Archive for the ‘ಚರ್ಚೆ’ Category
ಚಿತ್ರರಂಗದ ಸದ್ಯದ ವಿವಾದ-ಮತ್ತಷ್ಟು ಪ್ರತಿಕ್ರಿಯೆ
ಕನ್ನಡ ಚಿತ್ರರಂಗದ ಸದ್ಯದ ವಿವಾದದ ಕುರಿತು ವಸಂತ ಅವರು ಬರೆದ ಲೇಖನಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಬಂದದ್ದೆಲ್ಲವನ್ನೂ ಚರ್ಚೆ ಇನ್ನಷ್ಟು ಚರ್ಚೆಯಾಗಲೆಂಬ ದೃಷ್ಟಿಯಿಂದ ಇಲ್ಲಿ ಹಾಕಲಾಗಿದೆ. ದಯವಿಟ್ಟು ಚರ್ಚೆಯನ್ನು ಬೆಳೆಸಿ.
ಹಾಂಗಲ್ಲಾರೀ… ನೀವ್ಯಾಕೆ ಆ ಸಿನ್ಮಾ ತೋರ್ಸೋನ್ ಬಗ್ಗೆ ಮಾತಾಡ್ತೀರ್ರೀ? ಅವಂ ಮಾಡೋದು ಅವನ ಹೊಟ್ಟೇ ಪಾಡಲ್ಲೇನ್ರೀ? ಅವಂಗೆ ಹಿಂದೀ ಸಿನ್ಮಾ ತೋರ್ಸೇ ಹೊಟ್ಟೆ ತುಂಬೋದು ಅಂತಾದ್ಮ್ಯಾಲೆ ಅವಂ ಯಾಕ್ರೀ ಕನ್ನಡಾ ಸಿನ್ಮಾ ತೋರ್ಸ್ಯಾನು? ಇವತ್ತಾ ಕನ್ನಡ ಸಿನ್ಮಾ ನೋಡೂ ಜನ್ರೇ ಕಡ್ಮೆ ಆಗಿದಾರಾ ಅಂದ್ ಮ್ಯಾಗೆ ಅದಕ್ಕೇನೋ ಬೇರೆ ಕಾರಣ ಇರ್ಬೇಕಲ್ಲೇನ್ರೀ? ನಮ್ಮ ಸಿನ್ಮಾಗಳನ್ನ ಉಳ್ಸೋಕ್ಕಂತ ಅದ್ಯಾವನೋ ಗದಗ್ದೋನ್ ಹೊಟ್ಟೆಗೊಡ್ಯೋದು ಏನು ನ್ಯಾಯಾ ಕಣ್ರೀ? ಅದಕ್ಕೆ ಕಾನೂನು ಮಾಡಿದ್ರಾ… ಅದು ಅನ್ಯಾಯದ್ ಕಾನೂನಲ್ಲೇನ್ರೀ……………………………………………………………. ಬೇತಾಳ
*
ಎಲ್ರೂ ಮಾಡೋದೂ ಹೊಟ್ಟೆಪಾಡಿಗಾಗಿ ಸ್ವಾಮಿ. ಹಾಗಂತ ಉದಾಹರಣೆಗೆ, ಕಳ್ಲಭಟ್ಟಿ ಮಾಡೋರ್ನ, ಕಳ್ಳಸಾಗಾಣಿಕೆ ಮಾಡೋರ್ನ ಒಪ್ಪೋದಿಕ್ಕೆ ಸಾಧ್ಯಾನಾ? ಒಬ್ಬರು ಮಾಡೋ ಕೆಲಸ ಆ ನಾಡಿನ ಜನರ ಏಳಿಗೆಗೆ ಪೂರಕವಾಗಿರಬೇಕು ಅಲ್ಲವಾ? ಕಾನೂನು ಇರೋದೂ ಸಹಾ ಆಯಾ ನಾಡಿನ ಜನರ ಏಳಿಗೆಗಾಗಿಯೇ ಅಲ್ಲವಾ? ಕಾನೂನು ಮಾಡೋದು ಆಯಾ ನಾಡಿನ ಜನರ ರಕ್ಷಣೆಗಾಗಿ ಅಲ್ಲವಾ?-ವಿಕ್ರಮ್
*
ನೋಡಿ ಸರ್ ಇದು ವೆರಿ ಸಿಂಪಲ್, KFCC ಯಾವುದೇ ಕಾರಣಕ್ಕೆ ಪ್ರದರ್ಶಕರ ಮೇಲೆ ಯಾವುದೇ ರೀತಿಯ ಒತ್ತಡ ಹೇರಬಾರದು. ಯಾಕೆಂದರೆ ಅವನದು ಖಾಸಗಿ ಆಸ್ತಿ. ಒಮ್ಮ ಆತ ಸಿನೆಮಪ್ರದರ್ಶನ ಬಿಟ್ಟು ತಿಯೇಟರ್ ಒಡೆದು ಕಾಂಪ್ಲೆಕ್ಸ ಕಟ್ಟಿಸಿದರೆ ಏನ್ ಮಾಡ್ತಿರ. KFCC ಗೆ ಅಷ್ಟೊಂದು ಕಾಳಜಿ ಇದ್ರೆ ಕನ್ನಡದಲ್ಲಿ ದರಿದ್ರ ಸಿನೆಮ ನೀಡುತ್ತಿರೊ ಮಂದಿಗೆ ನಿರ್ಬಂದ ಹಾಕಲು ಹೇಳಿ. ಇಲ್ಲಾ ಅಂದ್ರೆ KFCC ಕರ್ನಾಟಕದಲ್ಲೆಲ್ಲ ತನ್ನ ಹಣದಿಂದ ಚಿತ್ರಮಂದಿರ ಕಟ್ಟಿ ಚಿತ್ರ ಪ್ರದರ್ಶಿಸಲು ಹೇಳಿ. ಅದು ಬಿಟ್ಟು ಈ ಡುಬಾಕ್ ಐಡಿಯ ಕೈಬಿಡಿ. ಒಳ್ಳೆ ಸಿನೆಮ ಕೊಟ್ಟರೆ ಜನ ನೋಡೇ ನೋಡ್ತಾರೆ………………………………….ರಾಜೇಶ್
*

1. ಭಾರತ ಒಕ್ಕೂಟ ವ್ಯವಸ್ಥೆಯ ದೇಶ. ಇಲ್ಲಿ ಬದುಕುವವರು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ನಡೆಯಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಅನ್ನುವುದು ಇದೇ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರೂಪುಗೊಂಡಿರುವ ಸಂಸ್ಥೆ. ಇಲ್ಲಿ ಎಲ್ಲಾ ಭಾಷೆಯ ಸಿನಿಮಾದವರೂ ಸದಸ್ಯರಾಗಿದ್ದಾರೆ. ಇಂತಹ ವ್ಯವಸ್ಥೆಯೂ ರೂಪಿಸು ಕಟ್ಟುಪಾಡುಗಳನ್ನು ಕಾಪಾಡಿಕೊಂಡು ಸಾಗುವುದು ಸಿನಿಮಾ ಸಮಾಜದ / ಉದ್ಯಮದ ಏಳಿಗೆಗೆ ಅಗತ್ಯ. ಹಾಗಾಗಿ ಗದಗದ ಚಿತ್ರಮಂದಿರದವರು ನೀಡಿರುವ ಹೇಳಿಕೆಯನ್ನು ತಪ್ಪು ಎನ್ನಬೇಕಾಗುತ್ತದೆ.
3. ಒಂದು ಉದ್ಯಮದ ಒಟ್ಟಂದದಲ್ಲಿ ಯಾವುದೇ ಕಟ್ಟುಪಾಡು ಯಾರಿಗಾದರೂ ಸರಿ ಇಲ್ಲ ಎನಿಸಿದರೆ, ಆ ಒಕ್ಕೂಟ ವ್ಯವಸ್ಥೆಯ ಒಳಗಡೆಯೇ ಇದ್ದು ಪ್ರಶ್ನಿಸಬೇಕು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸೂಚಿಸಬೇಕು. ಹಾಗೆ ಮಾಡದೆ ದೂರ ಉಳಿದರೆ ಅಂತಹವರು ಎಲ್ಲಿಗೂ ಸಲ್ಲದವರಾಗುತ್ತಾರೆ. ವ್ಯವಸ್ಥೆಯೇ ಅಂತಹವರನ್ನು ದೂರ ಇಟ್ಟರೆ ಒಂಟಿಯಾಗಿ ಬದುಕುವುದು ಯಾರಿಗಾದರೂ ಕಷ್ಟವಾಗುತ್ತದೆ. Read the rest of this entry »
ಎಲ್ಲರ ಒಪ್ಪಿಗೆಯೊಂದಿಗೆ ಮುನ್ನಡೆಯಬೇಕು
ವಸಂತರು ಬರೆದ ಲೇಖನಕ್ಕೆ ಖ್ಯಾತ ನಿರ್ದೇಶಕ ಬಿ. ಸುರೇಶ, ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಇನ್ನಷ್ಟು ಮಂದಿ ಪ್ರತಿಕ್ರಿಯಿಸಬಹುದು. ಒಟ್ಟೂ ಆರೋಗ್ಯಕರ ಚರ್ಚೆ ನಡೆಸುವುದು ನಮ್ಮ ಉದ್ದೇಶ. saangatya@gmail.com ಗೆ ಪ್ರತಿಕ್ರಿಯಿಸಿ.
