ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಕನ್ನಡ ಬಂಗಾರ’ Category

Remembering Shankar Nag-ಶಂಕರನಾಗರನ್ನು ನೆನಪಿಸಿಕೊಳ್ಳುತ್ತಾ

with one comment

ಪತ್ರಕರ್ತ ನಿರಂಜನ್ ಕಗ್ಗೆರೆ ಅವರು ಕನ್ನಡದ ಅತ್ಯಂತ ಪ್ರಯೋಗಶೀಲ ನಟ, ನಿರ್ದೇಶಕ ಶಂಕರನಾಗರ 55 ನೇ ಹುಟ್ಟು ಹಬ್ಬದ ದಿನದಂದು ಅವರ ನೆನಪನ್ನು ಕುರಿತು ಬರೆದ ಲೇಖನವಿದು. ಓದಿ ಹೇಳಿ.

It’s been two decades since the ‘Karate king’ of Sandalwood, a maverick film maker, theatre artist, Shankar Nag died in a road accident near Davanagere. Known for his visionary cinemas, technical skills, Shankar was nothing but a gift not just to the Sandalwood, but for the Indian Cinema industry. While people from the South remember him for his noteworthy movies like Minchina Ota, Ondanondu Kaladalli, Ondu Muttina Kathe, Geetha, Accident and Nodi Swami Navirodu Heege, people from the North remember him for his memorable performace in Utsav, Ankur, Nishant and the much cherished episodes of R K Narayan’s Malgudi Days on small screen.

Last week, while passing through the same stretch near Davanagere where Shankar met with the tragic end, memories of his films started popping up. Hailing from a remote hamlet of Mallapur village in Honavar taluk of Uttara Kannada district, Shankar was fluent in Kannada, Konkani and Martahi. In fact he started his career with Marathi theatre in Mumbai. However, Shankar’s stint with the success started when his elder brother Ananth Nag brought him back to Bangalore.
shankar nag
Continuing with his passionate theatrical activities, Shankar rose to national level after his brilliant performance in Girish Karnad’s epic movie Ondanondu Kaaladalli (Once upon a time) an adaptation of Kurosawa’s Seven Samurai. Displaying his acting skills while donning the lead role of a mercenary, Shankar won the best actor award at the New Delhi International Film Festival. Not confining his talent just to the parallel cinema medium, Shankar went on to do mass oriented masala movies targeting the mass which earned him the sobriquet – ‘Karate King’. His role of an auto driver in Auto Raja, portraying the humbleness of autowalas, made him popular among the mass and several auto stands till today have been named after him.

When television media was making inroads into the household of every Indian, Shankar cast his spell there also. R K Narayan’s Malgudi Days was testimonial to Shankar’s oeuvre on small screen. Besides the serial’s impish character ‘Swami’, the title music composed by L Vaidyanathan through nasal twang, is a huge hit till today. While doing his best to the medium that shot him to the fame, Shankar and his wife Arundhati Nag set up Sanket, an amateur theatre group. The troupe was instrumental in bringing historic plays like Nagamandala, Anju Mallige by Girish Karnad onto stage.

But for a genius who could have earned many laurels for Karnataka, fate had something different in store. On his way to the sets of his movie Jokumara Swamy, directed by Girish Karnad, Shankar met with an accident and died on the spot. Nevertheless, every movie buffs, theatre enthusiasts remember Shankar and his contributions

Written by saangatya

November 9, 2009 at 8:33 am

ಪಿ. ಲಂಕೇಶರು ಬರೆದ “ಬಾಲಣ್ಣ”

with one comment

ಟಿ.ಎನ್. ಬಾಲಕೃಷ್ಣ ಅಂದರೆ ಕನ್ನಡ ಚಿತ್ರರಂಗದ ನೆಚ್ಚಿನ ನಟ ಬಾಲಣ್ಣ ನಿಧನವಾದ ಸಂದರ್ಭದಲ್ಲಿ ಲೇಖಕ, ಪತ್ರಕರ್ತ ಪಿ. ಲಂಕೇಶರು ತಮ್ಮ ಪತ್ರಿಕೆಯಲ್ಲಿ ಬರೆದ ಲೇಖನವಿದು. ಪಾರ್ವತೀಶರು ಸಂಗ್ರಹಿಸಿ ಲಂಕೇಶ್ ಪ್ರಕಾಶನ ಹೊರತಂದಿರುವ “ಈ ನರಕ ಈ ಪುಲಕ” ಕೃತಿಯಲ್ಲಿ ಇಂಥ ಹಲವಾರು ಲೇಖನಗಳಿವೆ. ಕೃಪೆ ಅದೇ ಕೃತಿ.

