ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘"ಸಂಗತಿ"’ Category

ಪಥೇರ್ ಪಾಂಚಾಲಿ ಮಾಡಿದ ಬಗೆ ಹೀಗೆ

with one comment

ಸಿನಿಮಾಪ್ರೇಮಿ ಆನಂದ್ ಸಂಗ್ರಹಿಸಿ ಅನುವಾದಿಸಿಕೊಟ್ಟ ಈ ಲೇಖನ ಸತ್ಯಜಿತ್ ರೇ ಅವರು “ಪಥೇರ್ ಪಾಂಚಾಲಿ” ಮಾಡಿದ ಬಗೆಯನ್ನು ಕಟ್ಟಿಕೊಡುವಂಥದ್ದು. ಪಥೇರ್ ಪಾಂಚಾಲಿ ಒಂದು ಅದ್ಭುತ ಚಿತ್ರ. ಅದನ್ನು ನಿರ್ಮಿಸಿದ ಬಗೆಯೂ ವಿಶಿಷ್ಟವೇ. ಈ ಲೇಖನವನ್ನು ಎರಡು ಕಂತುಗಳಲ್ಲಿ ಪ್ರಕಟಿಸುತ್ತಿದ್ದೇವೆ-ಸಂ.

ನೈಜ ಸಿನಿಮಾ ಮೇಲೆ ಸತ್ಯಜಿತ್ ರೇ ಅವರ ನಂಬಿಕೆ ದೃಢಪಡಿಸಿದ ಬೈಸಿಕಲ್ ಥೀವ್ಸ್(1950)
ಭಾರತ ಚಲನಚಿತ್ರ ಕಂಡ ಅದ್ಭುತ ಮತ್ತು ಅನನ್ಯ ದೃಶ್ಯಕವಿ ಸತ್ಯಜಿತ್‌ರೇ 1950 ರಲ್ಲಿ ಇಂಗ್ಲೆಂಡ್‌ಗೆ ಪತ್ನಿ ಸಮೇತ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದರು. 16 ದಿನಗಳ ಈ ಪ್ರಯಾಣ ಅವರ ಜೀವನದಲ್ಲಿ ಮಹತ್ತರ ತಿರುವು ನೀಡಿತ್ತು. ಜಾಗತಿಕ ಚಲನಚಿತ್ರ ಕ್ಷೇತ್ರದಲ್ಲಿ ಅಳಿಯದ ಛಾಪು ಮೂಡಿಸಿದ ಪಥೇರ್ ಪಾಂಚಾಲಿಯ ಲೇಖ ರೂಪ ಮೂಡಿತ್ತು. ಅವರ ಬಳಿ ಇದ್ದ ನೋಟ್‌ಬುಕ್‌ನಲ್ಲಿ ಚಲನಚಿತ್ರದ ಟಿಪ್ಪಣಿಗಳು ಸಿದ್ದವಾಗಿದ್ದವು.ಅವರಿಗೆ ಚಿತ್ರವನ್ನು ನೈಜ ಸ್ಥಳಗಳಲ್ಲಿ , ಕಲಾವಿದರಿಗೆ ಮೇಕಪ್ ಇಲ್ಲದೇ, ಹೊಸ ಮುಖಗಳೊಂದಿಗೆ ಚಿತ್ರೀಕರಿಸುವ ಆಸಕ್ತಿ ಇತ್ತು. ಆದರೆ ಇದಕ್ಕೆ ಸ್ನೇಹಿತರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು.