1. ಭಾರತ ಒಕ್ಕೂಟ ವ್ಯವಸ್ಥೆಯ ದೇಶ. ಇಲ್ಲಿ ಬದುಕುವವರು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ನಡೆಯಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಅನ್ನುವುದು ಇದೇ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರೂಪುಗೊಂಡಿರುವ ಸಂಸ್ಥೆ. ಇಲ್ಲಿ ಎಲ್ಲಾ ಭಾಷೆಯ ಸಿನಿಮಾದವರೂ ಸದಸ್ಯರಾಗಿದ್ದಾರೆ. ಇಂತಹ ವ್ಯವಸ್ಥೆಯೂ ರೂಪಿಸುವ ಕಟ್ಟುಪಾಡುಗಳನ್ನು ಕಾಪಾಡಿಕೊಂಡು ಸಾಗುವುದು ಸಿನಿಮಾ ಸಮಾಜದ / ಉದ್ಯಮದ ಏಳಿಗೆಗೆ ಅಗತ್ಯ. ಹಾಗಾಗಿ ಗದಗದ ಚಿತ್ರಮಂದಿರದವರು ನೀಡಿರುವ ಹೇಳಿಕೆಯನ್ನು ತಪ್ಪು
ಎನ್ನಬೇಕಾಗುತ್ತದೆ.
2. ಒಂದು ಉದ್ಯಮದ ಒಟ್ಟಂದದಲ್ಲಿ ಯಾವುದೇ ಕಟ್ಟುಪಾಡು ಯಾರಿಗಾದರೂ ಸರಿ ಇಲ್ಲ ಎನಿಸಿದರೆ, ಆ ಒಕ್ಕೂಟ ವ್ಯವಸ್ಥೆಯ ಒಳಗಡೆಯೇ ಇದ್ದು ಪ್ರಶ್ನಿಸಬೇಕು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸೂಚಿಸಬೇಕು. ಹಾಗೆ ಮಾಡದೆ ದೂರ ಉಳಿದರೆ ಅಂತಹವರು ಎಲ್ಲಿಗೂ ಸಲ್ಲದವರಾಗುತ್ತಾರೆ. ವ್ಯವಸ್ಥೆಯೇ ಅಂತಹವರನ್ನು ದೂರ ಇಟ್ಟರೆ ಒಂಟಿಯಾಗಿ ಬದುಕುವುದು ಯಾರಿಗಾದರೂ ಕಷ್ಟವಾಗುತ್ತದೆ.
3. ಎಲ್ಲರ ಸಹಕಾರದಿಂದ ಮಾತ್ರ ಆರೋಗ್ಯಕಾರಿಯಾದ ಸಮಾಜ ಕಟ್ಟುವುದು ಸಾಧ್ಯ.
4. ಒಮ್ಮೊಮ್ಮೆ ಒಕ್ಕೂಟ ವ್ಯವಸ್ಥೆಯಲ್ಲಿ ಬಲವುಳ್ಳವರ ಮಾತುಗಳಿಗೆ ಪುಷ್ಟಿ ದೊರಕುವ ಸಾಧ್ಯತೆ ಇದೆ. ಹಾಗಾಗಿ ಶಕ್ತಿಪ್ರದರ್ಶನ ಮಾಡಲಾಗದವರ ಅಭಿಪ್ರಾಯಗಳಿಗೆ ಬೆಲೆಯೇ ಸಿಗದೆ ಹೋಗಬಹುದು. ಅಂತಹ ಪರಿಸ್ಥಿಯನ್ನು ನಿಭಾಯಿಸುವುದಕ್ಕೆ ಮಾರ್ಗೋಪಾಯಗಳನ್ನ ಕಂಡುಕೊಳ್ಳಬೇಕು.
ಗದಗದ ಚಿತ್ರಮಂದಿರದ ಮಾಲೀಕರನ್ನೂ ಒಲಿಸಿ, ಒಳಗೊಳ್ಳಬೇಕು. ಯಾರನ್ನೂ ದೂರ ಇಟ್ಟರೂ ಅದು ಮಾರಕವೇ.
ಕನ್ನಡ ಚಿತ್ರರಂಗ ಇನ್ನೂ ಯಾಕೆ ಅಳ್ತಾ ಕೂರ್ಬೇಕು ?
ವಸಂತ ಎನ್ನುವವರು ತಮ್ಮ ಬ್ಲಾಗ್ ನಲ್ಲಿ ಬರೆದ ಪುಟ್ಟ ಬರಹವಿದು. ಇಂದಿನ ಕನ್ನಡ ಚಿತ್ರರಂಗದ ಚರ್ಚಿತ ವಿಷಯವೇ ಇಲ್ಲಿಯ ಚರ್ಚೆಯ ಸಂಗತಿ. ಚರ್ಚೆ ಬೆಳೆಸುವವರು ತಮ್ಮ ಲೇಖನಗಳನ್ನು ಕಳಿಸಿ, ಚರ್ಚೆ ನಡೆಸಲೆಂದೇ ಇದನ್ನು ಇಲ್ಲಿ ಹಾಕುತ್ತಿದ್ದೇವೆ. ನೀವು ನಮ್ಮ ಇಮೇಲ್ ಗೆ ಕಳಿಸಿಕೊಡಿ.
