Archive for the ‘ನೆರೆಹೊರೆ’ Category
ಬಾದಾಮಿ ಹೌಸಿನಲ್ಲಿ ಮಾತಿನ ಕಬಡ್ಡಿ!
ಸಂವಾದ ಡಾಟ್ ಕಾಂ ಅವರು ಆ. 9 ರಂದು ಬೆಂಗಳೂರಿನ ಬಾದಾಮಿ ಹೌಸ್ ನಲ್ಲಿ ನಡೆಸಿದ “ಕಬಡ್ಡಿ” ಚಿತ್ರದ ಸಂವಾದದ ಆಯ್ದ ಭಾಗವನ್ನು ಸಂವಾದ ತಂಡದ ಕೃಪೆಯಿಂದ ಇಲ್ಲಿ ಪ್ರಕಟಿಸಲಾಗಿದೆ.
ಸಾವಧಾನ ಮರೆತ ಬೆಂಗಳೂರಿನಲ್ಲಿ ಜನ ಇಷ್ಟು ತನ್ಮಯರಾಗಿ ಚಿತ್ರವೊಂದರ ಸಂವಾದದಲ್ಲಿ ಪಾಲ್ಗೊಳ್ಳುವರೆಂಬ ನಂಬಿಕೆ ನಮಗಿರಲಿಲ್ಲ. ಭಾನುವಾರದ ಮಧ್ಯಾಹ್ನ ಬಾದಾಮಿ ಹೌಸಿನ ತುಂಬೆಲ್ಲ ಮಾತಿನದ್ದೇ ಕಬಡ್ಡಿ. ಚಿತ್ರ ಪ್ರದರ್ಶನದ ನಂತರ ಎಷ್ಟು ಜನ ಸಂವಾದದಲ್ಲಿ ಪಾಲ್ಗೊಳ್ಳುವರೋ ಎಂಬ ಆತಂಕವನ್ನ ಸುಳ್ಳು ಮಾಡುವಂತೆ ಬಂದ ಸ್ನೇಹಿತರೆಲ್ಲ ಉತ್ಸಾಹದಿಂದ ಪಾಲ್ಗೊಂಡಿದ್ದರು.
ನಮ್ಮ ನಡುವಿನ ಶ್ರೇಷ್ಠ ಚಿಂತಕ ಕಿ.ರಂ ನಾಗರಾಜ ನಮ್ಮೊಡನೆ ಸಿನೆಮಾ ನೋಡಿದ್ದು; ನಂತರ ಅದರ ಸಂವಾದಕ್ಕೆ ಚಾಲನೆ ನೀಡಿದ್ದು ಸಂವಾದವನ್ನು ಅರ್ಥ ಪೂರ್ಣ ದಾರಿಯತ್ತ ಕೊಂಡೊಯ್ದಿತು.
“ಚಿತ್ರ ಯೂತ್ ಫುಲ್ ಆಗಿ ಬಂದಿದೆ. ಕಬಡ್ಡಿ ಆಟದ ನಡುವೆ , ನಾಯಕಿ ಬರೀ ದುಷ್ಟರೇ ತುಂಬಿಕೊಂಡಿರುವ ತನ್ನ ಮನೆಯವರೊಂದಿಗೆ ಆಡುವ ಕಬಡ್ಡಿ ನನಗೆ ಬಹು ಮುಖ್ಯ ಎನಿಸಿತು. ಮತ್ತು ಅದು ಕೇವಲ ಸಾಧಾರಣ ವಿಷಯವಲ್ಲ. ಒಟ್ಟಿನಲ್ಲಿ ಮತ್ತು ಬಹು ಮುಖ್ಯವಾಗಿ ಸಿನೆಮಾ ಕನ್ನಡದ್ದೇ ಅನಿಸಿತು.” ಕಿ.ರಂ ನಾಗರಾಜರ ಮಾತುಗಳಿಂದ ಪ್ರಭಾವಿತರಾದಂತೆ ಸಭಿಕರಿಂದೆಲ್ಲಾ ಪ್ರಶ್ನೆಗಳ ಸುರಿಮಳೆಯೇ ಹರಿದು ಬಂದದ್ದು; ನಮ್ಮ ಹುಡುಗರಿಗೆ ಮೈಕ್ ಯಾರ ಕೈಗೆ ಕೊಡಬೇಕೆಂದೇ ತಿಳಿಯದಷ್ಟು ; Read the rest of this entry »




