ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಒಳ್ಳೆಯ ಚಿತ್ರಗಳು’ Category

‘ಅಪೋಕ್ಯಾಲಿಪ್ಟೋ’ –ಅಪೂರ್ವ ಅನುಭವ

without comments

ಈ ಚಿತ್ರ ಕೊಡುವ ಅನುಭವವೇ ವಿಶಿಷ್ಟವಾದುದು. ಅದನ್ನು ಟೀನಾ ಶಶಿಕಾಂತ್ ತಮ್ಮ ಬರಹದಲ್ಲಿ ಹಿಡಿದುಕೊಟ್ಟಿದ್ದಾರೆ. ಓದಿ ಅಭಿಪ್ರಾಯಿಸಿ.

ಮೊದಲ ಸಾರೆ ನಾವು ವಿಸ್ಮಯವೊಂದಕ್ಕೆ ಸಾಕ್ಷಿಗಳಾದೆವೆಂದಿಟ್ಟುಕೊಳ್ಳಿ,. ಆಗ ನಮಗೆ ಆಗಬಹುದಾದ ಆಘಾತ, ಆಶ್ಚರ್ಯ ಅಪಾರ. ಇದಾದ ಮೇಲೆ ಪುನಃ ಇನ್ನೊಂದು ವಿಸ್ಮಯ ನಮಗೆದುರಾದರೆ ಸ್ವಲ್ಪ ತಣ್ಣಗೆ ಆದರೆ ಅಷ್ಟೇ ಗೌರವದಿಂದ ಪ್ರತಿಕ್ರಿಯಿಸುತ್ತೇವೆ. ಅದೇ ರೀತಿ ಮೆಲ್ ಗಿಬ್ಸನ್ನನ ‘ದ ಪ್ಯಾಶನ್ ಆಫ್ ದ ಕ್ರೈಸ್ಟ್’ ‘ಬ್ರೇವ್ ಹಾರ್ಟ್’ ಚಲನಚಿತ್ರಗಳನ್ನು ನೋಡಿದವರಿಗೆ ಆತನದೇ ನಿರ್ದೇಶನದ ‘ಅಪೋಕ್ಯಾಲಿಪ್ಟೋ’ ನೋಡಿದಾಗ ಅಂತಹ ಆಶ್ಚರ್ಯವೆನಿಸುವುದಿಲ್ಲ. ಆದರೆ ಮೆಲ್ ಗಿಬ್ಸನ್ನನ ನಿರ್ದೇಶನದ ಬಗ್ಗೆ, ಆತನ ಚಿತ್ರಗಳ ‘ಅಥೆಂಟಿಕ್’ ಕ್ವಾಲಿಟಿಯ ಬಗ್ಗೆ ಗೌರವ ಇಮ್ಮಡಿಯಾಗದಿರದು.

ಪ್ರೇಕ್ಷಕನ ಕುತೂಹಲ ಕೆಡದಂತೆ, ರಕ್ತಪಾತದ ದೃಶ್ಯಗಳನ್ನೂ ಕ್ಲಾಸಿಕ್ ರೀತಿಯಲ್ಲಿ ನೀಡುವ, ತನ್ನೆಲ್ಲ ಚಿತ್ರಗಳಲ್ಲೂ ವೈವಿಧ್ಯಮಯ ವಿಷಯಗಳನ್ನಾಯ್ದುಕೊಂಡು ಸಫಲರಾಗಿರುವ ಹಲವೇ ನಿರ್ದೇಶಕರಲ್ಲಿ ಮೆಲ್ ಗಿಬ್ಸನ್ ಒಬ್ಬ.’ಅಪೋಕ್ಯಾಲಿಪ್ಟೋ’ವನ್ನು ಕೇವಲ ಆಕ್ಷನ್ ಚಲನಚಿತ್ರವೆನ್ನಲಾಗದು. ಅನೇಕ ಚಾರಿತ್ರಿಕ ಘಟನೆಗಳು ವಿವರಗಳೂ ಕೂಡ ಇದರ ಕಥೆಯೊಡನೆ ಹೆಣೆದುಕೊಂಡಿವೆ. ಚಲನಚಿತ್ರದ ನಾಯಕ ‘ಜಗ್ವಾರ್ ಪಾ’ ತನ್ನ ಬುಡಕಟ್ಟಿನ ನಾಯಕನ ಪ್ರೀತಿಯ ಮಗ. ಬಲಶಾಲಿ. ಬೇಟೆಯಲ್ಲಿ ನಿಪುಣ. ತನ್ನ ಗರ್ಭಿಣಿ ಮಡದಿ ಸೆವೆನ್ ಹಾಗೂ ಪುಟ್ಟ ಮಗನ ಮೇಲೆ ಅಪಾರ ಪ್ರೀತಿ ಹೊಂದಿದವ. ಅರಣ್ಯದ ಬಗ್ಗೆ ತನ್ನ ಅನುಭವೀ ತಂದೆ ಹೇಳುವ, “ಈ ಅರಣ್ಯ ನನ್ನದು, ಇಲ್ಲಿ ನನ್ನ ಪೂರ್ವಜರು ಬೇಟೆಯಾಡಿದ್ದಾರೆ. ನಾಳೆ ನನ್ನ ಮಕ್ಕಳೂ ಬೇಟೆಯಾಡುತ್ತಾರೆ” ಎಂಬ ಮಾತಿನಲ್ಲಿ ನಂಬಿಕೆಯಿಟ್ಟವ. ಇಂಥವನ ನೆಮ್ಮದಿಯ ಜೀವನ ಒಂದು ಮುಂಜಾವ ಮಾಯನ್ ಬುಡಕಟ್ಟಿನ ಯೋಧರಿಂದ ಬುಡಮೇಲಾಗುತ್ತದೆ. Read the rest of this entry »

Written by saangatya

December 3, 2009 at 3:47 am

“ಈ ಪ್ರಪಂಚ ಸುಳ್ಳು ; ಈ ಪ್ರಪಂಚವೊಂದು ಕನಸು”

without comments

ಹೇಮಶ್ರೀ ಕಳಿಸಿಕೊಟ್ಟ “ದಿ ಸಾಂಗ್ ಆಫ್ ಸ್ಪ್ಯಾರೋ’ ಚಿತ್ರದ ಬಗೆಗಿನ ಬರಹದ ಕನ್ನಡ ಅನುವಾದವಿದು. ಈಗಾಗಲೇ “ಚಿಲ್ಡ್ರನ್ ಆಫ್ ಹೆವನ್’, “ಕಲರ್ ಆಫ್ ಪ್ಯಾರಡೈಸ್” ದಂಥ ಚಿತ್ರಗಳನ್ನು ಕೊಟ್ಟ ಮಜಿದ್ ಮಜಿದಿ ಮಾನವೀಯ ಅಂತಃಕರಣದ ಭಾಷೆಯನ್ನು ದುಡಿಸಿಕೊಳ್ಳುವಾತ ಎಂದೇ ಪ್ರಸಿದ್ಧಿ. ಲೇಖಕರ ಪ್ರಕಾರ ಆ ಮಾತು ಮತ್ತೊಮ್ಮೆ ಸಾಬೀತು.

ಮತ್ತೊಮ್ಮೆ ಸಾಬೀತಾಗಿರುವುದೆಂದರೆ ನಮ್ಮನ್ನು ತಟ್ಟುವಂಥ ಚಿತ್ರಗಳಿಗೆ ಕಾಲ-ದೇಶ ಯಾವುದೂ ಅನ್ವಯಿಸುವುದಿಲ್ಲ. ಮನುಷ್ಯನ ಜೀವನಪ್ರೀತಿ ಮತ್ತು ಬದುಕನ್ನು ಶೋಧಿಸುವ ನೆಲೆಯನ್ನು ಕುರಿತಾದ ಎಲ್ಲವೂ ಹಾಗೆ ಎನಿಸುತ್ತದೆ. ಹಾಗೆಯೇ ನಮ್ಮ ಅಂತರಂಗವನ್ನು ತಟ್ಟಿ ಆರ್ದ್ರಗೊಳಿಸಿದ ಮತ್ತೊಂದು ಚಿತ್ರದ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ.

