ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಸಂ-ದರ್ಶನ’ Category

ಕಾರ್ನಾಡ್ ಸಂದರ್ಶಿಸಿದಂತೆ ಶ್ಯಾಂ ಬೆನಗಲ್

without comments

ಖ್ಯಾತ ನಟ, ನಿರ್ದೇಶಕ, ನಾಟಕಕಾರ ಗಿರೀಶ್ ಕಾರ್ನಾಡ್ ನ್ಯಾಶನಲ್ ಫಿಲ್ಮ್ ಥೇಟರ್‌ನಲ್ಲಿ 2002 ರಲ್ಲಿ ನಿರ್ದೇಶಕ ಶ್ಯಾಂ ಬೆನಗಲ್‌ರೊಂದಿಗೆ ನಡೆಸಿದ ಸಂದರ್ಶನದ ಸಂಕ್ಷಿಪ್ತ ರೂಪವನ್ನು ಸಂಗ್ರಹಿಸಿ ಸಾಂಗತ್ಯಕ್ಕೆ ಕಳುಹಿಸಿದವರು ಸೂರ್ಯಕಾಂತ್. ಅಂದ ಹಾಗೆ ಶ್ಯಾಮ್ ಹಾಗೂ ಗಿರೀಶ್ ಆತ್ಮೀಯ ಸ್ನೇಹಿತರು. ಶ್ಯಾಂರ ಹಲವು ಚಿತ್ರಗಳಿಗೆ ಗಿರೀಶ್ ಸಂಭಾಷಣೆ ಬರೆದಿದ್ದು, ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ನಿಮ್ಮ ಮೊದಲ ಚಿತ್ರ ಅಂಕುರ್ ಪ್ರಾರಂಭವಾಗಲು ಸಾಕಷ್ಟು ವರ್ಷಗಳೇ ಬೇಕಾಯಿತಲ್ಲವೇ?

ಹೌದು, ನಾನು 18 ವರ್ಷದವನಿದ್ದಾಗ ನಾನು ಇಪ್ಪತ್ತಕ್ಕೆ ಕಾಲಿಟ್ಟ ಕೂಡಲೆ ಮೊದಲ ಚಿತ್ರ ನಿರ್ದೇಶಿಸುವ ಎಂಬ ವಿಶ್ವಾಸವಿತ್ತು. 20ಕ್ಕೆ ಕಾಲಿಟ್ಟಾಗ ಇನ್ನೆರಡು ವರ್ಷದಲ್ಲಿ ಚಿತ್ರ ನಿರ್ದೇಶಿಸಲೇಬೇಕು ಇಲ್ಲವಾದರೆ ನಾನು ಸತ್ತು ಬಿಡುತ್ತೇನೆ ಎಂದುಕೊಂಡಿದ್ದೆ. ಇದೂ ಹೀಗೆ ಸಾಗಿತು ನನ್ನ ಆಸೆ ಕೈಗೂಡಿದ್ದು 30ನೇ ವಯಸ್ಸಿನಲ್ಲಿ ನನ್ನ ಆಸೆ ಕೈಗೂಡಿತು. ಅದಕ್ಕೆ ಕಾರಣವೂ ಇತ್ತು, ನಾನು ಕಾಲೇಜಿನಲ್ಲಿದ್ದಾಗ ಅಂಕುರ್ ಚಿತ್ರದ ಕತೆ ಬರೆದಿದ್ದೆ. ಅದನ್ನು ಉಜ್ಜಿ, ತೀಡಿ ಮುಂಬೈನ ಪ್ರತಿ ನಿರ್ಮಾಪಕರ ಬಳಿಯೂ ತೆರಳಿದೆ. ನಾನು ನಿರ್ಮಾಪಕನನ್ನು ಹುಡುಕಲು ಭರ್ತಿ ಇಪ್ಪತ್ತು ವರ್ಷ ಬೇಕಾಯಿತು.

ಆದರೆ ಈ ಅವಧಿಯಲ್ಲಿ ನೀವು ಯಶಸ್ವಿ ಜಾಹೀರಾತು ನಿರ್ಮಾಪಕರಾಗಿದ್ದೀರಿ…

ನಾನು ಜಾಹೀರಾತು ಪ್ರಪಂಚದಲ್ಲಿ ಯಶಸ್ವಿ ನಿರ್ಮಾಪಕ, ನಿರ್ದೇಶಕನಾಗಿದ್ದೆ. ಹಲವಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿದ್ದೆ. ಸಿನಿಮಾ ಪ್ರಪಂಚದ ಬಗ್ಗೆ ನನಗೆ ಅರಿವಿತ್ತು. ಆದರೆ ಜಾಹೀರಾತು ನಿರ್ಮಾಣದಲ್ಲಿ ತೃಪ್ತಿಯಿರಲಿಲ್ಲ, ಪರಿಣಾಮ ಚಿತ್ರ ನಿರ್ದೇಶಿಸುವುದಕ್ಕಾಗಿ ಜಾಹೀರಾತು ನಿರ್ಮಾಣ ಕೈಬಿಟ್ಟೆ. Read the rest of this entry »