ಬಾಲಕೃಷ್ಣ ತೀರಿಕೊಂಡಿದ್ದಾರೆ. ಕಳೆದ ಅರ್ಧ ಶತಮಾನದಿಂದ ನಮ್ಮೆಲ್ಲರ ಕಣ್ಣೆದುರಿಗಿದ್ದ ವ್ಯಕ್ತಿ ಬಾಲಕೃಷ್ಣ. ಕನ್ನಡ ಚಿತ್ರರಂಗ ಏನೂ ಇಲ್ಲದೇ ಬಣಗುಡುತ್ತಿದ್ದಾಗ ಕಲಾವಿದನಾಗಿ ಜೀವಿಸಲು ಯತ್ನಿಸಿದವರು ಬಾಲಕೃಷ್ಣ. ನಾವೆಲ್ಲ ಕನ್ನಡ ಚಿತ್ರಗಳಿಗಾಗಿ ಕಾತರಿಸುತ್ತಿದ್ದೆವು. ನಾನು ಹೈಸ್ಕೂಲಿನಲ್ಲಿದ್ದಾಗ ಬಾಲಕೃಷ್ಣ, ನರಸಿಂಹರಾಜು ಕನ್ನಡಿಗರನ್ನು ರಂಜಿಸುತ್ತಿದ್ದ ಕಲಾವಿದರು ; ಪ್ರಾಯದಲ್ಲಿದ್ದವರು. ಆಗ ಗುಬ್ಬಿ ಕಂಪನಿ ಇತ್ತು. ನಾನು ಗುಬ್ಬಿ ವೀರಣ್ಣನವರ ’ಸಂಪೂರ್ಣ ರಾಮಾಯಣ’ ನೋಡುವಷ್ಟರಲ್ಲಿ ನರಸಿಂಹರಾಜು, ಬಾಲಕೃಷ್ಣ, ರಾಜಕುಮಾರ್, ಅಯ್ಯರ್ ಆ ಕಂಪನಿಯನ್ನು ಬಿಟ್ಟು ಸಿನಿಮಾ ಮಾಡಲು ಯತ್ನಿಸುತ್ತಿದ್ದರು. ಅವರು ನಾಲ್ವರೂ ಸೇರಿ ಮಾಡಿದ ಕಪ್ಪುಬಿಳುಪು ಚಿತ್ರ “ರಣಧೀರ ಕಂಠೀರವ’ ನನಗೆ ಇನ್ನೂ ನೆನಪಿದೆ. ಕನ್ನಡಿಗರು ಆಗತಾನೇ ಚಿತ್ರ ನೋಡಲು ಪ್ರಾರಂಭಿಸಿದ್ದ ಕಾಲವದು ; ನಿರ್ಮಾಪಕರು ನಟರಿಗೆ ಅಷ್ಟಾಗಿ ಹಣ ಕೊಡುತ್ತಿರಲಿಲ್ಲ. ಹಂಚಿಕೆದಾರರು ನಿರ್ಮಾಪಕರಿಗೆ ಕೈ ಕೊಡುತ್ತಿದ್ದುದೆ ಹೆಚ್ಚು. ಆಗ ಚಿತ್ರ ಮಾಡುವ ಕಷ್ಟ ನೆನಸಿಕೊಂಡರೆ “ರಣಧೀರ ಕಂಠೀರವ’ವನ್ನು ರೂಪಿಸಿದ್ದು ನಿಜಕ್ಕೂ ಅದ್ಭುತ ಸಾಧನೆ ಎನ್ನಿಸುತ್ತದೆ.