ಇತ್ತೀಚೆಗೆ ಇಲ್ಲಿಯ (ಸನ್ನಿವೇಲ್) ಥಿಯೇಟರ್‌ನಲ್ಲಿ “ದಿ ಸಾಂಗ್ ಆಫ್ ಸ್ಪ್ಯಾರೊ’ (the song of sparrow) ವನ್ನು ನೋಡಿದೆ. ಮಜಿದ್ ಮಜಿದಿ ಒಬ್ಬ ಅತ್ಯಂತ ಒಳ್ಳೆಯ ನಿರ್ದೇಶಕ. ಅದರಲ್ಲೂ ದೃಶ್ಯರೂಪಕಗಳ ಮೂಲಕವೇ ಕಟ್ಟಿಕೊಡುವ ಸಮರ್ಥ. ಜತೆಗೆ ನಿರೂಪಣೆಯಲ್ಲೂ ಒಂದು ಬಗೆಯ ಮಾಂತ್ರಿಕತೆ (ಇದನ್ನು ಕಾವ್ಯ ಮಾದರಿಯ ನಿರೂಪಣೆ ಎನ್ನಲೂಬಹುದು) ಹಾಗೂ ಪಾತ್ರದ ಚಿತ್ರಣದಲ್ಲಿ ಎತ್ತಿದ ಕೈ. ಅವನ ಕಥೆ ಹೇಳುವ ಮಾದರಿಯೇ ತೀರಾ ಸಮಕಾಲೀನವೆನಿಸುತ್ತಲೇ, ನಮ್ಮನ್ನು ಆವರಿಸಿಕೊಳ್ಳುತ್ತದೆ.
ಅದೆಲ್ಲವನ್ನೂ ತನ್ನ ಈ ಚಿತ್ರ “ದಿ ಸಾಂಗ್ ಆಫ್ ಸ್ಪ್ಯಾರೊ’ ದಲ್ಲಿ ಮಾಡಿದ್ದಾರೆ. ಒಂದು ಬಡ ಕುಟುಂಬ ತನ್ನ ನಿತ್ಯದ ಅಗತ್ಯವನ್ನು ಪೂರೈಸಿಕೊಳ್ಳಲು ಪಡುವ ಪ್ರಯತ್ನಗಳನ್ನು ಚೆಂದವಾಗಿ ಅನಾವರಣಗೊಳಿಸುವ ಚಿತ್ರ.

