Archive for the ‘ಅನಿಸಿಕೆ’ Category
ಚಿತ್ರೋತ್ಸವದಲ್ಲಿ ಕಂಡ ಬಾಯ್ ಇನ್ ದಿ ಸ್ಟ್ರೈಪ್ಡ್ ಪೈಜಾಮ
ಕುಂದಾಪುರದ ವಿಜಯ್ ಜೋಶಿ ಧರ್ಮಸ್ಥಳದ ಉಜಿರೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಕಲಿಯುತ್ತಿರುವವರು. ಇತ್ತೀಚೆಗೆ ಮುಗಿದ ಸಾಂಗತ್ಯದ ಚಿತ್ರೋತ್ಸವದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ.
ಕುಪ್ಪಳಿಯಲ್ಲಿ ಮೊನ್ನೆ ತಾನೆ ಮುಕ್ತಾಯವಾದ ಎರಡು ದಿನಗಳ ಚಿತ್ರೋತ್ಸವದ ಬಗ್ಗೆ ನನ್ನ ನಾಲ್ಕು ಮಾತು ಬರೆಯೋಣ ಎಂದು ಕುಳಿತರೆ ಏನು ಬರೆಯುವುದು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ. ಕಾರಣ; ಸಾಂಗತ್ಯ ತಂಡದವರು ಆಯೋಜಿಸಿದ ಚಿತ್ರೋತ್ಸವದ ಕೊನೆಯಲ್ಲಿ ಪ್ರದರ್ಶಿಸಿದ ಬಾಯ್ ಇನ್ ದಿ ಸ್ಟ್ರೈಪ್ಡ್ ಪಾಯ್ಜಾಮಾ ಚಿತ್ರದ ಗುಂಗಿನಿಂದ ಇನ್ನೂ ಹೊರಬರಲು ಆಗುತ್ತಿಲ್ಲ. ಅಷ್ಟೊಂದು ಮನಮುಟ್ಟುವ ಚಿತ್ರ ಅದು.
ಜೂನ್ ನಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಸಿಬಂತಿ ಪದ್ಮನಾಭ ಅವರು ಕುಪ್ಪಳಿಯಲ್ಲಿ ಸಾಂಗತ್ಯ ಬಳಗದವರು ನಡೆಸುವ ಚಿತ್ರೋತ್ಸವದ ಬಗ್ಗೆ ಹೇಳಿದ್ದರು. ಚಿತ್ರೋತ್ಸವಕ್ಕೆ ಬರಲು ಆಪ್ತ ಆಮಂತ್ರಣವನ್ನೂ ನೀಡಿದ್ದರು. ಆದರೂ ಮನಸ್ಸು ಮಾತ್ರ ಹೋಗಲೋ ಬೇಡವೋ ಎಂದು ಕಾಲಹರಣ ಮಾಡುತ್ತಿತ್ತು. Read the rest of this entry »




