ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಬೇಳೂರು ಕಾಲಂ’ Category

“ಅವತಾರ್” ಚಿತ್ರದ “ಅ”ಮರ ಕಥೆ !

with 2 comments

ಬೇಳೂರು ಸುದರ್ಶನರು “ಅವತಾರ್” ಚಿತ್ರದ ಬಗ್ಗೆ ಬರೆದಿದ್ದಾರೆ. ಸಿಕ್ಕಾಪಟ್ಟೆ ಖರ್ಚು ಮಾಡಿ ರೂಪಿಸಿದ ಚಿತ್ರವಿದು. ಇದನ್ನು ಇಂಟರ್ ನೆಟ್ ನಲ್ಲಿ “ಇಳಿಸಿ” ನೋಡುವುದಕ್ಕಿಂತ ಸಿನಿಮಾ ಥಿಯೇಟರ್ ಗೆ ಹೋಗಿ ನೋಡಬೇಕು ಎನ್ನುತ್ತಾರೆ ಲೇಖಕರು. ಮಾಹಿತಿಪೂರ್ಣ ಲೇಖನವನ್ನು ಓದಿ ಅಭಿಪ್ರಾಯಿಸಿ.

ಜೇಮ್ಸ್ ಕ್ಯಾಮೆರಾನ್ ಸಿನೆಮಾ ಅಂದಮೇಲೆ ನೀವು ಥಿಯೇಟರಿಗೆ ಹೋಗಲೇಬೇಕು. ಅಲ್ಲಿ ಒಂದೂ ದೃಶ್ಯವನ್ನೂ ಬಿಡದೆ ನೋಡಲೇಬೇಕು. ಸಿನೆಮಾದೆಲ್ಲ ಸಂಭಾಷಣೆಗಳನ್ನೂ ಕಿವಿಯಿಟ್ಟು ಕೇಳಿ ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೃಶ್ಯ, ಸನ್ನಿವೇಶ ಅರ್ಥವಾಗಲಿಲ್ಲ ಎಂದರೆ ಮತ್ತೆ ಥಿಯೇಟರಿಗೆ ಹೋಗಿ….ಮೂರು ತಾಸು ಮೀರಿದ ಕಾಲಾವಧಿಯ ಟೈಟಾನಿಕ್ ಸಿನೆಮಾ ಬಂದಾಗ ಈ ಮಾತನ್ನು ತುಂಬಾ ಜನ ಹೇಳಿದ್ದರು. ಈಗ ಅವತಾರ್ ಬಂದಿದೆ.

ಇಲ್ಲೂ, ನೀವು ಎರಡೂವರೆ ತಾಸಿನ ಈ ಸಿನೆಮಾವನ್ನು ಥಿಯೇಟರಿನಲ್ಲಿಯೇ ನೋಡಬೇಕು. ಅದಕ್ಕಾಗಿ ವಿಶೇಷ ಕನ್ನಡಕವನ್ನು ಹಾಕಿಕೊಳ್ಳಬೇಕು. ಇಂಟರ್‌ವಲ್ ಇಲ್ಲದೆ ನಿಮ್ಮ ಎಲ್ಲ ಒತ್ತಡಗಳನ್ನು ಬಿಗಿ ಹಿಡಿದುಕೊಂಡು ಕ್ಷಣಕ್ಷಣಕ್ಕೂ ದಿಗಿಲು ಹುಟ್ಟಿಸುವ ಪಂಡೋರಾ ದ್ವೀಪದ ರುದ್ರ ರಮಣೀಯ ಭೂಶ್ರೇಣಿಯನ್ನು ಹತ್ತಿಳಿಯುವುದು, ಮರಬಳ್ಳಿಯ ಮೇಲೆ ನಡೆಯುವುದು, ಆಕಾಶದಲ್ಲಿ ಹಕ್ಕಿಯ ಮೇಲೆ ಕೂತು ಹಾರುವುದು, – ಎಲ್ಲವನ್ನೂ ಮಾಡಬೇಕು!

ನೀವು ಈ ಸಿನೆಮಾವನ್ನು ಇಂಟರ್‌ನೆಟ್‌ನಿಂದ ಕದ್ದು ನೋಡಿದರೆ ಯಾವ ಸುಖವೂ ಇಲ್ಲ. ಯಾಕೆಂದರೆ ಇದು 3ಡಿ ಸಿನೆಮಾ. ವಿಶೇಷ ಕನ್ನಡಕ ಇಲ್ಲದೆ ನೋಡಿದರೆ ಈ ಸಿನೆಮಾ ಕೊಂಚ ಸಪ್ಪೆ. ದೃಶ್ಯವೈಭವವಂತೂ ಕಂಪ್ಯೂಟರಿನ ಮಾನಿಟರ್‌ನಲ್ಲಿ ಎಳ್ಳಷ್ಟೂ ಹಿಡಿಸುವುದಿಲ್ಲ. Read the rest of this entry »

‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಕಥನ

with one comment

ಬೇಳೂರರು ತಮ್ಮ ಅಂಕಣದಲ್ಲಿ ಈ ಬಾರಿ ಬರೆದಿರುವುದು “ದಿ ಮಿಶನ್” ಚಿತ್ರ ಕುರಿತಾಗಿ. ಓಮರ್ ಮುಖ್ತರ್ ನಂತರ ಇದೊಂದು ವಿಶಿಷ್ಟವಾದ ಬರಹ.

ಕ್ರೈಸ್ತ ಮತಪ್ರಚಾರ, ಸಾಮ್ರಾಜ್ಯಶಾಹಿ ಆಳ್ವಿಕೆ, ಗುಲಾಮಗಿರಿ, ಸಂಪತ್ತಿನ ಲೂಟಿ, ನರಮೇಧ – ಇವೆಲ್ಲವೂ 15ನೇ ಶತಮಾನದಿಂದ ಇಂದಿನವರೆಗೂ ಏಶ್ಯಾ, ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ ಖಂಡಗಳನ್ನು ವ್ಯಾಪಿಸಿವೆ. ಇಂದು ಮಾನವಹಕ್ಕುಗಳ ಬಗ್ಗೆ ವಿಪರೀತ ಮಾತಾಡುತ್ತಿರುವ, ಶಾಂತಿಮಂತ್ರವನ್ನು ಬೋಧಿಸುತ್ತಿರುವ ಐರೋಪ್ಯ ದೇಶಗಳೇ ಈ ಎಲ್ಲ ಅಪಚಾರಗಳಿಗೆ ಹೊಣೆಯಾಗಿವೆ ಎಂಬುದನ್ನು ಮರೆಯಲಾದೀತೆ? ಕಳೆದ ವಾರ ಓಮರ್ ಮುಖ್ತರ್ ಬಗ್ಗೆ ಬರೆದಾಗ ಇಟಲಿಯ ನರಮೇಧ ತಿಳಿಯಿತು. ಸಲ ‘ದಿ ಮಿಶನ್’ ಎಂಬ ಇನ್ನೊಂದು ಸಿನೆಮಾದ ಮೂಲಕ ದಕ್ಷಿಣ ಅಮೆರಿಕಾದಲ್ಲಿ ನಡೆದಿದ್ದ ಭೀಕರ ನರಮೇಧಗಳ, ವಿಲಕ್ಷಣ ಸಂಘರ್ಷಗಳ ಇತಿಹಾಸವನ್ನು ತಿಳಿದುಕೊಳ್ಳೋಣ!

16ನೇ ಶತಮಾನದ ಆರಂಭದಿಂದಲೂ ದಕ್ಷಿಣ ಅಮೆರಿಕಾದಲ್ಲಿ, ಅದರಲ್ಲೂ ಪೆರುಗ್ವೆ ಮತ್ತು ಅರ್ಜೆಂಟೈನಾ ದೇಶಗಳಲ್ಲಿ ಕ್ರೈಸ್ತ ಮಿಶನರಿಗಳು ಕೆಲಸ ಮಾಡುತ್ತಿದ್ದಾರೆ. ಇಲ್ಲಿರುವ ವಿಶಿಷ್ಟ ‘ಗ್ವುರಾನ್’ ಸಮುದಾಯವನ್ನು ಮಿಶನರಿಗಳು ಒಲಿಸಿಕೊಂಡು ಹಲವು ಚರ್ಚುಗಳನ್ನು ಸ್ಥಾಪಿಸಿದರು. ಕ್ರಮೇಣ ಸ್ಪೇನ್ ಹಾಗೂ ಪೋರ್ಚುಗೀಸ್ ದೇಶಗಳ ಆಳ್ವಿಕೆ ಇಲ್ಲೆಲ್ಲ ಆರಂಭವಾಯಿತು. ಗುಲಾಮಗಿರಿಯನ್ನು ಅಧಿಕೃತ ಹಕ್ಕೆಂದು ಪೋರ್ಚುಗೀಸ್ ಪ್ರಕಟಿಸಿದ್ದರೆ, ಗುಲಾಮಗಿರಿಯ ಚಟುವಟಿಕೆಗಳನ್ನು ಸ್ಪೇನ್ ತೆಪ್ಪಗೆ ಒಪ್ಪಿಕೊಂಡ ಕಾಲವದು.beluru copy 1

ನಿಧಾನವಾಗಿ ಈ ಗ್ವುರಾನ್ ಸಮುದಾಯದ ಚರ್ಚ್ ಚಟುವಟಿಕೆಗಳನ್ನು ನಿಲ್ಲಿಸಬೇಕೆಂಬ ಒತ್ತಡ ಈ ಎರಡೂ ವಸಾಹತುಶಾಹಿ ದೇಶಗಳಿಂದ ಬಂತು. ಈ ಜಂಟಿ ಬೇಡಿಕೆಯ ಹಿನ್ನೆಲೆಯಲ್ಲಿ ಇಲ್ಲಿರುವ ಎಲ್ಲ ಚರ್ಚುಗಳಿಗೆ ಭೇಟಿ ಕೊಡಲು ಆಗಿನ ಪೋಪ್ ತನ್ನ ಪ್ರತಿನಿಧಿಯೊಬ್ಬನನ್ನು ಕಳಿಸಿಕೊಡುತ್ತಾನೆ. ಈ ಪ್ರತಿನಿಧಿಯೇ ಕಾರ್ಡಿನಲ್ ಅಲ್ಟಾಮಿರಾನೋ. ಇವನು ಪೋಪ್‌ಗೆ ಬರೆಯುವ ಪತ್ರದ ಒಕ್ಕಣೆಯೇ ‘ದಿ ಮಿಶನ್’ ಸಿನೆಮಾದ ನಿರೂಪಣೆ. Read the rest of this entry »

Written by saangatya

October 21, 2009 at 8:51 am

ಓಮರ್ ಮುಖ್ತರ್:ನೈಜ ಜೆಹಾದಿಯ ಸಿನಿಮಾ

with 2 comments

ಬೇಳೂರರು ತಮ್ಮ ಅಂಕಣದಲ್ಲಿ ಓಮರ್ ಮುಖ್ತರ್ ನ ಬಗ್ಗೆ ಬರೆದಿದ್ದಾರೆ. ನೈಜ ಜೆಹಾದಿ ಬಗ್ಗೆಯೇ ವಿವರಿಸುವ ಚಿತ್ರವದು. ಅದಕ್ಕೆ ಸಂಬಂಧಿಸಿದ ಸಂಪರ್ಕ ಕೊಂಡಿಗಳನ್ನೂ ನೀಡಲಾಗಿದೆ. ಓದಿ, ನೋಡಿ, ಹೇಳಿ.

ಜೆಹಾದಿ (ಇಸ್ಲಾಮಿಕ್ ಧರ್ಮಯುದ್ಧ ಎಂದುಕೊಳ್ಳುವಾ) ಅಂದಕೂಡಲೇ ಹಲವರ ಮನಸ್ಸಿನಲ್ಲಿ ಎಂಥದೋ ವಿಕ್ಷಿಪ್ತ ಭಾವ ಮೂಡುತ್ತೆ. ಸಹಜವೇ. ಇವತ್ತು ಜೆಹಾದಿ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ತಾಲಿಬಾನ್, ಅಲ್ ಖೈದಾಗಳ ಉಗ್ರಗಾಮಿ ಕೃತ್ಯಗಳು ನಮ್ಮನ್ನು ಧೃತಿಗೆಡಿಸಿವೆ.