ಟೆಹರಾನ್‌ನ ನಗರ ಎನ್ನಬಹುದಾದಂಥ ಹಳ್ಳಿಯೊಂದರಲ್ಲಿ ಆಸ್ಟ್ರಿಚ್ ಪಕ್ಷಿಗಳ ಫಾರಂನಲ್ಲಿ ದುಡಿಯುತ್ತಿರುವವ ಕರೀಂ. ತನ್ನ ಪತ್ನಿ ಹಾಗೂ ಮೂರು ಮಕ್ಕಳ ಕುಟುಂಬವನ್ನು ನಿತ್ಯವೂ ನಿರ್ವಹಿಸಬೇಕು. ಇದರೊಂದಿಗೆ ಪ್ರತಿ ತಿಂಗಳೂ ಕುಸಿಯುತ್ತಿರುವ ತನ್ನ ಆದಾಯವನ್ನು ಸರಿಪಡಿಸುವಲ್ಲಿ ವಹಿಸಬೇಕಾದ ಆಸಕ್ತಿ ಹೆಚ್ಚಿನದು. ಇಲ್ಲದಿದ್ದರೆ ಕಷ್ಟ ಮತ್ತಷ್ಟೂ ಕಟುವಾದೀತೆಂಬ ಭಯ. ಅವನ ಮಗಳಿಗೆ ಹೊಸದೊಂದು ಶ್ರವಣ ಉಪಕರಣ ಬೇಕಿದೆ, ಮಗನಿಗೆ ಗೋಲ್ಡ್‌ಫಿಶ್ ಗಳನ್ನು ಕೊಳ್ಳುವ ಆಸೆ. ಕೊಂಡದ್ದನ್ನು ಮಾರಿ ಶ್ರೀಮಂತನಾಗುವ ಬಯಕೆ…ಹೀಗೆ ಇವಿಷ್ಟರೊಂದಿಗೆ ಕರೀಂ ಬದುಕುತ್ತಿದ್ದಾನೆ. Read the rest of this entry »

ಚೀನಿ ಸಿನಿಮಾ: ಅರಿತೆವೇನು ನಾವು ನಮ್ಮ ಅಂತರಾಳವಾ

with 5 comments

ವಿಕಾಸ ನೇಗಿಲೋಣಿ ಬರೆದ ಈ ಚಿತ್ರ “ಎ ಸೈ” ಚೀನಿ ಭಾಷೆಯದ್ದು. ಪ್ರತ್ಯೇಕ ವ್ಯಕ್ತಿತ್ವಗಳ ಪರಸ್ಪರ ಅವಲಂಬನೆಯ ನೆಲೆಯನ್ನೇ ಕುರಿತಾದದ್ದು. ಬಹಳ ಅದ್ಭುತವಾಗಿ ತಮ್ಮೊಳಗಿನ ಸಂಬಂಧಗಳ ಎಳೆಯನ್ನು ಅರ್ಥ ಮಾಡಿಕೊಳ್ಳದೇ ಹೋಗುವ ಪರಿಯ ಕುರಿತಾದದ್ದು. ಓದಿ ಅಭಿಪ್ರಾಯ ಹೇಳಿ.

ಎಲ್‌ಕೆಜಿ ಓದುತ್ತಿರುವ ಪುಟಾಣಿ ಮಗಳ ಎದುರು ಅವಳಪ್ಪ ಅಮ್ಮ ವಿಚ್ಛೇದನದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಸಿವಿಸಿ ಮನಸ್ಸು, ತಡವರಿಸುವ ಹೆಜ್ಜೆ, ಹೊಡೆದುಕೊಳ್ಳುವ ಹೃದಯ ಮತ್ತು ಶಾಶ್ವತ ವೇದನೆಯೊಂದಿಗೆ ಅಪ್ಪ ಹೆಂಡತಿ ಮಗಳನ್ನು ಬಿಟ್ಟು ಹೊರಡುತ್ತಾನೆ. ಕೆನ್ನೆಯ ಮೇಲೆ ಸುರಿಯುವ ಕಣ್ಣೀರನ್ನು ಒರೆಸಿಕೊಳ್ಳಬೇಕೆಂಬುದೂ ಗೊತ್ತಾಗದ ಮಗಳು ದೂರದಲ್ಲಿ ನಿಂತುಕೊಂಡು ಪಿಟೀಲಿನ ತಂತಿಗಳ ಮೇಲೆ ಕಮಾನನ್ನು ಆಡಿಸುತ್ತಾಳೆ. ಅದು ಪುಟಾಣಿ ಕೈಗಳಿಗೆ ಸಿಕ್ಕಿ ಅಪಸ್ವರ ಹೊರಡಿಸುತ್ತದೆ. ಆ ಹೊತ್ತಿನಲ್ಲಿ ಮತ್ತೇನು ಸುಸ್ವರ ಹೊರಟೀತೇ?

