Archive for July 16th, 2009
ತಾರೆ ಜಮೀನ್ ಪರ್ ಥರ ಚಿತ್ರಗಳು ಏಕೆ ನಮ್ಮಲ್ಲಿ ಬರುತ್ತಿಲ್ಲ-ಒಂದು ಅನಿಸಿಕೆ
ಕನ್ನಡ ಚಲನಚಿತ್ರರಂಗದ ಚರ್ಚಿಸಲಾರದ (ಗ)ದ ಸಂಗತಿಗಳ ಬಗ್ಗೆ ರವಿರಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವು ಅದನ್ನು ಬೆಳೆಸಬಹುದು.
ಕನ್ನಡದಲ್ಲಿ ಯಾಕೆ ತಾರೆ ಜಮೀನ್ ಪರ್ ತರಹದ ಚಿತ್ರಗಳು ಬರುತ್ತಿಲ್ಲ ? ಎಂಬ ಪ್ರಶ್ನೆಗೆ ಕನ್ನಡದ ತಾರೆಗಳು ಆಕಾಶದಲ್ಲಿರುವುದು ಕಾರಣ ಎಂಬ ಉತ್ತರ ದೊರಕುತ್ತದೆ. ಕನ್ನಡ ಚಿತ್ರರಂಗದ ಸದ್ಯದ ತಾರೆಗಳೆಲ್ಲ ಮಚ್ಚು, ಲಾಂಗು, ರಿಮೇಕ್‌ಗಳಲ್ಲಿ ಕಾರ್ಯನಿರತರಾಗಿದ್ದಾರೆ. ಅವರು ಭೂಮಿಗಿಳಿದಾಗ ತಾನೆ ತಾರೆ…ಯಂತಹ ಚಿತ್ರ ಕನ್ನಡದಲ್ಲಿ ನಿರ್ಮಾಣವಾಗೋದು ?
ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಕಳಪೆ ಗುಣಮಟ್ಟದ ಚಿತ್ರಗಳಿಗೆ ನಾಯಕರು, ನಿರ್ಮಾಪಕರು ಹಾಗೂ ನಿರ್ದೇಶಕರೇ ಕಾರಣ. ಪ್ರೇಕ್ಷಕರು ಕೇಳಿದ್ದನ್ನು ನಾವು ಕೊಡುತ್ತೇವೆ ಎನ್ನುವುದು ಅವರ ಸಿದ್ಧ ಉತ್ತರ. ಕಳೆದ ಮೂರು ತಿಂಗಳಿನಲ್ಲಿ ಅಂಬಾರಿ ಹೊರತುಪಡಿಸಿದರೆ ಬೇರೆ ಚಿತ್ರಗಳು ಯಶಸ್ಸು ಕಂಡಿಲ್ಲ. Read the rest of this entry »




