ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಚಿತ್ರ ಸಂಗೀತ’ Category

ನೀವು ನೋಡದ ರೆಹಮಾನ್

without comments

ಎಸ್. ಕುಮಾರ್ ಬರೆದ ರೆಹಮಾನ್ ಬಗೆಗಿನ ಲೇಖನ ಖುಷಿ ಕೊಡುವಂಥದ್ದು. ನವಿರಾದ ಶೈಲಿಯ ಲೇಖನವನ್ನು ಇಲ್ಲಿ ಹಾಕಿದ್ದೇವೆ. ಓದಿ ಅಭಿಪ್ರಾಯ ತಿಳಿಸಿ. ಇದು ಸ್ಲಂ ಡಾಗ್ ಮಿಲಿನೇರ್ ಗೆ ಆಸ್ಕರ್ ಬಂದ ಸಂದರ್ಭದಲ್ಲಿ ಬರೆದದ್ದು.

ನೀವು ನೋಡದ ರೆಹಮಾನ್
ದೇವ ದೂತ!
ಇದು ನಲುವತ್ತನಾಲ್ಕು ವರ್ಷಗಳ ಹಿಂದಿನ ಕತೆ. ತಮಿಳು ಸಂಗೀತ ಸಂಯೋಜಕ ಆರ್.ಕೆ.ಶೇಖರ್ ಮತ್ತು ಕಸ್ತೂರಿ ದಂಪತಿಗಳ ಮಡಿಲಲ್ಲಿ ಆಗಲೇ ಒಬ್ಬ ಮಗಳಿದ್ದಳು. ಅದೇ ಹೊತ್ತಿಗೆ ಅವರಿಗೊಂದು ಭವಿಷ್ಯನುಡಿ ಹೇಳಿತ್ತು. ನಿಮಗೊಬ್ಬ ಪುತ್ರ ಜನಿಸುತ್ತಾನೆ. ಆತನ ಹೆಸರು ಇಡೀ ಜಗತ್ತಲ್ಲೇ ಬೆಳಗುತ್ತದೆ. ಆತನೂ ಒಬ್ಬ ಸಂಗೀತಗಾರನಾಗುತ್ತಾನೆ. ಆತನ ಖ್ಯಾತಿ ಆಕಾಶದೆತ್ತರ ಮುಟ್ಟುತ್ತದೆ.
ಮರುವರ್ಷ ಶೇಖರ್ ಅವರಿಗೆ ಮಗ ಹುಟ್ಟಿದ! ಸಂಗೀತದ ವಾತಾವರಣವೇ ತುಂಬಿದ ಮನೆಯಲ್ಲಿ ಆ ಹುಡುಗ ಸ್ವರಗಳ ಜತೆ ಬೆಳೆಯಲಾರಂಭಿಸಿದ.

ನಾಲ್ಕು ವರ್ಷದವನಿದ್ದಾಗ ಒಮ್ಮೆ ಶೇಖರ್ ಮಗನನ್ನು ಖ್ಯಾತ ಸಂಗೀತ ನಿರ್ದೇಶಕ ಸುದರ್ಶನ್ ಬಳಿ ಕರೆದೊಯ್ದಿದ್ದರು. ಅವರು ಆಗಲೇ ಶೇಖರ್ ಪುತ್ರನ ಬಗ್ಗೆ ಕೇಳಿ ತಿಳಿದಿದ್ದರು. ಪುಟ್ಟ ಹುಡುಗನನ್ನು ನೋಡುತ್ತಿದ್ದಂತೆಯೇ ಶೇಖರ್‌ಗೆ ‘ನಿನ್ನ ಮಗ ಯಾವ ವಾದ್ಯವನ್ನಾದರೂ ನುಡಿಸಬಲ್ಲನಂತೆ. ಎಲ್ಲಿ ನೋಡೇ ಬಿಡೋಣ’ ಎಂದು ಹಾರ್ಮೋನಿಯಂನಲ್ಲಿ ಅತ್ಯಂತ ಕ್ಲಿಷ್ಟವಾದ ರಾಗವನ್ನು ನುಡಿಸಿದರು. ಹಾರ್ಮೋನಿಯಂ ಅನ್ನು ಮುಚ್ಚಿ ಹುಡುಗನತ್ತ ಸರಿಸಿದರು. ಶೇಖರ್ ಆತಂಕದಲ್ಲಿ ಮಗನತ್ತ ನೋಡಿದರು. ಆತ ಒಂದಿಷ್ಟೂ ಆತಂಕವಿಲ್ಲದೆ ಸುದರ್ಶನ್‌ರಂತೆ ನುಡಿಸಿ ಅಲ್ಲಿದ್ದವರನ್ನೆಲ್ಲಾ ಬೆರಗಾಗಿಸಿಬಿಟ್ಟ. Read the rest of this entry »