ಈಗ ಇಬ್ಬರೂ ವಿಚ್ಛೇದನದ ಫಾರ್ಮ್‌ಗಳನ್ನು ಗತ್ಯಂತರವಿಲ್ಲದೇ ತುಂಬಬೇಕು, ಸಹಿ ಮಾಡೆಂದಲ್ಲಿ ಮಾಡಬೇಕು. ಅದೆಲ್ಲಾ ಆದ ಮೇಲೆ ದಾಖಲೆಗೆ ಬೇಕೆಂದು ಈ ಮಾಜಿ ಗಂಡ ಹೆಂಡಿರಿಬ್ಬರೂ ಫೋಟೋ ತೆಗೆಸಿಕೊಳ್ಳಲು ಸ್ಟುಡಿಯೋಕ್ಕೆ ಹೋಗಿದ್ದಾರೆ. ಹಾಗೆ ನಿಂತುಕೊಳ್ಳಿ, ಹೀಗೆ ನಿಂತುಕೊಳ್ಳಿ, ಕತ್ತೆತ್ತಿ, ಕತ್ತು ಬಗ್ಗಿಸಿ ಎಂದು ಫೋಟೋಗ್ರಾಫರ್‌ ವೃತ್ತಿ ಸಹಜ ನಿರ್ಭಾವುಕತೆಯಿಂದ ಆದೇಶ ಕೊಡುತ್ತಾನೆ. ಇಬ್ಬರಿಗೂ ಇದು ಅಸಹನೀಯವೆನಿಸಿದರೂ ಮಾಡಲೇಬೇಕು. ಎಲ್ಲಾ ಆದ ಮೇಲೆ ಕೊನೆಯ ಬಾರಿ ಎಂಬಂತೆ ಅವರಿಬ್ಬರನ್ನೂ ನೋಡಿ ಫೋಟೋಗ್ರಾಫರ್‌ ಹೇಳುತ್ತಾನೆ: ಸ್ಮೈಲ್‌ ಪ್ಲೀಸ್‌.

ಗಂಡ ಅಸಹನೆಯಿಂದ ಕಿರುಚಿಕೊಳ್ಳುತ್ತಾನೆ: ಹೌ ಕ್ಯಾನ್‌ ಐ! ದೃಶ್ಯ ಅಲ್ಲಿಗೆ ಮುಗಿಯುತ್ತದೆ. Read the rest of this entry »

Written by saangatya

November 30, 2009 at 9:43 am

ಅದೇ ಚಂದ್ರನ ಕೆಳಗೆ-Under the same moon

with one comment

LA MISMA LUNA ( Under the same moon ) - Director: Patricia Riggen . ಹೇಮಶ್ರೀ ಅವರು ಬರೆದ ಈ ಚಿತ್ರದ ಬಗೆಗಿನ ಲೇಖನ ಓದಿ ತಿಳಿಸಿ.

ಒಬ್ಬ ಪುಟ್ಟ ಹುಡುಗನ ದಿಟ್ಟ ಪಯಣದ ಕತೆ.
ಒಂಭತ್ತು ವರ್ಷದ ಕಾರ್ಲಿತೋಸ್, ಅಮೇರಿಕಾದಲ್ಲಿರುವ ತನ್ನ ತಾಯಿಯನ್ನು ಸೇರಲು ಮೆಕ್ಸಿಕೋದಿಂದ ಅಮೇರಿಕಾಗೆ ಪ್ರಯಾಣ ಬೆಳೆಸುತ್ತಾನೆ. ಆತನ ತಾಯಿ ರೊಸಾರಿಯೊ ಮಗನ ಉತ್ತಮ ಭವಿಷ್ಯಕ್ಕಾಗಿ ನಾಲ್ಕು ವರ್ಷಗಳಿಂದ ಅನಧಿಕೃತವಾಗಿ ಅಮೇರಿಕಾದಲ್ಲಿ ದುಡಿಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದಾಗಿ ತಾಯಿ, ಮಗ ಪರಸ್ಪರರನ್ನು ಭೇಟಿಯಾಗಲು ನಿರ್ಧರಿಸುತ್ತಾರೆ.
But, It becomes an emotional journey and a love story between a mother and a son.