ಜೆಹಾದಿ ಅಂದರೆ ನಿಜಕ್ಕೂ ಏನಿರಬಹುದು ಎಂದು ತಿಳಿಯುವ ಹಂಬಲವಿದ್ದರೆ ನೀವು ಓಮರ್ ಮುಖ್ತರ್: ದಿ ಲಯನ್ ಆಫ್ ದಿ ಡೆಸರ್ಟ್ ಸಿನೆಮಾ ನೋಡಿ. 1981 ರಲ್ಲಿ ಬಂದ ಈ ಸಿನೆಮಾ ಪಾಶ್ಚಾತ್ಯ ದೇಶಗಳಲ್ಲಿ ತಿರಸ್ಕೃತಗೊಂಡಿತ್ತು. ಇಟಲಿಯಲ್ಲಂತೂ ಈ ಸಿನೆಮಾ ನಿಷೇಧಿತವಾಗಿತ್ತು. ಇದನ್ನು ಬೆಂಗಳೂರಿಗೆ ಬಂದ ಹೊಸತರಲ್ಲಿ, 1984 ರಲ್ಲಿ ನಾನು ಈ ಸಿನೆಮಾವನ್ನು ನೋಡಿದೆ. ಇವತ್ತಿಗೂ ಈ ಸಿನೆಮಾ ನನ್ನ ಟಾಪ್ ಟೆನ್ ಪಟ್ಟಿಯಲ್ಲಿದೆ. ಬಹುಶಃ ನಂಬರ್ ಒನ್ ಎಂದರೂ ತಪ್ಪಿಲ್ಲ.
beluru copy 1
ಓಮರ್ ಅಲ್ ಮುಖ್ತರ್ ಎಂಬ ನೈಜ ಪಾತ್ರವು ಲಿಬ್ಯಾ ದೇಶವನ್ನು ಇಟಲಿಯು ಆಕ್ರಮಿಸಿದ ವಿರುದ್ಧ ನಡೆಸಿದ 1000 ಯುದ್ಧಗಳ ಗಾಥೆಯನ್ನು ಸುಮಾರು ಮೂರು ತಾಸುಗಳ ಈ ಸಿನೆಮಾ ಹೇಳುತ್ತದೆ. ಓಮರ್ ಪಾತ್ರದಲ್ಲಿ ನಟಿಸಿದಾತ ಹಾಲಿವುಡ್‌ನ ಮಹಾನ್ ತಾರೆ ಆಂಥೋನಿ ಖ್ವಿನ್. ಓಮರ್‌ನ ವಯಸ್ಸಿನಷ್ಟೇ ಅಜ್ಜನಾಗಿದ್ದ ಖ್ವಿನ್ ಇಲ್ಲಿ ತನ್ನ ಜೀವಿತದ ಅಭಿನಯ ನೀಡಿದ್ದಾನೆ. ಜೊತೆಗೆ ಆಲಿವರ್ ರೀಡ್‌ನ ಘನತೆವೆತ್ತ ನಟನೆ. ಅದ್ಭುತವೆನ್ನುವ ಕ್ಯಾಮೆರಾ ಕಣ್ಣು. ನವಿರೇಳಿಸುವ ಗೆರಿಲ್ಲಾ ಯುದ್ಧದ ದೃಶ್ಯಗಳು. ಓಮರ್‌ನ ವಯೋವೃದ್ಧ, ಕ್ರಿಯಾಶೀಲ ಬದುಕಿನ ಕ್ಷಣಗಳು, ವೈರಿಗಳಿಗೂ ಅಚ್ಚರಿ ಹುಟ್ಟಿಸುವ ಸನ್ನಿವೇಶಗಳು, ಮರುಭೂಮಿ ಸಮರದ ವಿವಿಧ ಘಟನಾವಳಿಗಳು, ವಸಾಹತುಶಾಹಿಯು ಕ್ರೌರ್ಯ – ಹೀಗೆ ಹಲವು ಆಯಾಮಗಳಲ್ಲಿ ಇಡೀ ಸಿನೆಮಾ ಕಟ್ಟಿಕೊಡುವ ಜೆಹಾದೀ ಕಥೆಯನ್ನು ನೋಡಿದ ಮೇಲೆ ಜೆಹಾದಿಯ ಬಗ್ಗೆ ನಿಮಗೆ ತುಸು ಗೌರವ ಬಂದರೆ ಅಚ್ಚರಿಯಿಲ್ಲ! Read the rest of this entry »

Written by saangatya

October 13, 2009 at 7:33 am

ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್

with one comment

ಬೇಳೂರು ಸುದರ್ಶನರು ತಮ್ಮ ಅಂಕಣದಲ್ಲಿ ಕ್ಲೈಂಟ್ ಈಸ್ಟ್ ವುಡ್ ಬಗ್ಗೆ ಬರೆದಿದ್ದಾರೆ. ಅವನ ಗ್ರ್ಯಾಂಟ್ ಟೊರಿನೊ ಬಗ್ಗೆ. ಓದಿ ಹೇಳಿ.

ವಾಲ್ಟ್ ಕೋವಾಲ್‌ಸ್ಕಿ ಒಬ್ಬ ಜನಾಂಗೀಯವಾದಿ. ಕೊರಿಯಾದಲ್ಲಿ ಯುದ್ಧ ಮಾಡಿ ಬಂದು ಅಮೆರಿಕಾದಲ್ಲಿ ಫೋರ್ಡ್ ಮೋಟಾರ್ ಸಂಸ್ಥೆಯಲ್ಲಿ 50 ವರ್ಷ ಕೆಲಸ ಮಾಡಿದವನು. ಈಗ ಉದ್ಯಮವೆಲ್ಲ ಸತ್ತಿರುವ ಡೆಟ್ರಾಯಿಟ್ ನಗರದಲ್ಲಿ ವಾಸಿದ್ದಾನೆ. ಅವನ ಹೆಂಡತಿ ಇತ್ತೀಚೆಗಷ್ಟೆ ತೀರಿಕೊಂಡಿದ್ದಾಳೆ. ತನ್ನ ಇಬ್ಬರೂ ಗಂಡುಮಕ್ಕಳನ್ನು ಅವನೇ ದೂರ ಇಟ್ಟಿದ್ದಾನೆ. ಆಗಾಗ ಬರುವ ಮೊಮ್ಮಕ್ಕಳು ಅವನಿಗೆ ಹೊಂದಿಕೆಯಾಗುವುದಿಲ್ಲ. ಅವನ ಗೆಳೆಯರೆಲ್ಲ ಬಹುತೇಕ ಸತ್ತೇಹೋಗಿದ್ದಾರೆ. 78ರ ಹರೆಯದ ವಾಲ್ಟ್ ಕೋವಾಲ್‌ಸ್ಕಿಗೆ ನಾಯಿಯೊಂದೇ ಸಂಗಾತಿ. ಅಕ್ಕಪಕ್ಕದಲ್ಲಿ ಮೊನ್ ಸಮುದಾಯದ ಜನರ ಮನೆಗಳು. ಲಾವೋಸ್‌ನಿಂದ ದೇಶಭ್ರಷ್ಟರಾಗಿ ಬಂದವರು. ಅವರ ದಿನಚರಿ, ಬದುಕಿನ ಶೈಲಿಯನ್ನು ಕಂಡರೆ ವಾಲ್ಟ್ ಕೋವಾಲ್‌ಸ್ಕಿಗೆ ಆಗೋದಿಲ್ಲ. ಅವನಿಗೆ ತುಂಬಾ ಕ್ರೇಜ್ ಅಂದ್ರೆ 1972 ರ ಮಾಡೆಲ್‌ನ ಗ್ರಾನ್ ಟೊರಿನೋ ಕಾರು. ಅದರ ಸುದ್ದಿಗೆ ಯಾರೂ ಹೋಗುವಂತಿಲ್ಲ.

ತಾನಾಯಿತು, ತನ್ನ ನಾಯಿಯಾಯಿತು, ಹಾಕಲು ಗುಂಡು, ಬಯಸಲು ಕಾರು; ಇಷ್ಟೇ ಕೋವಾಲ್‌ಸ್ಕಿ ಜಗತ್ತು. ಅವನ ವಿಕ್ಷಿಪ್ತ ನಡತೆಯನ್ನು ಇಷ್ಟಪಟ್ಟವರೇ ಇಲ್ಲ. ಇಂತಪ್ಪ ವಿಚಿತ್ರ ಮುದುಕನ ಪರಿಚಯದಿಂದ ಈ ಸಿನೆಮಾ ಆರಂಭವಾಗುತ್ತೆ ಅಂದಮೇಲೆ ಏನಿದ್ದೀತು ಈ ಸಿನೆಮಾದಲ್ಲಿ ಎಂಬ ಪ್ರಶ್ನೆ ಮೂಡುತ್ತೆ ಅಲ್ಲವೆ?
ನಾನೂ ಈ ಸಿನೆಮಾವನ್ನು ಸುಮ್ಮನೆ ಹಾಕಿ ಕೂತೆ. ಆದರೆ ಈ ಸಿನೆಮಾ ನಿಧನಿಧಾನವಾಗಿ ನನ್ನೆಲ್ಲ ಮೂಡನ್ನು ಆಕ್ರಮಿಸಿಕೊಂಡಿತು. ಕ್ಲೈಂಟ್ ಈಸ್ಟ್‌ವುಡ್ ಅಭಿಮಾನಿಗಳೇನು, ನೀವೂ ಅವನ ಅಭಿನಯವನ್ನು ಮೆಚ್ಚಿಕೊಳ್ಳಲೇಬೇಕು; ಹಾಗಿದೆ ಈ ಸಿನೆಮಾ. Read the rest of this entry »

ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ!

with 3 comments

“ಇನ್ ಟು ದಿ ವೈಲ್ಡ್” ಚಿತ್ರದ ಬಗ್ಗೆ ಬೇಳೂರರು ಬರೆದಿದ್ದಾರೆ. ಈ ಚಿತ್ರ ಒಂದು ಅದ್ಭುತವಾದದ್ದು, ಆತ್ಮವಿಶ್ವಾಸ ಹುಟ್ಟಿಸುವಂಥದ್ದು ; ಏಕಾಂಗಿಯ ಯಾತ್ರೆಯಿಂದ ಕಲಿತುಕೊಳ್ಳಬಹುದಾದ ಜೀವನಪ್ರೀತಿ ಅನನ್ಯ.

ಜೇಮ್ಸ್ ಗಲಿಯೆನ್ ಆ ಪ್ರಯಾಣಿಕನನ್ನು ಕಂಡಿದ್ದೇ ಫೇರ್‌ಬ್ಯಾಂಕ್ಸ್‌ನಿಂದ ಐದು ಮೈಲು ದೂರ ಸಾಗಿದ ಮೇಲೆ. ಅಲಾಸ್ಕಾದ ಆ ಮುಂಜಾನೆಯಲ್ಲಿ ನಖಶಿಖಾಂತ ನಡುಗುತ್ತ, ಹೆಬ್ಬೆಟ್ಟು ತೋರುತ್ತ ನಿಂತ ಯುವಕನ ಬೆನ್ನೇರಿದ ಚೀಲದಿಂದ ಬಂದೂಕೊಂದು ಇಣುಕುತ್ತಿತ್ತು. ‘ನಾನು ಅಲೆಕ್ಸ್’ ಎಂದಷ್ಟೆ ಪರಿಚಯಿಸಿಕೊಂಡ ಆತ ಡೆನಾಲಿ ರಾಷ್ಟ್ರೀಯ ಪಾರ್ಕಿನ ತುತ್ತತುದಿಗೆ ಹೋಗಿ ಕೆಲವು ತಿಂಗಳುಗಳ ಕಾಲ ಇರಬೇಕಿದೆ ಎಂದ. ಅವನ ಚೀಲವೋ 25 & 30 ಪೌಂಡ್ ತೂಗುತ್ತಿದೆಯಲ್ಲ ಎಂದು ಜೇಮ್ಸ್ ಅಚ್ಚರಿಪಟ್ಟ. ಇಂಥ ಥಂಡಿಯಲ್ಲಿ ಈ ಅಲೆಕ್ಸ್ ಬದುಕುವುದು ಹೇಗೆ ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತ್ತು.