Written by saangatya

November 5, 2009 at 8:46 am

ಕುಛ್ ತೋ ಲೋಗ್ ಕಹೆಂಗೆ…!

with 2 comments

ಹಿಂದಿ ಸಿನಿಮಾದ ಇತಿಹಾಸ ಗಮನಿಸಿದರೆ ಗಾಯಕರಾಗಿ ರಫಿ,ಮುಕೇಶ್ ಹಾಗೂ ಮನ್ನಾಡೆ ಛಾಪು ಒತ್ತಿದ್ದಾರೆ ಪೀಳಿಗೆಯಿಂದ ಪೀಳಿಗೆ ಇವರು ಹಾಡಿದ ಹಾಡು ಗುನುಗುತ್ತ ಬಂದಿದ್ದಾರೆ. ಒಂದರ್ಥದಲ್ಲಿ ಈ ಗಾಯಕರು ಯುಗಪ್ರವರ್ತಕರು ಈ ಮಹಾನ್ ಸಾಧಕರ ನಡುವೆ ಆಗೊಮ್ಮೆ ಈಗೊಮ್ಮೆ ಮಿನುಗುತ್ತಿದ್ದ ದನಿಯೂ ಇತ್ತು ಅದೇ ಕಿಶೋರ್ ಕುಮಾರ್ ನದು.

ಶಾಸ್ತ್ರೀಯ ಸಂಗೀತದ ಅಧ್ಯಯನ ಮಾಡಿಲ್ಲ ಅನ್ನೋ ಕೊರಗು ಕಿಶೋರ್ ಗಿತ್ತು ಅದಕ್ಕಾಗಿಯೇ ಕೆಲ ಪಂಡಿತರೆನಿಸಿಕೊಂಡ ಸಂಗೀತ ನಿರ್ದೇಶಕರ ಬಳಿ ಕಿಶೋರ್ ಹಾಡಲು ಆಗಲೇ ಇಲ್ಲ. ಅದು ನೌಶಾದ್ ಆಗಿರಬಹುದು ,ರೋಶನ್ ಇರಬಹುದು ಅಥವಾ ಮದನ್ ಮೋಹನ್ ಆಗಿರಬಹುದು ಕಿಶೋರ್ ಬಗ್ಗೆ ಅವರಿಗೆ ಒಲವಿರಲಿಲ್ಲ.ಅಥವಾ ಅವರು ಸಂಗೀತ ಸಂಯೋಜಿಸಿದ ಲಾಲಿತ್ಯದ ಹಾಡುಗಳಿಗೆ ಕಿಶೋರ್ ದನಿ ಹೊಂದುತ್ತಿರಲಿಲ್ಲ.ಒಟ್ಟಿನಲ್ಲಿ ಮೇಲೆ ಉಲ್ಲೇಖಿಸಿದ ತ್ರಿಮೂರ್ತಿಗಳ ನಡುವೆ ಪೋಷಣೆ ಇಲ್ಲದೆ ಕಿಶೋರ್ ಮುರಟಿಹೋಗಬೇಕಾಗಿತ್ತು ಆದರೆ ಹಾಗಾಗಲಿಲ್ಲ.ತನ್ನಲ್ಲಿರೋ ನ್ಯೂನತೆ ಬೇರೆ ರೀತಿಯಿಂದ ಕಿಶೋರ್ ಕಮಿಮಾಡಿಕೊಂಡ.ಅವನ ನೆರವಿಗೆ ಬಂದಿದ್ದು ” ಯೋಡಲ್ಯೂಯು…”.
kishore ಆಸ್ಟ್ರಿಯಾ, ಸ್ವಿಸ್ ದೇಶದ ರಾಕ್ ಬ್ಯಾಂಡ್ ನಲ್ಲಿ “ಯೋಡಲೆ..”  ಪ್ರಚಲಿತವಿತ್ತು ಮೂಲತಃ ಆಲ್ಪ್ಸ ಪರ್ವತಾ  ರೋಹಿಗಳು ಸಂವಹನ  ಕಲೆಯಾಗಿ ಅದು ಬಳಕೆ ಮಾಡಿಕೊಳ್ಳುತ್ತಿದ್ದರು. ಕಿಶೋರ್ ಗೆ ಈ ಕಲೆ  ಬಗ್ಗೆ ಹೇಳಿದವ ಅವನ ಸೋದರ ಅನೂಪ್ ಕುಮಾರ್. ಕೇಳಿದ  ಕಿಶೋರ್ ಗೆ ಅದರ ಗುಂಗು ಹಿಡಿಯಿತು. ದಿನಪ್ರತಿ ಅದರಬಗ್ಗೆ  ಅಭ್ಯಸಿಸಿದ. ಗುರುವಾಗಿ ದೊರೆತವ ಎಸ್.ಡಿ ಬರ್ಮನ್. ಕಿಶೋರನ  ಗಾಡ್ ಫಾದರ್ ಈತ. ನವಕೇತನ್ ಬ್ಯಾನರಿನ ಕಾಯಂ  ಸಂಗೀತಗಾರ ಬರ್ಮನ್  Read the rest of this entry »

