡು ಬಂಡಲ್‌ಗಳನ್ನು ಪೋಸ್ಟ್ ಬ್ಯಾಗಿಗೆ ಹಾಕಲು ಎತ್ತಿಕೊಡುತ್ತಾನೆ. ಹಿನ್ನೆಲೆಯಲ್ಲಿ ತಾಯಿ ಅಡುಗೆ ಮಾಡುತ್ತಿರುತ್ತಾಳೆ. ಅಪ್ಪ ಮಗ ಚರ್ಚಿಸುತ್ತಿದ್ದರೆ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾಳೆ. ಕೆಲಸಕ್ಕೆ ಹೋಗಬೇಕಾದ ಅಗತ್ಯವಿಲ್ಲ. ಅಪ್ಪನ ನಿವೃತ್ತಿಯಿಂದ ಬದುಕಿಗೇನೂ ಕಷ್ಟವಾಗುವುದಿಲ್ಲ. ಹೊಲ ಮನೆ ನೋಡಿಕೊಂಡರೆ ಸಾಕು ಬೇಕಾದರೆ ಪಟ್ಟಣದಲ್ಲಿ ಕೆಲಸ ಮಾಡಬಹುದು ಎನ್ನುತ್ತಾಳೆ. ಮೂರೂ ಮುಕ್ಕಾಲು ನಿಮಿಷದ ಈ ದೃಶ್ಯವನ್ನ ೨೩ ಷಾಟ್‌ಗಳಲ್ಲಿ ನಿರೂಪಿಸಿದ್ದಾನೆ. ಈ ಮೂವರ ಅಷ್ಟೂ ಚಟುವಟಿಕೆಗಳನ್ನು ನಿರ್ದೇಶಕ ಹಲವಾರು ಅಳತೆಯ ಷಾಟ್‌ಗಳಲ್ಲಿ ನಿರೂಪಿಸುತ್ತಾನೆ. ತಾಯಿ ೪ ಷಾಟ್‌ಗಳಲ್ಲಿ ಮಾತ್ರ ನೇರವಾಗಿ ಸ್ಪಷ್ಟವಾಗಿ ಕಾಣಿಸುತ್ತಾಳೆ. ದೃಶ್ಯ ಪೂರ್ತ ಅಪ್ಪ ಮಗನ ಚಟುವಟಿಕೆಯೇ ಪ್ರಧಾನ. ಮೂವರಿಂದಲೂ ಸೂಕ್ತವಾದಷ್ಟೆ ಅಭಿನಯವನ್ನು ತೆಗೆದಿದ್ದಾನೆ. ನಿರ್ದೇಶಕನ ಸೂಕ್ಷ್ಮ ಕುಸುರಿ ಕಲೆಯ ವಿವರಣಾತ್ಮಕವಾದ ಸಿನಿತಾಂತ್ರಿಕತೆಯ ಕೌಶಲವನ್ನ ೩ ಷಾಟ್‌ಗಳಲ್ಲಿ ನೋಡಬಹುದು. ೨,೧೦ ಮತ್ತು ೧೩ನೆ ಷಾಟ್‌ಗಳು ಮಿಡ್ ಷಾಟ್‌ಗಳು. ಈ ಷಾಟ್‌ಗಳ ಮುನ್ನೆಲೆಯಲ್ಲಿ ಅಪ್ಪ ಮಗ ಇಬ್ಬರ ಚಟುವಟಿಕೆಗಳು ಸ್ಪಷ್ಟವಾದ ಬೆಳಕಿನಲ್ಲಿ ನಡೆಯುತ್ತದೆ. ಹಿನ್ನೆಲೆಯಲ್ಲಿ ಒಂದು ಹೆಂಗಸು ಅಷ್ಟೇನೂ ಬೆಳಕಿಲ್ಲದ ಹೊಗೆ ತುಂಬಿದ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತ್ತಿರುತ್ತಾಳೆ. ತನ್ನ ಪಾಡಿಗೆ ತಾನು. ಮಗನ ಉತ್ಸಾಹ ಅಪ್ಪನ ಮಗ್ನತೆಯ ಚಟುವಟಿಕೆಗಳೊಂದಿಗೆ ಅವರ ಸಂಭಾಷಣೆ ಕಥೆಯ ಮುಂದಿನ ನಡೆಗೆ ಪ್ರೇಕ್ಷಕರನ್ನು ಸಿದ್ಧ ಪಡಿಸುತ್ತಿದ್ದರೆ, ಹಿನ್ನೆಲೆಯ ಹೆಂಗಸು ಇವರಿಬ್ಬರ ಬದುಕಿನ ಕಂಡೂ ಕಾಣದಂಥ ಅಸ್ತಿತ್ವವಾಗಿ ಪ್ರೇಕ್ಷಕರ ಪ್ರಜ್ಞೆಯೊಳಕ್ಕೆ ಅರಿವೇ ಆಗದಂತೆ ಈ ಮೂರು ಷಾಟ್‌ಗಳಲ್ಲಿ ಸ್ಥಾಪನೆಯಾಗುತ್ತಾಳೆ. ಅವಳೊಬ್ಬಳನ್ನೆ ಹಿಡಿದಿರುವ ೪ ಷಾಟ್‌ಗಳಿವೆ. ಅವುಗಳಲ್ಲಿ ೨ ಕ್ಲೋಸ್ ಮಿಡ್ ಷಾಟ್‌ಗಳು ಮತ್ತೆರಡು ಕ್ಲೋಸ್ ಅಪ್‌ಗಳು. ಮಗ ಕನ್ನಡಿಯ ಮುಂದೆ ನಿಂತು ಅಪ್ಪನ ಕ್ಯಾಪ್ ಹಾಕಿಕೊಂಡು ತನಗೆ ಅಪ್ಪನ ಯೂನಿಫಾರ್ಮ್ ದೊಗಲೆ ಎಂದು ಹೇಳುತ್ತಿರುವಾಗ ಅಡುಗೆ ಮಾಡುತ್ತಲೇ ಅವನನ್ನು ನೋಡುವ ಅವನ ಮಾತು ಮುಗಿದ ಮೇಲೆ ಅವನು ಕೆಲಸಕ್ಕೆ ಹೋಗುವ ಅಗತ್ಯ ತಮಗಿಲ್ಲ ಎಂದು ಹೇಳುವ ೨ ಕ್ಲೋಸ್ ಮಿಡ್ ಷಾಟ್‌ಗಳಲ್ಲಿ ಅಪ್ಪ ಮಗನಲ್ಲಿರುವ ಉತ್ಸಾಹ ಅವಳಲ್ಲಿ ಇಲ್ಲ. ತನ್ನ ಅಸಮ್ಮತಿಗೆ ಗಂಡ ಮತ್ತು ಮಗನ ಮಾನ್ಯತೆ ಇಲ್ಲ ಎಂಬುದರ ಅರಿವಿನೊಂದಿಗೆ ಆಳವಾದ ನೋವಿದೆ. ಅಪ್ಪನಿಗೆ ತನ್ನ ಕಾಯಕದ ಜವಾಬ್ದಾರಿಯನ್ನು ಮಗನಿಗೆ ವಹಿಸುತ್ತಿರುವ ಉಮೇದು. ಮಗನಿಗೆ ಮನೆಯಲ್ಲಿ ಒಬ್ಬರಾದರೂ ಕೇಡರ್ ಇರಲೇಬೇಕೆಂಬ ಲೌಕಿಕ ನಂಬಿಕೆ. ಕೊನೆಯಲ್ಲಿ ಅಪ್ಪ ಮಗ ತುಂಬಿದ ಅಂಚೆ ಚೀಲದ ಬಂದೋ ಬಸ್ತು ಮಾಡುವಾಗ ಅವಳ ಎರಡು ಕ್ಲೋಸ್ ಅಪ್‌ಗಳು ಬರುತ್ತವೆ. ಅವುಗಳು ಅವಳ ಆಳವಾದ ನೋವಿನ ಮತ್ತು ಅಸಹಾಯಕತೆಯ ಮುಖ ಭಾವವನ್ನು ತೋರಿಸುತ್ತವೆ. ಮಗನ ಆತುರ, ಅಪ್ಪನ ಸಾವಧಾನ ಮತ್ತು ತಾಯಿಯ ಮೂಕ ವೇದನೆ ಇವು ನನ್ನಂಥವರ ವಿಶ್ಲೇಷಣೆ ಇದ್ದರೂ ಇರದಿದ್ದರೂ ಪ್ರೇಕ್ಷಕರಿಗೆ ಅರಿವಿನ ಮಟ್ಟದಲ್ಲಿ ಮತ್ತು ಪ್ರಜ್ಞೆಯ ಆಳದಲ್ಲಿ ಈ ದೃಶ್ಯದ ಮೂಲಕ ಸಂವಹನವಾಗುವ ಅಂಶಗಳು.  

ಸಿನಿಮಾ ಸ್ಕೋಪ್ ಅಂಕಣದ ಮೂರನೇ ಕಂತಿದು. ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್ ಚಿತ್ರದ ಈ ಕಂತು ಚಿತ್ರದ ವಿಭಿನ್ನ ಚಿತ್ರಿಕೆಗಳ ಕುರಿತು ಹೇಳಿದೆ. ಪರಮೇಶ್ ಗುರುಸ್ವಾಮಿಯವರು ಒಂದು ತಾಂತ್ರಿಕ ಸಂಗತಿಯನ್ನು ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ. ಉಳಿದ ಕಂತುಗಳ ಬರಹಗಳನ್ನು ನೇರವಾಗಿ “ಸಿನಿಮಾ ಸ್ಕೋಪ್” ನ ಪುಟದ(ಬ್ಲಾಗ್ ನ ಸೈಡ್ ಬಾರ್ ನಲ್ಲಿರುವ) ಕ್ಲಿಕ್ ಮಾಡಿ ವೀಕ್ಷಿಸಬಹುದು.

ಹುಡುಗಿಯರು ಮುಂದೆ ಸಾಗಿದ ಮೇಲೆ ಇವರ ಪಯಣ ಮುಂದುವರೆಯುತ್ತದೆ. ಗುಡ್ಡ ಹತ್ತುತ್ತ ಮಗ ಅಪ್ಪನಿಗೆ ಹೇಳುತ್ತಾನೆ, ಚಿಕ್ಕವನಾಗಿದ್ದಾಗ ಅಮ್ಮ ಪರ್ವತಗಳಲ್ಲಿನ ಕಥೆಗಳನ್ನು ಹೇಳುತ್ತಿದ್ದಳು. ಪರ್ವತಗಳಲ್ಲಿ ಯಾಕೆ ಜನ ವಾಸಿಸುತ್ತಾರೆ ಅಂತ ನಾನು ಕೇಳಿದ್ದೆ.  ಅಪರಾಧಿ ಭಾವನೆಯಿಂದ ಕೂಡಿದ ಅಪ್ಪ ಕಾತರದಿಂದ ಕೇಳುತ್ತಾನೆ, ಅವಳು ಏನಂದಳು?. ಅವರು ಶೂ ಒಳಗೆ ಕಾಲಿರುವಂತೆ ನೆಮ್ಮದಿಯಾಗಿ ಅಲ್ಲಿ ವಾಸಿಸುತ್ತಾರೆ ಎಂದಳು.  ಅಪ್ಪನ ಮುಖ ಖಿನ್ನವಾಗುತ್ತದೆ. ಅಳುದನಿಯಲ್ಲಿ, ನಿನ್ನಮ್ಮ ನನ್ನನ್ನ ಮದುವೆಯಾದ ಮೇಲೆ ಒಬ್ಬಂಟಿಯಾಗೇ ಬದುಕಿದಳು ಎನ್ನುತ್ತಾನೆ. ಅದಕ್ಕೆ ಮಗ, ನಿನಗೆ ನಿನ್ನದೇ ಕಷ್ಟಗಳಿದ್ದುವು ಎಂದು ಹೇಳಿ ಅಪ್ಪ ಹುಡುಗಿಯ ಬಗ್ಗೆ ಕೇಳಿದಾಗಿನಿಂದ ತನ್ನ ಕೈಯಲ್ಲಿ ಅದೊಂದು ತನ್ನೊಳಗಿನ ತುಮುಲಗಳ ಹೊಡೆತಕ್ಕೆ ಆಸರೆಯೇನೋ ಎಂಬಂತೆ ಹಿಡಿದುಕೊಂಡಿದ್ದ ಕಾಗದದಿಂದ ರಾಕೆಟ್ ಮಾಡಿ ಎಸೆಯುತ್ತಾನೆ. ಅದು ನಿಧಾನಕ್ಕೆ ಗಾಳಿಯಲ್ಲಿ ತೇಲುತ್ತ ತುಯ್ಯತ್ತಾ ಕಣಿವೆಗೆ ಇಳಿಯುತ್ತದೆ.  

Director Jimki quo

Director Jimki quo

ಈ ಕಾಗದದ ರಾಕೆಟ್ ಮೊದಲೊಮ್ಮೆ ಬಂದಿರುತ್ತದೆ. ಕುರುಡು ಅಜ್ಜಿಯನ್ನು ಬೀಳ್ಕೊಂಡ ಮೇಲೆ ಮುಂದಿನ ದಾರಿಯಲ್ಲಿ ಸಾಗುವಾಗ ಮಗ, ಅಜ್ಜಿಯ ಕೈಯಲ್ಲಿ ತನ್ನ ಕೈ ಇದ್ದಾಗ ಅಮ್ಮನ ನೆನಪಾಯಿತೆಂದುಕೊಂಡು ತಾನು ಚಿಕ್ಕವನಿದ್ದಾಗ ಅಮ್ಮನ ನಗು ಮುಖವನ್ನು ನೋಡಲು ಇಷ್ಟ ಪಡುತ್ತಿದ್ದದ್ದಾಗಿ ಸ್ವಗತದಲ್ಲಿ ಹೇಳುತ್ತಾನೆ. ಆಗ ಬರುವ ಫ್ಲಾಷ್ ಬ್ಯಾಕ್‌ನಲ್ಲಿ ಅವನು ಚಿಕ್ಕ ಹುಡುಗ. ಅಪ್ಪ ಅಮ್ಮ ಅವನು ಬತ್ತದ ಪೈರಿನ ನಡುವೆ ಸಂತಸವಾಗಿ ಆಡುತ್ತಿರುತ್ತಾರೆ. ಅಪ್ಪ ಒಂದು ಕಾಗದದ ರಾಕೆಟ್ ಎಸೆಯುತ್ತಾನೆ. ಅದು ರೊಯ್ ಎಂದು ಹಾರಿ ಇವನ ಮುಖದ ಮುಂದೆ ವೇಗವಾಗಿ ಹಾದು ಹೋಗುತ್ತದೆ. ಕ್ಲೋಸ್ ಷಾಟ್‌ನಲ್ಲಿ ಅವನಮ್ಮನ ಅತ್ಯಂತ ಸಂತಸದ ಮುಖ ಕಾಣಿಸುತ್ತದೆ. ನಾವು ಮೂವರೂ ಒಟ್ಟಿಗಿದ್ದಾಗ ಅವಳಲ್ಲಿ ಅತ್ಯಂತ ಸಂತಸದ ನಗು ಇರುತ್ತಿತ್ತು ಎಂದು ನೆನೆಸಿಕೊಳ್ಳುತ್ತಾನೆ. ಅದೇ ರಾಕೆಟ್ ಇಲ್ಲಿ ಮಗನ ಕೈಯಿಂದ ನಿಧಾನಕ್ಕೆ ತುಯ್ಯುತ್ತಾ ಕಣಿವೆಯ ಆಳಕ್ಕಿಳಿಯುತ್ತದೆ. 

ಪಯಣದ ಕೊನೆಯ ಹಂತವಾಗಿ ಇಬ್ಬರೂ ಗುಡ್ಡದ ಮನೆಯೊಂದಕ್ಕೆ ಬರುತ್ತಾರೆ. ಅಲ್ಲೊಬ್ಬಳು ಮಗ್ಗದ ಮೇಲೆ ಕುಳಿತು ನೇಯುತ್ತಿರುತ್ತಾಳೆ. ಅಲ್ಲಿ ಬಟವಾಡೆ ಮಾಡುಬೇಕಾದ ಕಾಗದ ಪತ್ರವಿಲ್ಲ. ಆ ಮನೆಯಳಕ್ಕೆ ಕಾಲಿಡುತ್ತಲೇ ಅಪ್ಪ, ಹೇಗಿದ್ದೀಯ ಅಕ್ಕ? ಅನ್ನುತ್ತ ಒಳ ಬರುತ್ತಾನೆ. ಅವಳು ನೀನು ಹೇಗಿದೀಯ? ಎಂದು ಕೇಳುತ್ತಾಳೆ. ಇವನು ನನ್ನ ಮಗ. ನನ್ನ ಬದಲಿಗೆ ಅಂಚೆ ಬಟವಾಡೆ ಮಾಡಲು ಬರುತ್ತಾನೆ. ಇಲ್ಲಿ ತಂಗಬೇಕಾದಾಗ ನಿನಗೆ ತೊಂದರೆ ಕೊಡುತ್ತಾನೆ ಎಂದು ತಿಳಿಸುತ್ತಾನೆ. ತೊಂದರೆ ಏನಿಲ್ಲ. ಇರಿ. ನಿಮಗೆ ನೀರು ಬಿಸಿ ಮಾಡುತ್ತೇನೆ ಅನ್ನುತ್ತಾಳೆ. ಇದು ಮಲೆನಾಡಿನ ಆತಿಥ್ಯ. ಅಪ್ಪ ಮಗ ಇಬ್ಬರೂ ಮರಿಗೆಯಲ್ಲಿರುವ ಬಿಸಿ ನೀರಿನಲ್ಲಿ ಕಾಲಿಟ್ಟುಕೊಂಡು ದಣಿವಾರಿಸಿಕೊಳ್ಳುತ್ತಿರುವಾಗ ಮಗ ಹೇಳುತ್ತಾನೆ, ತಲತಲಾಂತರದಿಂದ ಇವರು ಇಲ್ಲೇ ಬದುಕುತ್ತಿದ್ದಾರೆ. ಅದಕ್ಕೆ ಅಪ್ಪ, ಅಷ್ಟೇ ಅಲ್ಲ. ಅವರಲ್ಲಿ ಉನ್ನತ ಮೌಲ್ಯಗಳಿವೆ. ಶ್ರಮ ಜೀವನ ಉನ್ನತ ಮೌಲ್ಯಗಳನ್ನ ಕೊಡುತ್ತದೆ. ಉನ್ನತ ಮೌಲ್ಯಗಳು ಜನರನ್ನು ದುಡಿದು ಸಾಧಿಸುವಂತೆ ಮಾಡುತ್ತದೆ. ಉನ್ನತ ಮೌಲ್ಯಗಳಿಲ್ಲದ ಸಂತೋಷದ ಬದಕೂ ರಂಗನ್ನು ಕಳೆದುಕೊಳ್ಳುತ್ತದೆ.  