ಮೂರು ತಾಸು ಸಾಗಿದ ಮೇಲೆ ‘ಅಲೆಕ್ಸ್’ ಜೇಮ್ಸ್‌ನ ಟ್ರಕ್ಕಿನಿಂದ ಇಳಿದ. ತನ್ನ ಗಡಿಯಾರ, ಬಾಚಣಿಗೆ, 85 ಸೆಂಟ್‌ಗಳಷ್ಟು ಹಣ, ಸ್ಥಳನಕಾಶೆ….. ಎಲ್ಲವನ್ನೂ ಟ್ರಕ್ಕಿನೊಳಗೇ ಬಿಟ್ಟ. ‘ಈ ಸಮಯ ಎಷ್ಟೆಂದು ನನಗೆ ತಿಳಿಯಬೇಕಿಲ್ಲ. ಯಾವ ದಿನವಿದು, ನಾನೆಲ್ಲಿದ್ದೇನೆ ಯಾವುದೂ ನನಗೆ ಗೊತ್ತಾಗಬೇಕಿಲ್ಲ. ಇಂಥ ಯಾವ ಸಂಗತಿಗಳೂ ನನಗೆ ಬೇಕಾಗಿಲ್ಲ’ ಎಂದು ನಸುನಗುತ್ತ ಅಲಾಸ್ಕಾದ ಹಿಮಹಾದಿಯಲ್ಲಿ ನಡೆದ. ‘ಇಂಥ ಪ್ರದೇಶಕ್ಕೆ ಬರಬೇಡ’ ಎಂದು ಜೇಮ್ಸ್ ಹೇಳಿದ್ದೆಲ್ಲವೂ ವ್ಯರ್ಥವಾಯಿತು. ಅಪ್ಪ, ಅಮ್ಮಂದಿರಿಗೂ ತನ್ನ ಯೋಜನೆಯನ್ನು ತಿಳಿಸಿಲ್ಲ; ನಿಜ ಹೇಳಬೇಕಂದ್ರೆ ನಾನು ಅವರ ಜೊತೆಗೆ ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ಮಾತಾಡೇ ಇಲ್ಲ ಎಂದು ಅಲೆಕ್ಸ್ ಹೇಳಿದ್ದನ್ನು ಕೇಳಿ ಜೇಮ್ಸ್ ಮತ್ತಷ್ಟು ಅಚ್ಚರಿಗೆ ಬಿದ್ದು ಮೂರು ತಾಸುಗಳಾಗಿದ್ದವು.
beluru copy 1
‘ಅಲೆಕ್ಸ್’ ಎಂದು ಹೇಳಿಕೊಂದ ಕ್ರಿಸ್ಟೋಫರ್ ಜೆ. ಮ್ಯಾಕ್‌ಕ್ಯಾಂಡ್ಲೆಸ್ ಹೀಗೆ ತನ್ನ ಏಕಾಂಗಿತನದ ಯಾತ್ರೆಯನ್ನು ಶುರುಮಾಡಿದ್ದು 1992ರ ಏಪ್ರಿಲ್ 28ರ ಮಂಗಳವಾರ. Read the rest of this entry »

Written by saangatya

September 29, 2009 at 6:24 am

ದಿ ಕಿಲ್ಲಿಂಗ್ ಫೀಲ್ಡ್ಸ್-ಕಮ್ಯುನಿಸಂ ಕಡೆದಿಟ್ಟ ಕರಾಳ ಮುಖ

with 3 comments

“ದಿ ಕಿಲ್ಲಿಂಗ್ ಫೀಲ್ಡ್ಸ್ ಬಗ್ಗೆ ಈ ವಾರದ ಲೇಖನ. ಸತ್ಯಕಥೆ ಆಧರಿಸಿ ತೆಗೆದ ಚಿತ್ರ ಅನಾವರಣಗೊಳಿಸಿದ ಹಲವು ನೆಲೆಗಳು ಗಮನಿಸಬೇಕಾದದ್ದು. ಅದರಲ್ಲೂ ಕುತೂಹಲದ ಕಥಾ ಹಂದರವನ್ನೇ ಇಟ್ಟುಕೊಂಡು ಏನೇನೂ ಸಂಗತಿಗಳ ಬಗ್ಗೆ ಮಾತನಾಡುವುದು ಕಷ್ಟ. ಅದಿಲ್ಲಿ ಸಾಧ್ಯವಾಗಿದೆ ಎಂಬುದು ಬೇಳೂರರ ಅಭಿಪ್ರಾಯ.

ಹಾಲಿವುಡ್ ಸಿನೆಮಾ ನೋಡುವ ವಿಪರೀತ ಚಟದಲ್ಲಿ ಯಾವ ಸಿನೆಮಾ ಬಂದರೂ ನೋಡುತ್ತಿದ್ದ 80ರ ದಶಕದಲ್ಲಿ ನನ್ನನ್ನು ತೀವ್ರವಾಗಿ ಕಲಕಿದ ಸಿನೆಮಾ ‘ದಿ ಕಿಲ್ಲಿಂಗ್ ಫೀಲ್ಡ್ಸ್’. ಮೂರು ಆಸ್ಕರ್ ಪ್ರಶಸ್ತಿಗಳನ್ನು ದಕ್ಕಿಸಿಕೊಂಡ ಈ ಸಿನೆಮಾ ಯುದ್ಧ, ಕ್ರಾಂತಿ, ದೇಶಗಳ ನಡುವಣ ಸಂಘರ್ಷ, ಮಾನವತೆ, ಸ್ನೇಹ, ಹಿಂಸೆ – ಎಲ್ಲವನ್ನೂ ಎಲ್ಲ ಫ್ರೇಮುಗಳಲ್ಲಿ ತೋರಿಸುತ್ತ ಎದೆ ಕದಡುತ್ತದೆ. ಅದ್ಭುತ ಸೆಟಿಂಗ್‌ಗಳು, ಮಹಾನ್ ನಟನೆ, ಕ್ಷಣಕ್ಷಣಕ್ಕೂ ಏನಾಗುತ್ತದೆ ಎಂಬ ಕುತೂಹಲವನ್ನು ಕೆರಳಿಸುವ ಕಥಾ ಹಂದರ, – ಈ ಸಿನೆಮಾದಲ್ಲಿ ಏನಿದೆ, ಏನಿಲ್ಲ…….

ಅಮೆರಿಕಾದ ಪತ್ರಕರ್ತ, ನ್ಯೂಯಾರ್ಕ್ ಟೈಮ್ಸ್‌ನ ವರದಿಗಾರ ಸಿಡ್ನಿ ಶಾನ್‌ಬರ್ಗ್ ಕ್ಯಾಂಬೋಡಿಯಾ ಕಲಹವನ್ನು ವರದಿ ಮಾಡಲು ಹೋಗಿರುತ್ತಾನೆ. ಅವನಿಗೆ ಡಿತ್ ಪ್ರಾನ್ ಎಂಬ ಕ್ಯಾಂಬೋಡಿಯಾ ನಿವಾಸಿ ನೆರವಾಗುತ್ತಾನೆ. ಕ್ಮೆ ರೂ ಎಂಬ ಚೀನೀ ಪ್ರೇರಿತ ಕಟು ಎಡಪಂಥದ ಮಾವೋವಾದಿ ಸಂಘಟನೆ ಆಗಷ್ಟೆ ಕ್ಯಾಂಬೋಡಿಯಾವನ್ನು ಆಕ್ರಮಿಸುತ್ತಿದೆ.The_Killing_Fields_film

ಈ ಸನ್ನಿವೇಶವನ್ನು ವರದಿ ಮಾಡುತ್ತ ಕ್ಮೆ ರೂ ಬಂದೂಕಿಗೆ ಗುರಿಯಾದ ಸಿಡ್ನಿಯನ್ನು ಪ್ರಾನ್ ತನ್ನ ಎಲ್ಲ ಚಾಕಚಕ್ಯತೆ ಬಳಸಿ ಉಳಿಸುತ್ತಾನೆ. ಆದರೆ ವಿಧಿ ಪ್ರಾನ್‌ನನ್ನು ಕ್ಮೆ ರೂ ಕರಾಳ ಹಸ್ತಕ್ಕೆ ಕೊಟ್ಟುಬಿಡುತ್ತದೆ. ಕೊನೆಗೆ ಹನ್ನೊಂದನೇ ಶತಮಾನದ ಕೃಷಿ ಪದ್ಧತಿಯನ್ನು ಜಾರಿಗೊಳಿಸಿದ ಕ್ಮೆ ರೂ ಆಡಳಿತದಲ್ಲಿ ಪ್ರಾನ್ ಕೂಡಾ ಒಬ್ಬ ಸೆರೆಯಾಳು ಕಾರ್ಮಿಕನಾಗುತ್ತಾನೆ. ಒಮ್ಮೆ ತಪ್ಪಿಸಿಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದ ಪ್ರಾನ್ ಎಲ್ಲೆಲ್ಲೋ ತಿರುಗುತ್ತಿದ್ದಾಗ ಕ್ಮೆ ರೂ ನಡೆಸಿದ ನರಮೇಧದ ಸ್ಥಳದಲ್ಲಿ ಅಡ್ಡಾಡುವ ಕ್ಷಣವೂ ಎದುರಾಗುತ್ತದೆ. ಸಾವಿರಾರು ತಲೆಬುರುಡೆಗಳು, ಹೆಣಗಳ ನಡುವೆ ಪ್ರಾನ್ ದಿಕ್ಕೆಟ್ಟು ಓಡಾಡುವ ದೃಶ್ಯವನ್ನು ಕಳೆದ ಐದು ದಶಕಗಳಲ್ಲಿ ಮೂಡಿ ಬಂದ ಅತ್ಯಂತ ಹೃದಯವಿದ್ರಾವಕ ಇಂಗ್ಲಿಶ್ ಸಿನೆಮಾ ದೃಶ್ಯ ಎನ್ನಬಹುದು. ಅದರಲ್ಲೂ ಡಿತ್ ಪ್ರಾನ್ ಪಾತ್ರ ವಹಿಸಿದ ಹ್ಯಾಂಗ್ ಎನ್ ಎನ್‌ಗೋರ್‌ನ ಸಹಜ ನಟನೆ ಪ್ರತಿ ಸೆಕೆಂಡೂ ಹಿಡಿದಿಡುತ್ತದೆ.beluru copy 1

‘ದಿ ಕಿಲ್ಲಿಂಗ್ ಫೀಲ್ಡ್ಸ್ ’ ನೈಜ ಕಥೆಯನ್ನು ಆಧರಿಸಿದ  ಸಿನೆಮಾ. ಈ ಸಿನೆಮಾದ ಪತ್ರಕರ್ತನ ಪಾತ್ರವಾದ ಸಿಡ್ನಿ ಶಾನ್‌ಬರ್ಗ್‌ಗೆ ಈಗ 81 ವರ್ಷ.  ಕ್ಯಾಂಬೋಡಿಯಾ ವರದಿಗಾಗಿ 1976ರಲ್ಲಿ ಅವರು ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದ ನಂತರ ಡಿತ್ ಪ್ರಾನ್‌ನನ್ನು ಹುಡುಕುಲು ನಡೆಸಿದ ಯತ್ನಗಳು ಸಿನೆಮಾದಲ್ಲಿ ಮೂಡಿವೆ. 50 ವರ್ಷಗಳ ಕಾಲ ಆತ ನ್ಯೂಯಾರ್ಕ್ ಟೈಮ್ಸ್‌ಗೆ ವರದಿ ಮಾಡಿದವರು. ಡಿತ್ ಪ್ರಾನ್ ಕೊನೆಗೆ ಹೇಗೋ ರೆಡ್‌ಕ್ರಾಸ್ ಶಿಬಿರ ಸೇರಿಕೊಂಡು ಅಮೆರಿಕಾಗೆ ಬಂದು ನ್ಯೂಯಾರ್ಕ್ ಟೈಮ್ಸ್‌ನಲ್ಲೇ ಛಾಯಾಗ್ರಾಹಕವಾಗುತ್ತಾರೆ. ಕ್ಯಾನ್ಸರ್ ರೋಗದಿಂದಾಗಿ ಡಿತ್ ಪ್ರಾನ್ ೨೦೦೮ರಲ್ಲಿ ತೀರಿಕೊಂಡರು. Read the rest of this entry »

Written by saangatya

September 23, 2009 at 9:35 am

ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ

with 6 comments

ಬೇಳೂರು ಕಾಲಂನಲ್ಲಿ ಈ ಬಾರಿ ಪ್ರಕಟವಾಗಿರುವುದು ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಕುರಿತಾದ ಲೇಖನ. ಆಂಥೋನಿ ಹಾಪ್ ಕಿನ್ಸ್ ನ ರೌದ್ರಾವತಾರದ ಬಗ್ಗೆ ಬರೆದಿದ್ದಾರೆ.

1991 ರಲ್ಲಿ ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಸಿನೆಮಾ ಬಂದಾಗ ಆಂಥೋನಿ ಹಾಪ್‌ಕಿನ್ಸ್ ಇದಾನಂತೆ, ಅವನಿಗೆ ಆಸ್ಕರ್ ಸಿಕ್ಕಿತಂತೆ ಎಂಬ ಸುದ್ದಿಯ ಬೆನ್ನುಬಿದ್ದು ಸಿನೆಮಾ ನೋಡಿದೆ. ಆಗಿನ ಕಾಲದಲ್ಲಿ ಆಸ್ಕರ್ ಬಂದ ಎಷ್ಟೋ ತಿಂಗಳುಗಳ ನಂತರ ಆ ಸಿನೆಮಾ ಬೆಂಗಳೂರಿಗೆ ಬರುತ್ತಿತ್ತು. ಈಗ ಹಾಲಿವುಡ್ ಸಿನೆಮಾಗಳು ಸರಸರ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ ಬರುತ್ತದೆ. ಸ್ಯಾಟೆಲೈಟ್ ಡಿಜಿಟಲ್ ಪ್ರಾಜೆಕ್ಷನ್ ತಂತ್ರಜ್ಞಾನದಿಂದ ಇದೆಲ್ಲ ಸಾಧ್ಯವಾಗಿದೆ ಅನ್ನಿ.

ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ನೋಡಿದಾಗ ನಿಜಕ್ಕೂ ಕ್ರೌರ್ಯವನ್ನು ಹೀಗೆಲ್ಲ ತೋರಿಸಬಹುದೆ ಎಂದು ಅಚ್ಚರಿಪಟ್ಟಿದ್ದೆ.

ಹ್ಯಾನಿಬಾಲ್ ಲೆಕ್ಟರ್ ಎಂಬಾತ ಥಾಮಸ್ ಹ್ಯಾರಿಸ್ ಎಂಬ ಕಾದಂಬರಿಕಾರನ ಸೃಷ್ಟಿಯ ಪಾತ್ರ. ಈತ ಪ್ರಖ್ಯಾತ ಮನಶ್ಶಾಸ್ತ್ರಜ್ಞ; ಜೊತೆಗೆ ನರಮಾಂಸವನ್ನೇ ತಿನ್ನುವ ಸೀರಿಯಲ್ ಕಿಲ್ಲರ್. ನೀವು ಅವನ ಹತ್ತಿರ ಹೋದರೆ ಸಾಕು, ಯಾವ ಸೆಂಟ್ ಹಾಕಿದ್ದೀರ, ನಿಮ್ಮ ಅಂಗಿಯ ವಾಸನೆ ಯಾವುದು, ನಿನ್ನೆ ನೀವು ಏನು ತಿಂದಿರಿ, ಯಾವ ಬ್ರಾಂಡ್ ಶೂ ಹಾಕಿದ್ದೀರಿ ಎಂದೆಲ್ಲ ಕ್ಷಣಮಾತ್ರದಲ್ಲಿ ವಿವರಿಸುವ ಸೂಕ್ಷ್ಮಗ್ರಾಹಿ ಗುಣ ಹ್ಯಾನಿಬಾಲ್‌ಗೆ ಇದೆ. ಅವನ ಕಣ್ಣುಗಳನ್ನೇ ನೋಡಿ. ಹೇಗೆ ನಿಮ್ಮ ಎದೆಯನ್ನು ಇರಿಯುತ್ತಾನೆ….. ಆಂಥೋನಿ ಹಾಪ್‌ಕಿನ್ಸ್ ನಿರ್ವಹಿಸಿದ ಹ್ಯಾನಿಬಾಲ್ ಪಾತ್ರ ಈಗ ನಿಜಕ್ಕೂ ಇಂಥ ವ್ಯಕ್ತಿಯೊಬ್ಬ ಇದ್ದನೇನೋ ಅಂತ ಅನ್ನಿಸೋ ಮಟ್ಟದಲ್ಲಿ ಗಟ್ಟಿಯಾಗಿದೆ. Read the rest of this entry »

ದಿ ಅನ್‌ಟಚಬಲ್ಸ್: ಕೆವಿನ್ ಕಾಸ್ನರ್‌ನ ಮೆಗಾಹಿಟ್

with one comment

ಬೇಳೂರು ಅವರು ಈ ಬಾರಿ ಬರೆದದ್ದು “ದಿ ಅನಟಚಬಲ್ಸ್” ಚಲನಚಿತ್ರದ ಬಗ್ಗೆ. ಒಂದು ಅದ್ಭುತವಾದ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಬರೆದಿದ್ದಾರೆ.

ಹಾಲಿವುಡ್ ಹುಚ್ಚಿನಲ್ಲಿದ್ದ ನನಗೆ ಪ್ಲಾಝಾ ಥಿಯೇಟರಿನಲ್ಲಿ ಕೂತು ಸಿನೆಮಾ ನೋಡುವ ಬಲೆ ಹುಚ್ಚು. ಎಂಬತ್ತರ ದಶಕದ ಆ ಕೊನೆಯ ದಿನಗಳಲ್ಲಿ ಹಾಲಿವುಡ್‌ನ ಎಲ್ಲ ಇಮ್ಯಾಜಿನೇಶನ್‌ಗಳಿಗೆ ಸಿಕ್ಕಿದ ಮಹಾನ್ ನಟನೇ ಕೆವಿನ್ ಕಾಸ್ನರ್. ಅವನ ಘನತೆವೆತ್ತ ನಟನೆಯ ಯಶಸ್ವೀ ಸಿನೆಮಾವೇ ದಿ ಅನ್‌ಟಚಬಲ್ಸ್. ಹಾಗಂತ ಈ ಸಿನೆಮಾದ ನಟನೆಗೆ ಆಸ್ಕರ್ ಸಿಗಲಿಲ್ಲ.Untouchables-movie-p09

ಬದಲಿಗೆ ಸಿಕ್ಕಿದ್ದು ಅತ್ಯುತ್ತಮ ಸಪೋರ್ಟಿಂಗ್ ನಟನಾಗಿ, ಜೇಮ್ಸ್ ಬಾಂಡ್ ಪಾತ್ರದ ಖ್ಯಾತಿಯ ಶಾನ್ ಕಾನೆರಿಗೆ !
1987ರ ಈ ಸಿನೆಮಾ ಇವತ್ತಿಗೂ ನನ್ನ ಚಿತ್ತಪಟಲದಲ್ಲಿ ಅಚ್ಚೊತ್ತಿರುವ ಸಿನೆಮಾ. ಕಳೆದ ವಾರ ಗೆಳೆಯರೊಂದಿಗೆ ಸಿನೆಮಾ ಬಗ್ಗೆ ಹರಟುತ್ತಿದ್ದಾಗ ಈ ಸಿನೆಮಾದ ಎಲ್ಲ ಸೀನ್‌ಗಳೂ ಕಣ್ಮುಂದೆ ಪ್ರತ್ಯಕ್ಷವಾದವು. Read the rest of this entry »

Written by saangatya

July 14, 2009 at 11:15 am

A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ

with one comment

ಎ ಬ್ಯೂಟಿಫುಲ್ ಮೈಂಡ್ ಆಸ್ಕರ್ ಪ್ರಶಸ್ತಿ ಪಡೆದಿದೆ ಎನ್ನುವುದಕ್ಕಿಂತಲೂ ಒಬ್ಬ ಶ್ರೇಷ್ಠ ಗಣಿತಜ್ಞನ ಜೀವನಕಥೆ ಆಧರಿಸಿ ತೆಗೆದ ಸಿನಿಮಾ ಎಂಬುದೇ ಬಹಳಷ್ಟುಆಕರ್ಷಣೆಗೊಳಗಾಗಿತ್ತು. ಆದರೆ ಒಂದು ನಿಜವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವಾಗ ಪಡೆಯುವ ರೂಪ, ಕೈ ಬಿಟ್ಟು ಹೋಗಬಹುದಾದ ಸೂಕ್ಷ್ಮ ಸಂಗತಿ…ಇತ್ಯಾದಿ..ಅಂದರೆ ಅಡಾಪ್ಟೇಷನ್ ಸಂದರ್ಭದಲ್ಲಿ ಹೇಗೆ ಎಂಬುದನ್ನು ಬೇಳೂರು ಸುದರ್ಶನ್, ಕಾದಂಬರಿ, ಡಾಕ್ಯುಮೆಂಟರಿ ಹಾಗೂ ಸಿನಿಮಾ ನೋಡಿ ವಿಶ್ಲೇಷಿಸಿದ್ದಾರೆ.

2001 ರಲ್ಲೇ ಬಂದ ಈ ಸಿನೆಮಾದ ಬಗ್ಗೆ ನನಗೆ ಈಗಷ್ಟೇ ಹುಚ್ಚು ಹಿಡಿದಿದೆ. ಈ ಸಿನೆಮಾ ನೋಡಬೇಕೆಂದು ಬಯಸಿ ಬಯಸಿ ಎರಡು ವಾರಗಳ ಹಿಂದೆಯಷ್ಟೇ ಡಿವಿಡಿ ಸಂಗ್ರಹಿಸಿದೆ. ಆದರೆ ಎರಡು ತಿಂಗಳ ಹಿಂದೆ ಖರೀದಿಸಿದ ಸಿಲ್ವಿಯಾ ನಾಸರ್ ಬರೆದ ಎ ಬ್ಯೂಟಿಫುಲ್ ಮೈಂಡ್ ಪುಸ್ತಕವನ್ನು ನಾನು ಓದಿರಲಿಲ್ಲ. ಸರಿ, ಪುಸ್ತಕವನ್ನು ಓದಿದ ಮೇಲೆಯೇ ಸಿನೆಮಾ ನೋಡೋಣ. ಎಷ್ಟಂದ್ರೂ ಸಿನೆಮಾ ನೋಡೋದಕ್ಕೆ ಕೆಲ ತಾಸು ಸಾಕು. ಪುಸ್ತಕ ಓದೋದಕ್ಕೆ ನಿಜವಾಗ್ಯೂ ನನಗೆ ಎರಡು ವಾರ ಹಿಡೀತು. ಈ ಪುಸ್ತಕ, ಈ ಸಿನೆಮಾ, ಈ ಪುಸ್ತಕವನ್ನೇ ಆಧರಿಸಿದ ಇನ್ನೊಂದು ಡಾಕ್ಯುಮೆಂಟರಿ, ಈ ಸಿನೆಮಾದಲ್ಲಿರೋ ನೈಜ ಪಾತ್ರವಾದ ಜಾನ್ ನ್ಯಾಶ್‌ನನ್ನು ನೊಬೆಲ್ ಪ್ರಶಸ್ತಿ ವೆಬ್‌ಸೈಟಿನ ಪ್ರತಿನಿಧಿ ಭೇಟಿ ಮಾಡಿ ನಡೆಸಿದ ಸಂದರ್ಶನ ಎಲ್ಲವನ್ನೂ ಓದಿ, ನೋಡಿ ಈ ಲೇಖನ ಬರೆಯುತ್ತಿದ್ದೇನೆ.

ಹದಿನೈದು ದಿನ ಹೀಗೆ ಒದ್ದಾಡಿದಕ್ಕೆ ಕಾರಣವಿಷ್ಟೆ : ಜಾನ್ ಫೋರ್ಬಿಸ್ ನ್ಯಾಶ್ ಜ್ಯೂನಿಯರ್, ಮನುಕುಲ ಕಂಡ ಒಬ್ಬ ಮಹಾನ್ ಗಣಿತಜ್ಞ. ಅವನು ತನ್ನ 21ನೇ ವಯಸ್ಸಿನಲ್ಲಿ ಬರೆದ ಒಂದು ಸಿದ್ಧಾಂತಕ್ಕೆ 1994 ರಲ್ಲಿ ನೊಬೆಲ್ ಸ್ಮಾರಕ ಅರ್ಥಶಾಸ್ತ್ರ ಪ್ರಶಸ್ತಿ ಬಂತು ಎಂದರೆ ಯೋಚಿಸಿ…ಆತ 40 ವರ್ಷಗಳ ತನ್ನ ಅಧ್ಯಯನ ಕಾಲಾವಧಿಯಲ್ಲಿ ಬರೆದಿದ್ದೇ 23 ಪ್ರೌಢ ಪ್ರಬಂಧಗಳು. ಮನುಕುಲ ಕಂಡ ಇನ್ನಿತರೆ ಮಹಾನ್ ವಿಜ್ಞಾನಿಗಳಾದ ಐನ್‌ಸ್ಟೈನ್ ಎದುರೇ ವಾದ ಮಂಡಿಸಬಲ್ಲ ಛಾತಿ, ಓಪೆನ್‌ಹೈಮರ್‌ನಿಂದಲೇ ಉಚ್ಚ ಶಿಫಾರಸು ಪಡೆಯುವ ಅರ್ಹತೆ, ತನ್ನ ಕಾಲೇಜಿನ ಮುಖ್ಯಸ್ಥ ಬರೆದ ಪುಸ್ತಕವೇ ಮರೆಯಾಗಿ, 150 ವರ್ಷಗಳ ಅರ್ಥಶಾಸ್ತ್ರ ಸಿದ್ಧಾಂತಗಳೆಲ್ಲ ಬುಡಮೇಲಾಗುವಂತೆ ಮಾಡುವ ಸಾಮರ್ಥ್ಯ… ಜಾನ್ ನ್ಯಾಶ್‌ಗೆ ಮಾತ್ರ ಇತ್ತು. ಈಗಲೂ, 81ರ ಹರೆಯದಲ್ಲಿರುವ ನ್ಯಾಶ್ ಮನಸ್ಸು ಮಾಡಿದರೆ ಮತ್ತೊಂದಿಷ್ಟು ಥಿಯರಿಗಳು ಅಲ್ಲಾಡಬಹುದು ; ಜಗತ್ತು ತೆಪ್ಪಗೆ ಕೂತು ಅವನ ಸಿದ್ಧಾಂತಗಳನ್ನು ಅನುಸರಿಸಬಹುದು…