ರೊಸಾರಿಯೊಗೆ , ಮಗನನ್ನೂ ಸಹ ಅಮೇರಿಕಾಗೆ ಕರೆದುಕೊಂಡು  ಬರುವ ಯೋಚನೆ. ಆದರೆ ತಾನು ಅಮೇರಿಕಾಗೆ ಬಂದಿರುವುದೇ  ಕಾನೂನು ಬಾಹಿರ. ಯಾವುದೇ documentಗಳೂ ಆಕೆಯಲ್ಲಿಲ್ಲ.  ಇನ್ನು ಮಗನನ್ನು ಕರಕೊಂಡು ಬರುವುದಾದರೂ ಹೇಗೆ ಎಂಬ ಚಿಂತೆ  ಆಕೆಯನ್ನು ಕಾಡುತ್ತಿರುತ್ತದೆ.

ಇತ್ತ ಮೆಕ್ಸಿಕೋದಲ್ಲಿರುವ ಕಾರ್ಲಿತೋಸ್‍ಗೆ , ತನ್ನ ಅಜ್ಜಿಯ  ಆರೈಕೆಯಲ್ಲಿ ತಾನು ಚೆನ್ನಾಗಿದ್ದರೂ ತಾಯಿಯನ್ನು ಬಿಟ್ಟು  ಇರಬೇಕಾದ ನೋವು. ತಂದೆ ಇಲ್ಲದ ಕೊರಗು ಬೇರೆ. Read the rest of this entry »

ಇನ್ ಟು ದಿ ವೈಲ್ಡ್ ಸಿನಿಮಾ : ಇನ್ನಷ್ಟು ಮಾಹಿತಿ

without comments

ಅನಂತ ಮಾಧವರು ಇನ್ ಟು ದಿ ವೈಲ್ಡ್ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿ ಒದಗಿಸಿದ್ದಾರೆ. ಒಂದು ಒಳ್ಳೆಯ ಚಿತ್ರದ ಕುರಿತು ಹೀಗೆ ಎಲ್ಲರೂ ಕೊಡುವ ಮಾಹಿತಿಗಳನ್ನು ಪ್ರಕಟಿಸುತ್ತೇವೆ. ಒಟ್ಟಿನಲ್ಲಿ ಒಳ್ಳೆಯ ಚಿತ್ರದ ಬಗ್ಗೆ ಹೆಚ್ಚು ಎನಿಸುವಷ್ಟು ಮಾಹಿತಿ ಲಭ್ಯವಾಗಿಸುವುದು ಸಾಂಗತ್ಯದ ಉದ್ದೇಶ. ಈ ನಿಟ್ಟಿನಲ್ಲಿ ಅನಂತರ ಈ ಲೇಖನ ಪ್ರಕಟಿಸಲಾಗುತ್ತಿದೆ.