Written by saangatya

June 25, 2009 at 11:24 am

“ನನ್ನ ಚಿತ್ರಗಳು ಜಗತ್ತನ್ನು ಬದಲಿಸೀತೆಂಬ ಭ್ರಮೆಯಿಲ್ಲ”

without comments

ಅಂತರ್ಜಾಲದಲ್ಲಿ ಸಿಕ್ಕ ಮಧುರ್ ಭಂಡಾರ್ಕರ್ ಅವರ ಹಲವು ಸಂದರ್ಶನಗಳ ಕೆಲ ಭಾಗಗಳನ್ನು ಪೂರ್ವಿ ಸಾಂಗತ್ಯಕ್ಕೆ ಸಂಗ್ರಹಿಸಿ ಕಳುಹಿಸಿ ಕೊಟ್ಟಿದ್ದಾರೆ. ಇದು ಉತ್ಸವಕ್ಕೆ ಕಳೆಗಟ್ಟಲೆನ್ನುವ ಉದ್ದೇಶ ಹಾಗೂ ಅವರ ಚಿತ್ರಗಳ ಕುರಿತು ನಡೆಯುವ ಚರ್ಚೆಗೆ ವೇದಿಕೆಯಾಗಲೆಂದು ಇಲ್ಲಿ ಪ್ರಕಟಿಸಲಾಗಿದೆ.

*

“ನಾನು ವಾಣಿಜ್ಯ ದೃಷ್ಟಿಯಲ್ಲಿ ಚಿತ್ರಗಳನ್ನು ಮಾಡುವುದಿಲ್ಲ. ಮಾರುಕಟ್ಟೆಯ ಯಾವುದೇ ಸಿದ್ಧ ಸೂತ್ರಗಳನ್ನು ಆಧರಿಸಿ ಚಿತ್ರಗಳನ್ನು ಮಾಡದೇ, ಪ್ರಯೋಗಾತ್ಮಕವಾಗಿ ಚಿತ್ರ ನಿರ್ಮಿಸಿ ಲಾಭ ಮಾಡುವುದು ನನ್ನ ಪ್ರಯತ್ನ’ ಎನ್ನುತ್ತಾರೆ ಮಧುರ್ ಭಂಡಾರ್ಕರ್.

“ನನ್ನ ಚಿತ್ರಗಳನ್ನು ಜೀವನದ ವಾಸ್ತವ ಸನ್ನಿವೇಶಗಳ ಜತೆಗೆ ಅಷ್ಟೊಂದು ಸನಿಹವಿರಿಸಿ ಯಾಕೆ ವಿಮರ್ಶಿಸುತ್ತಾರೋ ನನಗೆ ತಿಳಿಯದು.    ಬಹುಶಃ ಅದೇ ನಾನು ಹೆಗ್ಗಳಿಕೆ ಪಡಬಹುದಾದ ಅಂಶವಿರಬಹುದು’.
ಕಾರ್ಪೋರೇಟ್ ಸಿನಿಮಾ ಕುರಿತು ಹೇಳುತ್ತಾ, “ನಾನು ವಾಣಿಜ್ಯ ಜಗತ್ತಿನ ಬಗ್ಗೆ ಚಿತ್ರ ಮಾಡಲು ನಿರ್ಧರಿಸಿದಾಗ ಅದರ ಬಗ್ಗೆ ಅಧಿಕೃತತೆ-ವಾಸ್ತವವನ್ನು ಕಟ್ಟಿಕೊಡಲು ಗಮನಹರಿಸಿದೆ. ನನ್ನ “ಸತ್ತಾ’, “ಪೇಜ್ 3’, ಚಾಂದಿನಿ ಬಾರ್‌ನಲ್ಲಿ ಆಯಾ ಲೋಕದ ವಾಸ್ತವತೆಯನ್ನು ಕಟ್ಟಿಕೊಟ್ಟಂತೆಯೇ. ಯಾಕೆಂದರೆ ಅವೆಲ್ಲವನ್ನೂ ನಕಲು ಮಾಡಲಾಗದು. ನನ್ನ ವಾಣಿಜ್ಯ ಜಗತ್ತು “ಫಿಲ್ಮಿ” ಯಾಗಿಯೇ ಕಾಣಬೇಕೆಂದು ಬಯಸಲಾರೆ’ ಎಂದಿದ್ದಾರೆ.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿತ್ರಗಳನ್ನು ಮಾಡುವುದು ನನ್ನ ಸ್ವಭಾವ ಮತ್ತು ಹವ್ಯಾಸ. ಒಂದುವೇಳೆ ಚಲನಚಿತ್ರ ಜಗತ್ತಿನ ಬಗ್ಗೆ ಚಿತ್ರ ಮಾಡಲು ಹೊರಟರೆ, ಅದರದ್ದೇ ಆದ ಭಾಷಾಬನಿಯನ್ನು ಬಳಸಬೇಕು, ಇಲ್ಲವೇ ಚಿತ್ರ ಮಾಡಬಾರದು. ಇದು ನನ್ನ ಅಭಿಪ್ರಾಯ. ಹಾಗಾಗಿ ನನ್ನ ವೀಕ್ಷಕ ಸಮುದಾಯ ಎಂಥದ್ದು ಎಂಬುದು ಗೊತ್ತಿದೆ. ಅದರಂತೆಯೇ ಚಿತ್ರ ಮಾಡುತ್ತಿದ್ದೇನೆ ಎಂಬುದು ಅವರ ವಿಸ್ತರಿತ ಉತ್ತರ.