ಚಿತ್ರದ ಪ್ರಾರಂಭದಲ್ಲಿ ಪಯಣಕ್ಕೆ ಸಿದ್ಧತೆ ಮಾಡಿಕೊಂಡಂತೆ ಈಗಲೂ ಮಲಗುವ ಮೊದಲು ಪತ್ರಗಳನ್ನು ಬಂಡಲುಗಳನ್ನು ಜೋಡಿಸಿಕೊಂಡು ಸಿದ್ಧ ಮಾಡಿಕೊಳ್ಳುತ್ತಾರೆ. ಮಗ ಸಂಬಂಧ ಪಟ್ಟ ಎಂಟ್ರಿಗಳನ್ನು ಮಾಡಿಕೊಳ್ಳುತ್ತಾನೆ. ಚಿತ್ರದ ಪ್ರಾರಂಭದಲ್ಲಿ ಅಪ್ಪ ಒಬ್ಬನೇ ಎಲ್ಲವನ್ನೂ ಮಾಡಿರುತ್ತಾನೆ. ಮಗ ಮೆಕ್ಕೆ ಜೋಳದ ತೆನೆಯಿಂದ ಕಾಳುಗಳನ್ನು ಕಚ್ಚಿ ತಿನ್ನುತ್ತ ಹುಡುಗುತನದಿಂದ ಓಡಾಡಿಕೊಂಡಿರುತ್ತಾನೆ. ಒಂದು ರೀತಿ ಪಿಕ್ನಿಕ್‌ಗೆ ಹೊರಡಲು ಅಪ್ಪ ರೆಡಿ ಮಾಡುತ್ತಿದ್ದರೆ ಮಗ ಉತ್ಸಾಹದಿಂದ ಓಡಾಡುವ ಹಾಗೆ. ಆದರೆ ಈಗ ಮಗ ಈ ಎರಡು ಹಗಲು ಎರಡು ರಾತ್ರಿಯ ಪಯಣದಿಂದಾಗಿ ಪ್ರಬುದ್ಧನಾಗಿದ್ದಾನೆ. ಪ್ಯಾಕ್ ಮಾಡುವುದರಲ್ಲಿ ತಾನೂ ಜವಾಬ್ದಾರಿಯುತ ಮನುಷ್ಯನಂತೆ ತೊಡಗಿಕೊಂಡಿದ್ದಾನೆ. ಪ್ಯಾಕ್ ಮಾಡುತ್ತಲೇ ಅಪ್ಪನಿಗೆ ಮನೆ ಕಡೆಯ ವಿಷಯಗಳನ್ನ, ತಮ್ಮ ಹಳ್ಳಿಯ ಪರಿಸ್ಥಿತಿಯನ್ನು, ಒಲ್ಳೆಯ ಮತ್ತು ಕೆಟ್ಟ ವ್ಯಕ್ತಿಗಳನ್ನು ವಿವರಿಸಿ ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಾಕೀತು ಮಾಡುತ್ತ್ತಾನೆ. ಚಳಿಗಾಲದಲ್ಲಿ ಅಮ್ಮನಿಗೆ ಕೆಮ್ಮು ಬರುತ್ತದೆ. ಪಟ್ಟಣಕ್ಕೆ ಕರೆದುಕೊಂಡು ಹೋಗಿ ಚೆಕ್ ಮಾಡಿಸೆಂದು ಹೇಳಿ ಅಪ್ಪನಿಂದ ಮಾಡಿಸುತ್ತೇನೆಂಬ ಮಾತು ಪಡೆಯುತ್ತಾನೆ. ಬತ್ತದ ಗದ್ದೆಯನ್ನು ಯಾರಿಗೋ ಮಾಡಲು ವಹಿಸಿರುವುದಾಗಿ ಹೇಳಿ ನೀನು ನೀರಿನಲ್ಲಿ ಕೆಲಸ ಮಾಡಬೇಡ ಎಂದು ಅಪ್ಪನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾನೆ. ಮನೆವಾರ್ತೆಯ ಪರಿಚಯ ಮಾಡಿಸಿ ಅದರ ಜವಾಬ್ದಾರಿ ಹೊರಿಸುತ್ತ್ತಾನೆ. ಬೆಳಿಗ್ಗೆ ಬೇಗ ಹೊರಡಬೇಕು ನಾನು ಮಲಗುತ್ತೇನೆಂದು ಮಲಗುತ್ತಾನೆ. ತಾನು ಪೈಪ್ ಸೇದಿ ಮಲಗುತ್ತೇನೆಂದು ಪೈಪ್ ಸೇದುತ್ತಾ ಎಳೆಯ ಮಗುವಿನಂತೆ ದಣಿವಿನಿಂದಾಗಿ ಅಸ್ತವ್ಯಸ್ತವಾಗಿ ಮಲಗಿರುವ ಮಗನನ್ನು ನೋಡುತ್ತಾನೆ. ಕಟ್ಟಿಟ್ಟಿರುವ ಪೋಸ್ಟ್ ಬ್ಯಾಗನ್ನು ನೋಡುತ್ತಾನೆ. ತನ್ನ ಜವಾಬ್ದಾರಿಯನ್ನು ಸರಿಯಾದ ಕೈಗೆ ಹಸ್ತಾಂತರಿಸಿದ ಸಂತೃಪ್ತಿ ಅವನ ಮೊಗದಲ್ಲಿ. ಮಗನ ಪಕ್ಕ ಮಲಗುತ್ತಾನೆ. ಹಾಗೇ ತಾನು ಕೆಲಸದ ಪಯಣ ಮುಗಿಸಿ (ಆಗೆಲ್ಲ ಮೂರು ತಿಂಗಳು ಹಿಡಿಯುತ್ತಿತ್ತು ಒಂದೊಂದು ಸರ್ಕೀಟ್‌ಗಳು.) ಕಾಯುತ್ತಲೇ ಬೆಳೆದ ಮಗನ ದೃಶ್ಯಗಳು ಅವನ ಮನದಲ್ಲಿ ಮೂಡುತ್ತವೆ.  

ಇನ್ನು ಚಿತ್ರೀಕರಣಕ್ಕೆ ಬರೋಣ. ಮಲೆನಾಡ ಹಸಿರು ಸಿರಿಯನ್ನು ಈ ಚಿತ್ರದಲ್ಲಿ ನಿರ್ದೇಶಕ ತುಂಬಿ ತುಳುಕುವಂತೆ ಹಿಡಿದಿಟ್ಟಿದ್ದಾನೆ. ಮಲೆನಾಡಿನ ಪ್ರಕೃತಿಯನ್ನು ಕ್ಯಾಮೆರಾದಲ್ಲಿ ಮೊಗೆದು ಮೊಗೆದು ಕೊಟ್ಟಿದ್ದಾನೆ.  ಕ್ರಿಕೆಟ್‌ನಲ್ಲಿ ಪುಸ್ತಕದಲ್ಲಿರುವ ಷಾಟ್‌ಗಳನ್ನೆಲ್ಲ ಹೊಡೆದು ತೋರಿಸಿದರು ಎನ್ನುತ್ತಾರಲ್ಲ ನಮ್ಮ ದ್ರಾವಿಡ್ ಮತ್ತು ವಿಶ್ವನಾಥ್‌ರವರ ಬಗ್ಗೆ, ಹಾಗೆ ಪರ್ವತ ಶ್ರೇಣಿಗಳಲ್ಲಿ ಸಿನೆಮಾಟೊಗ್ರಫಿ ಪುಸ್ತಕದಲ್ಲಿರುವ ಷಾಟ್‌ಗಳನ್ನು ಸಾಬೀತು ಪಡಿಸಿದ್ದಾನೆ. ಎಲ್ಲೂ ಕಥನದ ಅಗತ್ಯವನ್ನು ಮೀರಿಲ್ಲ. ಗುಡ್ಡ, ಬೆಟ್ಟ, ಕಣಿವೆ, ಗದ್ದೆ, ಗ್ರಾಮದ ಓಣಿಗಳಲ್ಲಿ ಸಾಗುವ ಮೂವರ ಪಯಣದಲ್ಲಿ ಪ್ರೇಕ್ಷಕರನ್ನು ಸಹ ತನ್ನ ಚಿತ್ರೀಕರಣ ತಂತ್ರದಿಂದ ಜೊತೆಗಾರರನ್ನಾಗಿಸಿದ್ದಾನೆ. ಸನ್ನಿವೇಶಗಳ ಭಾವನೆಗಳನ್ನು ಪಾತ್ರಗಳ ಅನುಭವಗಳನ್ನು ಪ್ರೇಕ್ಷಕರಿಗೆ ಸಂವಹನಿಸಲು ಚಿತ್ರೀಕರಣ ತಂತ್ರಗಳನ್ನು ಯಶಸ್ವಿಯಾಗಿ ದುಡಿಸಿಕೊಂಡಿದ್ದಾನೆ.  

ಒಂದು ಸನ್ನಿವೇಶದ ಮೂಡನ್ನು, ಪಾತ್ರದ ಅನುಭವಗಳನ್ನು ಮತ್ತು ಒಳತೋಟಿಗಳನ್ನು ಅವುಗಳೆಲ್ಲ ಸೂಕ್ಷ್ಮತೆಗಳೊಂದಿಗೆ ವರ್ಣಿಸಿ ವಿವರಿಸುವುದು ಬರವಣಿಗೆಗೆ ಹೋಲಿಸಿದರೆ ಸಿನೆಮಾದಲ್ಲಿ ಬಹಳ ಕಷ್ಟ. ಸಿನೆಮಾದಲ್ಲಿ ಮಾಧ್ಯಮದಲ್ಲೇ ಅಂತರ್ಗತವಾಗಿರುವ ತಾಂತ್ರಿಕತೆಯಿಂದಾಗಿ ಸಂವಹನ ಪ್ರಕ್ರಿಯೆ ಬಹಳ ಸಂಕೀರ್ಣ. ಸಿನೆಮಾ ತಂತ್ರಜ್ಞಾನದ ಮೇಲೆ ಮಾಸ್ಟರಿ ಇದ್ದರೆ ಮಾತ್ರ ಅದು ಸಾಧ್ಯ. ಈ ಚಿತ್ರದ ಪ್ರಾರಂಭದಲ್ಲಿ ಪಯಣದ ಸಿದ್ಧತೆಯ ದೃಶ್ಯವನ್ನೆ ನೋಡೋಣ. ಅಪ್ಪ ಪ್ರೊಫೆಷನಲ್ ಆಗಿ ತನ್ಮಯತೆಯಿಂದ ಕಾಗದಪತ್ರಗಳನ್ನು, ಪತ್ರಿಕೆಗಳನ್ನು ವಿಂಗಡಿಸಿ ಪೋಸ್ಟ್‌ಬ್ಯಾಗಿನೊಳಗೆ ಜೋಡಿಸಿಡುತ್ತಾನೆ. ಮಗನಿಗೆ ಸಹಾಯವಾಗಲೆಂದು ಪಯಣಿಸ ಬೇಕಿರುವ ರೂಟ್ ಮ್ಯಾಪ್ ತಂದು ಮಗನಿಗೆ ವಿವರಿಸುತ್ತಾನೆ. ಮಗ ಮೆಕ್ಕೆ ಜೋಳದ ತೆನೆಯನ್ನು ಕಚ್ಚಿ ತಿನ್ನುತ್ತ ಹುಡುಗತನದಲ್ಲೇ ಉತ್ಸಾಹದಿಂದ ಅಂಚೆ ಪೇದೆಯ ಕ್ಯಾಪನ್ನು ಧರಸಿ ಕನ್ನಡಿಯಲ್ಲಿ ನೋಡಿಕೊಳ್ಳತ್ತ ತನ್ನ ಯೂನಿಫಾರ್ಮ್ ಬರುವುದು ತಡವಾಗುತ್ತದೆ. ಅಪ್ಪನ ಯೂನಿಫಾರ್ಮ್ ತನಗೆ ಸಡಿಲ. ಎಂದು ಅಲ್ಲೆ ಓಡಾಡುತ್ತಾನೆ. ಅಡುಗೆ ಮುಗಿಯುವಾಗ ಒಗ್ಗರಣೆ ಹಾಕಲು ಸಹಾಯ ಮಾಡಿದ ಹಾಗೆ ಕೊನೆಯ ಒಂದೆರಡು ಬಂಡಲ್‌ಗಳನ್ನು ಪೋಸ್ಟ್ ಬ್ಯಾಗಿಗೆ ಹಾಕಲು ಎತ್ತಿಕೊಡುತ್ತಾನೆ. ಹಿನ್ನೆಲೆಯಲ್ಲಿ ತಾಯಿ ಅಡುಗೆ ಮಾಡುತ್ತಿರುತ್ತಾಳೆ. ಅಪ್ಪ ಮಗ ಚರ್ಚಿಸುತ್ತಿದ್ದರೆ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾಳೆ. ಕೆಲಸಕ್ಕೆ ಹೋಗಬೇಕಾದ ಅಗತ್ಯವಿಲ್ಲ. ಅಪ್ಪನ ನಿವೃತ್ತಿಯಿಂದ ಬದುಕಿಗೇನೂ ಕಷ್ಟವಾಗುವುದಿಲ್ಲ. ಹೊಲ ಮನೆ ನೋಡಿಕೊಂಡರೆ ಸಾಕು ಬೇಕಾದರೆ ಪಟ್ಟಣದಲ್ಲಿ ಕೆಲಸ ಮಾಡಬಹುದು ಎನ್ನುತ್ತಾಳೆ.

ಮೂರೂ ಮುಕ್ಕಾಲು ನಿಮಿಷದ ಈ ದೃಶ್ಯವನ್ನು 23 ಷಾಟ್‌ಗಳಲ್ಲಿ ನಿರೂಪಿಸಿದ್ದಾನೆ. ಈ ಮೂವರ ಅಷ್ಟೂ ಚಟುವಟಿಕೆಗಳನ್ನು ನಿರ್ದೇಶಕ ಹಲವಾರು ಅಳತೆಯ ಷಾಟ್‌ಗಳಲ್ಲಿ ನಿರೂಪಿಸುತ್ತಾನೆ. ತಾಯಿ 4 ಷಾಟ್‌ಗಳಲ್ಲಿ ಮಾತ್ರ ನೇರವಾಗಿ ಸ್ಪಷ್ಟವಾಗಿ ಕಾಣಿಸುತ್ತಾಳೆ. ದೃಶ್ಯ ಪೂರ್ತಿ ಅಪ್ಪ ಮಗನ ಚಟುವಟಿಕೆಯೇ ಪ್ರಧಾನ. ಮೂವರಿಂದಲೂ ಸೂಕ್ತವಾದಷ್ಟೆ ಅಭಿನಯವನ್ನು ತೆಗೆದಿದ್ದಾನೆ. ನಿರ್ದೇಶಕನ ಸೂಕ್ಷ್ಮ ಕುಸುರಿ ಕಲೆಯ ವಿವರಣಾತ್ಮಕವಾದ ಸಿನಿತಾಂತ್ರಿಕತೆಯ ಕೌಶಲವನ್ನ 3 ಷಾಟ್‌ಗಳಲ್ಲಿ ನೋಡಬಹುದು. 2,10 ಮತ್ತು 13ನೆ ಷಾಟ್‌ಗಳು ಮಿಡ್ ಷಾಟ್‌ಗಳು.

ಈ ಷಾಟ್‌ಗಳ ಮುನ್ನೆಲೆಯಲ್ಲಿ ಅಪ್ಪ ಮಗ ಇಬ್ಬರ ಚಟುವಟಿಕೆಗಳು ಸ್ಪಷ್ಟವಾದ ಬೆಳಕಿನಲ್ಲಿ ನಡೆಯುತ್ತದೆ. ಹಿನ್ನೆಲೆಯಲ್ಲಿ ಒಂದು ಹೆಂಗಸು ಅಷ್ಟೇನೂ ಬೆಳಕಿಲ್ಲದ ಹೊಗೆ ತುಂಬಿದ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತ್ತಿರುತ್ತಾಳೆ. ತನ್ನ ಪಾಡಿಗೆ ತಾನು. ಮಗನ ಉತ್ಸಾಹ ಅಪ್ಪನ ಮಗ್ನತೆಯ ಚಟುವಟಿಕೆಗಳೊಂದಿಗೆ ಅವರ ಸಂಭಾಷಣೆ ಕಥೆಯ ಮುಂದಿನ ನಡೆಗೆ ಪ್ರೇಕ್ಷಕರನ್ನು ಸಿದ್ಧ ಪಡಿಸುತ್ತಿದ್ದರೆ, ಹಿನ್ನೆಲೆಯ ಹೆಂಗಸು ಇವರಿಬ್ಬರ ಬದುಕಿನ ಕಂಡೂ ಕಾಣದಂಥ ಅಸ್ತಿತ್ವವಾಗಿ ಪ್ರೇಕ್ಷಕರ ಪ್ರಜ್ಞೆಯೊಳಕ್ಕೆ ಅರಿವೇ ಆಗದಂತೆ ಈ ಮೂರು ಷಾಟ್‌ಗಳಲ್ಲಿ ಸ್ಥಾಪನೆಯಾಗುತ್ತಾಳೆ. ಅವಳೊಬ್ಬಳನ್ನೆ ಹಿಡಿದಿರುವ 4 ಷಾಟ್‌ಗಳಿವೆ. ಅವುಗಳಲ್ಲಿ 2 ಕ್ಲೋಸ್ ಮಿಡ್ ಷಾಟ್‌ಗಳು ಮತ್ತೆರಡು ಕ್ಲೋಸ್ ಅಪ್‌ಗಳು.

ಮಗ ಕನ್ನಡಿಯ ಮುಂದೆ ನಿಂತು ಅಪ್ಪನ ಕ್ಯಾಪ್ ಹಾಕಿಕೊಂಡು ತನಗೆ ಅಪ್ಪನ ಯೂನಿಫಾರ್ಮ್ ದೊಗಲೆ ಎಂದು ಹೇಳುತ್ತಿರುವಾಗ ಅಡುಗೆ ಮಾಡುತ್ತಲೇ ಅವನನ್ನು ನೋಡುವ ಅವನ ಮಾತು ಮುಗಿದ ಮೇಲೆ ಅವನು ಕೆಲಸಕ್ಕೆ ಹೋಗುವ ಅಗತ್ಯ ತಮಗಿಲ್ಲ ಎಂದು ಹೇಳುವ 2 ಕ್ಲೋಸ್ ಮಿಡ್ ಷಾಟ್‌ಗಳಲ್ಲಿ ಅಪ್ಪ ಮಗನಲ್ಲಿರುವ ಉತ್ಸಾಹ ಅವಳಲ್ಲಿ ಇಲ್ಲ. ತನ್ನ ಅಸಮ್ಮತಿಗೆ ಗಂಡ ಮತ್ತು ಮಗನ ಮಾನ್ಯತೆ ಇಲ್ಲ ಎಂಬುದರ ಅರಿವಿನೊಂದಿಗೆ ಆಳವಾದ ನೋವಿದೆ. ಅಪ್ಪನಿಗೆ ತನ್ನ ಕಾಯಕದ ಜವಾಬ್ದಾರಿಯನ್ನು ಮಗನಿಗೆ ವಹಿಸುತ್ತಿರುವ ಉಮೇದು.

ಮಗನಿಗೆ ಮನೆಯಲ್ಲಿ ಒಬ್ಬರಾದರೂ ಕೇಡರ್ ಇರಲೇಬೇಕೆಂಬ ಲೌಕಿಕ ನಂಬಿಕೆ. ಕೊನೆಯಲ್ಲಿ ಅಪ್ಪ ಮಗ ತುಂಬಿದ ಅಂಚೆ ಚೀಲದ ಬಂದೋ ಬಸ್ತು ಮಾಡುವಾಗ ಅವಳ ಎರಡು ಕ್ಲೋಸ್ ಅಪ್‌ಗಳು ಬರುತ್ತವೆ. ಅವುಗಳು ಅವಳ ಆಳವಾದ ನೋವಿನ ಮತ್ತು ಅಸಹಾಯಕತೆಯ ಮುಖ ಭಾವವನ್ನು ತೋರಿಸುತ್ತವೆ. ಮಗನ ಆತುರ, ಅಪ್ಪನ ಸಾವಧಾನ ಮತ್ತು ತಾಯಿಯ ಮೂಕ ವೇದನೆ ಇವು ನನ್ನಂಥವರ ವಿಶ್ಲೇಷಣೆ ಇದ್ದರೂ ಇರದಿದ್ದರೂ ಪ್ರೇಕ್ಷಕರಿಗೆ ಅರಿವಿನ ಮಟ್ಟದಲ್ಲಿ ಮತ್ತು ಪ್ರಜ್ಞೆಯ ಆಳದಲ್ಲಿ ಈ ದೃಶ್ಯದ ಮೂಲಕ ಸಂವಹನವಾಗುವ ಅಂಶಗಳು.