ಇವತ್ತು ಡೆಕ್ಕನ್ ಹೆರಾಲ್ಡ್ ಓದ್ತಾ ಇದ್ದೆ. ಒಂದು ಚಿಕ್ಕ ಸುದ್ಧಿ ಕಣ್ಣಿಗೆ ಬಿತ್ತು. ಗದಗನಲ್ಲಿ ಒಬ್ಬ ಚಲನಚಿತ್ರ ಪ್ರದರ್ಶಕರು ಹೇಳಿಕೆ ಒಂದನ್ನು ನೀಡಿ, ಎಲ್ಲ ಪ್ರದರ್ಶಕರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ (KFCC) ಯ ಸದಸ್ಯರಾಗಬೇಕು ಅನ್ನುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾದುದು, ಇದನ್ನ ಈ ಕೂಡಲೇ ಹಿಂಪಡೆಯಬೇಕು ಅಂದರು. ಅದನ್ನ ನೋಡಿದಾಗ ಕರ್ನಾಟಕದ ಒಂದು ಭಾಗದ ಪ್ರದರ್ಶಕರೊಬ್ಬರು, ಕರ್ನಾಟಕದ ಚಿತ್ರಮಂಡಳಿಯ ಸದಸ್ಯತ್ವವೇ ಬೇಡ ಅಂತ ಯಾಕಂತಾರೆ ಅಂತಾ ವಿಚಾರ ಮಾಡ್ತಾ ಇದ್ದೆ. ಯೋಚನೆ ಮಾಡಿದಾಗ, ಚಿತ್ರ ರಂಗದ ಒಂದಿಬ್ಬರು ಗೆಳೆಯರನ್ನು ಮಾತನಾಡಿಸಿದಾಗ ಕಂಡದ್ದು: Read the rest of this entry »
ಒಳ್ಳೆ ಸಿನಿಮಾ ಎನ್ನುವ ಕನಸು
ಸಾಂಗತ್ಯ “ಸಿನಿಮಾ ಎಂದರೇನು?’ ಎಂಬುದೊಂದು ಸಾಮಾನ್ಯ ಪ್ರಶ್ನೆ ಇಟ್ಟುಕೊಂಡು ಚರ್ಚೆಯನ್ನು ಆರಂಭಿಸಿದೆ. ಅದಕ್ಕೆ ಸಂವಾದಿ ಎನ್ನುವಂತೆ ಅಭಯಸಿಂಹ ಅವರು ಬರೆದಿರುವ ಈ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. ನಿಮ್ಮ ಅಭಿಪ್ರಾಯವನ್ನೂ ದಾಖಲಿಸಿ.
ಮೇ ಮೂವತ್ತಕ್ಕೆ ಮಂಡ್ಯದಲ್ಲಿ, ಮಂಡ್ಯ ಚಿತ್ರ ಸಮುದಾಯವು ‘ಗುಬ್ಬಚ್ಚಿಗಳು’ ಪ್ರದರ್ಶನವನ್ನು ಏರ್ಪಡಿಸಿತ್ತು. ನಿರ್ಮಾಪಕ ಬಿ. ಸುರೇಶ್, ಚಿತ್ರದ ಬಾಲ ನಟಿ ಪ್ರಕೃತಿ, ನಾಗತಿಹಳ್ಳಿ ಚಂದ್ರ ಶೇಖರ್ ಹಾಗೂ ನನ್ನನ್ನು ಸೇರಿದಂತೆ ಸುಮಾರು 150 ಜನ ಮಂಡ್ಯದ ಸಭಾಂಗಣವೊಂದರಲ್ಲಿ ಕುಳಿತು ಚಿತ್ರವನ್ನು ಮತ್ತೊಮ್ಮೆ ನೋಡಿ ಸಂವಾದದಲ್ಲಿ ಭಾಗಿಗಳಾದೆವು. ಮಂಡ್ಯದ ಜನ ೧೫೦ರಷ್ಟು ಸಂಖ್ಯೆಯಲ್ಲಿ ಇಪ್ಪತ್ತು ರೂಪಾಯಿ ಟಿಕೇಟ್ ಕೊಟ್ಟು ಬಂದು ಚಿತ್ರವನ್ನು ನೋಡಿದರು. ಇದು ನಿಜಕ್ಕೂ ಅಚ್ಚರಿಯ ವಿಷಯವೇ ಆಗಿತ್ತು ನನ್ನ ಮಟ್ಟಿಗೆ. ಪ್ರದರ್ಶನದ ನಂತರ ಒಂದಷ್ಟು ಹೊತ್ತು ಸಂವಾದ ನಡೆಯಿತು. ಸಂವಾದದಲ್ಲಿ ಮತ್ತದೇ ಹಲವು ಕಡೆ ಕೇಳಿರುವಂಥದ್ದೇ ಮಾತು ಕೇಳಿ ಬಂತು. ಇಂಥಾ ಸಿನೆಮಾ ನಿಜಕ್ಕೂ ಜನ ನೋಡಬೇಕು. ಇಂಥಾ ಸಿನೆಮಾ ಯಾಕೆ ರಿಲೀಸ್ ಆಗೋದಿಲ್ಲ? ಇಂಥಾ ಸಿನೆಮಾಗಳನ್ನು ಶಾಲಾ ಮಕ್ಕಳಿಗೆ ಶಿಕ್ಷಣದ ಭಾಗವಾಗಿ ತೋರಿಸಬೇಕು. ಇಂಥಾ ಸಿನೆಮಾವನ್ನು… ಆದರೆ ಯಾಕೆ ಇದ್ಯಾವುದೂ ಆಗುತ್ತಿಲ್ಲ? Read the rest of this entry »
ಸಿನಿಮಾ ಒಂದು ಒಳ್ಳೆಯ ಮಾಧ್ಯಮ
ಸಿನಿಮಾ ಎಂದರೇನು ಎಂಬುದಕ್ಕೆ ರವಿರಾಜ್ ಗಲಗಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಅಭಿಪ್ರಾಯವನ್ನೂ saangatya@gmail. com ಗೆ ಕಳಿಸಿ.
