Archive for July 14th, 2009
ದಿ ಅನ್‌ಟಚಬಲ್ಸ್: ಕೆವಿನ್ ಕಾಸ್ನರ್‌ನ ಮೆಗಾಹಿಟ್
ಬೇಳೂರು ಅವರು ಈ ಬಾರಿ ಬರೆದದ್ದು “ದಿ ಅನಟಚಬಲ್ಸ್” ಚಲನಚಿತ್ರದ ಬಗ್ಗೆ. ಒಂದು ಅದ್ಭುತವಾದ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಬರೆದಿದ್ದಾರೆ.
ಹಾಲಿವುಡ್ ಹುಚ್ಚಿನಲ್ಲಿದ್ದ ನನಗೆ ಪ್ಲಾಝಾ ಥಿಯೇಟರಿನಲ್ಲಿ ಕೂತು ಸಿನೆಮಾ ನೋಡುವ ಬಲೆ ಹುಚ್ಚು. ಎಂಬತ್ತರ ದಶಕದ ಆ ಕೊನೆಯ ದಿನಗಳಲ್ಲಿ ಹಾಲಿವುಡ್‌ನ ಎಲ್ಲ ಇಮ್ಯಾಜಿನೇಶನ್‌ಗಳಿಗೆ ಸಿಕ್ಕಿದ ಮಹಾನ್ ನಟನೇ ಕೆವಿನ್ ಕಾಸ್ನರ್. ಅವನ ಘನತೆವೆತ್ತ ನಟನೆಯ ಯಶಸ್ವೀ ಸಿನೆಮಾವೇ ದಿ ಅನ್‌ಟಚಬಲ್ಸ್. ಹಾಗಂತ ಈ ಸಿನೆಮಾದ ನಟನೆಗೆ ಆಸ್ಕರ್ ಸಿಗಲಿಲ್ಲ.
ಬದಲಿಗೆ ಸಿಕ್ಕಿದ್ದು ಅತ್ಯುತ್ತಮ ಸಪೋರ್ಟಿಂಗ್ ನಟನಾಗಿ, ಜೇಮ್ಸ್ ಬಾಂಡ್ ಪಾತ್ರದ ಖ್ಯಾತಿಯ ಶಾನ್ ಕಾನೆರಿಗೆ !
1987ರ ಈ ಸಿನೆಮಾ ಇವತ್ತಿಗೂ ನನ್ನ ಚಿತ್ತಪಟಲದಲ್ಲಿ ಅಚ್ಚೊತ್ತಿರುವ ಸಿನೆಮಾ. ಕಳೆದ ವಾರ ಗೆಳೆಯರೊಂದಿಗೆ ಸಿನೆಮಾ ಬಗ್ಗೆ ಹರಟುತ್ತಿದ್ದಾಗ ಈ ಸಿನೆಮಾದ ಎಲ್ಲ ಸೀನ್‌ಗಳೂ ಕಣ್ಮುಂದೆ ಪ್ರತ್ಯಕ್ಷವಾದವು. Read the rest of this entry »




