Archive for July 22nd, 2009
ಗುರುಪ್ರಸಾದರ ಪಾಠ ಎರಡು…ಎದ್ದೇಳು ಮಂಜುನಾಥ…!
ಜಗ್ಗೇಶ್ ಹಾಗೂ ಗುರುಪ್ರಸಾದ್ ಜೋಡಿಯ “ಎದ್ದೇಳು ಮಂಜುನಾಥ” ಚಿತ್ರ ತೆರೆ ಕಂಡ ಮೇಲೆ ಭಿನ್ನ ಭಿನ್ನ ಅಭಿಪ್ರಾಯ ಬರುತ್ತಿವೆ. ಇದು ಬಹು ನಿರೀಕ್ಷೆಯ ಚಿತ್ರ. “ಮಠ” ಚಿತ್ರದ ನಿರ್ದೇಶನದ ಖ್ಯಾತಿ ಗುರುಪ್ರಸಾದರ ಹಿಂದಿತ್ತು, ಜಗ್ಗೇಶರಿಗೆ ಅವರ ಅಭಿನಯ ಬಂಡವಾಳವಾಗಿತ್ತು. ಎರಡೂ ಕೂಡಿ ಬಂದ ಚಿತ್ರದ ಬಗ್ಗೆ ಕೇಳುತ್ತಿರುವ ಧ್ವನಿಗಳು ಹಲವು. ಒಂದು ಚಿತ್ರ ಏನೆಲ್ಲಾ ಕೊಟ್ಟು ಯಶಸ್ಸಾಗಬಲ್ಲದು ? ಏನೆಲ್ಲಾ ಕೊಡದೇ ಸೋಲಬಲ್ಲದು? ಹೊಸಬಗೆಯಿಂದ ನೋಡಲು ಸಾಧ್ಯವೇ ? ಹೀಗೆ..ಅಂಥ ಒಂದು ಧ್ವನಿಯನ್ನು ಚೇತನಾ ತೀರ್ಥಹಳ್ಳಿ ಹೊರಡಿಸಿದ್ದಾರೆ. ಸಾಂಗತ್ಯದ ಉದ್ದೇಶ ಒಂದು ಚಿತ್ರದ ಕುರಿತು ಆರೋಗ್ಯಕರ ಚರ್ಚೆಯಾಗಬೇಕೆಂಬುದು. ವ್ಯಕ್ತಿ-ವ್ಯಕ್ತಿ ನಡುವಿನ ಸಂಘರ್ಷವೆನಿಸದೇ ಒಂದು ಮಾಧ್ಯಮದ (media)ಉತ್ಕರ್ಷದ ಸಾಧ್ಯತೆಯನ್ನು ಅಳೆಯುವ ಕಾತುರ. ನೀವೂ ಧ್ವನಿಯಾಗಿ. ಚಿತ್ರ ಕಂಡಿರುವವರು ಮೌಲ್ಯಯುತ ಅಭಿಪ್ರಾಯವನ್ನು saangatya@gmail ಗೆ ಕಳಿಸಿ.
