Archive for the ‘ವಿಡಿಯೊ ದೃಶ್ಯಾವಳಿ’ Category
ಪುಟ್ಟಣ್ಣ ಕಣಗಾಲ್…ರ ಚಿತ್ರದ ಹಾಡುಗಳು
ಕನ್ನಡ ಚಿತ್ರೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದಂತೆಯೇ ಅಂಥದೊಂದು ವಾತಾವರಣವನ್ನು ನಮ್ಮ ಹೊಸ ವಿಡಿಯೋ ಕ್ಲಿಪ್ಪಿಂಗ್ ಗಳು ರೂಪಿಸುತ್ತಿವೆ. ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ. ಸಮಕಾಲೀನ ಚರ್ಚಿತ ವಿಷಯಗಳಿಗೆ ಧ್ವನಿಯಾಗುತ್ತಲೇ, ತಾಂತ್ರಿಕತೆಯ ಹೊಸ ಬೆಳಗನ್ನು ಕನ್ನಡಕ್ಕೆ ತರಲು ಪ್ರಯತ್ನಿಸಿದವರು. ಅವರ ಚಿತ್ರದಲ್ಲಿನ ಗೀತೆಗಳು ಸದಾ ಕಾಡುವಂಥದ್ದೇ. ಶರ ಪಂಜರ ಚಿತ್ರದ್ದೇ ಇರಬಹುದು ಅಥವಾ ಅಮೃತ ಘಳಿಗೆಯದ್ದಿರಬಹುದು…
ನಮ್ಮ ವಿಡೀಯೋ ಕ್ಲಿಪ್ಪಿಂಗ್ಸ್ ಗಳಲ್ಲಿ ಮೂರು ಪುಟ್ಟಣ್ಣ ಕಣಗಾಲ್ ಚಿತ್ರದ ಜನಪ್ರಿಯ ಗೀತೆಗಳನ್ನು ನೀಡಿದ್ದೇವೆ. ಕ್ಲಿಕ್ಕಿಸಿ, ಕೇಳಿ ಖುಷಿಪಡಿ.
“ಸಾಂಗತ್ಯ”ದಲ್ಲಿ ಕುರಸೋವಾನ “ಡ್ರೀಮ್ಸ್ ದೃಶ್ಯ”ಗಳು
ನಮಸ್ಕಾರ. ಮಧುರ್ ಭಂಡಾರ್ಕರ್ ನವರ ಕುರಿತ, ಚಿತ್ರಗಳ ಕುರಿತ ವಿಮರ್ಶೆಯ ಮಧ್ಯೆಯೇ ಯಾಕೋ ಜಪಾನಿನ ಮಹಾನ್ ನಿರ್ದೇಶಕ ಅಕಿರಾ ಕುರಸೋವಾ ನೆನಪಾದರು. ಅವರ ಹಲವು ಚಿತ್ರಗಳ ಪೈಕಿ ಕನಸುಗಳ ಗುಚ್ಛ ಅತ್ಯಪರೂಪವಾದದ್ದು. ಒಂದೊಂದು ಪುಟ್ಟ ಪುಟ್ಟ ಕನಸುಗಳೇ.
ಅಂದಹಾಗೆ ಇಂದಿನಿಂದ “ಸಾಂಗತ್ಯ”ದಲ್ಲಿ ಆಗಾಗ್ಗೆ ನಾವು ನೋಡಿದ, ನೋಡಬಹುದಾದ ಚಿತ್ರಗಳ ತುಣುಕುಗಳ ದೃಶ್ಯಾವಳಿಯನ್ನು ನೀಡುತ್ತಿದ್ದೇವೆ. ಅದನ್ನು ಕ್ಲಿಕ್ಕಿಸುವ ಮೂಲಕ ಆ ಚಿತ್ರವನ್ನು ನೋಡಬಹುದು. ಈ ಹಿನ್ನೆಲೆಯಲ್ಲೇ ಅಕಿರಾ ಕುರಸೋವಾನ ಮೂರು ಡ್ರೀಮ್ಸ್ ಗಳನ್ನು ಕೊಟ್ಟಿದ್ದೇವೆ ನಮ್ಮ “ವಿಡಿಯೋ ದೃಶ್ಯಾವಳಿ” ಯ ಅಂಕಣದಲ್ಲಿ. ಜತೆಗೆ ನಮ್ಮ “ಜಗತ್ತಿನ ಚೆಂದದ ಸಿನಿಮಾ” ದ ವಿಭಾಗದಲ್ಲಿ “ಡ್ರೀಮ್ಸ್” ಕುರಿತಾದ ಲೇಖನವೂ ಇದೆ. ಎರಡನ್ನೂ ನೋಡಿ ಸಂಭ್ರಮಿಸಿ.