ಪ್ರಶಸ್ತಿ ಬಂದ ಸಂದರ್ಭದ ಪ್ರಶ್ನೆಗೆ, “ನಾನು ಇಂಥ ಘಳಿಗೆಯನ್ನೇ ನಿರೀಕ್ಷಿಸಿರಲಿಲ್ಲ. ಅತ್ಯುತ್ತಮವಾದುದನ್ನು ಮಾಡಬೇಕೆಂಬ ಹಂಬಲವಷ್ಟೇ ನನ್ನದಾಗಿತ್ತು. ಹಾಗಾಗಿ ಪ್ರತಿ ಪ್ರಯತ್ನಕ್ಕೂ ಹೆಚ್ಚು ಶ್ರಮ ಹಾಕಿ ಕೆಲಸ ಮಾಡಿದ್ದೆ. ನನ್ನ ಪ್ರಯತ್ನ ನನಗೆ ಮೊದಲು ಖುಷಿಕೊಡಬೇಕು. ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ನಮ್ಮ ಪ್ರಜ್ಞೆಯ ಎದುರು ಪ್ರಾಮಾಣಿಕವಾಗಿ ಇದ್ದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಪ್ರಶಸ್ತಿ ಬಂದದ್ದೂ ಅಂಥ ನನ್ನ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸಿದೆ’.

ನಿಮ್ಮ ಸಿನಿಮಾಗಳಲ್ಲಿ ವಾಸ್ತವ ಜಗತ್ತಿನ ಸನ್ನಿವೇಶಗಳನ್ನೇ ಬಿಂಬಿಸುವುದರಿಂದ ಏನಾದರೂ ಬದಲಾವಣೆ ಸಾಧ್ಯವೆನಿಸುತ್ತದೆಯೇ ? ಎಂಬ ಪ್ರಶ್ನೆಗೆ ಅವರ ಉತ್ತರ-”ನಾನೊಬ್ಬ ಚಿತ್ರ ನಿರ್ದೇಶಕ. ನನಗನ್ನಿಸಿದ್ದನ್ನು ಚಿತ್ರದ ಮೂಲಕ ನೀಡುತ್ತೇನೆ. ನಾನೇನೂ ಸುಳ್ಳನ್ನು ಹೇಳುತ್ತಿಲ್ಲ ;ವಾಸ್ತವ ಜಗತ್ತನ್ನೇ ಎಲ್ಲರೆದುರು ತೆರೆದಿಡುತ್ತಿದ್ದೇನೆ. ಎಲ್ಲವನ್ನೂ ಸಿನಿಮಾ ಬದಲಿಸಬಹುದೆಂಬ ಭ್ರಮೆಯೂ ನನ್ನಲಿಲ್ಲ. ಆದರೆ ಕೆಲವರಿಗಾದರೂ ಪ್ರೇರಣೆಯಾಗಬಹುದು. ಬದುಕಿನ ಹಲವು ಸಂದರ್ಭಗಳಲ್ಲಿ ಪರಿಹಾರದ ಸಾಧ್ಯತೆಯನ್ನು ಅವು ಹೇಳಬಹುದಾದರೂ, ಬದಲಾವಣೆಯ ಹಿಂದಿನ ಪ್ರಬಲ ಶಕ್ತಿಯಾಗಿ ಕಾರ್ಯ ನಿರ್ವಹಿಸಬಲ್ಲದು ಎಂದು ಹೇಳಲಾರೆ’.

Written by saangatya

February 11, 2009 at 4:27 pm