ಸಿನೆಮಾ ಎಂದರೆ ಏನು ? ಅದು ಬದುಕು, ವಾಸ್ತವ, ಭ್ರಮೆ, ಕನಸುಗಳು…ಹೀಗೆ ನೂರಾರು ಪ್ರಶ್ನೆಗಳು ಮುತ್ತುತ್ತವೆ. ಸಿನೆಮಾ ಎಂದ ಕೂಡಲೇ ಬಾಲ್ಯದ ನೆನಪುಗಳು ಕಣ್ಣೆದುರು ಬಿಚ್ಚಿಕೊಳ್ಳುತ್ತವೆ. ಊರಿಗೆ ಬಂದ ಹೊಸ ಸಿನಿಮಾದ ಪೋಸ್ಟರ್ ನೋಡಿ ಚಿತ್ರವೊಂದನ್ನು ಅನುಭವಿಸುವ ಕಾಲವದು. ವಿಷ್ಣುವರ್ಧನ್, ಡಾ.ರಾಜ್‌ಕುಮಾರ್, ಟೈಗರ್ ಪ್ರಭಾಕರ್, ಶಿವರಾಜ್‌ಕುಮಾರ್‌ರಂತಹ ಚಿತ್ರಗಳು ಆಗ ನಮಗೆ ಒಡನಾಡಿ.
ಭಾನುವಾರದ ದಿನ ತಂದೆ ಕೊಟ್ಟ 10 ರೂ. ನಲ್ಲಿ ಚಿತ್ರ ನೋಡಿ, ಮಿರ್ಚಿ ಭಜಿ ತಿಂದು ಗೆಳೆಯರೊಂದಿಗೆ ಚರ್ಚೆ ನಡೆಸುವುದು ಆಗಿನ ಸಿನಿಮಾ ಆಕರ್ಷಣೆ. ಹೊಡೆದಾಟ, ಬಡಿದಾಟದ ಚಿತ್ರಗಳತ್ತಲೇ ನಮ್ಮ ಗಮನ. ಶಂಕರ್‌ನಾಗ್‌ರ ಆಕ್ಷನ್ ಚಿತ್ರಗಳು, ವಿನೋದ್ ರಾಜ್‌ರ ಡ್ಯಾನ್ಸ್, ವಜ್ರಮುನಿ ಗಂಭೀರ ಅಭಿನಯ, ದ್ವಾರಕೀಶ್‌ರ ಹಾಸ್ಯ…ಇವಿಷ್ಟು ಸಿನೆಮಾ ಎಂಬುದು ನಮ್ಮ ಭಾವನೆ. ಸಿನೆಮಾ ನೋಡಿ ಬಂದ ನಂತರ ಥೇಟರ್‌ಗಳ ಅಕ್ಕ, ಪಕ್ಕ ದೊರೆಯುತ್ತಿದ್ದ ವೇಸ್ಟ್ ರೀಲುಗಳನ್ನು ಮನೆಗೆ ತಂದು, ಮನೆ ಹೊರಗಿನ ಆವರಣದಲ್ಲಿ ಕನ್ನಡಿ ಇಟ್ಟು ಅದರ ಬೆಳಕು ಒಳಗೆ ಬಿಟ್ಟು, ಹಳೆಯ ಶುಭ್ರ ಲುಂಗಿಯೊಂದನ್ನು ಬಾಗಿಲಿಗೆ ಆನಿಸಿ, ದುರ್ಬೀನಿಗೆ ಬೆಳಕು ಹಾಯಿಸಿ ರೀಲು ಹಿಡಿದರೆ ಮನೆಯಲ್ಲೂ ಸಿನಿಮಾ. ಆದರೆ ಆ ಚಿತ್ರಗಳನ್ನು ಚಲಿಸುವಂತೆ ಮಾಡುವ ಸಾಧ್ಯತೆ ಇರಲಿಲ್ಲವಾದ್ದರಿಂದ ನಮ್ಮದು ಸ್ಥಿರ ಚಿತ್ರಗಳ ಹೋಮ್ ಥಿಯೇಟರ್. Read the rest of this entry »
ಕ್ಲಾಸ್-ಮಾಸ್ ಎನ್ನುವುದೇ ಅಸಂಬಂದ್ಧ
ರಂಜಿತರ ಅಭಿಪ್ರಾಯಕ್ಕೆ ಕುಮಾರಸ್ವಾಮಿಯವರ ಚುಟುಕು ಪ್ರತಿಕ್ರಿಯೆ ಹೀಗಿದೆ.