ಬೇಸರದಿಂದಿದ್ದೇನೆ. ‘ಎದ್ದೇಳು ಮಂಜುನಾಥ’ ನೋಡಿಬಂದೆ. ಯಾರೋ ಸ್ಲಮ್ ಡಾಗಿಗಿಂತ ಮೊದಲೇ ಕನ್ನಡದವ್ರು ಹಿಂಗೆಲ್ಲ ಯೋಚಿಸಿದ್ರು ಅಂತ ಶಿಫಾರಸು ಕೊಟ್ಟಿದ್ರು. ನಮ್ಮಲ್ಲೂ ಈ ಥರದ ಕ್ವೆಶ್ಚನ್ ಆನ್ಸರ್ ಸಿನೆಮಾನಾ? ಅಂತ ಕುತೂಹಲ ಕುಣೀತಿತ್ತು. ಆದ್ರೆ…
ಸುಮಾರು ಎರಡು ವರ್ಷಗಳ ನಂತರ ಹೊಸ ಕನ್ನಡ ಸಿನೆಮಾ ನೋಡಲು ಹೊರಟಿದ್ದಕ್ಕೆ ತಕ್ಕ ಶಾಸ್ತಿಯಾಯ್ತು ಬಿಡಿ! ಅಬ್ಬಬ್ಬಬ್ಬಬ್ಬ…. ಸಿನೆಮಾ ಲಾಂಗ್ವೇಜಲ್ಲೇ ಹೇಳ್ಬೇಕೂಂದ್ರೆ, ‘ಅದೇನ್ ಕುಯ್ದಿದಾರ್ರೀ ಅವ್ರು?’ ಸಿನೆಮಾ ಶುರುವಿಂದ ಕೊನೆತನಕ ಗುರು ಪ್ರಸಾದರು ತಮ್ಮೆಲ್ಲ ಬುದ್ಧಿವಂತಿಕೇನೂ ಮತ್ತೆ ಅವಕಾಶವೇ ಸಿಗೋಲ್ವೇನೋ ಅನ್ನೋ ಹಾಗೆ ಹರಿಬಿಟ್ಟಿದಾರೆ. ಕೆಲವೊಮ್ಮೆ ಕೆಲವನ್ನ ಬುದ್ಧಿವಂತಿಕೆ ಅಂತ ತಪ್ಪು ತಿಳ್ಕೊಂಡ ಹಾಗೂ ಇದೆ! Read the rest of this entry »
ಕ್ಲಾಸ್ ಮತ್ತು ಮಾಸ್ ಸೇರಬೇಕಷ್ಟೇ…!
ಟೀನಾಜೀ,
ನಾನು ಸ್ಲಂಡಾಗ್ ಮಟ್ಟ ಎಂದಿದ್ದು ಅದಕ್ಕೇ ಆಗಿತ್ತು. ಆದಿನಗಳು ಎಂಬ ಸಿನೆಮಾದಲ್ಲಿ ಇರದ ಅಥೆಂಟಿಸಿಟಿ ಸ್ಲಂ ಡಾಗ್ ನಂತಹ ಚಿತ್ರಗಳಲ್ಲಿ ಕಾಣುವುದು ಆಶ್ಚರ್ಯವಾಗುತ್ತದೆ. ಮತ್ತೊಂದೇನೆಂದರೆ ನಾವು ಹೋಲಿಕೆ ಮಾಡುವಾಗ ಒಂದು ತಾರೆ ಜಮೀನ್ ಪರ್ ಅಥವಾ ಒಂದು ವೆಡ್ನೆಸ್ಡೇ ಹಿಡಿದುಕೊಂಡು ನಮ್ಮ ಎಲ್ಲಾ ಸಿನೆಮಾಗಳನ್ನು ಅದಕ್ಕೇ ಹೋಲಿಕೆ ಮಾಡಿಬಿಡುತ್ತೇವೆ . ಆದರೆ ಅಲ್ಲೂ ಕೂಡ ಸಿಂಗ್ ಇಸ್ ಕಿಂಗ್, ಕಂಬಕ್ತ್ ಇಷ್ಕ್ ತರಹದ ಬರೀ ಮಾರ್ಕೆಟ್ ಹಿಟ್ ಆದ ಪರಮ ಡಬ್ಬಾ ಚಿತ್ರಗಳೂ ಇವೆ ಮತ್ತು ಅಲ್ಲೂ ಕೂಡ ಅದೇ ‘ಸಿದ್ದಸೂತ್ರ’ದ ಸಿನೆಮಾಗಳೂ ಉಥೇಚ್ಛವಾಗಿ ಬರುತ್ತಿವೆ . ಮುಂಗಾರು ಮಳೆ ‘ಕತೆ’ ಮಾತ್ರ ‘ಸಾಮಾನ್ಯ’ ಅಂದಿದ್ದು ನಾನು.