ಆರು ತಿಂಗಳು ವಿದೇಶವಾಸದಲ್ಲಿ ವಿಟೋರಿಯೋ ಡೆ ಸಿಕಾ ಅವರ ಬೈಸಿಕಲ್ ಥೀವ್ಸ್ ಸೇರಿದಂತೆ ರೇ ನೂರಾರು ಚಲನಚಿತ್ರಗಳನ್ನು ವೀಕ್ಷಿಸಿದ್ದರು. ಬೈಸಿಕಲ್ ಥೀವ್ಸ್ ಚಿತ್ರ ರೇ ಮೇಲೆ ಅಚ್ಚಳಿಯದ ಪ್ರಭಾವ ಬೀರಿತ್ತು. ಅವರ್‌ಫಿಲ್ಮ್ಸ್, ದೇರ್ ಫಿಲ್ಮ್ಸ್ ನ ಪರಿಚಯದಲ್ಲಿ “ ಲಂಡನ್‌ನಲ್ಲಿ ನನ್ನ ವಾಸ್ತವ್ಯದ ಉದ್ದಕ್ಕೂ ಬೈಸಿಕಲ್ ಥೀವ್ಸ್ ಮತ್ತು ನವ-ವಾಸ್ತವಿಕತೆಯ ಸಿನೆಮಾದ ಪಾಠಗಳು ನನ್ನಲ್ಲಿ ಉಳಿದುಕೊಂಡಿದ್ದವು” ಎಂದು ಬರೆದಿದ್ದರು.

ಬಹುತೇಕ ಹವ್ಯಾಸಿ ನಟನಟಿಯರನ್ನು ಬಳಸಿ, ನೈಜ ಸ್ಥಳಗಳಲ್ಲಿ ಚಿತ್ರೀಕರಿಸುವ ಅವರ ನಿರ್ಧಾರವನ್ನು ಈ ಚಲನಚಿತ್ರ ಪುನರ್‌ದೃಢೀಕರಿಸಿತ್ತು. ಅಲ್ಲಿಂದ ಭಾರತಕ್ಕೆ ಹಡಗಿನಲ್ಲಿ ವಾಪಸ್ ಬರುವಾಗ ಪಥೇರ್ ಪಾಂಚಾಲಿಯ ಸಂಪೂರ್ಣ ರೂಪರೇಷೆಗಳನ್ನು ರೇ ಸಿದ್ಧಪಡಿಸಿದ್ದರು.
ಹುಡುಕಾಟ
ಚಲನಚಿತ್ರ ತಯಾರಿಕೆಯಲ್ಲಿ ಯಾವುದೇ ಅನುಭವವಿಲ್ಲದ ರೇ ೧೫೦ರ ಅಂತ್ಯದಲ್ಲಿ ಲಂಡನ್‌ನಿಂದ ಹಿಂತಿರುಗಿ, ತಮ್ಮ ಚಿತ್ರಕ್ಕೆ ತಂತ್ರಜ್ಞರಾಗಿ ಕೆಲಸ ಮಾಡಲೆಂದು ಕೆಲವು ಯುವಕರನ್ನು ಕಲೆಹಾಕಿದರು. ಸ್ಥಿರಛಾಯಾಚಿತ್ರಗಾರರಾಗಿದ್ದ ಸುಬ್ರತಾ ಮಿತ್ರ ವರನ್ನು ತಮ್ಮ ಚಿತ್ರದ ಛಾಯಾಗ್ರಾಹಕರಾಗುವಂತೆ ಮನವೊಲಿಸಿದರು. ಅನಿಲ್‌ಚೌಧರಿ ನಿರ್ಮಾಣ ನಿಯಂತ್ರಕರಾದರೆ, ಬನ್ಸಿ ಚಂದ್ರಗುಪ್ತಾ ಕಲಾ ನಿರ್ದೇಶಕರಾದರು. Read the rest of this entry »

Written by saangatya

July 6, 2009 at 7:57 am

ಬೈಸಿಕಲ್ ಥೀವ್ಸ್ ಮತ್ತು ರೇ

without comments

ಇದು “ಸಂಗತಿ”. ವಿವಿಧ ಚಿತ್ರಗಳ ಬಗ್ಗೆ, ನಿರ್ದೇಶಕರು, ನಟರು…ಇತ್ಯಾದಿಗಳ ಬಗ್ಗೆ ಇರುವ ಪುಟ್ಟ ಪುಟ್ಟ ಸಂಗತಿಗಳ ಬೊಗಸೆ. ನಿಮ್ಮಲ್ಲಿದ್ದರೂ ಕಳಿಸಿಕೊಡಿ.

