ಕನ್ನಡದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಜಾಲತಾಣಗಳಿದ್ದರೂ ಕೇವಲ ಸಿನಿಮಾ ಕುರಿತಾಗಿಯೇ ಪ್ರತ್ಯೇಕ ಬ್ಲಾಗ್ ಇರಲಿಲ್ಲ. ಕೆಲವರು ತಾವು ನೋಡಿದ, ಮೆಚ್ಚಿಕೊಂಡ ಸಿನಿಮಾಗಳ ಬಗ್ಗೆ ಅಲ್ಲಲ್ಲಿ ಬರೆಯುತ್ತಿದ್ದರು ಅಷ್ಟೇ. ಈ ಕೊರತೆ ನೀಗಿಸಿದ್ದು “ಸಾಂಗತ್ಯ” ಬ್ಲಾಗ್. ಒಳ್ಳೆಯ ಚಿತ್ರವೊಂದನ್ನು ನೋಡಿದರೆ ಸಾಲದು ; ಎಲ್ಲರೂ ನೋಡಬೇಕು ಎಂಬುದು ಈ ಬ್ಲಾಗ್ ನ ಆಶಯ. ಇದರಲ್ಲಿ ಜಗತ್ತಿನ ಹಲವು ಅತ್ಯುತ್ತಮ ಚಿತ್ರಗಳ ಪರಿಚಯ, ಮಾಹಿತಿ, ಅನಿಸಿಕೆ, ವಿಮರ್ಶೆಗಳಿವೆ. ಇತ್ತೀಚೆಗಷ್ಟೇ ಬಿಡುಗಡೆಯಾದ “ಅಣ್ಣಾಬಾಂಡ್” ಬಗ್ಗೆ, ರಾಜ್ಯ ಚಲನಚಿತ್ರಗಳ ಪ್ರಶಸ್ತಿಯ ವಿವಾದದ ಕುರಿತ ಬರಹಗಳೂ ಇಲ್ಲಿವೆ. ಇಲ್ಲಿಗೆ ಇಣುಕಿ ನೋಡಿ
ಹೀಗೆ ಮೆಚ್ಚುಗೆ ನುಡಿಗಳನ್ನು “ವಿಜಯ ವಾಣಿ” ಪತ್ರಿಕೆ ತನ್ನ ಮೇ 4 ರ (2012) ಸಂಚಿಕೆಯ ನೆಟ್ ಲಿಂಕ್ ನಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದೆ. ಪತ್ರಿಕೆಯ ಬಳಗಕ್ಕೂ, ಪ್ರಕಟಿಸಿ ಪ್ರೋತ್ಸಾಹಿಸಿದ ಸಹೃದಯಿಗಳಿಗೂ ಸಾಂಗತ್ಯ ಬಳಗ ಧನ್ಯವಾದ ಸಲ್ಲಿಸುತ್ತದೆ.