ರಂಜಿತ್ ನಿಮ್ಮ ಲೇಖನ ಓದಿದೆ, ಯಾವ ಒಬ್ಬ ಲೇಖಕನೂ ಅಥವಾ ನಿರ್ದೇಶಕನೂ ಪ್ರೇಕ್ಷಕನ ಮನವನ್ನು ಅರಿಯಲು ಸಾಧ್ಯವಾಗಿಲ್ಲ ಎಂಬುದು ಎಷ್ಟು ಸತ್ಯವೋ, ಪ್ರೇಕ್ಷಕರ ಇಷ್ಟಕ್ಕನುಸಾರವಾಗಿ ಸಿನೆಮಾ ತೆಗೆಯಲು ಅಷ್ಟೇ ಕಷ್ಟ ಸಾಧ್ಯ. ಹಾಗಾಗಿ ನಿರ್ದೇಶಕ ಮಾಡಿದ ಎಲ್ಲ ಚಿತ್ರಗಳನ್ನು ಪ್ರೇಕ್ಷಕ ನೋಡುವಂತಾಗಬೇಕು, ಹಾಗಾಗಬೇಕಾದರೆ ಒಳ್ಳೆಯ ಚಿತ್ರಗಳನ್ನು ನಿರ್ದೇಶಕ ಕೊಡಬೇಕು ಅಷ್ಟೇ. ಈ ಕ್ಲಾಸ್, ಮಾಸ್ಸ್ ಇವೆಲ್ಲವೂ ಅಸಂಬದ್ದ, ಎಷ್ಟೋ ಕ್ಲಾಸ್ ಫಿಲಂ ಗಳು 100 ದಿನ ಓಡಿವೆ ಅದೆಷ್ಟೋ ಮಾಸ್ ಫಿಲಂಗಳು ಒಂದೇ ವಾರಕ್ಕೆ ಎತ್ತಂಗಡಿಯಾಗಿವೆ, ಚಲನ ಚಿತ್ರಗಳಲ್ಲಿ ಯಾವುದೇ ತರಹದ ವಿಂಗಡಣೆಗಳಿಲ್ಲ , ಪ್ರೇಕ್ಷಕ ಮೆಚ್ಚಬೇಕು ಎಲ್ಲವೂ ಅವನನ್ನು ಮೆಚ್ಚಿಸಬೇಕು ಅಷ್ಟೇ.
ಸಿನಿಮಾ ಎಂದರೆ ನನ್ನ ದೃಷ್ಟಿಯಲ್ಲಿ ಇದು
ಸಿನಿಮಾ ಎಂದರೇನು ಎಂಬುದು ಸುಮ್ಮನೆ ಹುಟ್ಟಿ ಹಾಕಿರುವ ಚರ್ಚೆ. ಆ ಮೂಲಕ ಸಿನಿಮಾ ಬಗೆಗಿನ ವಿಭಿನ್ನ ವ್ಯಾಖ್ಯಾನ, ದೃಷ್ಟಿಗಳು ಒಟ್ಟಾಗಲಿ ಎಂಬುದೇ ಆಶಯ. ಈ ಚರ್ಚೆ ಇಷ್ಟು ದಿನವೆಂದೇನೂ ಇಲ್ಲ. ಆಗಾಗ್ಗೆ ಬೇರೆ ಬರಹಗಳು ಪ್ರಕಟಗೊಳ್ಳುತ್ತಲೆ ಇರುತ್ತವೆ. ರಂಜಿತ್ ಹೀಗೇ ಸಿನಿಮಾದ ಒಲವಿನವರು. ತಮ್ಮ ದೃಷ್ಟಿಯನ್ನು ಬರೆದುಕಳಿಸಿದ್ದಾರೆ. ಇದನ್ನು ನೀವೂ ಬೆಳೆಸುವುದಾದರೆ ನಮಗೆ ಇಮೇಲ್ ಮಾಡಿ.
ಸಿನೆಮಾ ಎಂದರೇನು? ಈ ಪ್ರಶ್ನೆಗೆ ಒಬ್ಬ ಸಿನೆಮಾರಂಗದವನಿಂದ ಏನೇನೋ ಡೆಫಿನೇಶನ್ ಗಳು ಬರಬಹುದು. ಅವರದೇ ವೃತ್ತಿಶ್ರದ್ಧೆಯಿಂದ, passion ನಿಂದಾಗಿ ಸಿನೆಮಾಕ್ಕೆ ನೀಡುವ ವ್ಯಾಖ್ಯೆ ಬದಲಾಗಬಹುದು. ಟೆಕ್ನಿಕಲ್ ಆಗಿ ಸಿನೆಮಾಕ್ಕೆ ಬೇರೆ ಬೇರೆ ರೀತಿಯಲಿ ಭಾಷ್ಯ ನೀಡಬಹುದು ಕೂಡ.