ಈ ಸನ್ನಿವೇಶ ಕುರಸೋವಾರ ಸೆವೆನ್ ಸಮುರಾಯ್ ನೆನಪಿಸುತ್ತೆ

with one comment

 

ಥಿou ಚಿಡಿe gಡಿeಚಿಣ!  ಎಂದು ಪ್ರೀತಿಯಿಂದ ನಾಯಿಯನ್ನು ತಬ್ಬಿಕೊಳ್ಳುತ್ತಾನೆ. ಹಳ್ಳಿಯೊಂದನ್ನು ತಲುಪಲು ಹತ್ತಿರವಾಗುತ್ತದೆಂದು ಕೊರೆಯುವ ನೀರು ಹರಿಯುತ್ತಿರುವ ತೊರೆಯೊಂದನ್ನು ದಾಟಿದ ನಂತರ ಅಪ್ಪ ಮಗ ಸುಧಾರಿಸಿಕೊಳ್ಳುತ್ತಿರುತ್ತಾರೆ. ನಾಯಿಯು ಒಣ ಪುರಲೆಗಳನ್ನು ಆರಿಸಿ ತರುತ್ತದೆ. ಬೆಂಕಿ ಕಾಯಿಸುವುದು ಬೇಡ. ನಾವು ಹೊರಡೋಣ ಎನ್ನುವ ಮಗನಿಗೆ ಅಪ್ಪ ಬದುಕಿನಲ್ಲಿರಬೇಕಾದ ಸೌಜನ್ಯತೆಯನ್ನ ಅದರ ಆಸ್ಥೆಯನ್ನ ತಿರಸ್ಕರಿಸಬೇಡ ಎಂದು ಪ್ರಾಣಿಗಳೊಂದಿಗೂ ಸಹ ಇರಬೇಕಾದ ವಿನಮ್ರತೆಯನ್ನು ಹೇಳಿಕೊಡುತ್ತಾನೆ.  
ಪಯಣದುದ್ದಕ್ಕೂ ಅವರಿಬ್ಬರು ಪರಸ್ಪರರನ್ನು ಅರಿತುಕೊಂಡಿರುವುದರ ಮಿತಿ ಕೆಲವು ಘಟನೆಗಳ ಮೂಲಕ ವಿಸ್ತಾರವಾಗುತ್ತ ಹೋಗುತ್ತದೆ. ಪರಸ್ಪರರ ಬಗೆಗಿನ ಅರಿವು ಹೆಚ್ಚಾಗುತ್ತ ಹೋಗುತ್ತದೆ. ಈ ಶೀತದ ತೊರೆಯನ್ನು ದಾಟುವ ಪ್ರಸಂಗ ಮನಸ್ಸನ್ನು ತಟ್ಟುತ್ತದೆ. ಅಪ್ಪ ತನ್ನ ಕಾಲಿನ ಸಮಸ್ಯೆಯು ಪರ್ವತ ಪ್ರದೇಶಗಳ ಶೀತದಿಂದಾಗಿ ಉಲ್ಬಣಗಳ್ಳುತ್ತಿದ್ದುದರಿಂದಾಗಿ ಅಕಾಲಿಕ ನಿವೃತ್ತಿಯನ್ನು ಹೊಂದಿರುತ್ತಾನೆ. ಅದರಿಂದಾಗಿ ಮಗ ಮೊದಲು ಟಪಾಲು ಮೂಟೆಯನ್ನು ಆ ದಡಕ್ಕಿಟ್ಟು ವಾಪಸ್ಸು ಬಂದು ಅಪ್ಪನನ್ನು ಹೆಗಲ ಮೇಲೆ ಹೊತ್ತು ಪುನಃ ದಾಟುತ್ತಾನೆ. ಟಪಾಲು ಹೊರೆಯನ್ನು ಹೊತ್ತ ಮಗ ತೊರೆಯನ್ನು ದಾಟುವಾಗ ಹುಷಾರು ಎಂದು ಅಪ್ಪ ಹೇಳುತ್ತಾನೆ. ಅದಕ್ಕೆ ಮಗ ತಾನು ನದಿಯಲ್ಲಿ ಈಜೇ ಬೆಳದವನು ಎನ್ನುತ್ತಾನೆ. ಅಪ್ಪ, ನದಿಯಲ್ಲಿ ಚೆನ್ನಾಗಿ ಈಜುವವನು ತೊರೆಯಲ್ಲಿ ಚೆನ್ನಾಗಿ ನಡೆಯುತ್ತಾನೆ ಅಂತ ಏನಿಲ್ಲ. ಎನ್ನುತ್ತಾನೆ. ನೀನು ಹೊತ್ತು ಸಾಗಿಸುತ್ತಿರುವುದು ನಮ್ಮ ಮನೆಯ ಅಕ್ಕಿ ಮೂಟೆಯಲ್ಲ. ಎಂದು ಕೆಲಸದ ಜವಾಬ್ದಾರಿಯನ್ನೂ ತಿಳಿಸುತ್ತಾನೆ. ನಂತರ ಅಪ್ಪನನ್ನು ಹೊತ್ತು ಮಗ ನೀರನ್ನು ದಾಟುವಾಗಿನ ವಿದ್ಯಮಾನ ಮನೋಜ್ಞವಾಗಿದೆ. ಅಪ್ಪ ಮಗನ ಹೆಗಲ ಮೆಲೆ ಕೂಸುಮರಿ ಕುಳಿತಿದ್ದಾನೆ. ನಾಯಿ ಅಂಗರಕ್ಷಕನಂತೆ, ಮಾರ್ಗದರ್ಶಿಯಂತೆ, ಅಪ್ಪನ ಜೋಪಾನದ ಜವಾಬ್ದಾರಿ ತನ್ನ ಹೆಗಲ ಮೇಲೇ ಇದೆ ಎಂಬಂತೆ ಲೀಡ್ ಮಾಡುತ್ತಿದೆ. ನೀರಿನಲ್ಲಿ ಹೆಜ್ಜೆಯಿಡುತ್ತ ಮಗ ಯೋಚಿಸುತ್ತಾನೆ, ಊರಲ್ಲಿ ದೊಡ್ಡವರು ಹೇಳುತ್ತಿದ್ದರು, ಮಗ ಬೆಳೆದು ಅಪ್ಪನನ್ನು ಹೆಗಲ ಮೇಲೆ ಹೊರುತ್ತಾನೆ ಅಂತ. ನಾನು ಚಿಕ್ಕವನಿದ್ದಾಗ ಅಪ್ಪ ಭಾರೀ ಆಳಾಗಿ ಕಾಣಿಸುತ್ತಿದ್ದ. ನಾನ್ಯಾವಾಗ ಅಪ್ಪನನ್ನ ಹೊರುವುದು ಅಂತ ತಲೆ ಕೆಡಿಸಿಕೊಳ್ಳುತ್ತಿದ್ದೆ. ಅಪ್ಪನ ಮನಸ್ಸಿನಲ್ಲಿ ತಾನು ಪುಟ್ಟ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು  ಓಡಾಡುತ್ತಿದ್ದುದು ನೆನಪಾಗುತ್ತದೆ. ತನ್ನನ್ನು ಹೊತ್ತಿರುವ ಮಗನ ತಲೆಯನ್ನು ಮುದ್ದಿನ ಪ್ರಾಣಿಯ ಹಾಗೆ ತನ್ನ ಮುಖದಿಂದ ನೇವರಿಸುತ್ತಾನೆ. ಪುನಃ ಪುಟ್ಟ ಮಗನನ್ನು ಹೊತ್ತು ಜನಜಂಗುಳಿಯಲ್ಲಿ ಓಡಾಡಿದ್ದು ನೆನಪಾಗುತ್ತದೆ. ಅವನ ಕಣ್ಣಲ್ಲಿ ನೀರು ಮೂಡುತ್ತವೆ. ದಡ ತಲುಪಿದ ಮೇಲೆ ಇಲ್ಲಿನ ವಾತ್ಸಲ್ಯಪೂರಿತ ಮೂಡ್‌ಗೆ ಪೂರಕವಾಗಿ ನಾಯಿ ಒಣ ಪುರಲೆಗಳನ್ನು ತರುತ್ತದೆ. ಸುಧಾರಿಸಿಕೊಳ್ಳುತ್ತಿರುವಾಗ ಅಪ್ಪ ಕೇಳುತ್ತಾನೆ, ನಿನ್ನ ಕತ್ತಲ್ಲಿ (ಗಾಯದ)ಕಲೆ ಕಂಡೆ. ಅದಕ್ಕೆ ಮಗ ೧೫ ವರ್ಷಗಳ ಹಿಂದೆ ಆದದ್ದು ಅದು. ತಾನು ಅಮ್ಮನನ್ನು ನಿನಗೆ ತಿಳಿಸಬಾರದೆಂದು ಹೇಳಿದ್ದೆ ಅನ್ನುತ್ತಾನೆ. ಹೀಗೆ ಅಪ್ಪ ಮಗ ಪರಸ್ಪರ ಹೆಚ್ಚು ಅರ್ಥವಾಗುತ್ತ ಹೆಚ್ಚು ಅರ್ಥ ಮಾಡಿಕೊಳ್ಳುತ್ತ ಹತ್ತಿರವಾಗುತ್ತಾರೆ ಗೆಳಯರಾಗುತ್ತಾರೆ.   
ಮುಂದೆ ಹಳ್ಳಿಯೊಂದನ್ನು ತಲುಪ ಬೇಕಾದರೆ ಮಧ್ಯೆ ಕಡಿದಾದ ಇಳಿಜಾರು ಗುಡ್ಡವೊಂದನ್ನು ಹತ್ತಬೇಕಾಗುತ್ತದೆ. ಬುಡದಲ್ಲಿ ನಿಂತು ನಾಯಿ ಬೊಗಳಿದಾಗ ಆಕಾಶದಿಂದೆಂಬಂತೆ ರೊಯ್ಯನೆ ಹಗ್ಗವೊಂದು ಇಳಿ ಬೀಳುತ್ತದೆ. ನಾಯಿ ತನ್ನ ಪಾಡಿಗೆ ರೊಟೀನ್ ಎಂಬಂತೆ ಇಳಿಜಾರನ್ನು ಹತ್ತುತ್ತದೆ. ಮಗ ಟಪಾಲು ಮೂಟೆಯನ್ನು ಹೊತ್ತು ಹಗ್ಗವಿಡಿದು ಶ್ರಮದಿಂದ ಮೌಂಟನೆರಿಂಗ್ ಸಾಹಸಿಗಳಂತೆ ಹತ್ತುತ್ತಿರುತ್ತಾನೆ. ಕೆಳಗೆ ಅಪ್ಪ ಸಹ ಅದೇ ಹಗ್ಗವನ್ನು ಹಿಡಿದು ಹತ್ತುತ್ತಿರುತ್ತಾನೆ. ಮಗನ ಕಾಲು ತಪ್ಪಿ ದೊಡ್ಡ ಕಲ್ಲೊಂದು ಅಪ್ಪನ ಮೇಲೆ ಬೀಳಬೇಕು. ಅಪ್ಪ ಓರೆಯಾಗಿ ತಪ್ಪಿಸಿಕೊಳ್ಳುತ್ತಾನೆ. ಮೇಲೆ ಹೋದ ನಂತರ ಮಗನಿಗೆ ಗೊತ್ತಾಗುತ್ತದೆ ಹಿಂದೊಮ್ಮೆ ತನ್ನ ಅಪ್ಪ ಅಲ್ಲಿ ಜಾರಿ ರಾತ್ರಿಯೆಲ್ಲ ಪ್ರಜ್ಞೆಯಿಲ್ಲದೆ ಮಳೆಯಲ್ಲಿ ಬಿದ್ದಿದ್ದ. ಅದರಿಂದಾಗಿ  ಹಳ್ಳಿಯ ಹಿರಿಯನೊಬ್ಬ ತನ್ನ ಮೊಮ್ಮಗನಿಗೆ ಪೋಸ್ಟ್‌ಮ್ಯಾನ್ ಬರುವ ವೇಳೆಗೆ ಅಲ್ಲಿ ಕಾದುಕೊಂಡಿದ್ದು ಮೇಲಿನಿಂದ ಹಗ್ಗವನ್ನು ಎಸೆಯಲು ನಿಯೋಜಿಸಿದ್ದಾನೆ. ಅಪ್ಪ ಆ ಹುಡುಗನಿಗೆ ನೀನ್ಯಾಕೆ ಇಲ್ಲಿ ಬಂದು ಕಾಯುವ ತೊಂದರೆ ತೆಗೆದುಕೋತೀಯ ಅಂದರೆ ಆ ಹುಡುಗ ನೀನು ನಮಗಾಗಿ ತೊಂದರೆ ತೆಗೆದುಕೊಳ್ಳುವುದಿಲ್ಲವ ಎನ್ನುತ್ತಾನೆ.  
ಚಿತ್ರದ ಪ್ರಾರಂಭದಲ್ಲಿ ಅಪ್ಪ ಮಗನನ್ನು ಕಳುಹಿಸಿ ತಾನು ಮನೆಯಲ್ಲೇ ಉಳಿದುಕೊಳ್ಳುವವನಂತೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಡುತ್ತಾನೆ. ನಾಯಿಗೂ ಹಾಗೇ ಹೇಳುತ್ತಾನೆ. ಕೊನೆಯ ಕ್ಷಣದಲ್ಲಿ ಹೊರಟವನಂತೆ ತಾನೂ ಮಗನ ಜೊತೆಯಲ್ಲಿ ಹೊರಡುತ್ತಾನೆ. ಆದರೆ ಕುರುಡಿ ಅಜ್ಜಿಯೊಂದರ ಪತ್ರ ವಿಲೇವಾರಿಯಾದಾಗ ಮೊದಲೇ ತಾನೂ ಹೊರಡಲು ನಿರ್ಧರಿಸಿದ್ದ ಎಂಬುದು ಗೊತ್ತಾಗುತ್ತದೆ. ಆ ಪತ್ರವನ್ನು ತನ್ನಲ್ಲೇ ಇಟ್ಟುಕೊಂಡಿರುತ್ತಾನೆ. ಅದಕ್ಕೆ ಕಾರಣವಿದೆ. ಅವನೇ ಹೇಳುವಂತೆ ಅದೊಂದು ಅಮೂಲ್ಯವಾದ ಪತ್ರ. ಈ ಪ್ರಸಂಗ ಚಿತ್ರದ ಮನ ಕಲಕುವ ಸನ್ನಿವೇಶಗಳಲ್ಲಿ ಒಂದು. ಕುರುಡಿ ಅಜ್ಜಿಯೊಂದಕ್ಕೆ ಅವಳ ಮೊಮ್ಮಗನಿಂದ ಲಕೋಟೆ ಬಂದಿರುತ್ತದೆ. ಅದರೊಳಗೆ ಹಣದ ನೋಟಿರುತ್ತದೆ. ಮೊದಲೊಮ್ಮೆ ಆ ಹಣವನ್ನು ಅವಳ ಕಿರಿಯ ಮಗ ಲಪಟಾಯಿಸಿ ಬಿಟ್ಟಿರುತ್ತಾನೆ. ಮತ್ತೊಂದು ವಿಶೇಷ ಕಾರಣಕ್ಕಾಗಿ ಈ ವೈಯಕ್ತಿಕ ವಿಲೇವಾರಿ. ಅಜ್ಜಿ ಖಾಲಿ ಕಾಗದದ ಮಡಿಕೆಯಲ್ಲಿಟ್ಟದ್ದ ನೋಟನ್ನು ತೆಗೆದುಕೊಂಡು ಆ ಖಾಲಿ ಹಾಳೆಯನ್ನು ಓದು ಎಂದು ಕೊಡುತ್ತಾಳೆ. ಅಪ್ಪ ತಾನು ಓದುವುದಲ್ಲದೆ ಮಗನಿಂದಲೂ ಬಲವಂತವಾಗಿ ಓದಿಸುತ್ತಾನೆ. ಈ ಪ್ರಕ್ರಿಯೆಯಲ್ಲಿ ಮುಗುಮ್ಮಾಗೇ ಭಾಗವಹಿಸುವ ಮಗ ಕೊನೆಗೆ ಅಜ್ಜಿಯ ಮೊಮ್ಮಗನಾಗಿಬಿಡುತ್ತಾನೆ. ತನ್ನ ಕೈಯಲ್ಲಿ ಅಜ್ಜಿಯ ಕೈ ಇದ್ದಾಗ ಅಮ್ಮನ ನೆನಪಾಗಿತ್ತು ಅನ್ನುತ್ತಾನೆ.   
ಮುಂದಿನ ಹಳ್ಳಿಗೆ ಹೋಗುವಾಗ ಬತ್ತದ ಬೆಳೆಗೆ ಔಷಧಿ ಸಿಂಪಡಿಸುತ್ತಿರುವ ನಗುವ ಹೂವಿನಂಥ ಬುಡಕಟ್ಟು ಬಾಲೆಯೊಬ್ಬಳು ಸಿಗುತ್ತಾಳೆ. ಅಪ್ಪ ಮತ್ತು ನಾಯಿ ಅವಳಿಗೆ ಮಾಮೂಲಿ. ಈ ಸಾರಿ ಹೊಸಬನಾಗಿ ತರುಣ ಮಗನೂ ಬಂದಿದ್ದಾನೆ. ಈ ಊರಿನಲ್ಲಿ ಅಂದು ಮದುವೆಯೊಂದರ ಸಮಾರಂಭ ಬೇರೆ.  ಬುಡಕಟ್ಟು ತರುಣಿ ಮತ್ತು ಮಗನ ಎಲ್ಲೆ ಮೀರದ ತಾರುಣ್ಯದ ಒಡನಾಟ, ಸಮಾರಂಭದಲ್ಲಿ ಅವರ ನರ್ತನ ಎಲ್ಲ ಅಪ್ಪಟ ಹಿಗ್ಗು. ಮುಗ್ದ ಲವಲವಿಕೆ, ಸಂಭ್ರಮ, ಸಂತೋಷ ಮತ್ತು ಯೌವನದ ಚೈತನ್ಯಗಳಿಂದ ತುಂಬಿದ ಈ ವರ್ಣಮಯ ಪ್ರಸಂಗ ಅಪ್ಪನಲ್ಲಿ ತಾನು ಮಲೆನಾಡ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ನೆನಪನ್ನು ತರುತ್ತದೆ.    
ಹಗ್ಗದ ಸಹಾಯದಿಂದ ತಲುಪಬೇಕಾದ ಊರಿನಿಂದ ಕೆಳಗೆ ಬರುವಾಗ ದಾರಿಯಲ್ಲಿ ಅಪ್ಪ ಆ ಹುಡುಗಿಯ ಬಗ್ಗೆ ಏನೆನಿಸುತ್ತದೆಂದು ಮಗನನ್ನು ಕೇಳುತ್ತಾನೆ. ಅದಕ್ಕೆ ಮಗ, ನಮ್ಮ ಕಡೆಯ ಹುಡುಗಿಯರಿಗಿಂತ ಭಿನ್ನವಾಗಿದ್ದಾಳೆ. ಆದರೆ ನಾನು ಪರ್ವತಕನ್ಯೆಯನ್ನು ಮದುವೆಯಾಗುವುದು ಅನುಮಾನ ಎನ್ನುತ್ತಾನೆ. ಸಂಭಾಷಣೆ ಹೀಗೆ ಮುಂದುವರಿಯುತ್ತದೆ:
ಅಪ್ಪ: ಯಾಕೆ? ಅವರು(ಪರ್ವತ ಕನ್ಯೆಯರು) ಬುದ್ದಿವಂತರಲ್ಲದ ಪೆದ್ದರೆ?
ಮಗ: ಇಲ್ಲ. ಅವಳು ಬುದ್ದಿವಂತೆ. ಟ್ರಾನ್ಸಿಸ್ಟರ್ ರೇಡಿಯೋ ಮೇಲೆ ಬೋಗುಣಿಯನ್ನಿಟ್ಟು ಉತ್ತಮ ಶಬ್ದವನ್ನ ಉಂಟು ಮಾಡಿದಳು. ಅದನ್ನ ಸ್ಟೀರಿಯೋಫೋನಿ ಅಂತ ಕರೆದಳು.
ಅಪ್ಪ: ಬುಡಕಟ್ಟು ಹುಡುಗಿ ಬಡವಳು ಅಂತಾನಾ?
ಮಗ: ಅಲ್ಲ.
ಅಪ್ಪ: ಈ ಲೋಕದ ಮತ್ಯಾವ ಕಾರಣ?
ಮಗ: ಅಮ್ಮನ ತರ ಅವಳ ತವರನ್ನು ಶಾಶ್ವತವಾಗಿ ತೊರೆಯಬೇಕಾಗಬಹುದು ಅಂತ ಹೆದರಿಕೆ.  
ಅಪ್ಪನಿಗೆ ತನ್ನ ಹೆಂಡತಿಗೆ ತಾನು ಅರಿವೇ ಇಲ್ಲದೆ ಅನುದ್ದಿಶ್ಯಪೂರ್ವಕವಾಗಿ ಮಾಡಿರಬಹುದಾದ ಅನ್ಯಾಯ ಹೊಳೆಯುತ್ತದೆ. ಸಪ್ಪಗಾಗುತ್ತಾನೆ. ಆಗ ಅವರ ಮುಂದೆ ಪರ್ವತಕನ್ಯೆಯರ ಸಾಲೊಂದು ಹಾಡಿಕೊಂಡು ಹೋಗುತ್ತದೆ. ಅವರಲ್ಲಿ ಈ ತರುಣಿಯೂ ಇರುತ್ತಾಳೆ. ಈ ಪುಟ್ಟ ಸನ್ನಿವೇಶ ಕುರೋಸಾವರವರ ಸೆವೆನ್ ಸಾಮುರಾಯ್ ಚಿತ್ರದ ಒಂದು ಸನ್ನಿವೇಶವನ್ನು ನೆನಪಿಸುತ್ತದೆ. ಗ್ರಾಮದವರಿಗೆ ಸಹಾಯ ಮಾಡಿ ತಮ್ಮ ನಾಲ್ವರು ಸಹ ಸಾಮುರಾಯ್‌ಗಳನ್ನು ಕಳೆದುಕೊಂಡಿರುವ ಇಬ್ಬರು ಹಿರಿಯ ಒಬ್ಬ ತರುಣ ಸಾಮುರಾಯ್‌ಗಳು ಹೀಗೇ ನಿಂತು ನೋಡುತ್ತಿರುತ್ತಾರೆ. ಹೀಗೇ ಅವರ ಮುಂದೆ ಹುಡುಗಿಯರು ಸಾಗುತ್ತಾರೆ. ಅವರಲ್ಲಿ ಒಬ್ಬಳು ತರುಣ ಸಾಮುರಾಯ್‌ನ ಪ್ರೇಯಸಿ. ಅವಳನ್ನು ನೋಡಿದ ತರುಣ ಸಾಮುರಾಯ್, ತನ್ನ ಸೀನಿಯರ್‌ಗಳನ್ನು ಬಿಟ್ಟು ಹುಡುಗಿಯರ ಸಾಲಿನ ಬಾಲವಾಗುತ್ತಾನೆ. ಕೊನೆಗೂ ಗೆದ್ದವರು ಗ್ರಾಮಸ್ಥರು ಎಂದು ನಗಾಡುತ್ತ ಹಿರಿಯ ಸಾಮುರಾಯ್‌ಗಳು ನಿಷ್ಕ್ರಮಿಸುತ್ತಾರೆ. ಪೋಸ್ಟ್iನ್ ಇನ ದಿ ಮೌಂಟೈನ್ಸ್ ಚಿತ್ರದ ಈ ಸನ್ನಿವೇಶವನ್ನು ನಿರ್ದೇಶಕ ಕುರೋಸಾವರವರಿಗೆ ಟ್ರಿಬ್ಯೂಟ್ ಆಗಿ ಮಾಡಿದ್ದಾನೆ ಅನಿಸುತ್ತದೆ. ಏಕೆಂದರೆ ಅವನ ಸಾಮರ್ಥ್ಯದ ನಿರ್ದೇಶಕ ಕುರೋಸಾವರವರ ಪ್ರಭಾವವನ್ನು ಅರಗಿಸಿಕೊಳ್ಳಬಲ್ಲವನು.

