Archive for July 27th, 2009
ಚಿತ್ರ ವಿಮರ್ಶೆ ಎಂಬುದು ವೃಥಾ ಚರ್ಚೆಯೇ?
ಸಂವಾದಕ್ಕೆ ಧ್ವನಿಗೂಡಿಸಿರುವವರು ಅನಂತ ಮತ್ತು ವಿ.ರಾ.ಹೆ.. ಒಬ್ಬರು ಚಿತ್ರವನ್ನು ವಿಮರ್ಶಿಸುವುದೇ ತಪ್ಪೇ ? ಎಂಬಂತೆ ತೋರಿದ್ದಾರೆ. ಜತೆಗೆ ವಿ.ರಾ.ಹೆ ಅವರು ಹಿಂದಿ ಕುರಿತು ಕ್ಲಾರಿಫಿಕೇಶನ್ನು ಕೊಟ್ಟಿದ್ದಾರೆ. ಈ ಚರ್ಚೆ ಸಿನಿಮಾ ನಿರ್ಮಾಣ ಕುರಿತು ಚರ್ಚೆ ನಡೆಯಲಿ ಎಂಬುದು ಸಾಂಗತ್ಯದ ಸದಾಶಯ.
ಹಲೋ ಚೇತನಾ ಹಾಗೂ ಬೇಡ ಬಿಡಿ!
ಮೊಟ್ಟ ಮೊದಲನೆಯದಾಗಿ, ನಾನು ಎದ್ದೇಳು ಮಂಜುನಾಥ ನೋಡಿಲ್ಲ, ಈ ವಾರಾಂತ್ಯ ನೋಡಬೇಕೆಂದಿದ್ದೇನೆ. ಅದಕ್ಕೆ ಮೊದಲು ಎರಡು ಮಾತು.
ತಾವುಗಳ ವಿಮರ್ಶೆ ಹಾಗೂ ಚರ್ಚೆಯನ್ನು ಓದಿದೆ. ಎಲ್ಲ ಚಲನ ಚಿತ್ರಗಳನ್ನೂ ಕುರಿತ ಚರ್ಚೆಯಂತೆಯೇ ಇದೂ ಕೂಡ ನಾನಂದುಕೊಂಡ ಹಾಗೆ ಹಾಗೂ ಬಹಳಷ್ಟು ಸಾರಿ ನಾನು ನನ್ನ ಗೆಳೆಯರ ಜೊತೆ, ಚಿತ್ರ ಪ್ರೇಮಿಗಳ ಜೊತೆ ಚರ್ಚಿಸಿದ ಧಾಟಿಯಲ್ಲೇ ಮುಂದುವರೆದು ಕೊನೆಗೊಂದು deadend ನಲ್ಲಿ ನಿಲ್ಲುವ ಸೂಚನೆಗಳು ಕಾಣುತ್ತಿವೆ. Read the rest of this entry »
“ಪ್ರಯೋಗಾತ್ಮಕ ಚಿತ್ರ : ಒಳ್ಳೆಯ ಪ್ರಯತ್ನ”
ಎದ್ದೇಳು ಮಂಜುನಾಥ ಚಿತ್ರ ಕುರಿತ ಸಂವಾದಕ್ಕೆ ಸುಧನ್ವಾ ದೇರಾಜೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಚರ್ಚೆಯನ್ನು ಮುಂದುವರಿಸಿದ್ದಾರೆ. ಹಾಗೆಯೇ ಚೇತನಾರ ಪ್ರತಿಕ್ರಿಯೆಗೆ ಬೇಡಬಿಡಿ ಮರು ಪ್ರತಿಕ್ರಿಯೆ ನೀಡಿದ್ದಾರೆ. ಚರ್ಚೆಯನ್ನು ಮುಂದುವರಿಸಲಿಚ್ಛಿಸುವವರು ಅಭಿಪ್ರಾಯವನ್ನು ಕಳಿಸಿಕೊಡಿ.
“ಬೇಡ ಬಿಡಿ’ ಹೇಳಿದ್ದು ಬಹುಪಾಲು ಸರಿಯಾಗಿದೆ. ಚೇತನಾ ಅವರು ಸುಮಾರು ಎರಡು ವರ್ಷಗಳ ನಂತರ ಕನ್ನಡ ಸಿನಿಮಾ ನೋಡುತ್ತಿರುವುದು, ಕ್ಷಮಿಸಲಾಗದ ಮೊದಲ ತಪ್ಪು ! ಬಹುಶಃ ಅದೇ “ತಪ್ಪು ಗ್ರಹಿಕೆ’ಗೆ ಕಾರಣವಾಗಿರಬೇಕು.
ಕನ್ನಡದ ಮಟ್ಟಿಗೆ ಇದೊಂದು ಉತ್ತಮ ಸಿನಿಮಾ. ಚಿತ್ರಕಲೆ ಅಂದರೆ ಕೇವಲ ಬಣ್ಣ ಮಾತ್ರ ಎನ್ನುವುದೂ ಅಳಿಸಿಹೋಗಿರುವಾಗ, ಸಿನಿಮಾ ಎಂದರೆ ವಿಷುವಲ್ ಮಾತ್ರ ಅಂತ ನಾವೇಕೆ ಅಂದುಕೊಳ್ಳಬೇಕು? ಮಾತನ್ನು ಕೇವಲ ಆಲಿಸುವುದಕ್ಕೂ, ಮಾತಾಡುವವರು ಎದುರೇ ಇರುವುದಕ್ಕೂ ವ್ಯತ್ಯಾಸವಿದೆ. ಮಾತಾಡುವವರನ್ನು ನೋಡುತ್ತಾ ಕೇಳಿದಾಗ ಅದರ ಅನುಭವವೇ ಬೇರೆ. Read the rest of this entry »