ಜಾನ್ ನಾಶ್

ಜಾನ್ ನಾಶ್

ಇಂಥ ಅದ್ಭುತ ಪ್ರತಿಭೆಯ ನ್ಯಾಶ್ ತನ್ನ ಮೂವತ್ತನೇ ವಯಸ್ಸಿನಿಂದ ಒಂಥರ ಮಾನಸಿಕ ವಿಸ್ಮರಣೆಗೆ ಒಳಗಾಗಿ, ಮುಂದಿನ 36 ವರ್ಷಗಳ ಕಾಲ ಏನೆಲ್ಲಾ ಪಾಡು ಪಟ್ಟು ಕೊನೆಗೂ ಔಷಧಗಳ ನೆರವಿಲ್ಲದೆ ತನ್ನನ್ನು ತಾನು ಸರಿಪಡಿಸಿಕೊಂಡು ಮೇಲೆದ್ದ ಕಥೆಯೇ ಎ ಬ್ಯೂಟಿಫುಲ್ ಮೈಂಡ್. ಐನೂರು ಪುಟಗಳಲ್ಲಿ ನ್ಯಾಶ್ ಬಗ್ಗೆ ಸಿಕ್ಕಿದ ಎಲ್ಲ ಮಾಹಿತಿಗಳನ್ನೂ ಯಾವ ಉತ್ಪ್ರೇಕ್ಷೆಯೂ ಇಲ್ಲದೆ ನಾಸರ್ ಬರೆದಿದ್ದು, ಅದು ಹಾಲಿವುಡ್ ಸಿನೆಮಾಗೆ ಪ್ರೇರಣೆಯಾಗಿದ್ದು ಎಲ್ಲವೂ ನಡೆದು ಎಂಟು ವರ್ಷಗಳೇ ಗತಿಸಿವೆ. ಈ ಸಿನೆಮಾ ಎಂಟು ಆಸ್ಕರ್‌ಗಳಿಗೆ ನಾಮಿನೇಟ್ ಆಗಿ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. Read the rest of this entry »

ನನ್ನ ಹಾಲಿವುಡ್ ಫೇವರಿಟ್ ಸಿನಿಮಾಗಳು

without comments

ತಮ್ಮ ಹಾಲಿವುಡ್ ಸಿನಿಮಾಗಳ ಬಗೆಗಿನ ಮೋಹ ಹಂಚಿಕೊಂಡಿದ್ದಾರೆ ಬೇಳೂರು ತಮ್ಮ ಅಂಕಣದಲ್ಲಿ

ಹಾಲಿವುಡ್ ಸಿನೆಮಾ ನೋಡುವ ಹವ್ಯಾಸ ಬೆಳೆದರೆ ಬಿಡುವುದು ಕಷ್ಟ. ಒಂಥರ ಅಡಿಕ್ಟ್ ಆಗಿಬಿಡುತ್ತೇವೆ. ನಾನಂತೂ ಏಳನೇ ಕ್ಲಾಸಿನಿಂದ ಇವುಗಳನ್ನು ನೋಡುತ್ತ ಮರುಳಾದವ. ಆಗ ದಾವಣಗೆರೆಯಲ್ಲಿದ್ದೆ. ಪುಷ್ಪಾಂಜಲಿ ಥಿಯೇಟರಿನಲ್ಲಿ ಯಾವಾಗ್ಲೂ ಇಂಗ್ಲಿಷ್ ಸಿನೆಮಾದ ಮಾರ್ನಿಂಗ್ ಶೋ ಇರ್ತಾ ಇತ್ತು. ಅಲ್ಲಿ ಸಾಮಾನ್ಯ ಪ್ರತೀ ವಾರಾನೂ ಸಿನೆಮಾ ನೋಡುತ್ತಿದ್ದೆ. ಬ್ರೂಸ್ ಲೀ ಯಿಂದ ಹಿಡಿದು ಜಾಕೀ ಚಾನ್‌ನ ದಿ ಯಂಗ್ ಮಾಸ್ಟರ್‌ವರೆಗೆ ಎಷ್ಟೋ ಸಿನೆಮಾ. ಆಗ ನನಗೆ ಹಾಲಿವುಡ್ ಸಿನೆಮಾ ತಾರೆಯರ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ.beluru copy 1
ಬೆಂಗಳೂರಿಗೆ ಬಂದಮೇಲೆ, ಕಾಟನ್‌ಪೇಟೆಯ ವಿಜಯಲಕ್ಷ್ಮಿ ಥಿಯೇಟರಿನಲ್ಲಿ ಸೆಕೆಂಡ್ ಹ್ಯಾಂಡ್ ಸಿನೆಮಾಗಳನ್ನೂ, ಎಂ ಜಿ ರಸ್ತೆ / ಬ್ರಿಗೇಡ್ ರೋಡ್ / ರೆಸಿಡೆನ್ಸಿ ರಸ್ತೆಯಲ್ಲಿದ್ದ ಬ್ಲೂಮೂನ್, ಬ್ಲೂ ಡೈಮಂಡ್, ರೆಕ್ಸ್, ಪ್ಲಾಝಾ, ಗೆಲಾಕ್ಸಿ, ಸಿಂಫೋನಿ, ಲಿಡೋಗಳಲ್ಲಿ ಫಸ್ಟ್ ಹ್ಯಾಂಡ್ ಹಾಲಿವುಡ್ ಸಿನೆಮಾಗಳನ್ನೂ ನೋಡತೊಡಗಿದೆ. ಇಂಥ ಥಿಯೇಟರಿನಲ್ಲಿ ಇಂಥ ಸೀಟಿನಲ್ಲೇ ಕೂತುಕೊಳ್ಳಬೇಕು ಎಂಬ ಹಠ ತೊಟ್ಟಿದ್ದೂ ಇದೆ. ಆ ದಿನಗಳಲ್ಲಿ (1986-90) ನಾನು ನೋಡದ ಸಿನೆಮಾ ಇಲ್ಲ ಅನ್ನುವಷ್ಟು ಹಾಲಿವುಡ್‌ಗೆ ಅಡಿಕ್ಟ್ ಆದೆ. ಈಗ ತುಂಬಾ ಸೆಲೆಕ್ಟಿವ್ ಆಗಿದ್ದೇನೆ. ಆದರೆ ಆ ಆಕರ್ಷಣೆ ಬಿಟ್ಟಿಲ್ಲ; ಬಿಡುವುದೂ ಇಲ್ಲ. Read the rest of this entry »

ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾ- “ಟೇಕನ್” ಮತ್ತು “ಟ್ರೇಡ್”

with 2 comments

ಮಹಿಳಾ ಸಾಗಣೆ ಮತ್ತು ಮಾದಕ ವಸ್ತುಗಳ ಮಾರಾಟವನ್ನೇ ಕಥಾವಸ್ತುಗಳನ್ನಾಗಿಸಿಕೊಂಡ ಎರಡು ಸಿನಿಮಾಗಳ ಕುರಿತು ಬೇಳೂರು ತಮ್ಮ ಅಂಕಣದಲ್ಲಿ ಬರೆದಿದ್ದಾರೆ..ಓದಿ ಪ್ರತಿಕ್ರಿಯಿಸಿ. ಇನ್ನು ಮುಂದೆ ಬೇಳೂರು ಅಂಕಣ ಮಂಗಳವಾರದಂದು ಪ್ರಕಟವಾಗಲಿದೆ.

ಡ್ರಗ್ ಟ್ರಾಫಿಕಿಂಗ್ ಮತ್ತು ವುಮೆನ್ ಟ್ರಾಫಿಕಿಂಗ್ ಕುರಿತ ಹಲವು ಸಿನೆಮಾಗಳು ಹಾಲಿವುಡ್‌ನಲ್ಲಿ ತಯಾರಾಗಿವೆ. 2001ರಲ್ಲಿ ಬಂದ ಟ್ರಾಫಿಕ್ ಸಿನೆಮಾ ಕಲಾತ್ಮಕತೆಯಲ್ಲೂ ಮಿಂಚಿದ ಅಪರೂಪದ ಚಿತ್ರ. ಇದರಲ್ಲಿ ಡ್ರಗ್ ಕಥೆ ಇದೆ. ಹಲವರು ಇದನ್ನು ಸ್ಟೀವನ್ ಸೋಡೆರ್‌ಬಗ್‌ನ ಮಾಸ್ಟರ್‌ಪೀಸ್ ಎಂದೂ ಕರೆಯುತ್ತಾರೆ.
taken-movie
ಕಳೆದ ವರ್ಷದ(2008)ಲ್ಲಿ ಬಂದ ಟೇಕನ್ ಸಿನೆಮಾವು ವುಮೆನ್ ಟ್ರಾಫಿಕಿಂಗ್ ಕುರಿತ ಅಕ್ಷನ್ ಮೂವೀ. ಲಿಯಾಮ್ ನೀಸನ್‌ನ ಲೀಲಾಜಾಲದ ನಟನೆ, ಅವನ ಸ್ಪಷ್ಟ ಡಯಲಾಗ್‌ಗಳು, ಸ್ಟಂಟ್‌ಗಳನ್ನು ನೋಡಲು, ಸಿನೆಮಾದ ಉದ್ದಕ್ಕೂ ಕೊಂಚ ವಿಪರೀತ ಎನ್ನಬಹುದಾದ ಗನ್ ಹಾರಾಟವನ್ನು ಅನುಭವಿಸಲು ಈ ಸಿನೆಮಾ ನೋಡಬಹುದು. ಸೆಮಿ ಅಕ್ಷನ್ ಮೂವೀ ಅಂತಲೂ ಇದನ್ನು ಕರೆಯುತ್ತಾರೆ. ಯಾಕೆಂದರೆ ಇಲ್ಲಿ ಅಪಹೃತ ಮಗಳನ್ನು ಸಂರಕ್ಷಿಸುವ ಭಾವುಕ ಕಥೆಯೂ ಇದೆ. Read the rest of this entry »