ನಮ್ಮ ಹೊಸ ಅಂಕಣ ಸಿನಿಮಾ ಸ್ಕೋಪ್ ನ ಎರಡನೇ ಕಂತು ಪ್ರಕಟಿಸಲಾಗಿದೆ. ಚೀನಿ ಚಿತ್ರ ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್  ಕುರಿತು ಪರಮೇಶ್ ಗುರುಸ್ವಾಮಿ ವಿವರಿಸುತ್ತಾ, ಈ ಪುಟ್ಟ ಸನ್ನಿವೇಶ ಕುರೋಸಾವರವರ ಸೆವೆನ್ ಸಾಮುರಾಯ್ ಚಿತ್ರದ ಒಂದು ಸನ್ನಿವೇಶವನ್ನು ನೆನಪಿಸುತ್ತದೆ ಎನ್ನುತ್ತಾರೆ.

“you are the great”  ಎಂದು ಪ್ರೀತಿಯಿಂದ ನಾಯಿಯನ್ನು ತಬ್ಬಿಕೊಳ್ಳುತ್ತಾನೆ. ಹಳ್ಳಿಯೊಂದನ್ನು ತಲುಪಲು ಹತ್ತಿರವಾಗುತ್ತದೆಂದು ಕೊರೆಯುವ ನೀರು ಹರಿಯುತ್ತಿರುವ ತೊರೆಯೊಂದನ್ನು ದಾಟಿದ ನಂತರ ಅಪ್ಪ ಮಗ ಸುಧಾರಿಸಿಕೊಳ್ಳುತ್ತಿರುತ್ತಾರೆ. ನಾಯಿಯು ಒಣ ಪುರಲೆಗಳನ್ನು ಆರಿಸಿ ತರುತ್ತದೆ. ಬೆಂಕಿ ಕಾಯಿಸುವುದು ಬೇಡ. ನಾವು ಹೊರಡೋಣ ಎನ್ನುವ ಮಗನಿಗೆ ಅಪ್ಪ ಬದುಕಿನಲ್ಲಿರಬೇಕಾದ ಸೌಜನ್ಯತೆಯನ್ನ ಅದರ ಆಸ್ಥೆಯನ್ನ ತಿರಸ್ಕರಿಸಬೇಡ ಎಂದು ಪ್ರಾಣಿಗಳೊಂದಿಗೂ ಸಹ ಇರಬೇಕಾದ ವಿನಮ್ರತೆಯನ್ನು ಹೇಳಿಕೊಡುತ್ತಾನೆ.  

ಪಯಣದುದ್ದಕ್ಕೂ ಅವರಿಬ್ಬರು ಪರಸ್ಪರರನ್ನು ಅರಿತುಕೊಂಡಿರುವುದರ ಮಿತಿ ಕೆಲವು ಘಟನೆಗಳ ಮೂಲಕ ವಿಸ್ತಾರವಾಗುತ್ತ ಹೋಗುತ್ತದೆ. ಪರಸ್ಪರರ ಬಗೆಗಿನ ಅರಿವು ಹೆಚ್ಚಾಗುತ್ತ ಹೋಗುತ್ತದೆ. ಈ ಶೀತದ ತೊರೆಯನ್ನು ದಾಟುವ ಪ್ರಸಂಗ ಮನಸ್ಸನ್ನು ತಟ್ಟುತ್ತದೆ. ಅಪ್ಪ ತನ್ನ ಕಾಲಿನ ಸಮಸ್ಯೆಯು ಪರ್ವತ ಪ್ರದೇಶಗಳ ಶೀತದಿಂದಾಗಿ ಉಲ್ಬಣಗಳ್ಳುತ್ತಿದ್ದುದರಿಂದಾಗಿ ಅಕಾಲಿಕ ನಿವೃತ್ತಿಯನ್ನು ಹೊಂದಿರುತ್ತಾನೆ. ಅದರಿಂದಾಗಿ ಮಗ ಮೊದಲು ಟಪಾಲು ಮೂಟೆಯನ್ನು ಆ ದಡಕ್ಕಿಟ್ಟು ವಾಪಸ್ಸು ಬಂದು ಅಪ್ಪನನ್ನು ಹೆಗಲ ಮೇಲೆ ಹೊತ್ತು ಪುನಃ ದಾಟುತ್ತಾನೆ. ಟಪಾಲು ಹೊರೆಯನ್ನು ಹೊತ್ತ ಮಗ ತೊರೆಯನ್ನು ದಾಟುವಾಗ ಹುಷಾರು ಎಂದು ಅಪ್ಪ ಹೇಳುತ್ತಾನೆ. ಅದಕ್ಕೆ ಮಗ ತಾನು ನದಿಯಲ್ಲಿ ಈಜೇ ಬೆಳದವನು ಎನ್ನುತ್ತಾನೆ. ಅಪ್ಪ, ನದಿಯಲ್ಲಿ ಚೆನ್ನಾಗಿ ಈಜುವವನು ತೊರೆಯಲ್ಲಿ ಚೆನ್ನಾಗಿ ನಡೆಯುತ್ತಾನೆ ಅಂತ ಏನಿಲ್ಲ. ಎನ್ನುತ್ತಾನೆ. ನೀನು ಹೊತ್ತು ಸಾಗಿಸುತ್ತಿರುವುದು ನಮ್ಮ ಮನೆಯ ಅಕ್ಕಿ ಮೂಟೆಯಲ್ಲ. ಎಂದು ಕೆಲಸದ ಜವಾಬ್ದಾರಿಯನ್ನೂ ತಿಳಿಸುತ್ತಾನೆ. ನಂತರ ಅಪ್ಪನನ್ನು ಹೊತ್ತು ಮಗ ನೀರನ್ನು ದಾಟುವಾಗಿನ ವಿದ್ಯಮಾನ ಮನೋಜ್ಞವಾಗಿದೆ. ಅಪ್ಪ ಮಗನ ಹೆಗಲ ಮೆಲೆ ಕೂಸುಮರಿ ಕುಳಿತಿದ್ದಾನೆ. ನಾಯಿ ಅಂಗರಕ್ಷಕನಂತೆ, ಮಾರ್ಗದರ್ಶಿಯಂತೆ, ಅಪ್ಪನ ಜೋಪಾನದ ಜವಾಬ್ದಾರಿ ತನ್ನ ಹೆಗಲ ಮೇಲೇ ಇದೆ ಎಂಬಂತೆ ಲೀಡ್ ಮಾಡುತ್ತಿದೆ. ನೀರಿನಲ್ಲಿ ಹೆಜ್ಜೆಯಿಡುತ್ತ ಮಗ ಯೋಚಿಸುತ್ತಾನೆ, ಊರಲ್ಲಿ ದೊಡ್ಡವರು ಹೇಳುತ್ತಿದ್ದರು, ಮಗ ಬೆಳೆದು ಅಪ್ಪನನ್ನು ಹೆಗಲ ಮೇಲೆ ಹೊರುತ್ತಾನೆ ಅಂತ. ನಾನು ಚಿಕ್ಕವನಿದ್ದಾಗ ಅಪ್ಪ ಭಾರೀ ಆಳಾಗಿ ಕಾಣಿಸುತ್ತಿದ್ದ.

ನಾನ್ಯಾವಾಗ ಅಪ್ಪನನ್ನ ಹೊರುವುದು ಅಂತ ತಲೆ ಕೆಡಿಸಿಕೊಳ್ಳುತ್ತಿದ್ದೆ. ಅಪ್ಪನ ಮನಸ್ಸಿನಲ್ಲಿ ತಾನು ಪುಟ್ಟ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು  ಓಡಾಡುತ್ತಿದ್ದುದು ನೆನಪಾಗುತ್ತದೆ. ತನ್ನನ್ನು ಹೊತ್ತಿರುವ ಮಗನ ತಲೆಯನ್ನು ಮುದ್ದಿನ ಪ್ರಾಣಿಯ ಹಾಗೆ ತನ್ನ ಮುಖದಿಂದ ನೇವರಿಸುತ್ತಾನೆ. ಪುನಃ ಪುಟ್ಟ ಮಗನನ್ನು ಹೊತ್ತು ಜನಜಂಗುಳಿಯಲ್ಲಿ ಓಡಾಡಿದ್ದು ನೆನಪಾಗುತ್ತದೆ. ಅವನ ಕಣ್ಣಲ್ಲಿ ನೀರು ಮೂಡುತ್ತವೆ. ದಡ ತಲುಪಿದ ಮೇಲೆ ಇಲ್ಲಿನ ವಾತ್ಸಲ್ಯಪೂರಿತ ಮೂಡ್‌ಗೆ ಪೂರಕವಾಗಿ ನಾಯಿ ಒಣ ಪುರಲೆಗಳನ್ನು ತರುತ್ತದೆ. ಸುಧಾರಿಸಿಕೊಳ್ಳುತ್ತಿರುವಾಗ ಅಪ್ಪ ಕೇಳುತ್ತಾನೆ, ನಿನ್ನ ಕತ್ತಲ್ಲಿ (ಗಾಯದ)ಕಲೆ ಕಂಡೆ. ಅದಕ್ಕೆ ಮಗ ೧೫ ವರ್ಷಗಳ ಹಿಂದೆ ಆದದ್ದು ಅದು. ತಾನು ಅಮ್ಮನನ್ನು ನಿನಗೆ ತಿಳಿಸಬಾರದೆಂದು ಹೇಳಿದ್ದೆ ಅನ್ನುತ್ತಾನೆ. ಹೀಗೆ ಅಪ್ಪ ಮಗ ಪರಸ್ಪರ ಹೆಚ್ಚು ಅರ್ಥವಾಗುತ್ತ ಹೆಚ್ಚು ಅರ್ಥ ಮಾಡಿಕೊಳ್ಳುತ್ತ ಹತ್ತಿರವಾಗುತ್ತಾರೆ ಗೆಳೆಯರಾಗುತ್ತಾರೆ.   

ಮುಂದೆ ಹಳ್ಳಿಯೊಂದನ್ನು ತಲುಪ ಬೇಕಾದರೆ ಮಧ್ಯೆ ಕಡಿದಾದ ಇಳಿಜಾರು ಗುಡ್ಡವೊಂದನ್ನು ಹತ್ತಬೇಕಾಗುತ್ತದೆ. ಬುಡದಲ್ಲಿ ನಿಂತು ನಾಯಿ ಬೊಗಳಿದಾಗ ಆಕಾಶದಿಂದೆಂಬಂತೆ ರೊಯ್ಯನೆ ಹಗ್ಗವೊಂದು ಇಳಿ ಬೀಳುತ್ತದೆ. ನಾಯಿ ತನ್ನ ಪಾಡಿಗೆ ರೊಟೀನ್ ಎಂಬಂತೆ ಇಳಿಜಾರನ್ನು ಹತ್ತುತ್ತದೆ. ಮಗ ಟಪಾಲು ಮೂಟೆಯನ್ನು ಹೊತ್ತು ಹಗ್ಗವಿಡಿದು ಶ್ರಮದಿಂದ ಮೌಂಟನೆರಿಂಗ್ ಸಾಹಸಿಗಳಂತೆ ಹತ್ತುತ್ತಿರುತ್ತಾನೆ. ಕೆಳಗೆ ಅಪ್ಪ ಸಹ ಅದೇ ಹಗ್ಗವನ್ನು ಹಿಡಿದು ಹತ್ತುತ್ತಿರುತ್ತಾನೆ. ಮಗನ ಕಾಲು ತಪ್ಪಿ ದೊಡ್ಡ ಕಲ್ಲೊಂದು ಅಪ್ಪನ ಮೇಲೆ ಬೀಳಬೇಕು. ಅಪ್ಪ ಓರೆಯಾಗಿ ತಪ್ಪಿಸಿಕೊಳ್ಳುತ್ತಾನೆ. ಮೇಲೆ ಹೋದ ನಂತರ ಮಗನಿಗೆ ಗೊತ್ತಾಗುತ್ತದೆ ಹಿಂದೊಮ್ಮೆ ತನ್ನ ಅಪ್ಪ ಅಲ್ಲಿ ಜಾರಿ ರಾತ್ರಿಯೆಲ್ಲ ಪ್ರಜ್ಞೆಯಿಲ್ಲದೆ ಮಳೆಯಲ್ಲಿ ಬಿದ್ದಿದ್ದ. ಅದರಿಂದಾಗಿ  ಹಳ್ಳಿಯ ಹಿರಿಯನೊಬ್ಬ ತನ್ನ ಮೊಮ್ಮಗನಿಗೆ ಪೋಸ್ಟ್‌ಮ್ಯಾನ್ ಬರುವ ವೇಳೆಗೆ ಅಲ್ಲಿ ಕಾದುಕೊಂಡಿದ್ದು ಮೇಲಿನಿಂದ ಹಗ್ಗವನ್ನು ಎಸೆಯಲು ನಿಯೋಜಿಸಿದ್ದಾನೆ. ಅಪ್ಪ ಆ ಹುಡುಗನಿಗೆ ನೀನ್ಯಾಕೆ ಇಲ್ಲಿ ಬಂದು ಕಾಯುವ ತೊಂದರೆ ತೆಗೆದುಕೋತೀಯ ಅಂದರೆ ಆ ಹುಡುಗ ನೀನು ನಮಗಾಗಿ ತೊಂದರೆ ತೆಗೆದುಕೊಳ್ಳುವುದಿಲ್ಲವ ಎನ್ನುತ್ತಾನೆ.  

ಚಿತ್ರದ ಪ್ರಾರಂಭದಲ್ಲಿ ಅಪ್ಪ ಮಗನನ್ನು ಕಳುಹಿಸಿ ತಾನು ಮನೆಯಲ್ಲೇ ಉಳಿದುಕೊಳ್ಳುವವನಂತೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಡುತ್ತಾನೆ. ನಾಯಿಗೂ ಹಾಗೇ ಹೇಳುತ್ತಾನೆ. ಕೊನೆಯ ಕ್ಷಣದಲ್ಲಿ ಹೊರಟವನಂತೆ ತಾನೂ ಮಗನ ಜೊತೆಯಲ್ಲಿ ಹೊರಡುತ್ತಾನೆ. ಆದರೆ ಕುರುಡಿ ಅಜ್ಜಿಯೊಂದರ ಪತ್ರ ವಿಲೇವಾರಿಯಾದಾಗ ಮೊದಲೇ ತಾನೂ ಹೊರಡಲು ನಿರ್ಧರಿಸಿದ್ದ ಎಂಬುದು ಗೊತ್ತಾಗುತ್ತದೆ. ಆ ಪತ್ರವನ್ನು ತನ್ನಲ್ಲೇ ಇಟ್ಟುಕೊಂಡಿರುತ್ತಾನೆ. ಅದಕ್ಕೆ ಕಾರಣವಿದೆ. ಅವನೇ ಹೇಳುವಂತೆ ಅದೊಂದು ಅಮೂಲ್ಯವಾದ ಪತ್ರ. ಈ ಪ್ರಸಂಗ ಚಿತ್ರದ ಮನ ಕಲಕುವ ಸನ್ನಿವೇಶಗಳಲ್ಲಿ ಒಂದು. ಕುರುಡಿ ಅಜ್ಜಿಯೊಂದಕ್ಕೆ ಅವಳ ಮೊಮ್ಮಗನಿಂದ ಲಕೋಟೆ ಬಂದಿರುತ್ತದೆ. ಅದರೊಳಗೆ ಹಣದ ನೋಟಿರುತ್ತದೆ. ಮೊದಲೊಮ್ಮೆ ಆ ಹಣವನ್ನು ಅವಳ ಕಿರಿಯ ಮಗ ಲಪಟಾಯಿಸಿ ಬಿಟ್ಟಿರುತ್ತಾನೆ. ಮತ್ತೊಂದು ವಿಶೇಷ ಕಾರಣಕ್ಕಾಗಿ ಈ ವೈಯಕ್ತಿಕ ವಿಲೇವಾರಿ. ಅಜ್ಜಿ ಖಾಲಿ ಕಾಗದದ ಮಡಿಕೆಯಲ್ಲಿಟ್ಟದ್ದ ನೋಟನ್ನು ತೆಗೆದುಕೊಂಡು ಆ ಖಾಲಿ ಹಾಳೆಯನ್ನು ಓದು ಎಂದು ಕೊಡುತ್ತಾಳೆ. ಅಪ್ಪ ತಾನು ಓದುವುದಲ್ಲದೆ ಮಗನಿಂದಲೂ ಬಲವಂತವಾಗಿ ಓದಿಸುತ್ತಾನೆ. ಈ ಪ್ರಕ್ರಿಯೆಯಲ್ಲಿ ಮುಗುಮ್ಮಾಗೇ ಭಾಗವಹಿಸುವ ಮಗ ಕೊನೆಗೆ ಅಜ್ಜಿಯ ಮೊಮ್ಮಗನಾಗಿಬಿಡುತ್ತಾನೆ. ತನ್ನ ಕೈಯಲ್ಲಿ ಅಜ್ಜಿಯ ಕೈ ಇದ್ದಾಗ ಅಮ್ಮನ ನೆನಪಾಗಿತ್ತು ಅನ್ನುತ್ತಾನೆ.   