Written by saangatya

October 20, 2009 at 9:50 am

“ಜಾನಮ್ ಸಮಝಾಕರೋ…ಆಶಾರ ಗಾನ”

with one comment

ಆಶಾ ಬೋಂಸ್ಲೆ ಬಗ್ಗೆ ಬರೆದ ಉಮೇಶ್ ದೇಸಾಯಿಯವರ ಲೇಖನವಿದು. ಮೊದಲ ಬಾರಿಗೆ ಸಾಂಗತ್ಯಕ್ಕೆ ಕಳುಹಿಸಿದ್ದಾರೆ. ಆಶಾ ಅವರಿಗೆ 63 ತುಂಬಿದ ಹಿನ್ನೆಲೆಯಲ್ಲಿ ಈ ಲೇಖನ ಪ್ರಕಟಿಸಲಾಗುತ್ತಿದೆ.

ಮೊನ್ನೆ ಟಿವಿಯಲ್ಲಿ ಆಶಾ ಮಾತನಾಡುತ್ತಿದ್ದರು. ಒಳಗಿನದ್ದೂ ಬಿಚ್ಚಿಡಬಹುದು ಎಂದು ಕಾದಿದ್ದೆ,ನಿರಾಸೆಯಾಯಿತು. ಅವರು ಅನುಭವಿಸಿದ್ದು ಅವರೇ ಹೇಳಬೇಕು. ಬೇರೆ ಯಾರೇ ಹೇಳಿದರೂ ಅದು ಗಾಸಿಪ್. ಆಶಾ ಏನೂ ಬದಲಾಗಿಲ್ಲ ಎಂಬುದು ಅಂದೇ ರಾತ್ರಿ ನಿರೂಪಿತವಾಯಿತು.

ಝೀ ಟಿವಿಯ ಲಿಟಲ್ ಚಾಂಪ್ ಕಾರ್ಯಕ್ರಮ. ಅವರೇ ಮುಖ್ಯ ಜಡ್ಜ್. ಶ್ರೇಯಸಿ ಎನ್ನೋ ಹನ್ನೆರಡು ವರ್ಷದ ಹುಡುಗಿ ಆಶಾ ಹಾಡಿದ ” ಪ್ಯಾರ್ ಕರನೆವಾಲೆ ಪ್ಯಾರ್ ಕರತೆ ಹೈ ಶಾನ್ ಸೆ ….” ಅಂದಾಗ ಎಲ್ಲರಿಗಿಂತ ಮೊದಲು ಎದ್ದು ನಿಂತು ಚಪ್ಪಾಳೆ ಹೊಡೆದರು..!
asha
ಆಶಾರ ಈ ಗುಣವೇ ಅವರ ದೌರ್ಬಲ್ಯ ಆಗಿತ್ತೇ? ಇತಿಹಾಸ ಸಾಕ್ಷಿ ಹೇಳುತ್ತದೆ. ಆಶಾರಿಂದ ಅನೇಕ ಗೀತೆಗಳು ಕಸಿಯಲ್ಪಟ್ಟಿವೆಯಂತೆ. ಪ್ರಮುಖ ಉದಾಹರಣೆ “ಏ ಮೇರೆ ವತನ್ ಕೆ ಲೋಗೋ…” ಹಾಡು.ಸಂಗೀತ ನಿರ್ದೇಶಕ ಸಿ. ರಾಮಚಂದ್ರ ಆಶಾರನ್ನು ಹಾಡಲು ಆಯ್ಕೆ ಮಾಡಿದ್ದ. ರೆಕಾರ್ಡಿಂಗ್ ವೇಳೆ ಲತಾರೂ ಸ್ಟುಡಿಯೋದಲ್ಲಿದ್ದಳು. ಆಶಾರಿಗೆ ಇರಿಸು ಮುರಿಸು.

ನಿಜವಾಗಿ ಲತಾರೇ ಈ ಹಾಡು ಹಾಡಬೇಕಿತ್ತು. ಆದರೆ ಸಿ.ರಾಮಚಂದ್ರಗೆ ಅದು ಇಷ್ಟ ಇರಲಿಲ್ಲ. ಅಳುಕುತ್ತ ಆಶಾ ಹಾಡಲು ಮೊದಲಿಟ್ಟರು. ಹಾಡು ಮುಂದುವರಿಸುವುದು ಅವರಿಗಾಗಲಿಲ್ಲ. ಹೊರಗಡೆ ಅಕ್ಕ ಕುಳಿತಿದ್ದಳು. ತನ್ನ ಜೀವನದ ಮಹತ್ತರ ಗೀತೆ ಇದು. Read the rest of this entry »

Written by saangatya

September 24, 2009 at 10:29 am