ಆದರೆ ಅದನ್ನು ಮುಟ್ಟಿಸಿಕೊಳ್ಳುವ, ತಟ್ಟಿಸಿಕೊಳ್ಳುವ ಆ ಪ್ರೇಕ್ಷಕ ಪ್ರಭುವಿನ ಪ್ರಕಾರ ಸಿನೆಮಾ ಅಂದರೇನು?
ವಾರವಿಡೀ ಕಷ್ಟಪಟ್ಟು ಒಂದು ದಿನ ಸಮಯ ಮಾಡಿಕೊಂಡು ಫ್ಯಾಮಿಲಿ ಜತೆಗೆ ಖುಷಿಖುಷಿಯಾಗಿ ಸಮಯ ಕಳೆಯಲು ಇದೂ ಒಂದು ಮಾರ್ಗವಾ? ಅವಿವಾಹಿತನಾದರೆ ತನ್ನ ಗೆಳತಿ ಜತೆ. ಇಲ್ಲವಾದರೆ ತನ್ನ ಬೇಸರಿನ ಸಂಜೆಯನು ಕಳೆಯಲು ಇದೊಂದು ಟೈಮ್ ಪಾಸ್ ವಿಷಯವಾ? ಹೊಸದೊಂದು ಅನುಭವ ಗಿಟ್ಟಿಸುವ ಸಲುವಾಗಿ ಇಷ್ಟಪಟ್ಟು ಹೋಗುವುದಾ? ಅಥವ ತನ್ನ ಕ್ರಿಯೇಟಿವ್ ಅರ್ಜ್ ಗಾಗಿಯಷ್ಟೇ ಸಿನೆಮಾ ನೋಡುತ್ತಾನಾ?
ಹೀಗೇ ನೋಡುಗನ ಉದ್ದೇಶಕ್ಕನುಗುಣವಾಗಿಯೋ, ಮಾಡುವ ನಿರ್ದೇಶಕನ ಗ್ರಹಿಕೆಗನುಗುಣವಾಗಿಯೋ ಸಿನೆಮಾ ಬದಲಾಗುತ್ತಿರುತ್ತದೆ. ಒಬ್ಬ ನಿರ್ದೇಶಕ ಸಾಮಾಜಿಕ ಬದಲಾವಣೆಯಷ್ಟೇ ತನ್ನ ಸಿನೆಮಾದ ಉದ್ದಿಶ್ಯ ಅಂದರೆ ಇನ್ನೊಬ್ಬ ಪ್ರೇಕ್ಷಕನಿಗೆ ಮನರಂಜನೆ ನೀಡುವುದಷ್ಟೇ ತನ್ನ ಕೆಲಸ ಅಂದುಬಿಡುತ್ತಾನೆ. ಅಲ್ಲಿಗೇ ಸಿನೆಮಾ ಅನ್ನುವುದು ಕ್ಲಾಸ್ ಮತ್ತು ಮಾಸ್ ಎಂದು ಎರಡು ವಿಧವಾಗಿಬಿಡುತ್ತದೆ. ಕ್ಲಾಸ್ ಸಿನೆಮಾ ಅಂದರೆ ಜನ ನೋಡಲು ಬರುವುದಿಲ್ಲವೋ ಎನ್ನುತ್ತ ಭಯಪಡುವ ಕೆಲವು ನಿರ್ದೇಶಕರು, “ಬ್ರಿಡ್ಜ್ ಸಿನೆಮಾ” ಅನ್ನುತ್ತಾ ಮತ್ತೊಂದು ಪಂಗಡ ಹುಟ್ಟುಹಾಕಿದರು. Read the rest of this entry »
ಸಿನಿಮಾ ಎಂದರೆ ಸುಮ್ಮನೆ ಸಿನಿಮಾ
ಚೌತಿ ರಜೆ ಮುಗಿದಿದೆ. ಚೇತನಾ ತೀರ್ಥಹಳ್ಳಿಯವರು ಸಣ್ಣಗೆ ಒಂದು ಚರ್ಚೆಗೆ ಚಾಲೂ ಕೊಟ್ಟಿದ್ದಾರೆ. ಸಿನಿಮಾ ಎಂದರೆ…ಸುಮ್ಮನೆ ಸಿನಿಮಾ ಅಂತೆ ಅವರ ಪಾಲಿಗೆ. ಸಿನಿಮಾ ಬಗೆಗಿನ ಕೌತುಕವನ್ನೇ ಮುಂದಿಟ್ಟುಕೊಂಡು ಬರೆದಿದ್ದಾರೆ. ನಿಮಗೆ ಸಿನಿಮಾ ಎಂದರೆ ಏನನಿಸುತ್ತದೆ saangatya@gmail.com ಬರೆದು ಕಳಿಸಿ.