ಮುಂದಿನ ಹಳ್ಳಿಗೆ ಹೋಗುವಾಗ ಬತ್ತದ ಬೆಳೆಗೆ ಔಷಧಿ ಸಿಂಪಡಿಸುತ್ತಿರುವ ನಗುವ ಹೂವಿನಂಥ ಬುಡಕಟ್ಟು ಬಾಲೆಯೊಬ್ಬಳು ಸಿಗುತ್ತಾಳೆ. ಅಪ್ಪ ಮತ್ತು ನಾಯಿ ಅವಳಿಗೆ ಮಾಮೂಲಿ. ಈ ಸಾರಿ ಹೊಸಬನಾಗಿ ತರುಣ ಮಗನೂ ಬಂದಿದ್ದಾನೆ. ಈ ಊರಿನಲ್ಲಿ ಅಂದು ಮದುವೆಯೊಂದರ ಸಮಾರಂಭ ಬೇರೆ.  ಬುಡಕಟ್ಟು ತರುಣಿ ಮತ್ತು ಮಗನ ಎಲ್ಲೆ ಮೀರದ ತಾರುಣ್ಯದ ಒಡನಾಟ, ಸಮಾರಂಭದಲ್ಲಿ ಅವರ ನರ್ತನ ಎಲ್ಲ ಅಪ್ಪಟ ಹಿಗ್ಗು. ಮುಗ್ದ ಲವಲವಿಕೆ, ಸಂಭ್ರಮ, ಸಂತೋಷ ಮತ್ತು ಯೌವನದ ಚೈತನ್ಯಗಳಿಂದ ತುಂಬಿದ ಈ ವರ್ಣಮಯ ಪ್ರಸಂಗ ಅಪ್ಪನಲ್ಲಿ ತಾನು ಮಲೆನಾಡ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ನೆನಪನ್ನು ತರುತ್ತದೆ.    

ಹಗ್ಗದ ಸಹಾಯದಿಂದ ತಲುಪಬೇಕಾದ ಊರಿನಿಂದ ಕೆಳಗೆ ಬರುವಾಗ ದಾರಿಯಲ್ಲಿ ಅಪ್ಪ ಆ ಹುಡುಗಿಯ ಬಗ್ಗೆ ಏನೆನಿಸುತ್ತದೆಂದು ಮಗನನ್ನು ಕೇಳುತ್ತಾನೆ. ಅದಕ್ಕೆ ಮಗ, ನಮ್ಮ ಕಡೆಯ ಹುಡುಗಿಯರಿಗಿಂತ ಭಿನ್ನವಾಗಿದ್ದಾಳೆ. ಆದರೆ ನಾನು ಪರ್ವತಕನ್ಯೆಯನ್ನು ಮದುವೆಯಾಗುವುದು ಅನುಮಾನ ಎನ್ನುತ್ತಾನೆ. ಸಂಭಾಷಣೆ ಹೀಗೆ ಮುಂದುವರಿಯುತ್ತದೆ:

ಅಪ್ಪ: ಯಾಕೆ? ಅವರು(ಪರ್ವತ ಕನ್ಯೆಯರು) ಬುದ್ದಿವಂತರಲ್ಲದ ಪೆದ್ದರೆ?

ಮಗ: ಇಲ್ಲ. ಅವಳು ಬುದ್ದಿವಂತೆ. ಟ್ರಾನ್ಸಿಸ್ಟರ್ ರೇಡಿಯೋ ಮೇಲೆ ಬೋಗುಣಿಯನ್ನಿಟ್ಟು ಉತ್ತಮ ಶಬ್ದವನ್ನ ಉಂಟು ಮಾಡಿದಳು. ಅದನ್ನ ಸ್ಟೀರಿಯೋಫೋನಿ ಅಂತ ಕರೆದಳು.

ಅಪ್ಪ: ಬುಡಕಟ್ಟು ಹುಡುಗಿ ಬಡವಳು ಅಂತಾನಾ?

ಮಗ: ಅಲ್ಲ.

ಅಪ್ಪ: ಈ ಲೋಕದ ಮತ್ಯಾವ ಕಾರಣ?

ಮಗ: ಅಮ್ಮನ ತರ ಅವಳ ತವರನ್ನು ಶಾಶ್ವತವಾಗಿ ತೊರೆಯಬೇಕಾಗಬಹುದು ಅಂತ ಹೆದರಿಕೆ.  

ಅಪ್ಪನಿಗೆ ತನ್ನ ಹೆಂಡತಿಗೆ ತಾನು ಅರಿವೇ ಇಲ್ಲದೆ ಅನುದ್ದಿಶ್ಯಪೂರ್ವಕವಾಗಿ ಮಾಡಿರಬಹುದಾದ ಅನ್ಯಾಯ ಹೊಳೆಯುತ್ತದೆ. ಸಪ್ಪಗಾಗುತ್ತಾನೆ. ಆಗ ಅವರ ಮುಂದೆ ಪರ್ವತಕನ್ಯೆಯರ ಸಾಲೊಂದು ಹಾಡಿಕೊಂಡು ಹೋಗುತ್ತದೆ. ಅವರಲ್ಲಿ ಈ ತರುಣಿಯೂ ಇರುತ್ತಾಳೆ.

ಈ ಪುಟ್ಟ ಸನ್ನಿವೇಶ ಕುರೋಸಾವರವರ ಸೆವೆನ್ ಸಾಮುರಾಯ್ ಚಿತ್ರದ ಒಂದು ಸನ್ನಿವೇಶವನ್ನು ನೆನಪಿಸುತ್ತದೆ. ಗ್ರಾಮದವರಿಗೆ ಸಹಾಯ ಮಾಡಿ ತಮ್ಮ ನಾಲ್ವರು ಸಹ ಸಾಮುರಾಯ್‌ಗಳನ್ನು ಕಳೆದುಕೊಂಡಿರುವ ಇಬ್ಬರು ಹಿರಿಯ ಒಬ್ಬ ತರುಣ ಸಾಮುರಾಯ್‌ಗಳು ಹೀಗೇ ನಿಂತು ನೋಡುತ್ತಿರುತ್ತಾರೆ. ಹೀಗೇ ಅವರ ಮುಂದೆ ಹುಡುಗಿಯರು ಸಾಗುತ್ತಾರೆ. ಅವರಲ್ಲಿ ಒಬ್ಬಳು ತರುಣ ಸಾಮುರಾಯ್‌ನ ಪ್ರೇಯಸಿ. ಅವಳನ್ನು ನೋಡಿದ ತರುಣ ಸಾಮುರಾಯ್, ತನ್ನ ಸೀನಿಯರ್‌ಗಳನ್ನು ಬಿಟ್ಟು ಹುಡುಗಿಯರ ಸಾಲಿನ ಬಾಲವಾಗುತ್ತಾನೆ. ಕೊನೆಗೂ ಗೆದ್ದವರು ಗ್ರಾಮಸ್ಥರು ಎಂದು ನಗಾಡುತ್ತ ಹಿರಿಯ ಸಾಮುರಾಯ್‌ಗಳು ನಿಷ್ಕ್ರಮಿಸುತ್ತಾರೆ. ಪೋಸ್ಟ್ ಮ್ಯಾನ್ ಇನ್ ದಿ ಮೌಂಟೈನ್ಸ್ ಚಿತ್ರದ ಈ ಸನ್ನಿವೇಶವನ್ನು ನಿರ್ದೇಶಕ ಕುರೋಸಾವರವರಿಗೆ ಟ್ರಿಬ್ಯೂಟ್ ಆಗಿ ಮಾಡಿದ್ದಾನೆ ಅನಿಸುತ್ತದೆ. ಏಕೆಂದರೆ ಅವನ ಸಾಮರ್ಥ್ಯದ ನಿರ್ದೇಶಕ ಕುರೋಸಾವರವರ ಪ್ರಭಾವವನ್ನು ಅರಗಿಸಿಕೊಳ್ಳಬಲ್ಲವನು. (ಮುಂದಿನ ಕಂತು ಸದ್ಯವೇ)

ಹೊಸ ಅಂಕಣದಲ್ಲಿ “ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್ಸ್”

with 2 comments

ನಮ್ಮಲ್ಲಿ ಹೊಸದಾಗಿ ಆರಂಭವಾಗಿರುವ ಅಂಕಣ ಸಿನಿಮಾ “ಸ್ಕೋಪ್’.   ಒಂದು ಚಿತ್ರದ ಬಗ್ಗೆ ಕೂಲಂಕಷ ಅಧ್ಯಯನವನ್ನು ಕೈಗೊಳ್ಳುವ ನೆಲೆಯಿದು. ಈ ಮೂಲಕ ಸಿನಿಮಾವನ್ನು ಅರ್ಥಮಾಡಿಕೊಳ್ಳುವ ಬಗೆ. ಒಂದು ರೀತಿಯಲ್ಲಿ ಅಕಾಡೆಮಿಕ್ ನೆಲೆಯಲ್ಲಿರುತ್ತದೆ. ನಮ್ಮ ನೆಚ್ಚಿನ ಸಿನಿ ತಜ್ಞ ಪರಮೇಶ್ ಗುರುಸ್ವಾಮಿ ಸಿನಿಮಾಗಳನ್ನು ಆಗಾಗ್ಗೆ ವಿಶ್ಲೇಷಿಸುವರು. ಬರಹ ಅಧ್ಯಯನ ನೆಲೆಯಲ್ಲಿರುವುದರಿಂದ ಮೂರ್ನಾಲ್ಕು ಕಂತುಗಳಲ್ಲಿ ಪ್ರಕಟವಾಗುತ್ತದೆ. ಇದನ್ನು ಓದಿ ಪ್ರತಿಕ್ರಿಯಿಸಿ. ಸಾಂಗತ್ಯ ಬರಿದೇ ಸಿನಿಮಾ ಅನಿಸಿಕೆಗಳನ್ನು ಹೇಳುವುದಿಲ್ಲ ; ಸಿನಿಮಾವನ್ನು ಎಲ್ಲರೊಳಗೆ ಬೆಳೆಸುವ ಪ್ರಯತ್ನ ಅದರದ್ದು. ಆ ನೆಲೆಯಲ್ಲಿ ಈ ಅಂಕಣ.