Written by saangatya

June 23, 2009 at 10:35 am

ದಿ ಕ್ಯೂಬ್ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು

with 2 comments

ದಿ ಕ್ಯೂಬ್ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
೧೯೯೭ರ ದಿನಗಳಲ್ಲಿ ನೀವು ಇಂಗ್ಲಿಶ್ ಸಿನೆಮಾ ನೋಡಬೇಕಂದ್ರೆ ಯಾವುದೋ ಸಿಡಿ ಲೈಬ್ರರಿಗೆ ಮೆಂಬರ್ ಆಗಬೇಕಿತ್ತು. ಅಂಥ ಒಂದು ದಿನ ನಾನು ಮಲ್ಲೇಶ್ವರದ ಸಿಡಿ ಲೈಬ್ರರಿಯಿಂದ ತಂದ ಸಿನೆಮಾ ದಿ ಕ್ಯೂಬ್. ನೋಡಿದಾಗ ಇದೇನು ವಿಚಿತ್ರ ಎನ್ನಿಸಿತು. ಈ ಸಿನೆಮಾ ಮಾಡಿದ್ದು ಕೆನಡಾದ ಮಂದಿ. ಹಾಲಿವುಡ್‌ನವರು ಇದರಲ್ಲಿಲ್ಲ. ಆದರೂ ಹಾಲಿವುಡ್‌ನ ಮಿಸ್ಟರಿ ಸಿನೆಮಾಗಳನ್ನು ಮೀರಿಸುವ ಸೈನ್ಸ್ ಫಿಕ್ಷನ್ ಸಿನೆಮಾ ಆಗಿ ದಿ ಕ್ಯೂಬ್ ಪ್ರಸಿದ್ಧವಾಯಿತು. ಆಮೇಲೆ ಹೈಪರ್‌ಕ್ಯೂಬ್ ಎಂಬ ಸಿಖ್ವೆಲ್ ಬಂತು. (ಸಿಖ್ವೆಲ್: ಒಂದು ಸಿನೆಮಾದ ಮುಂದಿನ ಭಾಗದ ಕಥೆ). ಅದಾದ ಮೇಲೆ ಕ್ಯೂಬ್ ಝೀರೋ ಎಂಬ ಶೀರ್ಷಿಕೆಯ ಪ್ರಿಖ್ವೆಲ್ ಬಂತು. (ಪ್ರಿಖ್ವೆಲ್: ಒಂದು ಸಿನೆಮಾದ ಕಥೆಯ ಹಿಂದಿನ ಕಾಲಘಟ್ಟದ ಕಥೆ).
ಬ್ರಾಡ್‌ಬ್ಯಾಂಡ್ ಬಂದು ಸಿನೆಮಾಗಳನ್ನು ಕದ್ದು ನೋಡುವ ಕಲೆ ಕರಗತವಾದ ಕೂಡಲೇ ನಾನು ಮೊದಲು ದಿ ಕ್ಯೂಬ್ ಸಿನೆಮಾವನ್ನು ಹುಡುಕಿದೆ. ಆಗಲೇ ನನಗೆ ಕ್ಯೂಬ್ ಸರಣಿಯಲ್ಲಿ ಒಟ್ಟು ಮೂರು ಸಿನೆಮಾಗಳು ತಯಾರಾಗಿರೋದು ತಿಳಿಯಿತು. ಕೊನೆಗೂ ಮೂರೂ ಸಿನೆಮಾಗಳನ್ನು ನನ್ನ ಡಿಜಿಟಲ್ ಲೈಬ್ರರಿಗೆ ಸೇರಿಸಿಕೊಂಡಿದ್ದೇನೆ. ಹಲವು ಮಿತ್ರರಿಗೆ ಶಿಫಾರಸು ಮಾಡಿದ್ದೇನೆ.
ಕ್ಯೂಬ್ ಸಿನೆಮಾ ಸರಣಿಯ ಎಲ್ಲ ಕಥೆಗಳ ಸಾಮಾನ್ಯ ಹಂದರ ಹೀಗಿರುತ್ತದೆ: (ನಾನು ಮುಂದೆ ವಿವರಿಸೋದೆಲ್ಲ ದಿ ಕ್ಯೂಬ್ ಸಿನೆಮಾದ್ದು)<!
ಒಂದಷ್ಟು ಜನರು ವಿಶ್ವದ ನಾನಾ ಮೂಲೆಗಳಲ್ಲಿರೋ ಸೆರೆಮನೆಗಳಿಂದ ಅದ್ಯಾವುದೋ ರೀತಿಯಲ್ಲಿ ಅಪಹರಣಗೊಳ್ಳುತ್ತಾರೆ. ಅವರಿಗೆ ಮತ್ತೆ ಅರಿವು ಮೂಡಿದಾಗ ಆರೂ ಗೋಡೆಗಳು ಒಂದೇ ಥರ ಕಾಣಿಸುವ ಡಬ್ಬಿಯಲ್ಲಿ ಇರುತ್ತಾರೆ. ಈ ಡಬ್ಬಿಯೇ ಕ್ಯೂಬ್. ಎಲ್ಲ ಗೋಡೆಗಳ ಗಾತ್ರ, ಆಕಾರ, ವಿನ್ಯಾಸ ಒಂದೇ ಥರ. ಆರೂ ದಿಕ್ಕುಗಳಲ್ಲಿ ತಿರುಗುಣಿಗಳಿರುವ ಬಾಗಿಲುಗಳಿವೆ. ಯಾವ ಬಾಗಿಲನ್ನಾದರೂ ತೆರೆದು ನೋಡಿದರೆ ಅಲ್ಲಿ ಇನ್ನೊಂದು ಇದೇ ಥರದ ಕ್ಯೂಬ್ ಅನಾವರಣಗೊಳ್ಳುತ್ತದೆ. ಅಂದರೆ ಊಹಿಸಿ: ಆರೂ ಬಾಗಿಲುಗಳಲ್ಲಿ ತಲಾ ಒಂದೊಂದು ಕ್ಯೂಬ್ ಇದೆ. ಈ ಆರೂ ಕ್ಯೂಬ್‌ಗಳ ಇನ್ನೈದು ಬಾಗಿಲುಗಳಲ್ಲಿ ಮತ್ತೆ ಐದು ಕ್ಯೂಬ್‌ಗಳಿರುತ್ತವೆ! ಕೊನೆಯೇ ಇಲ್ಲದ ಕ್ಯೂಬ್‌ಗಳ ಶ್ರೇಣಿ!
ಅರೆ ಇದೇನು ವಿಚಿತ್ರ, ನಾನೇಕೆ ಇಲ್ಲಿ ಬಂದೆ ಎಂದು ಈ ಖೈದಿಗಳು ತಪ್ಪಿಸಿಕೊಳ್ಳುವುದಕ್ಕಾಗಿ ಆರೂ ಬಾಗಿಲುಗಳಲ್ಲಿ ಯಾವುದೋ ಒಂದನ್ನು ತೆರೆಯುತ್ತಾರೆ; ಇನ್ನೊಂದು ಕ್ಯೂಬ್‌ನ ಒಳಗೆ ಹೋಗುತ್ತಾರೆ. ಅಪಾಯ! ಈ ಆರೂ ಬಾಗಿಲುಗಳಲ್ಲಿ ಒಂದು ಮಾತ್ರ ಸರಿ. ಇನ್ನೈದೂ ಬಾಗಿಲುಗಳೂ ಜೀವಕಂಟಕ. ಒಂದಲ್ಲ ಒಂದು ಥರದಲ್ಲಿ ಚಿತ್ರವಿಚಿತ್ರ ವಿಧಾನಗಳ ಮೂಲಕ ಮನುಷ್ಯ ಸತ್ತೇಹೋಗುತ್ತಾನೆ. ಮಾರ್ಟಲ್ ಕಾಂಬಾಟ್ ಎಂಬ ವಿಡಿಯೋ ಗೇಮ್‌ನಲ್ಲಿ (ಇದು ಸಿನೆಮಾವೂ ಹೌದು) ಸೋತ ಕಟ್ಟಾಳು ಚಿತ್ರವಿಚಿತ್ರವಾಗಿ ಸತ್ತುಹೋಗುವ ಬಗೆ ಗೊತ್ತೆ? ಬಹುಶಃ ದಿ ಕ್ಯೂಬ್ ಇಂಥ ಸಾವುಗಳನ್ನು ಚಿತ್ರೀಕರಿಸಿದ ಮೊದಲ ಸಿನೆಮಾ.
ಒಂದು ಕ್ಯೂಬ್‌ನಲ್ಲಿ ಅಡ್ಡ ಉದ್ದ ಕೊಯ್ದು ಹಾಕುವ ತಂತಿಗಳು ಒಂದು ಪಾತ್ರವನ್ನು ಅಡ್ಡ ಉದ್ದ ಕೊಯ್ದು ಹಾಕುತ್ತವೆ; ಇನ್ನೊಂದರಲ್ಲಿ ಮಳೆನೀರಿನಂತೆ ಮುದ ತಂದ ದ್ರವ ಆಸಿಡ್ ಆಗಿ… ಗೊತ್ತಾಯ್ತಲ್ಲ…. ಅವನ ಮಾಂಸ ಮಜ್ಜನಗಳೆಲ್ಲ ಕರಗಿ…….
ಕೊನೆಗೊಮ್ಮೆ ಇಂಥ ಹಲವು ಖೈದಿಗಳು ಒಂದೇ ಕ್ಯೂಬ್‌ಗೆ ಬಂದು ಬೀಳುತ್ತಾರೆ. ಎಲ್ಲರಿಗೂ ಎಲ್ಲರೂ ಅಪರಿಚಿತರು. ಒಬ್ಬೊಬ್ಬರದೂ ಒಂದೊಂದು ಥರದ ವರ್ತನೆಯ ವ್ಯಕ್ತಿತ್ವ. ಎಲ್ಲರೂ ಒಟ್ಟಾಗಿ ತಪ್ಪಿಸಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ; ಯಾವ ಬಾಗಿಲು ಸುರಕ್ಷಿತ ಎಂಬ ಲೆಕ್ಕಾಚಾರಕ್ಕೆ ತಮ್ಮೆಲ್ಲ ಗಣಿತ, ವಿಜ್ಞಾನ, ತರ್ಕದ ಪ್ರತಿಭೆಯನ್ನು ಬಳಸಿ ಒಂದೊಂದೇ ಕ್ಯೂಬ್ ದಾಟುತ್ತ ಹೋಗುತ್ತಾರೆ. ಈ ಪ್ರಯತ್ನದಲ್ಲಿ ಒಂದೊಂದೇ ಪಾತ್ರಗಳು ಜೀವ ಕಳೆದುಕೊಳ್ಳುತ್ತವೆ. ಒಂದು ಹಂತದಲ್ಲಿ ಸಿಕ್ಕಾಪಟ್ಟೆ ಅಡ್ಡಾಡಿದ ಮೇಲೆ ಮತ್ತೆ ಅವರೆಲ್ಲ ಹಿಂದೆ ಆರಂಭಿಸಿದ ಕ್ಯೂಬ್‌ಗೇ ಬಂದು ಸೇರಿದಾಗ ಕಕ್ಕಾಬಿಕ್ಕಿಯಾಗುತ್ತಾರೆ.
ನಿಜ, ಈ ಕ್ಯೂಬ್‌ಗಳು ಆಗಾಗ ಸರಿದಾಡುತ್ತವೆ. ನೀವು ಬಾಗಿಲನ್ನು ಹುಡುಕುವ ಜೊತೆಗೆ ಕ್ಯೂಬ್‌ಗಳು ಸರಿದಾಡುವ ಲೆಕ್ಕವನ್ನೂ ಗಮನಿಸಬೇಕು. ಲಿಫ್ಟ್ ಶಬ್ದ ಪಕ್ಕದಲ್ಲೇ ಕೇಳಿಸುತ್ತದೆ; ಯಾವುದೋ ಕ್ಯೂಬ್ ಇನ್ನಾವುದೋ ಜಾಗಕ್ಕೆ ಜಾರುತ್ತಿದೆ; ಮೇಲೋ, ಕೆಳಗೋ, ಎಡಕ್ಕೋ, ಬಲಕ್ಕೋ… ಗೊತ್ತಿಲ್ಲ. ದಿಕ್ಕಿಲ್ಲ; ಸಮಯವಿಲ್ಲ; ರಾತ್ರಿ ಹಗಲಿಲ್ಲ…. ಸೈನ್ಸ್ ಫಿಕ್ಷನ್ ಇಷ್ಟಪಡುವವರು ಇದೆಲ್ಲ ನೋಡುತ್ತ ಕುರ್ಚಿಯ ತುದಿಗೆ ಬಂದು ಕೂರುವುದು ನಿಶ್ಚಿತ.
ನಾನು ದಿ ಕ್ಯೂಬ್ ಸರಣಿಯ ಸಿನೆಮಾಗಳನ್ನು ಹಲವಾರು ಸಲ ನೋಡಿದ್ದೇನೆ. ಹಾಗೆ ನೋಡಿದರೆ ದಿ ಕ್ಯೂಬ್ ತುಂಬಾ ಖುಷಿ ಕೊಟ್ಟ ಚಿತ್ರ. ಚಿತ್ರದ ಕೊನೆಯಲ್ಲಿ ಉಳಿದ ವ್ಯಕ್ತಿ ಎಲ್ಲಿಗೆ ಹೋಗುತ್ತಾನೆ ಎಂದು ನೋಡುವುದೇ ಒಂದು ಮಜಾ.
ಹೈಪರ್‌ಕ್ಯೂಬ್ನಲ್ಲಿ  ಆಧುನಿಕ ಕ್ಯೂಬ್‌ಗಳನ್ನು ಕಾಣಬಹುದು. ಇಲ್ಲಿ ಅವಕಾಶದಂತೆ (ಅವಕಾಶ ಅಂದ್ರೆ ಸ್ಪೇಸ್) ಕಾಲವೂ ಬದಲಾಗುತ್ತೆ! ಯಾವುದೋ ಕ್ಯೂಬ್‌ನ ಒಳಹೊಕ್ಕರೆ ಕಾಲವೇ ನಿಂತುಹೋಗುತ್ತದೆ; ಒಂದೆಡೆ ಕಾಲ ಚಕಚಕನೆ ಸಾಗುತ್ತದೆ; ಇನ್ನೊಂದೆಡೆ ನಿಧಾನ. ಕಾಲ ಬದಲಾವಣೆಯ ಈ ಆಯಾಮವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ ಸಿನೆಮಾದಲ್ಲಿ ಕುತೂಹಲ ಉಳಿದುಕೊಂಡಿದೆ.
ಕ್ಯೂಬ್ ಝೀರೋ ಎಂಬ ಪ್ರಿಖ್ವೆಲ್‌ನಲ್ಲಿ ಕ್ಯೂಬ್‌ನ್ನು ನಿಯಂತ್ರಣ ಮಾಡುತ್ತಿರುವವರೂ ಕಾಣುತ್ತಾರೆ. ಆದರೆ ಅವರೆಲ್ಲ ಯಾರು, ಯಾಕೆ ಅವರು ಈ ಕ್ಯೂಬ್‌ಗಳನ್ನು ರಚಿಸಿದರು…. ಸಿನೆಮಾ ನೋಡಿ. ಅರ್ಥವಾದರೆ ತಿಳಿಸಿ.
ಈ ಸಿನೆಮಾಗಳ ಕಥೆಗಳಲ್ಲಿ ಒಂದು ಫಿಲಾಸಫಿಕಲ್ ಫ್ಯಾಕ್ಟರ್ ಕೂಡಾ ಇದೆ ಎಂಬುದೇ ನನ್ನ ಆಸಕ್ತಿಗೆ ಇನ್ನೊಂದು ಕಾರಣ. ಕ್ಯೂಬ್ ಚಿತ್ರವನ್ನು ನೀವು ಫಿಲಾಸಾಫಿಕಲ್ ದೃಷ್ಟಿಯಿಂದ ನೋಡಿದರೆ, ನಮ್ಮೆಲ್ಲರ ಜೀವನವೂ ಕ್ಯೂಬ್ ಥರಾನೇ ಇದೆಯಲ್ಲವೆ ಅನ್ನಿಸುತ್ತದೆ. ಯಾರ‍್ಯಾರೋ ನಮ್ಮ ಬದುಕಿನಲ್ಲಿ ಸಿಗುತ್ತಾರೆ; ಕೆಲವರು ಒಳ್ಳೆಯವರು; ಕೆಲವರು ಕೆಟ್ಟವರು. ಕೆಲವರ ಜೊತೆಗೆ ನಾವು ಸಾಗಬಯಸುತ್ತೇವೆ. ಕೆಲವರು ನಮಗೆ ಮೋಸ ಮಾಡುತ್ತಾರೆ. ಬದುಕಿನ ಮುಂದಿನ ಕ್ಷಣ ನಮಗೆಂದೂ ಗೊತ್ತಿಲ್ಲ; ಯಾವ ಬಾಗಿಲಲ್ಲಿ ಯಾವ ಅದೃಷ್ಟ ಇದೆ? ನಮಗೆ ಗೊತ್ತಿಲ್ಲ. ಕೆಲವರು ಕ್ಯೂಬ್ ಮಾದರಿಯಲ್ಲೇ ಹಠಾತ್ತಾಗಿ, ಫ್ರೀಕ್ ಆಗಿ ಸತ್ತುಹೋಗುತ್ತಾರೆ. ಕೆಲವರು ನಮ್ಮನ್ನು ಬಿಟ್ಟು ತಮ್ಮದೇ ದಾರಿ ಹುಡುಕಿಕೊಳ್ಳುತ್ತಾರೆ. ನಾವು ಹುಟ್ಟಿದ್ದೇಕೆ, ಎಲ್ಲಿಂದ ನಮಗೆ ಈ ಜೀವ ಬಂತು? ಗೊತ್ತಿಲ್ಲ. ಈ ಜೀವದ ಗೊತ್ತು ಗುರಿಯೇನು, ಅದರ ಗಮ್ಯತಾಣ ಯಾವುದು? ಯಾವ ಅವಕಾಶಗಳು ಎಲ್ಲಿ ಸರಿದುಹೋಗುತ್ತಿವೆ…. – ಹೀಗೆ ನೀವು ಕ್ಯೂಬನ್ನು ನಿಮ್ಮ ಬದುಕಿನ ಫ್ರೇಮ್ ಎಂದು ಹೋಲಿಸಿಕೊಂಡರೆ, ಸಿನೆಮಾ ಇನ್ನೂ ಸಂಕೀರ್ಣವಾಗುತ್ತ ಹೋಗುತ್ತೆ.
ಇಲ್ಲಿ ನಿಮಗೆ ಈ ಸಿನೆಮಾವನ್ನು ಕದಿಯಬಹುದಾದ ಬಿಟ್ ಟೊರೆಂಟ್ ಲಿಂಕ್ ಕೊಟ್ಟಿದ್ದೇನೆ. ನೀವೇ ಪ್ರಯತ್ನಿಸಿ. ಬಿಟ್ ಟೊರೆಂಟ್ ಅಂದ್ರೆ ಏನು, ಇದರಿಂದ ಸಿನೆಮಾ ಕದಿಯುವುದು ಹೇಗೆ ಎಂದು ಗೊತ್ತಿಲ್ಲದಿದ್ದರೆ ನನ್ನ ಕದಿಯೋಣು ಬಾರಾ ಲೇಖನ ಸರಣಿಯನ್ನು ಓದಿ.
ಬಿಟ್ ಟೊರೆಂಟ್ ಲಿಂಕ್ : hಣಣಠಿ://ತಿತಿತಿ.miಟಿiಟಿovಚಿ.oಡಿg/geಣ/೪೯೦೩೭೯
ನನ್ನ ಲೇಖನ:
ನಿರ್ದೇಶನ : ಗಿiಟಿಛಿeಟಿzo ಓಚಿಣಚಿಟi, ಭಾಷೆ : ಇಂಗ್ಲಿಷ್, ಇಸವಿ : ೧೯೯೭, ಸಮಯ : ೯೦ ನಿಮಿಷ