ನಿಜ ಹೇಳಬೇಕೆಂದರೆ ನಾನು ಇನ್ಟು ದಿ ವೈಲ್ಡ್ ಸಿನಿಮಾ ನೋಡಿದ್ದು ತೀರ ಆಕಸ್ಮಿಕವಾಗಿ. ಒಂದೂವರೆ ವರ್ಷದ ಕೆಳಗೆ, ಎಂದಿನಂತೆ ಡಿವಿಡಿ ಪಾರ್ಲರ್ ಗೆ ಹೋದ ನನ್ನ ಕಣ್ಣಿಗೆ ಈ ಸಿನಿಮಾ ಬಿತ್ತು. ಅಥವಾ ನೀಲಿ ಬಾನಿನ ಹಿನ್ನೆಲೆಯಲ್ಲಿ, ಆ ಹಳೆ ವ್ಯಾನ್ ನ ಮೇಲೆ ಕುಳಿತು ದಿಗಂತದೆಡೆ ದೃಷ್ಟಿ ನೆಟ್ಟಿದ್ದ ಕ್ರಿಸ್ ಮೆಕ್ ಕ್ಯಾನ್ದಲ್ಸ್ ನನ್ನ ದೃಷ್ಟಿಯನ್ನು ಡಿವಿಡಿಯತ್ತ ಸೆಳೆದುಕೊಂಡ ಎನ್ನಬಹುದು. ಡಿವಿಡಿ ಕವರ್ ನ ಹಿಂಭಾಗದಲ್ಲಿ ಕೊಡುವ ಸಿನಿಮಾದ ಸಂಕ್ಷಿಪ್ತ ವಿವರವನ್ನು ಓದಿದಾಗ, ಮೊದಲಿಗೆ ಅದೊಂದು ಹಿಚ್ ಹೈಕಿಂಗ್ ಕಥಾನಕದಂತೆ ಕಂಡಿತು. ಸಿನೆಮಾದ ಡೈರೆಕ್ಟರ್ ಶಾನ್ ಪೆನ್ನ್ ಎಂದು ಓದಿದ ಮೇಲೆ, ಮರು ಯೋಚನೆಯಿಲ್ಲದೆ ಡಿವಿಡಿಯನ್ನು ಬಾಡಿಗೆಗೆ ಪಡೆದು ಕೊಂಡೆ.

There is a pleasure in the pathless woods,
There is a rapture on the lonely shore,
There is society, where none intrudes,
By the deep sea, and music in its roar:
I love not man the less, but Nature more – Lord Byron Read the rest of this entry »

Written by saangatya

October 2, 2009 at 9:00 am

ಪರ್ಜಾನಿಯಾ-ಬಿಡದೇ ಕಾಡುವ ಕನಸು

with 2 comments

ಮಾನವೀಯತೆಯನ್ನು ವಿರೋಧಿಸುವ ಮತಾಂಧರು ಸಮಾಜಕ್ಕೆ ಒಂದು ಕೆಟ್ಟ ಕನಸೇ. “ಪರ್ಜಾನಿಯಾ” ಒಂದು ಅದ್ಭುತವಾದ ಚಿತ್ರ ಎಂದು ಕಳ್ಳಕುಳ್ಳ ಬರೆದ ಬರಹವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಇಂಥದೊಂದು ಚಿತ್ರದ ಅನುಭವ ಎಲ್ಲರಿಗೂ ಸಿಗಲೆಂಬುದು ನಮ್ಮ ಆಶಯ.