ಪ್ರಾರಂಭದಲ್ಲಿ ಮಂಜಿನಿಂದಾವೃತವಾದ ಸುಂದರವಾದ ಮಲೆನಾಡಿನ ಹಲವು ಮನೆಗಳ ಗುಂಪಿನ ಟಾಪ್ ಆಂಗಲ್ ಷಾಟ್ (ಣoಠಿ ಚಿಟಿgಟe shoಣ)ಫೇಡ್ ಇನ್(ಜಿಚಿಜe iಟಿ ) ಆಗುತ್ತದೆ.  ಇದು ಗದ್ದೆಗಳ ಅಂಚಿಗಿರುವ ಮಂಜಿನಿಂದಾವೃತವಾದ ಮನೆಗಳ, ಆ ಮನೆಗಳ ಹಿಂದೆ ಪುಟ್ಟ ಗುಡ್ಡ ಮತ್ತು ಮರಗಳಿರುವ ಪ್ಯಾನ್ ಷಾಟ್(ಠಿಚಿಟಿ shoಣ)ಗೆ ಡಿಸಾಲ್ವ್(ಜissoಟve)ಆಗುತ್ತದೆ. ಗದ್ದೆಗಳ ಮಧ್ಯದಲ್ಲೇ ಊರಿಗೆ ಸಾಗಿರುವ ಬಂಡಿ ರಸ್ತೆಯಿದೆ. ಈ ಷಾಟ್ ಕೊನೆಯಲ್ಲಿ ಊರಿನ ಕಾಲು ಹಾದಿಯಿಂದ ಮನೆಯೊಂದರ ಹಿತ್ತಿಲಿಗೆ ಪ್ಯಾನ್ ಆಗುವ ಷಾಟ್‌ಗೆ ಡಿಸಾಲ್ವ್ ಆಗುತ್ತದೆ. ಆ ಮನೆಯ ಗೋಡೆಯಲ್ಲಿರುವ ಪುಟ್ಟ ಕಿಟಕಿಯಿಂದ ಒಳಗೆ ಉರಿಯುತ್ತಿರುವ ದೀಪದ ಕಿತ್ತಳೆ ರಂಗಿನ ಬೆಳಕು ಮಿಣಕುತ್ತಿದೆ. ಮೂರು ಷಾಟ್‌ಗಳ ಈ ಸಂಕಲನ ತುಣುಕು ಸುಭಗ ಸಂಕಲನ ತಂತ್ರದಿಂದ ಇಡೀ ಚಿತ್ರದ ನವಿರುತನವನ್ನು ಪರ್ವತ ಪ್ರದೇಶದ ಹಸಿರು, ಅಲ್ಲಲ್ಲೆ ಹಾಸಿದಂತಿರುವ ಬಿಳಿ ಮಂಜು,  ಮಲೆನಾಡಿನ ಶೀತ ಮತ್ತು ಚಳಿ, ಒಟ್ಟಾಗಿರುವ ಬೆಚ್ಚಗಿನ ಮನೆಗಳು ಹಾಗು ಜೀವಂತಿಕೆಯ ಹಿತವೆನಿಸುವ ಕಿತ್ತಳೆ ಬಣ್ಣದ ಬೆಳಕಿನ ಮೂಲಕ ನಾಂದಿ ಹಾಡುತ್ತದೆ.  
ಎಲ್ಲ ಕಲಾ ಪ್ರಕಾರಗಳು ತಮ್ಮ ಮಾಧ್ಯಮದ ಮಿತಿಗಳನ್ನು ವಿಸ್ತರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರುತ್ತವೆ. ಅದಕ್ಕಾಗಿ ಇತರ ಕಲೆಗಳಲ್ಲಿನ ತಂತ್ರಗಳನ್ನು ಸಲಕರಣೆಗಳನ್ನು ಅಗತ್ಯಕ್ಕೆ ತಕ್ಕಂತೆ ದುಡಿಸಿಕೊಳ್ಳುತ್ತ ರೂಢಿಗತ ರೀತಿಗಳನ್ನು ಮಾರ್ಗಗಳನ್ನು ಪ್ರಯೋಗಕ್ಕೆ ಒಡ್ಡುತ್ತ  ಸೃಜನಶೀಲವಾಗುತ್ತವೆ. ಬೇಲೂರು ಹಳೆಬೀಡಿನ ಶಿಲ್ಪವು ನೃತ್ಯದ ಲಾಲಿತ್ಯವನ್ನು ಮತ್ತು ಕಾವ್ಯದ ಛಂದವನ್ನು ಬಳಸಿಕೊಂಡಿದೆ. ದೇವನೂರರ ಕುಸುಮಬಾಲೆ, ನೃತ್ಯದ ಲಾಲಿತ್ಯ, ಶಿಲ್ಪದ ಸೌಷ್ಟವ ಮತ್ತು ಕುಸುರಿಯನ್ನ ಬಳಸಿಕೊಂಡರೆ ತೇಜಸ್ವಿಯವರ ಬರಹ, ಛಾಯಾಗ್ರಹಣದ ದೃಶ್ಯಾತ್ಮಕತೆ ಮತ್ತು ಚಲನಚಿತ್ರದ ಚಲನಶೀಲತೆಯನ್ನು ದುಡಿಸಿಕೊಂಡಿವೆ. ಇತರ ಕಲಾತ್ಮಕ ಅಭಿವ್ಯಕ್ತಿ ಮಾಧ್ಯಮಗಳಿಗೆ ಹೋಲಿಸಿದರೆ ಚಲನಚಿತ್ರವು ತೀರ ಇತ್ತೀಚಿನದು. ಬಹಳ ಥಿouಟಿg.  ಉಳಿದೆಲ್ಲವುಗಳಿಗಿಂತ ತಾಂತ್ರಿಕವಾಗಿ ಸಂಕೀರ್ಣವಾದುದು. ಆದರೆ ಉಳಿದೆಲ್ಲ ಪ್ರಕಾರಗಳನ್ನು ತನ್ನ ಅಗತ್ಯಕ್ಕೆ ದುಡಿಸಿಕೊಳ್ಳುವುದು ಮಾತ್ರವಲ್ಲ ಅವುಗಳ ತಂತ್ರಗಳನ್ನು ಮತ್ತು ಕೌಶಲಗಳನ್ನು ಸಹ ಯಾವುದೇ ರೀತಿಯ ಎಗ್ಗಿಲ್ಲದೆ ಸಲೀಸಾಗಿ ಎತ್ತಿ ದಕ್ಕಿಸಿಕೊಂಡು ತನ್ನದೇ ಆದ ಹೊಸ ಆಯಾಮವನ್ನು ಕಲ್ಪಿಸಿಕೊಳ್ಳುತ್ತದೆ. ಇದು ಬೆರಗುಗೊಳಿಸುವಂಥ ಎರವಲು!  
ಚಲನಚಿತ್ರ್ರವೊಂದರ ತಯಾರಿಕೆಯು ಮುಖ್ಯವಾಗಿ ಮೂರು ಹಂತಗಳನ್ನು ಒಳಗೊಳ್ಳುತ್ತದೆ. ನಿರ್ಮಾಣ ಪೂರ್ವ, ನಿರ್ಮಾಣ ಮತ್ತು ನಿರ್ಮಾಣೋತ್ತರ ಎಂದು ಈ ಮೂರು ಹಂತಗಳನ್ನು ಗುರುತಿಸಿ ಬಹುದು. ಈ ಹೆಸರುಗಳು ಅಷ್ಟೇನು ಸಮಾಧಾನಕರವಲ್ಲದ ಇಂಗ್ಲಿಷ್‌ನ ಅನುವಾದ. ನಿರ್ಮಾಣ ಪೂರ್ವದಲ್ಲಿ ಕಥೆ ಅಥವ ತಿರುಳಿನ ಆಯ್ಕೆ ಮತ್ತು ಚಿತ್ರ ಕಥೆಯ ರಚನೆಯಾಗುತ್ತದೆ. ಒಂದು ಆಯಾಮದಲ್ಲಿ ಇದು ಸಾಹಿತ್ಯ ರಚನೆಯೇ ಆದರೂ  ಮುಖ್ಯವಾಗಿ ಚಿತ್ರೀಕರಣ ಮತ್ತು ಸಂಕಲನದ ತಾಂತ್ರಿಕ ಆಯಾಮವು ಇಲ್ಲಿ ಸವಾರಿ ಮಾಡುತ್ತಿರುತ್ತದೆ. ಸಂಭಾಷಣೆ ಇಲ್ಲಿ ನಾಟಕವನ್ನು ಅನುಕರಿಸುತ್ತದೆ. ಪುನಃ ಮುಂದಿನೆರಡು ಹಂತಗಳು ಸಂಭಾಷಣೆಯನ್ನು ರೂಪಿಸುತ್ತಿರುತ್ತವೆ. ಏನೇ ಆದರೂ ಈ ಹಂತವು ಮೂಲಭೂತವಾಗಿ ಸಾಹಿತ್ಯ ರಚನೆಯೆ.
ಚಿತ್ರಕಥೆಯನ್ನಾಧಾರವಾಗಿಟ್ಟುಕೊಂಡು ಚಿತ್ರೀಕರಣ ನಡೆಯುತ್ತದೆ. ಚಿತ್ರೀಕರಣ ಹಂತದಲ್ಲಿ ನಿರ್ದೇಶಕ(ಕಿ) ನಿಜವಾದ ಕ್ಯಾಪ್ಟನ್. ನಿರ್ದೇಶಕರ ಅಗತ್ಯವನ್ನು ನಾನಾ ತರಹದ ಕುಶಲ ಕರ್ಮಿಗಳು ಈ ಹಂತದಲ್ಲಿ ಪೂರೈಸುತ್ತಾರೆ. ನಾಟಕ ಮತ್ತು ನೃತ್ಯಗಳ ಪ್ರಸಾಧನ, ವೇಷ ಭೂಷಣ, ಅಭಿನಯಗಳನ್ನು ಬಳಸಿಕೊಂಡರೂ ಇಲ್ಲಿ ನಾಟಕೀಯವಾಗಬಾರದು. ಚಲನಚಿತ್ರದ ಶೈಲಿ ನಾಟಕ ಶೈಲಿಗಿಂತ ವಿಭಿನ್ನವಾದುದು. ಸೆಟ್‌ಗಳಿಗೆ ಕಟ್ಟಡ ರಚನೆಯಂತೇ ನಿರ್ಮಾಣ, ಸುಣ್ಣ ಬಣ್ಣಗಳು, ಪೀಠೋಪಕರಣಗಳ ಕೆಲಸವಾಗಬೇಕು. ಆದರೆ ಅದು ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಸಿನೆಮಾ ತಾಂತ್ರಿಕತೆಯ ಅಗತ್ಯವನ್ನನುಸರಿಸ ಬೇಕು. ಎಲ್ಲ ಅಂಶಗಳೂ ನಿರ್ದೇಶಕರ ಪರಿಕಲ್ಪನೆಯ ಪ್ರಕಾರ ಸೂಕ್ಷ್ಮವಾಗಿ ರೂಪುಗೊಳ್ಳುತ್ತವೆ. ಸಿನೆಮಾ, ವಾಸ್ತವಕ್ಕೆ ಹತ್ತಿರವಾದ, ಪ್ರೇಕ್ಷಕರಲ್ಲಿ ಇದು ವಾಸ್ತವವೇ ಎಂಬಂಥ ಭ್ರಮೆಯನ್ನುಂಟು ಮಾಡುವ ಮಹಾನ್ ಮೋಸದ ಮಾಧ್ಯಮ. ಮೋಸ ಎಚಿದರೆ ಪ್ರೇಕ್ಷಕರಿಗೆ ತೆರೆಯ ಮೇಲೆ ತಾವು ನೋಡುತ್ತಿರುವುದು ನಿಜವಾಗಲೂ ನಡೆಯುತ್ತಿದೆ ಎಂದು ನಂಬಿಸುವ ಕಲೆ. ಈ ನಂಬಿಸುವ ಕಲೆಯನ್ನು ಕರಗತ ಮಾಡಿಕೊಂಡ ನಿರ್ದೇಶಕರೆ ಯಶಸ್ವಿ ನಿರ್ದೇಶಕರು. ಚಿತ್ರೀಕರಿಸುವಾಗ ಒಮ್ಮೆ ಕ್ಯಾಮೆರಾ ಆನ್ ಮಾಡಿ ಚಿತ್ರೀಕರಿಸಿ ಸ್ಟಾಪ್ ಮಾಡಿದರೆ ಒಂದು ಷಾಟ್ ತೆಗೆದಾಯಿತು ಅಂತ. ಯಾವುದೇ ಕಾರಣಕ್ಕೆ ಅದೇ ಷಾಟನ್ನು ಪುನಃ ತೆಗದರೆ ಅದು ಆ ಷಾಟಿನ ಇನ್ನೊಂದು ಟೇಕ್. ಷಾಟ್‌ಗಳು ವಾಕ್ಯದಲ್ಲಿನ ಪದಗಳಿದ್ದ ಹಾಗೆ. ಪದಗಳು ಕನಿಷ್ಟ ಎರಡು ಗ್ರಹಿಕೆಗಳಲ್ಲಿ ಕೆಲಸ ಮಾಡುತ್ತವೆ. ಒಂದು ಶಬ್ದದ ಮೂಲಕ. ಮತ್ತೊಂದು ಆ ಶಬ್ದಗಳಿಂದ ಮನಸ್ಸಿನಲ್ಲಿ ಮೂಡುವ ಚಿತ್ರದ ಮೂಲಕ. ಷಾಟ್‌ಗಳು ಗ್ರಹಿಕೆಗಿಂತ ಮುಖ್ಯವಾಗಿ ಪ್ರೇಕ್ಷಕರ ಸಂವೇದನೆಗೆ ತಾಕುತ್ತವೆ.  
ಒಂದು ಚಿತ್ರದ ನಿಜವಾದ ಕಟ್ಟೋಣವು ಮೂರನೆಯ ಹಂತದಲ್ಲಿ ನಡೆಯುತ್ತದೆ. ವಾಕ್ಯದಲ್ಲಿ ಹೇಗೆ ಪದಗಳನ್ನು ಬಳಸುತ್ತೇವೆಯೊ ಹಾಗೆ ದೃಶ್ಯ(ssಛಿeಟಿe)ಗಳಲ್ಲಿ ಷಾಟ್‌ಗಳನ್ನು ಬಳಸಲಾಗುತ್ತದೆ. ಸಂಕಲನ ಕ್ರಿಯೆಯು ಶಿಲ್ಪಿಯೊಬ್ಬ ಅಗತ್ಯವಿಲ್ಲದ ಭಾಗಗಳನ್ನು ಬಿಟ್ಟು ಕಲ್ಲು ಅಥವಾ ಕಾಷ್ಠ ಅಥವ ಇನ್ನಾವುದೇ ವಸ್ತುವಿನಲ್ಲಿ ಮೂರ್ತಿಯನ್ನು ಸಾಕಾರಗೊಳಿಸುವಂಥ ಕಲ್ಪನೆ ಮತ್ತು ಕೌಶಲವನ್ನು ಆಶಿಸುತ್ತದೆ. ಪ್ರತಿಮೆಯೊಂದರ ಕೈಯಲ್ಲಿ ತೆಗೆಯಲಾಗದ ಬಳೆಯನ್ನು ಶಿಲ್ಪಿ ಹೇಗೆ ತೊಡಿಸಿರಬಹುದು ಎಂದು ತಲೆ ಕೆಡಿಸುವ ಕರಾರುವಾಕ್ಕಾದ ಕಲ್ಪನೆ ಮತ್ತು ಸೂಕ್ಷ್ಮ ಕೌಶಲ. ಕುರೋಸಾವ ಮೊದಲಾದ ದಿಗ್ಗಜರು ತಾವು ಚಿತ್ರವೊಂದನ್ನು ಸಂಕಲನ ಮೇಜಿನ ಮೇಲೇ ಸೃಷ್ಟಿಸುತ್ತೇವೆ, ಉಳಿದದ್ದೆಲ್ಲ ಅದಕ್ಕೆ ಪೂರ್ವಸಿದ್ಧತೆ ಮಾತ್ರ ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಚಿತ್ರಕ್ಕೆ ಪೂರಕವಾದ ಶಬ್ದ ಜೋಡಣೆಯೂ ಆಗುತ್ತದೆ. ಈ ಹಂತದಲ್ಲಿ ಚಿತ್ರಕ್ಕೆ ವಜ್ರದ ಕಟ್ಟಡ ಮತ್ತು ಮೆರಗು ದೊರೆಯುತ್ತದೆ. 
ಮೊದಲಿಗೆ ಪೋಸ್ಟ್‌ಮನ್ ಇನ್ ದಿ ಮೌಂಟೈನ್ಸ್ ಚಿತ್ರದ ಚಿತ್ರಕಥೆಯನ್ನು ತೆಗೆದುಕೊಳ್ಳೋಣ. ಅಧ್ಯಯನದ ದೃಷ್ಟಿಕೋನದಿಂದ ಒಂದೇ ಚಿತ್ರದ ಕನಿಷ್ಟ ಎರಡು ಚಿತ್ರಕಥೆಗಳನ್ನು ನೋಡ ಬಹುದು. ಬಹುತೇಕ ಚಿತ್ರೀಕರಣಪೂರ್ವ ರಚಿಸಿದ ಚಿತ್ರಕಥೆಯು ಚಿತ್ರೀಕರಣ ಸಂದರ್ಭದಲ್ಲಿ ಒಂದು ಸಾರಿ, ಮತ್ತೆ ಸಂಕಲನ ಸಮಯದಲ್ಲಿ ಮತ್ತೊಂದು ಸಾರಿ ಬದಲಾವಣೆಗೊಳಗಾಗುತ್ತದೆ. ಇನ್ನೊಂದು ಅರ್ಥದಲ್ಲಿ ಮೊದಲು ರಚಿಸುವ ಚಿತ್ರಕಥೆಯು ಚಿತ್ರ ತಯಾರಿಕೆಗೆ ಮಾರ್ಗದರ್ಶಿ ಸೂತ್ರ ಅಥವ ನೀಲನಕ್ಷೆ ಮಾತ್ರ. ಮೊದಲು ರಚಿಸಿಕೊಂಡ ಚಿತ್ರಕಥೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಣ ನಡೆಯುತ್ತದೆ. ಲೊಕೇಶನ್, ಕಲಾವಿದರ ಪ್ರತಿಭೆ, ಛಾಯಾಗ್ರಾಹಕರ ಸೂಚನೆ, ನಿರ್ದೇಶಕರ ಮನಸ್ಸಿನಲ್ಲಿ ಮೂಡುವ ಹೊಸ ಹೊಳಹು ಇನ್ನ ಹಲವಾರು ಅಂಶಗಳು ಬರವಣಿಗೆಯ ರೂಪದಲ್ಲಿರುವ ಚಿತ್ರಕಥೆಯನ್ನು ಆ ಚಿತ್ರದ ಆಶಯಕ್ಕನುಸಾರವಾಗಿ ಉತ್ತಮೀಕರಿಸುತ್ತವೆ. ಅಧ್ವಾನೀಕರಣವೂ ಆಗಬಹುದು. ಈ ಹಂತದಲ್ಲಿ ಸಿನಿ ಅಭಿವ್ಯಕ್ತಿಗೆ ಅಗತ್ಯವಾದ ಎಲ್ಲ ರೀತಿಯ ವಿವರಗಳು ಸೇರ್ಪಡೆಯಾಗುತ್ತವೆ. ಸಂಕಲನ ಸಮಯದಲ್ಲಂತೂ ಮೂಲ ಚಿತ್ರಕಥೆಯಲ್ಲಿನ ದೃಶ್ಯಗಳ ಅನುಕ್ರಮಣಿಕೆಯಿಂದ ಹಿಡಿದು ಬೇರೆಲ್ಲವೂ ಚಿತ್ರದ ಮುಖ್ಯ ಆಶಯವೊಂದನ್ನು ಬಿಟ್ಟು ಸಂಪೂರ್ಣವಾಗಿ ಬದಲಾಗಿಬಿಡಬಹುದು. ಇಲ್ಲಿ ಚಿತ್ರವೊಂದು ನಿಜವಾಗಲೂ ಅರಳುತ್ತದೆ. ಚಿತ್ರವೊಂದರ ನಿಜವಾದ ಸೃಷ್ಟಿಕ್ರಿಯೆ ನಡೆಯುವುದು ಈ ಹಂತದಲ್ಲೆ. ಸಾಮಾನ್ಯವಾಗಿ ಚಿತ್ರ ಪೂರ್ಣಗೊಂಡ ನಂತರದ ಚಿತ್ರಕಥೆಯು ಮೂಲ ಚಿತ್ರಕಥೆಗಿಂತ ವಿಭಿನ್ನವಾಗಿರುತ್ತದೆ. ಪ್ರಕಟಗೊಂಡಿರುವ ಮೂಲ ಚಿತ್ರಕಥೆಯೊಂದಿಗೆ ಪೂರ್ಣಗೊಂಡ ಚಿತ್ರವನ್ನು ಹೋಲಿಸಿ ಅಧ್ಯಯನ ಮಾಡುವಾಗ ಹೊಂದಿಕೆಯಾಗದೆ ವಿದ್ಯಾರ್ಥಿಗಳು ಗಲಿಬಿಲಿಗೊಳ್ಳುವುದನ್ನ ಅನೇಕ ಬಾರಿ ಕಂಡಿದ್ದೇನೆ. ಇಲ್ಲಿ ಪೂರ್ಣಗೊಂಡಿರುವ ಪೋಸ್ಟ್‌ಮನ್ ಇನ್ ದಿ ಮೌಂಟೈನ್ಸ್ ಚಿತ್ರದ ಸ್ಥೂಲ ಚಿತ್ರಕಥೆಯನ್ನು ಗಮನಿಸೋಣ.  
ಚಿತ್ರದ ತಿರುಳು ಇಷ್ಟೆ: ಪರ್ವತ ಪ್ರದೇಶದಲ್ಲಿ ಅಪ್ಪ ಮತ್ತು ಮಗನ ೨೨೩ ಕಿ.ಮೀ. ಪಯಣ ೩ ಹಗಲು ಮತ್ತು ೨ ರಾತ್ರಿಗಳ ಅವಧಿಯಲ್ಲಿ. ಉದ್ದೇಶ, ಅಕಾಲಿಕವಾಗಿ ಅಂಚೆಯಾಳಿನ ಕೆಲಸದಿಂದ ನಿವೃತ್ತನಾಗಿರುವ ಅಪ್ಪ ಮಗನಿಗೆ ಮಾರ್ಗದರ್ಶನ ಮಾಡುವುದು. ಇದು ಚಿತ್ರ ಮುಗಿಯುವ ವೇಳೆಗೆ ಅಂಚೆ ಕೆಲಸದ ಮಾರ್ಗದರ್ಶನ ಮಾತ್ರವಾಗಿ ಉಳಿಯುವುದಿಲ್ಲ. ಬದುಕಿನ ಉತ್ತಮ ಮೌಲ್ಯಗಳ ಮಾರ್ಗದರ್ಶನವೂ ಆಗಿಬಿಡುತ್ತದೆ. ಮನೆಯಿಂದ ಹೊರಟು ಪರ್ವತಗಳಲ್ಲಿರುವ ಊರುಗಳಿಗೆ ಅಂಚೆ ಬಟವಾಡೆ ಮಾಡಿ ಮರಳುವಷ್ಟರಲ್ಲಿ ಅಪ್ಪ ಮಗ ಪರಸ್ಪರರನ್ನು ಹೆಚ್ಚು ಅರಿಯುತ್ತಾರೆ. ಮಗ ಅಪ್ಪನಿಂದ ತನ್ನ ಹೊಸ ಕೆಲಸದ ಬಗ್ಗೆ ಕಲಿತುಕೊಂಡ ಹಾಗೇ ಅಪ್ಪ ಮಗನಿಂದ ಮನೆಯ ಬಗ್ಗೆ, ಊರಿನ ಬಗ್ಗೆ, ತನ್ನ ಹೆಂಡತಿಯ ಬಗ್ಗೆ, ವ್ಯವಸ್ಥೆಯ ಬಗ್ಗೆ ಅರಿತುಕೊಳ್ಳುತ್ತಾನೆ. ಇವರಿಬ್ಬರ ಜೊತೆ ಪಯಣಿಸುವ ನಾಯಿ ಇಡೀ ಚಿತ್ರಕ್ಕೆ ಅಂತಃಕರಣ, ಲವಲವಿಕೆ ಮತ್ತು ಜೀವಂತಿಕೆಯನ್ನು ತುಂಬುತ್ತದೆ. ಪ್ರಾರಂಭದಲ್ಲಿ ತಾನೊಬ್ಬನೇ ಡ್ಯೂಟಿಗೆ ಹೋಗುತ್ತಿದ್ದೇನೆಂದು ಭಾವಿಸಿರುವ ಉತ್ಸಾಹಿ ಮಗನ ಜೊತೆ ಅವನಿಗೆ ದಾರಿ ಸರಿಯಾಗಿ ಗೊತ್ತಿಲ್ಲ. ಜೊತೆಯಲ್ಲಿ ನೀನೂ ಹೋಗು ಎಂದು ಅಪ್ಪ ನಾಯಿಗೆ ಹೇಳಿದರೆ ಅದು ಒಲ್ಲೆ ಎಂದು ಹಿಂದೆ ಉಳಿಯುತ್ತದೆ. ಆಗ ಮಗ, ಅದು ಇಲ್ಲೇ ಇರಲಿ. ನನಗೆ ತೊಂದರೆ ತಪ್ಪುತ್ತದೆ. ಎನ್ನುತ್ತಾನೆ. ಆದರೆ ಮುಂದೆ ಆ ನಾಯಿ ಇವನ ತೊಂದರೆಗಳನ್ನು ತಪ್ಪಿಸುತ್ತದೆ. ಪಯಣ ಮುಗಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ನಾಯಿಯೊಂದಿಗೆ ಮಗನ ಸಂಬಂಧ ಅವರಪ್ಪನಷ್ಟೇ ಅವಿನಾಭಾವದ್ದಾಗಿರುತ್ತದೆ. ಬೆಟ್ಟದ ತುದಿಯಲ್ಲಿನ ಅರವಂಟಿಗೆಯಂಥ ಬೃಹತ್ ಕಟ್ಟಡದಲ್ಲಿ ಇವನ ಅನನುಭವದ ಸಣ್ಣ ಎಚ್ಚರ ತಪ್ಪಿನಿಂದಾಗಿ ಜೋರಾಗಿ ಬೀಸುವ ಗಾಳಿಯಲ್ಲಿ ಕೆಲವು ಪತ್ರಗಳು ಹಾರಿ ಹೋಗುತ್ತಿದ್ದಾಗ ಅಪ್ಪ ಕೆಲವನ್ನು ಹಿಡದುಕೊಳ್ಳುತ್ತಾನೆ. ಇನ್ನೇನು ಕೈ ತಪ್ಪಿಯೇ ಹೋಯಿತು ಎಂದುಕೊಂಡಿದ್ದ ಪತ್ರವೊಂದನ್ನು ವೇಗವಾಗಿ ಓಡಿ ಈ ನಾಯಿ ಲಾಘವದಿಂದ ಹಾರಿ ಹಿಡಿಯುತ್ತದೆ. ಅಪ್ಪ ತನ್ನ ಕೆಲಸಕ್ಕೆ ಎಷ್ಟು ಅರ್ಪಿಸಿಕೊಂಡಿರುತ್ತಾನೆಂದರೆ ಅವನ ಪ್ರಾಣವನ್ನೇ ಕಾಪಾಡಿದಷ್ಟು ಸಮಾಧಾನವಾಗುತ್ತದೆ ಅವನಿಗೆ. ಮಗನಿಗೆ ನಾಯಿ ಹೀರೊ ಆಗಿಬಿಡುತ್ತದೆ. ಥಿou ಚಿಡಿe gಡಿeಚಿಣ!  ಎಂದು ಪ್ರೀತಿಯಿಂದ ನಾಯಿಯನ್ನು ತಬ್ಬಿಕೊಳ್ಳುತ್ತಾನೆ. ಹಳ್ಳಿಯೊಂದನ್ನು ತಲುಪಲು ಹತ್ತಿರವಾಗುತ್ತದೆಂದು ಕೊರೆಯುವ ನೀರು ಹರಿಯುತ್ತಿರುವ ತೊರೆಯೊಂದನ್ನು ದಾಟಿದ ನಂತರ ಅಪ್ಪ ಮಗ ಸುಧಾರಿಸಿಕೊಳ್ಳುತ್ತಿರುತ್ತಾರೆ. ನಾಯಿಯು ಒಣ ಪುರಲೆಗಳನ್ನು ಆರಿಸಿ ತರುತ್ತದೆ. ಬೆಂಕಿ ಕಾಯಿಸುವುದು ಬೇಡ. ನಾವು ಹೊರಡೋಣ ಎನ್ನುವ ಮಗನಿಗೆ ಅಪ್ಪ ಬದುಕಿನಲ್ಲಿರಬೇಕಾದ ಸೌಜನ್ಯತೆಯನ್ನ ಅದರ ಆಸ್ಥೆಯನ್ನ ತಿರಸ್ಕರಿಸಬೇಡ ಎಂದು ಪ್ರಾಣಿಗಳೊಂದಿಗೂ ಸಹ ಇರಬೇಕಾದ ವಿನಮ್ರತೆಯನ್ನು ಹೇಳಿಕೊಡುತ್ತಾನೆ.  
 