ಸೈನ್ಸ್ ಫಿಕ್ಷನ್ ಆಧರಿಸಿದ ಸಿನಿಮಾ “ದಿ ಕ್ಯೂಬ್ ” ಕುರಿತ ಲೇಖನ ಈ ವಾರದ ಬೇಳೂರು ಕಾಲಂನಲ್ಲಿ. ಸದಾ ಕುತೂಹಲ ಮೂಡಿಸುತ್ತಾ ಕುರ್ಚಿಯ ತುದಿಯಲ್ಲಿ ಕುಳ್ಳಿರಿಸಿ ನಮ್ಮನ್ನೂ ಕ್ಯೂಬ್ ನೊಳಗೆ ತಳ್ಳಿ ಬಿಡುತ್ತೇನೋ ಎನ್ನೋ ಆತಂಕವಂತೆ.

1997ರ ದಿನಗಳಲ್ಲಿ ನೀವು ಇಂಗ್ಲಿಶ್ ಸಿನಿಮಾ ನೋಡಬೇಕಂದ್ರೆ ಯಾವುದೋ ಸಿಡಿ ಲೈಬ್ರರಿಗೆ ಮೆಂಬರ್ ಆಗಬೇಕಿತ್ತು. ಅಂಥ ಒಂದು ದಿನ ನಾನು ಮಲ್ಲೇಶ್ವರದ ಸಿಡಿ ಲೈಬ್ರರಿಯಿಂದ ತಂದ ಸಿನಿಮಾ ದಿ ಕ್ಯೂಬ್. ನೋಡಿದಾಗ ಇದೇನು ವಿಚಿತ್ರ ಎನ್ನಿಸಿತು. ಈ ಸಿನಿಮಾ ಮಾಡಿದ್ದು ಕೆನಡಾದ ಮಂದಿ. ಹಾಲಿವುಡ್‌ನವರು ಇದರಲ್ಲಿಲ್ಲ.

ಆದರೂ ಹಾಲಿವುಡ್‌ನ ಮಿಸ್ಟರಿ ಸಿನಿಮಾಗಳನ್ನು ಮೀರಿಸುವ ಸೈನ್ಸ್ ಫಿಕ್ಷನ್ ಸಿನಿಮಾ ಆಗಿ ದಿ ಕ್ಯೂಬ್ ಪ್ರಸಿದ್ಧವಾಯಿತು. ಆಮೇಲೆ ಹೈಪರ್ ಕ್ಯೂಬ್ ಎಂಬ ಸಿಖ್ವೆಲ್ ಬಂತು. (ಸಿಖ್ವೆಲ್ : ಒಂದು ಸಿನಿಮಾದ ಮುಂದಿನ ಭಾಗದ ಕಥೆ). ಅದಾದ ಮೇಲೆ ಕ್ಯೂಬ್ ಝೀರೋ ಎಂಬ ಶೀರ್ಷಿಕೆಯ ಪ್ರಿಖ್ವೆಲ್ ಬಂತು. (ಪ್ರಿಖ್ವೆಲ್ : ಒಂದು ಸಿನಿಮಾದ ಕಥೆಯ ಹಿಂದಿನ ಕಾಲಘಟ್ಟದ ಕಥೆ).

Untitled-1 copy

ಬ್ರಾಡ್‌ಬ್ಯಾಂಡ್ ಬಂದು ಸಿನಿಮಾಗಳನ್ನು ಕದ್ದು ನೋಡುವ ಕಲೆ  ಕರಗತವಾದ ಕೂಡಲೇ ನಾನು ಮೊದಲು ದಿ ಕ್ಯೂಬ್  ಸಿನಿಮಾವನ್ನು ಹುಡುಕಿದೆ. ಆಗಲೇ ನನಗೆ ಕ್ಯೂಬ್ ಸರಣಿಯಲ್ಲಿ  ಒಟ್ಟು ಮೂರು ಸಿನಿಮಾ ತಯಾರಾದದ್ದು ತಿಳಿಯಿತು. ಕೊನೆಗೂ  ಮೂರೂ ಸಿನಿಮಾಗಳನ್ನು ನನ್ನ ಡಿಜಿಟಲ್ ಲೈಬ್ರರಿಗೆ  ಸೇರಿಸಿಕೊಂಡೆ. ಹಲವು ಮಿತ್ರರಿಗೆ ಶಿಫಾರಸು ಮಾಡಿದ್ದೇನೆ.

ಕ್ಯೂಬ್ ಸಿನಿಮಾ ಸರಣಿಯ ಎಲ್ಲ ಕಥೆಗಳ ಸಾಮಾನ್ಯ ಹಂದರ : (ನಾನು ಮುಂದೆ ವಿವರಿಸೋದೆಲ್ಲ ದಿ ಕ್ಯೂಬ್ ಸಿನಿಮಾದ್ದು) ಒಂದಷ್ಟು ಜನರು ವಿಶ್ವದ ನಾನಾ ಮೂಲೆಗಳಲ್ಲಿರೋ ಸೆರೆಮನೆಗಳಿಂದ ಅದ್ಯಾವುದೋ ರೀತಿಯಲ್ಲಿ ಅಪಹರಣಗೊಳ್ಳುತ್ತಾರೆ. ಅವರಿಗೆ ಮತ್ತೆ ಅರಿವು ಮೂಡಿದಾಗ ಆರೂ ಗೋಡೆಗಳು ಒಂದೇ ಥರ ಕಾಣಿಸುವ ಡಬ್ಬಿಯಲ್ಲಿ ಇರುತ್ತಾರೆ. ಈ ಡಬ್ಬಿಯೇ ಕ್ಯೂಬ್. ಎಲ್ಲ ಗೋಡೆಗಳ ಗಾತ್ರ, ಆಕಾರ, ವಿನ್ಯಾಸ ಒಂದೇ ಥರ. ಆರೂ ದಿಕ್ಕುಗಳಲ್ಲಿ ತಿರುಗುಣಿಗಳಿರುವ ಬಾಗಿಲುಗಳು. ಯಾವ ಬಾಗಿಲನ್ನಾದರೂ ತೆರೆದರೆ ಅಲ್ಲಿ ಇನ್ನೊಂದು ಅದೇ ಥರದ ಕ್ಯೂಬ್ ಅನಾವರಣಗೊಳ್ಳುತ್ತದೆ. ಅಂದರೆ ಊಹಿಸಿ: ಆರೂ ಬಾಗಿಲುಗಳಲ್ಲಿ ತಲಾ ಒಂದೊಂದು ಕ್ಯೂಬ್ ಇದೆ. ಈ ಆರೂ ಕ್ಯೂಬ್‌ಗಳ ಇನ್ನೈದು ಬಾಗಿಲುಗಳಲ್ಲಿ ಮತ್ತೆ ಐದು ಕ್ಯೂಬ್‌ಗಳಿರುತ್ತವೆ! ಕೊನೆಯೇ ಇಲ್ಲದ ಕ್ಯೂಬ್‌ಗಳ ಶ್ರೇಣಿ!

beluru copy 1

ಅರೆ ಇದೇನು ವಿಚಿತ್ರ, ನಾನೇಕೆ ಇಲ್ಲಿ ಬಂದೆ ಎಂದು ಈ  ಖೈದಿಗಳು ತಪ್ಪಿಸಿಕೊಳ್ಳುವುದಕ್ಕಾಗಿ ಆರೂ  ಬಾಗಿಲುಗಳಲ್ಲಿ ಯಾವುದೋ ಒಂದನ್ನು ತೆರೆಯುತ್ತಾರೆ; ಇನ್ನೊಂದು ಕ್ಯೂಬ್‌ನ ಒಳಗೆ ಹೋಗುತ್ತಾರೆ. ಅಪಾಯ! ಈ ಆರೂ ಬಾಗಿಲುಗಳಲ್ಲಿ ಒಂದು ಮಾತ್ರ ಸರಿ. ಇನ್ನೈದೂ ಬಾಗಿಲುಗಳೂ ಜೀವ ಕಂಟಕ. ಒಂದಲ್ಲ ಒಂದು ಥರದಲ್ಲಿ ಚಿತ್ರವಿಚಿತ್ರ ವಿಧಾನಗಳ ಮೂಲಕ ಮನುಷ್ಯ ಸತ್ತೇಹೋಗುತ್ತಾನೆ.  ಮಾರ್ಟಲ್ ಕಾಂಬಾಟ್ ಎಂಬ ವಿಡಿಯೋ ಗೇಮ್‌ನಲ್ಲಿ (ಇದು ಸಿನಿಮಾವೂ ಹೌದು) ಸೋತ ಕಟ್ಟಾಳು ಚಿತ್ರವಿಚಿತ್ರವಾಗಿ ಸತ್ತುಹೋಗುವ ಬಗೆ ಗೊತ್ತೆ? ಬಹುಶಃ ದಿ ಕ್ಯೂಬ್ ಇಂಥ ಸಾವುಗಳನ್ನು ಚಿತ್ರೀಕರಿಸಿದ ಮೊದಲ ಸಿನಿಮಾ.