ಇನ್ನು ಉಳಿದಂತೆ ನೀವು ಕೊಟ್ಟ ಉತ್ತರಕ್ಕೆ, ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. thanQ. ಕೊನೆ ಪಾಯಿಂಟಿನಲ್ಲಿ ‘ಸಿದ್ಧಸೂತ್ರ’ಗಳ ಪಟ್ಟಿ ಗೆ ಹೊಸದೇನಾದ್ರೂ ಸೇರಿಸಬಹುದಾ ಅಂತ ಯೋಚಿಸಿದರೆ ಏನೂ ಹೊಳೆಯುತ್ತಲೇ ಇಲ್ಲವಲ್ಲ !
ಕ್ಲಾಸ್ ಮತ್ತು ಮಾಸ್ ಎರಡೂ ಸೇರದ ಹೊರತು ಬೇರೆ ಪರಿಹಾರವೇ ಕಾಣುತ್ತಿಲ್ಲ ಸದ್ಯಕ್ಕೆ .
ಚಿತ್ರರಂಗದ ಚರ್ಚಿಸಲಾ(ಗದ)ರದ ಸಂಗತಿಗಳು-ನಿಮ್ಮ ಅಭಿಮತವನ್ನೂ ಹೇಳಿ
ವಿಕಾಸ್ ,
ನನ್ನ ಕಮೆಂಟು ಸುರೇಶರ ಕಂಪಾರಿಸನ್ನಿಗೆ ಕೊಟ್ಟ ಉತ್ತರವಾಗಿದ್ದು ಇಲ್ಲಿ ಸ್ಲಮ್ಡಾಗ್ ಅಳತೆಗೋಲು ಅಥವಾ ಸುಪೀರಿಯರ್ ಅಂತ ಹೇಳೋದಲ್ಲ. ನನ್ನ ಕೆಲವು ಉತ್ತರಗಳು ನಿಮಗಾಗಿ. ಪಾಯಿಂಟ್ ವೈಸ್.
೧. “ನಾವ್ಯಾಕೆ ಇಲ್ಲಿ ಹಿಂದಿ ಚಿತ್ರಗಳನ್ನು ಅಥವಾ ಪ್ರಶಸ್ತಿ ಬಂದ ಮತ್ಯಾವುದೋ ಚಿತ್ರವನ್ನು ಶ್ರೇಷ್ಠತೆಯ ಗುರಿಯನ್ನಾಗಿರಿಸಿಕೊಂಡು ಯೋಚಿಸುತ್ತಿದ್ದೇವೋ ತಿಳಿಯುವುದಿಲ್ಲ. ಕನ್ನಡ ಸಿನೆಮಾಗಳ ಪರಿಸ್ಥಿತಿಗೆ ಈ ಕೀಳರಿಮೆ ಮೊದಲ ಕಾರಣ. ” -
ಇಲ್ಲಿ ಪ್ರಶಸ್ತಿ ಗಳಿಸಿದ ಚಿತ್ರಗಳ ಬಗ್ಗೆ ಮಾತನಾಡಿಲ್ಲ. ಅಲ್ಲಿಯವರೆಗೆ ಹೋಗುವದು ಬೇಡ ಅನ್ನಿಸತ್ತೆ. ನಾನು ಉದಾಹರಿಸಿರುವ ಸಿನೆಮಾಗಳು ಚೊಚ್ಚಲ ನಿರ್ದೇಶನದ ಇಲ್ಲವೆ ಕೆಲವೇ ಲಕ್ಷಗಳ ತೀರ ಕಡಿಮೆ ಬಜೆಟನ್ನಿಟ್ಟುಕೊಂಡು ತಮ್ಮ ಮಣ್ಣ ಸೊಗಡು ಬಿಡದೆ ಫಾರಿನ್ ಲೊಕೇಶನ್ನುಗಳ ಪಾಲಾಗದೆ ಮಾಡಿದ ಸಿನೆಮಾಗಳು. ಇವು ಕಮರ್ಶಿಯಲ್ ಹಿಟ್ಸ್ ಕೂಡ. Read the rest of this entry »