ಸಾಂಗತ್ಯ 2008 ರ ಕುಪ್ಪಳ್ಳಿ ಚಲನಚಿತ್ತ್ರೋತ್ಸವದಲ್ಲಿ ನಾವು ನೋಡಿದ ಚಿತ್ರಗಳಲ್ಲೆಲ್ಲ ಪೋಸ್ಟ್ ಮ್ಯಾನ್ ಇನ್ ದಿ ಮೌಂಟೈನ್ಸ್ ಚಿತ್ರವು ಪ್ರೇಕ್ಷಕರ ಮನಸ್ಸಿನಾಳಕ್ಕೆ ಇಳಿದ ಚಿತ್ರ. ಈ ಚಿತ್ರದ ಮುಖ್ಯ ಪಾತ್ರಗಳು ಮತ್ತು ಘಟನೆಗಳು ನಮ್ಮದೇ ಅನುಭವದ ಭಾಗವಾಗಿ ಬಿಡುತ್ತವೆ. ಸರಳವಾದ ನೇರ ಕಥಾನಕವನ್ನು ಸಿನೆಮಾ ತಾಂತ್ರಿಕತೆಯ ನವಿರಾದ ಕುಸುರಿ ಮತ್ತು ಹದವಾದ ಕಲಾತ್ಮಕ ನೇಯ್ಗೆಯ ಮೂಲಕ ಅದ್ಭುತ ಕೃತಿಯನ್ನಾಗಿ ನಿರ್ದೇಶಕ ಕಡೆದಿದ್ದಾನೆ.

postman1

ಕಥೆ ಇಷ್ಟೆ: ಅಪ್ಪ, ಪರ್ವತ ಶ್ರೇಣಿಗಳಲ್ಲಿರುವ ಊರುಗಳಿಗೆ ಪತ್ರಗಳನ್ನು ಹಂಚುತ್ತಿದ್ದ ಅಂಚೆಯ ಮನುಷ್ಯ. ಈಗ ಮಂಡಿ ನೋವಿನಿಂದಾಗಿ ನಿವೃತ್ತ. ಅದೇ ಕೆಲಸವನ್ನು ಇಲಾಖೆ ಅವನ ಮಗನಿಗೆ ಕೊಟ್ಟಿದೆ. ಮಗನ ಮೊದಲ ಸಲ ಡ್ಯೂಟಿಯನ್ನು ನಿರ್ವಹಿಸಲು ಮಾರ್ಗದರ್ಶಕನಾಗಿ ಅಪ್ಪನೂ ಜೊತೆಯಲ್ಲಿ ಹೊರಡುತ್ತಾನೆ. ಅವರಿಬ್ಬರೂ ವಾಪಸ್ಸು ಬರುವವರೆಗಿನ ಚಿತ್ರಣವೇ ಈ ಸಿನೆಮ. ಸುಂದರವಾದ ಪರ್ವತ ಶ್ರೇಣಿಗಳ ಒಡಲಿನಲ್ಲಿ ಸಾಗುವ ಇವರಿಬ್ಬರ ಪಯಣ ಪ್ರೇಕ್ಷಕರ ಪಯಣವೂ ಆಗಿಬಿಡುತ್ತದೆ. ಈ ಪಯಣದಲ್ಲಿ ಒಂದು ನಾಯಿಯೂ ಅವರ ಜತೆಯಿರುತ್ತದೆ. ಗುತ್ತಿಯ ನಾಯಿಯ ಹಾಗೇ. ಈ ನಾಯಿ ಚಿತ್ರದಲ್ಲಿ ಇರದಿದ್ದರೆ ಈ ಚಿತ್ರ ಚೆನ್ನಾಗಿಯೇ ಇರುತ್ತಿತ್ತು. ಆದರೆ ಪ್ರೇಕ್ಷಕರಿಗೆ ಈಗಿರುವಷ್ಟ್ಟು ಆಪ್ತವಾಗುತ್ತಿರಲಿಲ್ಲ.

ಸಾಮಾನ್ಯವಾಗಿ ಯಾವುದೇ ನಿರೂಪಣಾತ್ಮಕ ಕಲೆಯಲ್ಲಿ ಪಯಣದ ನಿರೂಪಣೆಯು ಪಾತ್ರಗಳಿಗೆ ಕಲಿಕೆಯ ಮತ್ತು ಬೆಳವಣಿಗೆಯ ಅವಕಾಶವನ್ನೂ ಒದಗಿಸುತ್ತದೆ. ಅಪ್ಪ, ಮಗ ಮತ್ತು ನಾಯಿ, ಈ ಮೂರು ಜೀವಿಗಳು ಒಂದುವರೆ ಘಂಟೆಗೂ ಕಡಿಮೆ ಅವಧಿಯ ಈ ಚಿತ್ರದಲ್ಲಿ ಮಾಡುವ ಪಯಣ, ಪರಸ್ಪರರನ್ನು ಅರಿಯುವ, ತಮ್ಮನ್ನು ತಾವೆ ಅರಿತುಕೊಳ್ಳುವ ಮತ್ತು ಬದುಕಿನ ಬಗ್ಗೆ ಸಹ ಅರಿಯುವ ಪಯಣವಾಗಿದೆ. ಈ ಪಯಣ ಸಂವೇದನಾಶೀಲ ಪ್ರೇಕ್ಷಕರ ಪಯಣವೂ ಆಗುತ್ತದೆ.  

ಇಂಥ ನವಿರಾದ, ಪ್ರೇಕ್ಷಕರ ಮನಸ್ಸಿನಾಳದಲ್ಲಿ ಬದುಕಿನ ಬಗ್ಗೆ ಧನಾತ್ಮಕ ಸೆಲೆಗಳನ್ನು ತಟ್ಟುವ ಚಿತ್ರವನ್ನು ಮಾಡುವಾಗ ನಿರ್ದೇಶಕ ತಾಂತ್ರಿಕವಾಗಿ ಚಿತ್ರಕಥೆ, ಚಿತ್ರೀಕರಣ ಮತ್ತು ಸಂಕಲನ ತಂತ್ರಗಳನ್ನು ಹೇಗೆ ದುಡಿಸಿಕೊಂಡಿದ್ದಾನೆ ಎಂಬುದು ನನ್ನ ಮುಖ್ಯ ಆಸಕ್ತಿ. ಅದನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ.  

ಪ್ರಾರಂಭದಲ್ಲಿ ಮಂಜಿನಿಂದಾವೃತವಾದ ಸುಂದರವಾದ ಮಲೆನಾಡಿನ ಹಲವು ಮನೆಗಳ ಗುಂಪಿನ ಟಾಪ್ ಆಂಗಲ್ ಷಾಟ್ (top angle shot)ಫೇಡ್ ಇನ್(fade in ) ಆಗುತ್ತದೆ.  ಇದು ಗದ್ದೆಗಳ ಅಂಚಿಗಿರುವ ಮಂಜಿನಿಂದಾವೃತವಾದ ಮನೆಗಳ, ಆ ಮನೆಗಳ ಹಿಂದೆ ಪುಟ್ಟ ಗುಡ್ಡ ಮತ್ತು ಮರಗಳಿರುವ ಪ್ಯಾನ್ ಷಾಟ್(pan shot)ಗೆ ಡಿಸಾಲ್ವ್(dissolve)ಆಗುತ್ತದೆ. ಗದ್ದೆಗಳ ಮಧ್ಯದಲ್ಲೇ ಊರಿಗೆ ಸಾಗಿರುವ ಬಂಡಿ ರಸ್ತೆಯಿದೆ. ಈ ಷಾಟ್ ಕೊನೆಯಲ್ಲಿ ಊರಿನ ಕಾಲು ಹಾದಿಯಿಂದ ಮನೆಯೊಂದರ ಹಿತ್ತಿಲಿಗೆ ಪ್ಯಾನ್ ಆಗುವ ಷಾಟ್‌ಗೆ ಡಿಸಾಲ್ವ್ ಆಗುತ್ತದೆ. ಆ ಮನೆಯ ಗೋಡೆಯಲ್ಲಿರುವ ಪುಟ್ಟ ಕಿಟಕಿಯಿಂದ ಒಳಗೆ ಉರಿಯುತ್ತಿರುವ ದೀಪದ ಕಿತ್ತಳೆ ರಂಗಿನ ಬೆಳಕು ಮಿಣಕುತ್ತಿದೆ. ಮೂರು ಷಾಟ್‌ಗಳ ಈ ಸಂಕಲನ ತುಣುಕು ಸುಭಗ ಸಂಕಲನ ತಂತ್ರದಿಂದ ಇಡೀ ಚಿತ್ರದ ನವಿರುತನವನ್ನು ಪರ್ವತ ಪ್ರದೇಶದ ಹಸಿರು, ಅಲ್ಲಲ್ಲೆ ಹಾಸಿದಂತಿರುವ ಬಿಳಿ ಮಂಜು,  ಮಲೆನಾಡಿನ ಶೀತ ಮತ್ತು ಚಳಿ, ಒಟ್ಟಾಗಿರುವ ಬೆಚ್ಚಗಿನ ಮನೆಗಳು ಹಾಗು ಜೀವಂತಿಕೆಯ ಹಿತವೆನಿಸುವ ಕಿತ್ತಳೆ ಬಣ್ಣದ ಬೆಳಕಿನ ಮೂಲಕ ನಾಂದಿ ಹಾಡುತ್ತದೆ.  

ಎಲ್ಲ ಕಲಾ ಪ್ರಕಾರಗಳು ತಮ್ಮ ಮಾಧ್ಯಮದ ಮಿತಿಗಳನ್ನು ವಿಸ್ತರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರುತ್ತವೆ. ಅದಕ್ಕಾಗಿ ಇತರ ಕಲೆಗಳಲ್ಲಿನ ತಂತ್ರಗಳನ್ನು ಸಲಕರಣೆಗಳನ್ನು ಅಗತ್ಯಕ್ಕೆ ತಕ್ಕಂತೆ ದುಡಿಸಿಕೊಳ್ಳುತ್ತ ರೂಢಿಗತ ರೀತಿಗಳನ್ನು ಮಾರ್ಗಗಳನ್ನು ಪ್ರಯೋಗಕ್ಕೆ ಒಡ್ಡುತ್ತ  ಸೃಜನಶೀಲವಾಗುತ್ತವೆ. ಬೇಲೂರು ಹಳೆಬೀಡಿನ ಶಿಲ್ಪವು ನೃತ್ಯದ ಲಾಲಿತ್ಯವನ್ನು ಮತ್ತು ಕಾವ್ಯದ ಛಂದವನ್ನು ಬಳಸಿಕೊಂಡಿದೆ.

ದೇವನೂರರ ಕುಸುಮಬಾಲೆ, ನೃತ್ಯದ ಲಾಲಿತ್ಯ, ಶಿಲ್ಪದ ಸೌಷ್ಟವ ಮತ್ತು ಕುಸುರಿಯನ್ನ ಬಳಸಿಕೊಂಡರೆ ತೇಜಸ್ವಿಯವರ ಬರಹ, ಛಾಯಾಗ್ರಹಣದ ದೃಶ್ಯಾತ್ಮಕತೆ ಮತ್ತು ಚಲನಚಿತ್ರದ ಚಲನಶೀಲತೆಯನ್ನು ದುಡಿಸಿಕೊಂಡಿವೆ. ಇತರ ಕಲಾತ್ಮಕ ಅಭಿವ್ಯಕ್ತಿ ಮಾಧ್ಯಮಗಳಿಗೆ ಹೋಲಿಸಿದರೆ ಚಲನಚಿತ್ರವು ತೀರ ಇತ್ತೀಚಿನದು. ಬಹಳ young.  ಉಳಿದೆಲ್ಲವುಗಳಿಗಿಂತ ತಾಂತ್ರಿಕವಾಗಿ ಸಂಕೀರ್ಣವಾದುದು. ಆದರೆ ಉಳಿದೆಲ್ಲ ಪ್ರಕಾರಗಳನ್ನು ತನ್ನ ಅಗತ್ಯಕ್ಕೆ ದುಡಿಸಿಕೊಳ್ಳುವುದು ಮಾತ್ರವಲ್ಲ. ಅವುಗಳ ತಂತ್ರಗಳನ್ನು ಮತ್ತು ಕೌಶಲಗಳನ್ನು ಸಹ ಯಾವುದೇ ರೀತಿಯ ಎಗ್ಗಿಲ್ಲದೆ ಸಲೀಸಾಗಿ ಎತ್ತಿ ದಕ್ಕಿಸಿಕೊಂಡು ತನ್ನದೇ ಆದ ಹೊಸ ಆಯಾಮವನ್ನು ಕಲ್ಪಿಸಿಕೊಳ್ಳುತ್ತದೆ. ಇದು ಬೆರಗುಗೊಳಿಸುವಂಥ ಎರವಲು!  

ಚಲನಚಿತ್ರ್ತ್ರವೊಂದರ ತಯಾರಿಕೆಯು ಮುಖ್ಯವಾಗಿ ಮೂರು ಹಂತಗಳನ್ನು ಒಳಗೊಳ್ಳುತ್ತದೆ. ನಿರ್ಮಾಣ ಪೂರ್ವ, ನಿರ್ಮಾಣ ಮತ್ತು ನಿರ್ಮಾಣೋತ್ತರ ಎಂದು ಗುರುತಿಸಿ ಬಹುದು. ಈ ಹೆಸರುಗಳು ಅಷ್ಟೇನು ಸಮಾಧಾನಕರವಲ್ಲದ ಇಂಗ್ಲಿಷ್‌ನ ಅನುವಾದ. ನಿರ್ಮಾಣ ಪೂರ್ವದಲ್ಲಿ ಕಥೆ ಅಥವಾ ತಿರುಳಿನ ಆಯ್ಕೆ ಮತ್ತು ಚಿತ್ರ ಕಥೆಯ ರಚನೆಯಾಗುತ್ತದೆ. ಒಂದು ಆಯಾಮದಲ್ಲಿ ಇದು ಸಾಹಿತ್ಯ ರಚನೆಯೇ ಆದರೂ  ಮುಖ್ಯವಾಗಿ ಚಿತ್ರೀಕರಣ ಮತ್ತು ಸಂಕಲನದ ತಾಂತ್ರಿಕ ಆಯಾಮವು ಇಲ್ಲಿ ಸವಾರಿ ಮಾಡುತ್ತಿರುತ್ತದೆ. ಸಂಭಾಷಣೆ ಇಲ್ಲಿ ನಾಟಕವನ್ನು ಅನುಕರಿಸುತ್ತದೆ. ಪುನಃ ಮುಂದಿನೆರಡು ಹಂತಗಳು ಸಂಭಾಷಣೆಯನ್ನು ರೂಪಿಸುತ್ತಿರುತ್ತವೆ. ಏನೇ ಆದರೂ ಈ ಹಂತವು ಮೂಲಭೂತವಾಗಿ ಸಾಹಿತ್ಯ ರಚನೆಯೆ.

ಚಿತ್ರಕಥೆಯನ್ನಾಧಾರವಾಗಿಟ್ಟುಕೊಂಡು ಚಿತ್ರೀಕರಣ ನಡೆಯುತ್ತದೆ. ಚಿತ್ರೀಕರಣ ಹಂತದಲ್ಲಿ ನಿರ್ದೇಶಕ(ಕಿ) ನಿಜವಾದ ಕ್ಯಾಪ್ಟನ್. ನಿರ್ದೇಶಕರ ಅಗತ್ಯವನ್ನು ನಾನಾ ತರಹದ ಕುಶಲ ಕರ್ಮಿಗಳು ಈ ಹಂತದಲ್ಲಿ ಪೂರೈಸುತ್ತಾರೆ. ನಾಟಕ ಮತ್ತು ನೃತ್ಯಗಳ ಪ್ರಸಾಧನ, ವೇಷ ಭೂಷಣ, ಅಭಿನಯಗಳನ್ನು ಬಳಸಿಕೊಂಡರೂ ಇಲ್ಲಿ ನಾಟಕೀಯವಾಗಬಾರದು. ಚಲನಚಿತ್ರದ ಶೈಲಿ ನಾಟಕ ಶೈಲಿಗಿಂತ ವಿಭಿನ್ನ. ಸೆಟ್‌ಗಳಿಗೆ ಕಟ್ಟಡ ರಚನೆಯಂತೇ ನಿರ್ಮಾಣ, ಸುಣ್ಣ ಬಣ್ಣಗಳು, ಪೀಠೋಪಕರಣಗಳ ಕೆಲಸವಾಗಬೇಕು. ಆದರೆ ಅದು ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಸಿನೆಮಾ ತಾಂತ್ರಿಕತೆಯ ಅಗತ್ಯವನ್ನನುಸರಿಸಬೇಕು.

ಎಲ್ಲ ಅಂಶಗಳೂ ನಿರ್ದೇಶಕರ ಪರಿಕಲ್ಪನೆಯ ಪ್ರಕಾರ ಸೂಕ್ಷ್ಮವಾಗಿ ರೂಪುಗೊಳ್ಳುತ್ತವೆ. ಸಿನೆಮಾ, ವಾಸ್ತವಕ್ಕೆ ಹತ್ತಿರವಾದ, ಪ್ರೇಕ್ಷಕರಲ್ಲಿ ಇದು ವಾಸ್ತವವೇ ಎಂಬಂಥ ಭ್ರಮೆಯನ್ನುಂಟು ಮಾಡುವ ಮಹಾನ್ ಮೋಸದ ಮಾಧ್ಯಮ. ಮೋಸ ಎಚಿದರೆ ಪ್ರೇಕ್ಷಕರಿಗೆ ತೆರೆಯ ಮೇಲೆ ತಾವು ನೋಡುತ್ತಿರುವುದು ನಿಜವಾಗಲೂ ನಡೆಯುತ್ತಿದೆ ಎಂದು ನಂಬಿಸುವ ಕಲೆ. ಈ ನಂಬಿಸುವ ಕಲೆಯನ್ನು ಕರಗತ ಮಾಡಿಕೊಂಡ ನಿರ್ದೇಶಕರೆ ಯಶಸ್ವಿ ನಿರ್ದೇಶಕರು. ಚಿತ್ರೀಕರಿಸುವಾಗ ಒಮ್ಮೆ ಕ್ಯಾಮೆರಾ ಆನ್ ಮಾಡಿ ಚಿತ್ರೀಕರಿಸಿ ಸ್ಟಾಪ್ ಮಾಡಿದರೆ ಒಂದು ಷಾಟ್ ತೆಗೆದಾಯಿತು ಅಂತ. ಯಾವುದೇ ಕಾರಣಕ್ಕೆ ಅದೇ ಷಾಟನ್ನು ಪುನಃ ತೆಗೆದರೆ ಅದು ಆ ಷಾಟಿನ ಇನ್ನೊಂದು ಟೇಕ್. ಷಾಟ್‌ಗಳು ವಾಕ್ಯದಲ್ಲಿನ ಪದಗಳಿದ್ದ ಹಾಗೆ. ಪದಗಳು ಕನಿಷ್ಟ ಎರಡು ಗ್ರಹಿಕೆಗಳಲ್ಲಿ ಕೆಲಸ ಮಾಡುತ್ತವೆ. ಒಂದು ಶಬ್ದದ ಮೂಲಕ. ಮತ್ತೊಂದು ಆ ಶಬ್ದಗಳಿಂದ ಮನಸ್ಸಿನಲ್ಲಿ ಮೂಡುವ ಚಿತ್ರದ ಮೂಲಕ. ಷಾಟ್‌ಗಳು ಗ್ರಹಿಕೆಗಿಂತ ಮುಖ್ಯವಾಗಿ ಪ್ರೇಕ್ಷಕರ ಸಂವೇದನೆಗೆ ತಾಕುತ್ತವೆ.  

