ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for July 13th, 2009

ಲೇಖನಕ್ಕೆ ನಿಮ್ಮ ಅಭಿಮತ ದಾಖಲಿಸಿ

with one comment

ಸಾಂಗತ್ಯಕ್ಕೆ ನೀಡುತ್ತಿರುವ ಪ್ರೋತ್ಸಾಹ ಅನನ್ಯ. ಇನ್ನು ಮುಂದೆ ಪ್ರತಿ ಲೇಖನವನ್ನೂ ನೀವು ನಿಮ್ಮ ಮೊಹರು ಹಾಕಬಹುದು. ಲೇಖನ ಚೆನ್ನಾಗಿದೆಯೇ ಇಲ್ಲವೇ ಇತ್ಯಾದಿ ಅಂಶಗಳ ಕುರಿತು ನಿಮ್ಮ ಅಭಿಮತ ದಾಖಲಿಸಲು (ರೇಟಿಂಗ್) ಲೇಖನದ ಕೆಳಗೆ “RATE THIS” ಎಂದು ಲಗತ್ತಿಸಲಾಗಿದೆ. ಅಲ್ಲಿ ನಿಮ್ಮ ಮತವನ್ನು ದಾಖಲಿಸಬಹುದು….ಸಂ

Written by saangatya

July 13, 2009 at 11:48 am

ಕನ್ನಡ ಚಿತ್ರರಂಗದ ಚರ್ಚಿಸಬಾ(ಲಾ)ರದ ಸಂಗತಿ !

with 9 comments

ಕನ್ನಡ ಚಿತ್ರರಂಗದಲ್ಲಿ ಚರ್ಚಿಸಬಾರದ, ಚರ್ಚಿಸಲಾರದ ಹಾಗೂ ಚರ್ಚಿಸಿದರೆ ವ್ಯರ್ಥ ಎನಿಸುವಷ್ಟು ಹಲವು ಸಂಗತಿಗಳಿವೆ. ಅದರಲ್ಲಿ ಇದೂ ಒಂದು ಎನ್ನುತ್ತಾರೆ ನಿರಮಿತ್ರ. ನಿಮ್ಮದೇ ಅಂಕಣದ ಈ ಲೇಖನಕ್ಕೆ ನಿಮ್ಮ ದನಿಯನ್ನೂ ಕೂಡಿಸಬಹುದು.

ಇದು ಚರ್ಚಿಸುವ ಸಂಗತಿಯಲ್ಲ ಎಂಬುದು ಎಂದೋ ನಿರ್ಧಾರವಾಗಿರುವಂಥ ಸಂಗತಿ. ಯಾಕೆಂದರೆ ಇದರೊಳಗೆ ಚರ್ಚಿಸಲು ಯಾರೂ ಬರುವುದಿಲ್ಲ ಎಂಬ ಕಾರಣವೇ ಅದರ ಹಿನ್ನೆಲೆ. ಆದರೂ ಸುಮ್ಮನೆ ಹೀಗನಸಿದ್ದನ್ನು ಬರೆಯುತ್ತಿದ್ದೇನೆ. ಎಲ್ಲರೂ ಒಪ್ಪಬಹುದು, ಒಪ್ಪದಿರಬಹುದು. ನಮ್ಮ ಚಲನಚಿತ್ರರಂಗದ ಮಹಾಶಯರೂ ಹೀಗೆ ಮೂಗು ಮುರಿದು ಸುಮ್ಮನಿರಬಹುದು.

ಇತ್ತೀಚೆಗಷ್ಟೇ ಅರ್ಚನಾ ಹೆಬ್ಬಾರ್ ಅವರು, ಇತ್ತೀಚಿನ ಚಲನಚಿತ್ರ ಗೀತ ಸಾಹಿತ್ಯದ ಕುರಿತು ಬರೆದಿದ್ದರು. ಅದರಲ್ಲಿ ಬಹುಪಾಲು ಅಂಶಗಳಿಗೆ ನನ್ನದೂ ಸಹಮತವಿದೆ. ನನ್ನ ಚರ್ಚೆಯ ಅಂಶವೂ ಆ ನೆಲೆಯಲ್ಲೇ ಹುಟ್ಟಿಕೊಂಡಿದ್ದು, ಆದರೆ ಅದು ಚಲನಚಿತ್ರದ ಗುಣಮಟ್ಟದ ಕುರಿತಾದದ್ದು.

ನನಗೆ ತೋರಿದಂತೆ ಇತ್ತೀಚೆಗೆ ಪ್ರಯೋಗಾತ್ಮಕ ನೆಲೆಯಲ್ಲಿ ಕನ್ನಡದಲ್ಲಿ ಸಿನಿಮಾ ಬಂದದ್ದೇ ಕಡಿಮೆ ಎನ್ನುವುದಕ್ಕಿಂತಲೂ ಇಲ್ಲ ಎಂದರೆ ಪರವಾಗಿಲ್ಲ. ಒಂದು ಸಂಪೂರ್ಣ ವಿಭಿನ್ನವಾದ ಚಿತ್ರಗಳನ್ನು ಕೊಟ್ಟಿದ್ದೇವೆ ಎನ್ನುವವರು ನಮ್ಮ ಎದುರಿಲ್ಲ. ಆ ಸಂಖ್ಯೆಯೂ ಕಾಣಸಿಗದು. ಒಂದುವೇಳೆ ಪ್ರಯೋಗಾತ್ಮಕ ಚಿತ್ರ ಬಂದಿದ್ದರೂ ವೃಥಾ ಶ್ರಮಿವಿಲ್ಲದೇ ಬಂದಿರಬೇಕು. ಯಾಕೆ ಹೀಗೆ ಎನ್ನುವುದೇ ತಿಳಿಯದ ಸಂಗತಿ. Read the rest of this entry »

Written by saangatya

July 13, 2009 at 9:31 am