ತುಂಬ ದಿನಗಳಿಂದ ನೋಡಬೇಕೆಂದು ಅಂದುಕೊಂಡರೂ ನೋಡಲಾಗದೇ ಉಳಿದು ಹೋಗಿತ್ತು. ಅದು `ಪರ್ಜಾನಿಯಾ’ ಎಂಬ ಚಿತ್ರ.ಅಹ್ಮದಾಬಾದ್‌ನ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದ ನಿಜ ಘಟನೆ, ಆ ಘಟನೆಯಲ್ಲಿ ಕಾಣೆಯಾದ ಬಾಲಕನೊಬ್ಬನ ಕತೆ ಇದು. ಬಹುಶಃ ತುಂಬ ಚರ್ಚೆಯಾದ, ತುಂಬ ಆಕ್ಷೇಪಗಳಿಗೆ ಒಳಗಾದ ಚಿತ್ರ ಅದು. ಯಾವುದೋ ಸಿಡಿ ಸೆಂಟರ್‌ನಿಂದ ಇದರ ವಿಸಿಡಿ ಕೊಂಡು ತಂದು ನೋಡತೊಡಗಿದಾಗ ಗೊತ್ತಾಯಿತು, ಅದು ಅಂಥ ದುಃಸ್ವಪ್ನ ಅಂತ ನಾನು ಅಂದುಕೊಂಡಿರಲೇ ಇಲ್ಲ. ನೋಡು ನೋಡುತ್ತಾ ಕೈ ಬೆವರಿತು, ಕಣ್ಣುಗಳು ಅದುರಿದವು, ನೀರು ತುಂಬಿ ಕಣ್ಣಿಂದ ತುಳುಕಿತು. ನಿಧ ನಿಧಾನವಾಗಿ ನಿಜಕ್ಕೂ ಅದೊಂದು ಸಿನಿಮಾ ಎಂದು ಅನಿಸದೇ ನಾನು ನನ್ನ ಮನೆಯ ಪಕ್ಕದಲ್ಲೇ ಕಂಡ ಒಂದು ಭೀತ ಸನ್ನಿವೇಶದಂತೆ ಆಘಾತವಾಯಿತು. ಜಗತ್ತು ಮಲಗಲು ಹೊರಡುವ ಹೊತ್ತಿಗೆ ಶುರುವಾದ ಈ ಘಟನೆ ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು.
`ಪರ್ಜಾನಿಯಾ’ ಕತೆ ಗೋಧ್ರಾ ದುರಂತದ ನಂತರ ನಡೆಯುವ ಅಹ್ಮದಾಬಾದ್‌ನ ಒಂದು ಘಟನೆ. allinda tandaddu 1

ನಾಸಿರುದ್ದೀನ್‌ ಶಾ- ಸಾರಿಕಾ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ಸಂತೃಪ್ತ ಬದುಕು ಸಾಗಿಸುತ್ತಿದ್ದಾರೆ. ಅವರಿರುವ ಜಾಗದಲ್ಲೇ ಅನ್ಯ ಕೋಮು, ಅನ್ಯ ಧರ್ಮದವರೂ ಇದ್ದಾರೆ. ಇವರು ಅವರನ್ನು ಆದರಿಸುತ್ತಲೂ, ಅವರು ಇವರಿಗೆ ಅಡುಗೆ ತಂದುಕೊಡುತ್ತಲೂ, ಮಕ್ಕಳನ್ನು ಪರಸ್ಪರ ಮುದ್ದು ಮಾಡುತ್ತಲೂ ಬರುತ್ತಿದ್ದಾರೆ. ಪರಸ್ಪರರಿಗೆ ತಮ್ಮ ಕೋಮು ಮರೆತು ಹೋಗುತ್ತದೆ ಪ್ರತಿ ಬಾರಿಯೂ, ನೆನಪಾಗುತ್ತದೆ ನಿಕಟ ಸ್ನೇಹ ಯಾವಾಗಲೂ. ಈ ಮಧ್ಯೆ ಅವರಿರುವ ಗೃಹ ಸಮೂಹದಲ್ಲಿ ಒಬ್ಬ ಅಮೆರಿಕನ್‌ ಪ್ರಜೆ ವಾಸವಾಗಿದ್ದಾನೆ. ಆತ ಗಾಂ ತತ್ವದ ಬಗೆಗಿನ ಸಂಶೋಧನೆಗಾಗಿ ಇಲ್ಲಿ ತಂಗಿದ್ದಾನೆ. ಹಲವು ಕೋಮು, ಧರ್ಮ, ಆಲೋಚನೆ, ಸಂವೇದನೆಗಳು ಅಲ್ಲಿ ಯಾವುದೇ ತಕರಾರಿಲ್ಲದೇ ಉಳಿದುಕೊಂಡಿವೆ. ಅಂಥ ಒಳ್ಳೆಯ ದಿನಗಳು ಕಳೆದು ಒಂದು ದುರ್ದಿನ ಕಾಲಿಡುತ್ತದೆ. Read the rest of this entry »