ಭಾರತ ಚಲನಚಿತ್ರ ಕಂಡ ಅದ್ಭುತ ಮತ್ತು ಅನನ್ಯ ದೃಶ್ಯಕವಿ ಸತ್ಯಜಿತ್‌ರೇ 1950 ರಲ್ಲಿ ಇಂಗ್ಲೆಂಡ್‌ಗೆ ಪತ್ನಿ ಸಮೇತ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದರು. 16 ದಿನಗಳ ಈ ಪ್ರಯಾಣ ಅವರ ಜೀವನದಲ್ಲಿ ಮಹತ್ತರ ತಿರುವು ನೀಡಿತ್ತು. ಜಾಗತಿಕ ಚಲನಚಿತ್ರ ಕ್ಷೇತ್ರದಲ್ಲಿ ಅಳಿಯದ ಛಾಪು ಮೂಡಿಸಿದ ಪಥೇರ್ ಪಾಂಚಾಲಿಯ ಲೇಖ ರೂಪ ಮೂಡಿತ್ತು. ಅವರ ಬಳಿ ಇದ್ದ ನೋಟ್‌ಬುಕ್‌ನಲ್ಲಿ ಚಲನಚಿತ್ರದ ಟಿಪ್ಪಣಿಗಳು ಸಿದ್ದವಾಗಿದ್ದವು.ಅವರಿಗೆ ಚಿತ್ರವನ್ನು ನೈಜ ಸ್ಥಳಗಳಲ್ಲಿ , ಕಲಾವಿದರಿಗೆ ಮೇಕಪ್ ಇಲ್ಲದೇ, ಹೊಸ ಮುಖಗಳೊಂದಿಗೆ ಚಿತ್ರೀಕರಿಸುವ ಆಸಕ್ತಿ ಇತ್ತು. ಆದರೆ ಇದಕ್ಕೆ ಸ್ನೇಹಿತರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು.
ray
ಆರು ತಿಂಗಳು ವಿದೇಶವಾಸದಲ್ಲಿ ವಿಟೋರಿಯೋ ಡೆ ಸಿಕಾ ಅವರ “ಬೈಸಿಕಲ್ ಥೀವ್ಸ್” ಸೇರಿದಂತೆ ರೇ ನೂರಾರು ಚಲನಚಿತ್ರಗಳನ್ನು ವೀಕ್ಷಿಸಿದ್ದರು. ಬೈಸಿಕಲ್ ಥೀವ್ಸ್ ಚಿತ್ರ ರೇ ಮೇಲೆ ಅಚ್ಚಳಿದ ಪ್ರಭಾವ ಬೀರಿತ್ತು. ಅವರ್ ಫಿಲ್ಮ್ಸ್, ದೇರ್ ಫಿಲ್ಮ್ಸ್ ನ ಪರಿಚಯದಲ್ಲಿ “ ಲಂಡ್‌ನಲ್ಲಿ ನನ್ನ ವಾಸ್ತವ್ಯದ ಉದ್ದಕ್ಕೂ ಬೈಸಿಕಲ್ ಥೀವ್ಸ್ ಮತ್ತು ನವ-ವಾಸ್ತವಿಕತೆಯ ಸಿನಿಮಾದ ಪಾಠಗಳು ನನ್ನಲ್ಲಿ ಉಳಿದುಕೊಂಡಿದ್ದವು” ಎಂದು ಬರೆದಿದ್ದರು.

ಬಹುತೇಕ ಹವ್ಯಾಸಿ ನಟನಟಿಯರನ್ನು ಬಳಸಿ, ನೈಜ ಸ್ಥಳಗಳಲ್ಲಿ ಚಿತ್ರೀಕರಿಸುವ ಅವರ ನಿರ್ಧಾರವನ್ನು ಈ ಚಲನಚಿತ್ರ ಪುನರ್‌ದೃಢೀಕರಿಸಿತ್ತು.

Written by saangatya

June 18, 2009 at 11:29 am