ಸಿನೆಮಾ ಅಂದರೆ, ಸುಮ್ಮನೆ ಸಿನೆಮಾ.
ಅಂದ ಹಾಗೆ, ಮೊನ್ನೆ ಮತ್ತೊಂದು ಕೆಟ್ಟ ಸಿನೆಮಾ ನೋಡಿದೆ. ಅದೂ ಒಂಥರಾ ಅನುಭವಾನೇ. ಬಯಸೀಬಯಸೀ ಸಮಯ ಹಾಳುಮಾಡ್ಕೊಳೋದು. ನಿಮ್ಮ ಡಸ್ಟ್ ಬಿನ್ನಿಗೆ ಹಾಕಬೇಕು ಅಂದ್ಕೊಮ್ಡಿದೀನಿ ಅದನ್ನ.
ಸಿನೆಮಾ, ಒಂದು ದೃಶ್ಯಕಾವ್ಯದ ಹಾಗಿರಬೇಕು ಅಂತ ನಾನು ಹೇಳ್ತೇನೆ. ಮತ್ಯಾರೋ ಮನರಂಜನೆ ಅನ್ನಬಹುದು. ಇನ್ಯಾರೋ ಬುದ್ಧಿಗೆ ಮೇವು ಅನ್ನಬಹುದು. ನನ್ನ ಮಟ್ಟಿಗೆ ನನ್ನ ಅನಿಸಿಕೆ ನನಗೆ ಪ್ರೀತಿ. ಹಾಗಂತ ಅದು ಮೈಲ್ಡ್ ಆಗಿ, ಡ್ರ್ಯಾಗಿಂಗ್ ಆಗಿ ಇರಬೇಕಿಲ್ಲ. ಫಿಲ್ಮೋತ್ಸವದಲ್ಲಿ ನೀವು ತೋರಿಸಿದ ಎರಡೂ ಮ್ಯಾಕಬೆತ್ ಗಳೂ ತಮ್ಮೆಲ್ಲ ಭೀಭತ್ಸ, ಹೊಡೆದಾಟ, ಓಟದೊಂದಿಗೆ, ಅವನ್ನೊಳಗೊಂಡೂ ಕಾವಯ್ದಂತಿದೆ. ಅದಕ್ಕೆ ಶೇಕ್ಸ್ ಪಿಯರ್ ಕಾರಣ ಅನ್ನಬಹುದು ಯಾರಾದರೂ.
ಹಾಗಾದರೆ ನಾನು…ಪೋಸ್ಟ್ ಮೆನ್ ಇನ್ ದ ಮೌಂಟೆನ್ಸ್, ಎಲ್ ಪೋಸ್ಟಿನೋ, ದಿಸ್ ಇಸ್ ಮೈ ಫಾದರ್, ಅಟೋನ್ಮೆಂಟ್, ಕೈಟ್ ರನ್ನರ್, ಸಾಂಗ್ ಆಫ್ ಸ್ಪ್ಯಾರೋಸ್, ಚಿಲ್ಡ್ರನ್ ಆಫ್ ಹೆವೆನ್…. ಸಿಕ್ಕಾಪಟ್ಟೆ ಉದಾಹರಣೆಗಳಿವೆ. ಈ ಎಲ್ಲ ಸಿನೆಮಾಗಳ ನೋಡುವಿಕೆ ನನ್ನ ಮಟ್ಟಿಗೆ ಯಾವುದೇ ಪುಸ್ತಕವನ್ನು, ಕಾವ್ಯವನ್ನು ಓದುವಾಗ ಸಿಗುವಷ್ಟೇ ಆನಂದವನ್ನ, ತನ್ಮಯತೆಯನ್ನ ಒದಗಿಸಿಕೊಟ್ಟಿವೆ. ಇತ್ತೀಚೆಗೆ ನೋಡಿದ, ಟೆರರಿಸಮ್ ಸುತ್ತಮುತ್ತಲಿನ ‘ದ ಕಿಂಗ್ ಡಮ್’ ಸಿನೆಮಾ ಕೂಡಾ ಇಂಥ ಅನುಭವ ಕೊಟ್ಟಿತು.
ಇನ್ನು, ಬ್ಲ್ಯಾಕ್ ಬೋರ್ಡ್ಸ್… ಇಪ್ಪತ್ತರ ಎಳೆ ಇರಾನೀ ಹುಡುಗಿ ಮಾಡಿದ ಈ ಸಿನೆಮಾ ನೋಡುವಾಗ ಸಿನೆಮಾ ಎಷ್ಟು ಸರಳ, ಸವಿ ಹಾಗೂ ಅರ್ಥಪೂರ್ಣ ಮಾಧ್ಯಮ ಅನಿಸಿಬಿಟ್ಟಿತು. ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳಬಲ್ಲ ನಿರ್ದೇಶಕರದ್ದೇ ಕೊರತೆಯಷ್ಟೆ.
- ಚೇತನಾ