ಒಂದು ಚಿತ್ರದ ನಿಜವಾದ ಕಟ್ಟೋಣವು ಮೂರನೆಯ ಹಂತದಲ್ಲಿ ನಡೆಯುತ್ತದೆ. ವಾಕ್ಯದಲ್ಲಿ ಹೇಗೆ ಪದಗಳನ್ನು ಬಳಸುತ್ತೇವೆಯೊ ಹಾಗೆ ದೃಶ್ಯ(scene)ಗಳಲ್ಲಿ ಷಾಟ್‌ಗಳನ್ನು ಬಳಸಲಾಗುತ್ತದೆ. ಸಂಕಲನ ಕ್ರಿಯೆಯು ಶಿಲ್ಪಿಯೊಬ್ಬ ಅಗತ್ಯವಿಲ್ಲದ ಭಾಗಗಳನ್ನು ಬಿಟ್ಟು ಕಲ್ಲು ಅಥವಾ ಕಾಷ್ಠ ಅಥವಾ ಇನ್ನಾವುದೇ ವಸ್ತುವಿನಲ್ಲಿ ಮೂರ್ತಿಯನ್ನು ಸಾಕಾರಗೊಳಿಸುವಂಥ ಕಲ್ಪನೆ ಮತ್ತು ಕೌಶಲವನ್ನು ಆಶಿಸುತ್ತದೆ.

ಪ್ರತಿಮೆಯೊಂದರ ಕೈಯಲ್ಲಿ ತೆಗೆಯಲಾಗದ ಬಳೆಯನ್ನು ಶಿಲ್ಪಿ ಹೇಗೆ ತೊಡಿಸಿರಬಹುದು ಎಂದು ತಲೆ ಕೆಡಿಸುವ ಕರಾರುವಾಕ್ಕಾದ ಕಲ್ಪನೆ ಮತ್ತು ಸೂಕ್ಷ್ಮ ಕೌಶಲ. ಕುರೋಸಾವ ಮೊದಲಾದ ದಿಗ್ಗಜರು ತಾವು ಚಿತ್ರವೊಂದನ್ನು ಸಂಕಲನ ಮೇಜಿನ ಮೇಲೇ ಸೃಷ್ಟಿಸುತ್ತೇವೆ, ಉಳಿದದ್ದೆಲ್ಲ ಅದಕ್ಕೆ ಪೂರ್ವಸಿದ್ಧತೆ ಮಾತ್ರ ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಚಿತ್ರಕ್ಕೆ ಪೂರಕವಾದ ಶಬ್ದ ಜೋಡಣೆಯೂ ಆಗುತ್ತದೆ. ಈ ಹಂತದಲ್ಲಿ ಚಿತ್ರಕ್ಕೆ ವಜ್ರದ ಕಟ್ಟಡ ಮತ್ತು ಮೆರಗು ದೊರೆಯುತ್ತದೆ. 

ಮೊದಲಿಗೆ ಪೋಸ್ಟ್‌ಮನ್ ಇನ್ ದಿ ಮೌಂಟೈನ್ಸ್ ಚಿತ್ರದ ಚಿತ್ರಕಥೆಯನ್ನು ತೆಗೆದುಕೊಳ್ಳೋಣ. ಅಧ್ಯಯನದ ದೃಷ್ಟಿಕೋನದಿಂದ ಒಂದೇ ಚಿತ್ರದ ಕನಿಷ್ಟ ಎರಡು ಚಿತ್ರಕಥೆಗಳನ್ನು ನೋಡ ಬಹುದು. ಬಹುತೇಕ ಚಿತ್ರೀಕರಣಪೂರ್ವ ರಚಿಸಿದ ಚಿತ್ರಕಥೆಯು ಚಿತ್ರೀಕರಣ ಸಂದರ್ಭದಲ್ಲಿ ಒಂದು ಸಾರಿ, ಮತ್ತೆ ಸಂಕಲನ ಸಮಯದಲ್ಲಿ ಮತ್ತೊಂದು ಸಾರಿ ಬದಲಾವಣೆಗೊಳಗಾಗುತ್ತದೆ.

ಇನ್ನೊಂದು ಅರ್ಥದಲ್ಲಿ ಮೊದಲು ರಚಿಸುವ ಚಿತ್ರಕಥೆಯು ಚಿತ್ರ ತಯಾರಿಕೆಗೆ ಮಾರ್ಗದರ್ಶಿ ಸೂತ್ರ ಅಥವ ನೀಲನಕ್ಷೆ ಮಾತ್ರ. ಮೊದಲು ರಚಿಸಿಕೊಂಡ ಚಿತ್ರಕಥೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಣ ನಡೆಯುತ್ತದೆ. ಲೊಕೇಶನ್, ಕಲಾವಿದರ ಪ್ರತಿಭೆ, ಛಾಯಾಗ್ರಾಹಕರ ಸೂಚನೆ, ನಿರ್ದೇಶಕರ ಮನಸ್ಸಿನಲ್ಲಿ ಮೂಡುವ ಹೊಸ ಹೊಳಹು ಇನ್ನು ಹಲವಾರು ಅಂಶಗಳು ಬರವಣಿಗೆಯ ರೂಪದಲ್ಲಿರುವ ಚಿತ್ರಕಥೆಯನ್ನು ಆ ಚಿತ್ರದ ಆಶಯಕ್ಕನುಸಾರವಾಗಿ ಉತ್ತಮೀಕರಿಸುತ್ತವೆ, ಅಧ್ವಾನೀಕರಣವೂ ಆಗಬಹುದು. ಈ ಹಂತದಲ್ಲಿ ಸಿನಿ ಅಭಿವ್ಯಕ್ತಿಗೆ ಅಗತ್ಯವಾದ ಎಲ್ಲ ರೀತಿಯ ವಿವರಗಳು ಸೇರ್ಪಡೆಯಾಗುತ್ತವೆ.

ಸಂಕಲನ ಸಮಯದಲ್ಲಂತೂ ಮೂಲ ಚಿತ್ರಕಥೆಯಲ್ಲಿನ ದೃಶ್ಯಗಳ ಅನುಕ್ರಮಣಿಕೆಯಿಂದ ಹಿಡಿದು ಬೇರೆಲ್ಲವೂ ಚಿತ್ರದ ಮುಖ್ಯ ಆಶಯವೊಂದನ್ನು ಬಿಟ್ಟು ಸಂಪೂರ್ಣವಾಗಿ ಬದಲಾಗಿಬಿಡಬಹುದು. ಇಲ್ಲಿ ಚಿತ್ರವೊಂದು ನಿಜವಾಗಲೂ ಅರಳುತ್ತದೆ. ಚಿತ್ರವೊಂದರ ನಿಜವಾದ ಸೃಷ್ಟಿಕ್ರಿಯೆ ನಡೆಯುವುದು ಈ ಹಂತದಲ್ಲೆ. ಸಾಮಾನ್ಯವಾಗಿ ಚಿತ್ರ ಪೂರ್ಣಗೊಂಡ ನಂತರದ ಚಿತ್ರಕಥೆಯು ಮೂಲ ಚಿತ್ರಕಥೆಗಿಂತ ವಿಭಿನ್ನವಾಗಿರುತ್ತದೆ. ಪ್ರಕಟಗೊಂಡಿರುವ ಮೂಲ ಚಿತ್ರಕಥೆಯೊಂದಿಗೆ ಪೂರ್ಣಗೊಂಡ ಚಿತ್ರವನ್ನು ಹೋಲಿಸಿ ಅಧ್ಯಯನ ಮಾಡುವಾಗ ಹೊಂದಿಕೆಯಾಗದೆ ವಿದ್ಯಾರ್ಥಿಗಳು ಗಲಿಬಿಲಿಗೊಳ್ಳುವುದನ್ನ ಅನೇಕ ಬಾರಿ ಕಂಡಿದ್ದೇನೆ. ಇಲ್ಲಿ ಪೂರ್ಣಗೊಂಡಿರುವ ಪೋಸ್ಟ್‌ಮನ್ ಇನ್ ದಿ ಮೌಂಟೈನ್ಸ್ ಚಿತ್ರದ ಸ್ಥೂಲ ಚಿತ್ರಕಥೆಯನ್ನು ಗಮನಿಸೋಣ.  

ಚಿತ್ರದ ತಿರುಳು ಇಷ್ಟೆ: ಪರ್ವತ ಪ್ರದೇಶದಲ್ಲಿ ಅಪ್ಪ ಮತ್ತು ಮಗನ 223 ಕಿ.ಮೀ. ಪಯಣ 3 ಹಗಲು ಮತ್ತು 2 ರಾತ್ರಿಗಳ ಅವಧಿಯಲ್ಲಿ. ಉದ್ದೇಶ, ಅಕಾಲಿಕವಾಗಿ ಅಂಚೆಯಾಳಿನ ಕೆಲಸದಿಂದ ನಿವೃತ್ತನಾಗಿರುವ ಅಪ್ಪ ಮಗನಿಗೆ ಮಾರ್ಗದರ್ಶನ ಮಾಡುವುದು. ಇದು ಚಿತ್ರ ಮುಗಿಯುವ ವೇಳೆಗೆ ಅಂಚೆ ಕೆಲಸದ ಮಾರ್ಗದರ್ಶನ ಮಾತ್ರವಾಗಿ ಉಳಿಯುವುದಿಲ್ಲ. ಬದುಕಿನ ಉತ್ತಮ ಮೌಲ್ಯಗಳ ಮಾರ್ಗದರ್ಶನವೂ ಆಗಿಬಿಡುತ್ತದೆ.

ಮನೆಯಿಂದ ಹೊರಟು ಪರ್ವತಗಳಲ್ಲಿರುವ ಊರುಗಳಿಗೆ ಅಂಚೆ ಬಟವಾಡೆ ಮಾಡಿ ಮರಳುವಷ್ಟರಲ್ಲಿ ಅಪ್ಪ ಮಗ ಪರಸ್ಪರರನ್ನು ಹೆಚ್ಚು ಅರಿಯುತ್ತಾರೆ. ಮಗ ಅಪ್ಪನಿಂದ ತನ್ನ ಹೊಸ ಕೆಲಸದ ಬಗ್ಗೆ ಕಲಿತುಕೊಂಡ ಹಾಗೇ ಅಪ್ಪ ಮಗನಿಂದ ಮನೆಯ ಬಗ್ಗೆ, ಊರಿನ ಬಗ್ಗೆ, ತನ್ನ ಹೆಂಡತಿಯ ಬಗ್ಗೆ, ವ್ಯವಸ್ಥೆಯ ಬಗ್ಗೆ ಅರಿತುಕೊಳ್ಳುತ್ತಾನೆ. ಇವರಿಬ್ಬರ ಜೊತೆ ಪಯಣಿಸುವ ನಾಯಿ ಇಡೀ ಚಿತ್ರಕ್ಕೆ ಅಂತಃಕರಣ, ಲವಲವಿಕೆ ಮತ್ತು ಜೀವಂತಿಕೆಯನ್ನು ತುಂಬುತ್ತದೆ. ಪ್ರಾರಂಭದಲ್ಲಿ ತಾನೊಬ್ಬನೇ ಡ್ಯೂಟಿಗೆ ಹೋಗುತ್ತಿದ್ದೇನೆಂದು ಭಾವಿಸಿರುವ ಉತ್ಸಾಹಿ ಮಗನ ಜೊತೆ ಅವನಿಗೆ ದಾರಿ ಸರಿಯಾಗಿ ಗೊತ್ತಿಲ್ಲ. ಜೊತೆಯಲ್ಲಿ ನೀನೂ ಹೋಗು ಎಂದು ಅಪ್ಪ ನಾಯಿಗೆ ಹೇಳಿದರೆ ಅದು ಒಲ್ಲೆ ಎಂದು ಹಿಂದೆ ಉಳಿಯುತ್ತದೆ. ಆಗ ಮಗ, ಅದು ಇಲ್ಲೇ ಇರಲಿ. ನನಗೆ ತೊಂದರೆ ತಪ್ಪುತ್ತದೆಎನ್ನುತ್ತಾನೆ. ಆದರೆ ಮುಂದೆ ಆ ನಾಯಿ ಇವನ ತೊಂದರೆಗಳನ್ನು ತಪ್ಪಿಸುತ್ತದೆ.

ಪಯಣ ಮುಗಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ನಾಯಿಯೊಂದಿಗೆ ಮಗನ ಸಂಬಂಧ ಅವರಪ್ಪನಷ್ಟೇ ಅವಿನಾಭಾವದ್ದಾಗಿರುತ್ತದೆ. ಬೆಟ್ಟದ ತುದಿಯಲ್ಲಿನ ಅರವಂಟಿಗೆಯಂಥ ಬೃಹತ್ ಕಟ್ಟಡದಲ್ಲಿ ಇವನ ಅನನುಭವದ ಸಣ್ಣ ಎಚ್ಚರ ತಪ್ಪಿನಿಂದಾಗಿ ಜೋರಾಗಿ ಬೀಸುವ ಗಾಳಿಯಲ್ಲಿ ಕೆಲವು ಪತ್ರಗಳು ಹಾರಿ ಹೋಗುತ್ತಿದ್ದಾಗ ಅಪ್ಪ ಕೆಲವನ್ನು ಹಿಡದುಕೊಳ್ಳುತ್ತಾನೆ. ಇನ್ನೇನು ಕೈ ತಪ್ಪಿಯೇ ಹೋಯಿತು ಎಂದುಕೊಂಡಿದ್ದ ಪತ್ರವೊಂದನ್ನು ವೇಗವಾಗಿ ಓಡಿ ಈ ನಾಯಿ ಲಾಘವದಿಂದ ಹಾರಿ ಹಿಡಿಯುತ್ತದೆ. ಅಪ್ಪ ತನ್ನ ಕೆಲಸಕ್ಕೆ ಎಷ್ಟು ಅರ್ಪಿಸಿಕೊಂಡಿರುತ್ತಾನೆಂದರೆ ಅವನ ಪ್ರಾಣವನ್ನೇ ಕಾಪಾಡಿದಷ್ಟು ಸಮಾಧಾನವಾಗುತ್ತದೆ ಅವನಿಗೆ. ಮಗನಿಗೆ ನಾಯಿ ಹೀರೊ ಆಗಿಬಿಡುತ್ತದೆ. (ಮುಂದಿನ ಕಂತಿಗೆ ಕಾಯಿರಿ)

ಹೊಸ ಅಂಕಣ ಸಿನಿಮಾ “ಸ್ಕೋಪ್” !

without comments

ಸಾಂಗತ್ಯ ಹೊಸ ಅಂಕಣವನ್ನು ಆರಂಭಿಸುತ್ತಿದೆ. ಅದು  ಸಿನಿಮಾ “ಸ್ಕೋಪ್” !.

ಒಂದು ಸಿನಿಮಾದ ಕುರಿತ ಅಧ್ಯಯನದ ಅಂಕಣ. ಸಿನಿಮಾ ಸುತ್ತ ಅರಿವು ಬೆಳೆಸಿಕೊಳ್ಳುವತ್ತ ಸಹಕಾರಿಯಾಗಲೆಂಬುದೇ ಇದರ ಉದ್ದೇಶ. 

paramesh

ಒಂದು ಚಿತ್ರ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಒಂದೇ ಸಾಲಿನಲ್ಲಿ ಹೇಳುವುದು ವಿಮರ್ಶೆಯಲ್ಲ, ಇಂದು ಅದೇ ವಿಮರ್ಶೆ ಎಂದಾಗಿದೆ. ಇತ್ತೀಚೆಗಷ್ಟೇ ನಿರ್ದೇಶಕ ಅಭಯಸಿಂಹ ತಮ್ಮ ಬ್ಲಾಗಿನಲ್ಲಿ ವಿಮರ್ಶೆ ಕುರಿತೇ ಬರೆದಿದ್ದರು. 

ಆದರೆ ಒಂದು ಚಿತ್ರದ ಭಿನ್ನ ಭಿನ್ನ ನೆಲೆಗಳನ್ನು ಶೋಧಿಸುತ್ತಾ, ಇರಬಹುದಾದ ಸೂಕ್ಷ್ಮ ನೆಲೆಗಳನ್ನು ಅನಾವರಣಗೊಳಿಸುವುದು, ಹಾಗೆಯೇ ಚಿತ್ರ ತಂಡದ ಪ್ರಯತ್ನ ಅರ್ಥ ಪಡೆದಿರುವ ಸಾಧ್ಯತೆಯನ್ನು ತಿಳಿಯುತ್ತಾ ಹೋಗುವುದು. ಅಂದರೆ, ನಮ್ಮೊಳಗೆ ಒಂದು ಸಿನಿಮಾ ಬೆಳೆಯಲು, ಹತ್ತಿರವಾಗಲು, ಅರ್ಥವಾಗಲು ಬೇಕಾಗುವ ಪ್ರಯತ್ನ ಎನ್ನಬಹುದು.

ಈ ನೆಲೆಯಲ್ಲಿ ಹೆಮ್ಮೆಯ ಸಿನಿ ತಜ್ಞ ಪರಮೇಶ್ ಗುರುಸ್ವಾಮಿ ತಮ್ಮ ಕಾಲಂನೊಂದಿಗೆ ಚಿತ್ರರಂಗದ ಹತ್ತು ಹಲವು ಸಂಗತಿಗಳನ್ನು ತಿಳಿಸುತ್ತಿದ್ದಾರೆ. ಈಗ ಈ ಸ್ಕೋಪ್ ನಲ್ಲೂ ಅವರೇ ಆಗಾಗ್ಗೆ ಒಂದೊಂದು ಚಿತ್ರದ ಕುರಿತು ವಿಶ್ಲೇಷಿಸುವರು. 

ಇದು ಸಿನಿಮಾ ಅಧ್ಯಯನದ ದೃಷ್ಟಿಯ ಅಂಕಣವಾಗಿರುವುದರಿಂದ ಬರಹಗಳು ಸ್ವಲ್ಪ ದೀರ್ಘವೆನಿಸಬಹುದು. ಆದರೆ ಆಸಕ್ತಿದಾಯಕವಾಗಿರುತ್ತವೆ. ಒಂದು ಚಿತ್ರದ ಬರಹವನ್ನು ಮೂರ್ನಾಲ್ಕು ಕಂತುಗಳಲ್ಲಿ ನೀಡಲಾಗುವುದು. ಈ ಕುರಿತು ನಿಮ್ಮ ಸಲಹೆ, ಅಭಿಪ್ರಾಯಗಳಿಗೂ ಸ್ವಾಗತವಿದೆ. 

ಮೊದಲ ಚಿತ್ರದ ಅಧ್ಯಯನ “ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್ಸ್”, ಭಾಷೆ : ಚೀನಿ. ಸದ್ಯವೇ ಇದರ ಕುರಿತಾದ ಬರಹ ಪ್ರಕಟವಾಗಲಿದೆ.