ಒಂದು ಕ್ಯೂಬ್‌ನಲ್ಲಿ ಅಡ್ಡ ಉದ್ದ ಕೊಯ್ದು ಹಾಕುವ ತಂತಿಗಳು ಒಂದು ಪಾತ್ರವನ್ನು ಅಡ್ಡ ಉದ್ದ ಕೊಯ್ದು ಹಾಕುತ್ತವೆ; ಇನ್ನೊಂದರಲ್ಲಿ ಮಳೆನೀರಿನಂತೆ ಮುದ ತಂದ ದ್ರವ ಆಸಿಡ್ ಆಗಿ… ಗೊತ್ತಾಯ್ತಲ್ಲ…. ಅವನ ಮಾಂಸ ಮಜ್ಜನಗಳೆಲ್ಲ ಕರಗಿ…….

ಕೊನೆಗೊಮ್ಮೆ ಇಂಥ ಹಲವು ಖೈದಿಗಳು ಒಂದೇ ಕ್ಯೂಬ್‌ಗೆ ಬಂದು ಬೀಳುತ್ತಾರೆ. ಎಲ್ಲರಿಗೂ ಎಲ್ಲರೂ ಅಪರಿಚಿತರು. ಒಬ್ಬೊಬ್ಬರದೂ ಒಂದೊಂದು ಥರದ ವರ್ತನೆಯ ವ್ಯಕ್ತಿತ್ವ. ಎಲ್ಲರೂ ಒಟ್ಟಾಗಿ ತಪ್ಪಿಸಿಕೊಳ್ಳಲು ಶುರು ಮಾಡುತ್ತಾರೆ ; ಯಾವ ಬಾಗಿಲು ಸುರಕ್ಷಿತ ಎಂಬ ಲೆಕ್ಕಾಚಾರಕ್ಕೆ ತಮ್ಮೆಲ್ಲ ಗಣಿತ, ವಿಜ್ಞಾನ, ತರ್ಕದ ಪ್ರತಿಭೆಯನ್ನು ಬಳಸಿ ಒಂದೊಂದೇ ಕ್ಯೂಬ್ ದಾಟುತ್ತ ಹೋಗುತ್ತಾರೆ. ಈ ಪ್ರಯತ್ನದಲ್ಲಿ ಒಂದೊಂದೇ ಪಾತ್ರಗಳು ಜೀವ ಕಳೆದುಕೊಳ್ಳುತ್ತವೆ.

ಒಂದು ಹಂತದಲ್ಲಿ ಸಿಕ್ಕಾಪಟ್ಟೆ ಅಡ್ಡಾಡಿದ ಮೇಲೆ ಮತ್ತೆ ಅವರೆಲ್ಲ ಹಿಂದೆ ಆರಂಭಿಸಿದ ಕ್ಯೂಬ್‌ಗೇ ಬಂದು ಸೇರಿದಾಗ ಕಕ್ಕಾಬಿಕ್ಕಿಯಾಗುತ್ತಾರೆ. ನಿಜ, ಈ ಕ್ಯೂಬ್‌ಗಳು ಆಗಾಗ ಸರಿದಾಡುತ್ತವೆ. ನೀವು ಬಾಗಿಲನ್ನು ಹುಡುಕುವ ಜೊತೆಗೆ ಕ್ಯೂಬ್‌ಗಳು ಸರಿದಾಡುವ ಲೆಕ್ಕವನ್ನೂ ಗಮನಿಸಬೇಕು. ಲಿಫ್ಟ್ ಶಬ್ದ ಪಕ್ಕದಲ್ಲೇ ಕೇಳಿಸುತ್ತದೆ ; ಯಾವುದೋ ಕ್ಯೂಬ್ ಇನ್ನಾವುದೋ ಜಾಗಕ್ಕೆ ಜಾರುತ್ತಿದೆ; ಮೇಲೋ, ಕೆಳಗೋ, ಎಡಕ್ಕೋ, ಬಲಕ್ಕೋ… ಗೊತ್ತಿಲ್ಲ. ದಿಕ್ಕಿಲ್ಲ; ಸಮಯವಿಲ್ಲ; ರಾತ್ರಿ ಹಗಲಿಲ್ಲ…. ಸೈನ್ಸ್ ಫಿಕ್ಷನ್ ಇಷ್ಟಪಡುವವರು ಇದೆಲ್ಲ ನೋಡುತ್ತ ಕುರ್ಚಿಯ ತುದಿಗೆ ಬಂದು ಕೂರುವುದು ನಿಶ್ಚಿತ.

ನಾನು ಈ ಸರಣಿಯ ಸಿನಿಮಾಗಳನ್ನು ಹಲವಾರು ಸಲ ನೋಡಿದ್ದೇನೆ. ಹಾಗೆ ನೋಡಿದರೆ ದಿ ಕ್ಯೂಬ್ ತುಂಬಾ ಖುಷಿ ಕೊಟ್ಟ ಚಿತ್ರ. ಚಿತ್ರದ ಕೊನೆಯಲ್ಲಿ ಉಳಿದ ವ್ಯಕ್ತಿ ಎಲ್ಲಿಗೆ ಹೋಗುತ್ತಾನೆ ಎಂದು ನೋಡುವುದೇ ಒಂದು ಮಜಾ.

ಹೈಪರ್ ಕ್ಯೂಬ್ನಲ್ಲಿ  ಆಧುನಿಕ ಕ್ಯೂಬ್‌ಗಳನ್ನು ಕಾಣಬಹುದು. ಇಲ್ಲಿ ಅವಕಾಶದಂತೆ (ಅವಕಾಶ ಅಂದ್ರೆ ಸ್ಪೇಸ್) ಕಾಲವೂ ಬದಲಾಗುತ್ತೆ! ಯಾವುದೋ ಕ್ಯೂಬ್‌ನ ಒಳಹೊಕ್ಕರೆ ಕಾಲವೇ ನಿಂತುಹೋಗುತ್ತದೆ; ಒಂದೆಡೆ ಕಾಲ ಚಕಚಕನೆ ಸಾಗುತ್ತದೆ; ಇನ್ನೊಂದೆಡೆ ನಿಧಾನ. ಕಾಲ ಬದಲಾವಣೆಯ ಈ ಆಯಾಮವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ ಸಿನಿಮಾದಲ್ಲಿ ಕುತೂಹಲ ಉಳಿದುಕೊಂಡಿದೆ.

cube

ಕ್ಯೂಬ್ ಝೀರೋ ಎಂಬ ಪ್ರಿಖ್ವೆಲ್‌ನಲ್ಲಿ ಕ್ಯೂಬ್‌ನ್ನು ನಿಯಂತ್ರಣ ಮಾಡುತ್ತಿರುವವರೂ ಕಾಣುತ್ತಾರೆ. ಆದರೆ ಅವರೆಲ್ಲ ಯಾರು, ಯಾಕೆ ಅವರು ಈ ಕ್ಯೂಬ್‌ಗಳನ್ನು ರಚಿಸಿದರು…. ಸಿನಿಮಾ ನೋಡಿ. ಅರ್ಥವಾದರೆ ತಿಳಿಸಿ.

ಈ ಸಿನಿಮಾಗಳ ಕಥೆಗಳಲ್ಲಿ ಒಂದು ಫಿಲಾಸಫಿಕಲ್ ಫ್ಯಾಕ್ಟರ್ ಕೂಡಾ ಇದೆ ಎಂಬುದೇ ನನ್ನ ಆಸಕ್ತಿಗೆ ಇನ್ನೊಂದು ಕಾರಣ. ಕ್ಯೂಬ್ ಚಿತ್ರವನ್ನು ನೀವು ಫಿಲಾಸಫಿಕಲ್ ದೃಷ್ಟಿಯಿಂದ ನೋಡಿದರೆ, ನಮ್ಮೆಲ್ಲರ ಜೀವನವೂ ಕ್ಯೂಬ್ ಥರಾನೇ ಇದೆಯಲ್ಲವೆ ಅನ್ನಿಸುತ್ತದೆ.

ಯಾರ್ಯಾರೋ ನಮ್ಮ ಬದುಕಿನಲ್ಲಿ ಸಿಗುತ್ತಾರೆ; ಕೆಲವರು ಒಳ್ಳೆಯವರು; ಕೆಲವರು ಕೆಟ್ಟವರು. ಕೆಲವರ ಜೊತೆಗೆ ನಾವು ಸಾಗಬಯಸುತ್ತೇವೆ. ಕೆಲವರು ನಮಗೆ ಮೋಸ ಮಾಡುತ್ತಾರೆ. ಬದುಕಿನ ಮುಂದಿನ ಕ್ಷಣ ನಮಗೆಂದೂ ಗೊತ್ತಿಲ್ಲ; ಯಾವ ಬಾಗಿಲಲ್ಲಿ ಯಾವ ಅದೃಷ್ಟ ಇದೆ? ನಮಗೆ ಗೊತ್ತಿಲ್ಲ. ಕೆಲವರು ಕ್ಯೂಬ್ ಮಾದರಿಯಲ್ಲೇ ಹಠಾತ್ತಾಗಿ, ಫ್ರೀಕ್ ಆಗಿ ಸತ್ತುಹೋಗುತ್ತಾರೆ. ಕೆಲವರು ನಮ್ಮನ್ನು ಬಿಟ್ಟು ತಮ್ಮದೇ ದಾರಿ ಹುಡುಕಿಕೊಳ್ಳುತ್ತಾರೆ. ನಾವು ಹುಟ್ಟಿದ್ದೇಕೆ, ಎಲ್ಲಿಂದ ನಮಗೆ ಈ ಜೀವ ಬಂತು? ಗೊತ್ತಿಲ್ಲ. ಈ ಜೀವದ ಗೊತ್ತು ಗುರಿಯೇನು, ಅದರ ಗಮ್ಯತಾಣ ಯಾವುದು? ಯಾವ ಅವಕಾಶಗಳು ಎಲ್ಲಿ ಸರಿದುಹೋಗುತ್ತಿವೆ…. ಹೀಗೆ ನೀವು ಕ್ಯೂಬನ್ನು ನಿಮ್ಮ ಬದುಕಿನ ಫ್ರೇಮ್ ಎಂದು ಹೋಲಿಸಿಕೊಂಡರೆ, ಸಿನಿಮಾ ಇನ್ನೂ ಸಂಕೀರ್ಣವಾಗುತ್ತ ಹೋಗುತ್ತೆ.

ಇಲ್ಲಿ ನಿಮಗೆ ಈ ಸಿನಿಮಾವನ್ನು ಕದಿಯಬಹುದಾದ ಬಿಟ್ ಟೊರೆಂಟ್ ಲಿಂಕ್ ಕೊಟ್ಟಿದ್ದೇನೆ. ನೀವೇ ಪ್ರಯತ್ನಿಸಿ. ಬಿಟ್ ಟೊರೆಂಟ್ನಲ್ಲಿ ಸಿನಿಮಾ ಡೌನ್ ಲೋಡ್ ಬಗ್ಗೆ ನನ್ನ ಕದಿಯೋಣು ಬಾರಾ ಲೇಖನ ಸರಣಿಯನ್ನು ಓದಿ.

ಬಿಟ್ ಟೊರೆಂಟ್ ಲಿಂಕ್ :  http://www.mininova.org/get/490379

ನನ್ನ ಲೇಖನ:   http://mitramaadhyama.co.in/?p=403

ನಿರ್ದೇಶನ : Vincenzo Natali, ಭಾಷೆ : ಇಂಗ್ಲಿಷ್, ಜರ್ಮನ್, ಇಸವಿ : 1997, ಸಮಯ : 90 ನಿಮಿಷ

Written by saangatya

June 13, 2009 at 8:08 am