ಆಮೇಲೆ ನಾನು ಬಾಲಕೃಷ್ಣ ನಟಿಸಿದ ಅನೇಕ ಚಿತ್ರ ನೋಡಿದ್ದೇನೆ. ಬಾಲಕೃಷ್ಣ ನಟಿಸಿದ “ಕಣ್ತೆರೆದು ನೋಡು’ ಚಿತ್ರ ಅವರ ಪೂರ್ಣ ಪ್ರಮಾಣದ ವಿಡಂಬನೆ, ಗಾಂಭೀರ್ಯ, ಹಾಸ್ಯ-ಎಲ್ಲ ಕೂಡಿದ್ದ ಚಿತ್ರ. ಆಗ ಅದು ನನ್ನ ಮೆಚ್ಚಿನ ಚಿತ್ರವಾಗಿತ್ತು. ಆಮೇಲೆ ಬಾಲಕೃಷ್ಣ ಎಲ್ಲ ಮುಖ್ಯಚಿತ್ರಗಳಲ್ಲಿದ್ದಂತೆ ನೆನಪು ; ಹಾಸ್ಯ ದೃಶ್ಯಗಳು ಕೂಡ ನಮ್ಮ ಕಂಪನಿ ನಾಟಕದಿಂದ ಸಿನಿಮಾಕ್ಕೆ ಸಂದ ಬಳುವಳಿ.
balakrishna
ಹಾಸ್ಯ ದೃಶ್ಯಗಳಲ್ಲದೇ ಯಾವ ಕಂಪನಿ ನಾಟಕದ ಗಂಭೀರ ದೃಶ್ಯಗಳೂ ಪ್ರೇಕ್ಷಕರನ್ನು ಮುಟ್ಟುತ್ತಿರಲಿಲ್ಲ. ಸಿನಿಮಾದಲ್ಲೂ ಅದೇ ಕಾಣಿಸಿಕೊಂಡಿತು. ಬಾಲಕೃಷ್ಣ, ನರಸಿಂಹರಾಜು ಕನ್ನಡ ಚಿತ್ರಗಳ ಅವಿಭಾಜ್ಯ ಅಂಗವಾದರು. ಬಾಲಕೃಷ್ಣ ಸ್ವಲ್ಪ ಒರಟಾದ ಕಿಲಾಡಿ ಪಾತ್ರಧಾರಿಯಾದರೆ ನರಸಿಂಹರಾಜು ತುಂಬಾ ದುರ್ಬಲನಾದ ಪ್ರೀತಿಯ ವ್ಯಕ್ತಿಯಾಗಿರುತ್ತಿದ್ದರು. ಇವರಿಬ್ಬರೂ ನಮ್ಮ ಸಮಾಜದ ಎರಡು ಸ್ತರಗಳನ್ನು ಪ್ರತಿನಿಧಿಸಿದವರಂತೆ ಇರುತ್ತಿದ್ದರು. ಅವರ “ಕಣ್ತೆರೆದು ನೋಡು’ ಚಿತ್ರದ ಘಾಟಿಯಾದ ವಿಲ್ಲನ್ ಎಷ್ಟು ಆಕರ್ಷಕನೆಂದರೆ, ಆ ಚಿತ್ರದ “ಹೀರೋ’ ಸಪ್ಪೆಯಾಗಿ ಕಾಣುತ್ತಾನೆ. ಇದು ಬಾಲಕೃಷ್ಣರ ಅನಿವಾರ್ಯತೆ ತೋರುತ್ತದೆ. “ರಾಧಾರಮಣ’ ಚಿತ್ರದಿಂದ “ಯಮಕಿಂಕರ’ ಚಿತ್ರದವರೆಗೆ ಅರ್ಧ ಶತಮಾನದ ಕಾಲ ಹಬ್ಬಿರುವ ಈ “ಬಾಲಕೃಷ್ಣಾಯಣ’ದಲ್ಲಿ ನಾವು ವೈವಿಧ್ಯಮಯ ಸಾಧನೆ ನೋಡುತ್ತೇವೆ. “ಕನ್ಯಾದಾನ’ದ ಗೃಹಸ್ಥ ಇನ್ನೂ ನೆನಪಾಗುತ್ತಾನೆ. “ಸ್ಕೂಲ್ ಮಾಸ್ಟರ್’ ವ್ಯಕ್ತಿ ಹಾಸ್ಯದ ಬುಗ್ಗೆ ಉಕ್ಕಿಸುತ್ತಾನೆ. ಹಾಗೆಯೇ ಅನೇಕ ಪಾತ್ರಗಳು ಕಾಲಗರ್ಭದಲ್ಲಿ ಸೇರಿಹೋಗಿವೆ ; ನಮಗೆ ಕೂಡಲೇ ನೆನಪಾಗದೆ ಇರುವಷ್ಟು ಅಸ್ಪಷ್ಟವಾಗಿವೆ. “ಬೆಳ್ಳಿಮೋಡ’ದಲ್ಲಿ ಬಾಲಕೃಷ್ಣ ಏನಾಗಿದ್ದಾರೆ? “ಬಂಗಾರದ ಮನುಷ್ಯ’ದಲ್ಲಿನ ಅವರು ನೆನಪಾಗುತ್ತಾರೆಯೇ ? ಇವೆಲ್ಲ ಪ್ರಶ್ನೆ ಅಪ್ರಸ್ತುತ. ಯಾಕೆಂದರೆ ಒಬ್ಬ ಕಲಾವಿದ ಅನೇಕ ರೀತಿಯಲ್ಲಿ ತೋರಿಸಿಕೊಳ್ಳಬೇಕಾಗುತ್ತದೆ ; ಬದುಕು ಸಾಗಿಸಲು ಹಲವಾರು ರೂಪ ತಾಳಬೇಕಾಗುತ್ತದೆ. Read the rest of this entry »