Archive for July 1st, 2009
ನನ್ನ ಹಾಲಿವುಡ್ ಫೇವರಿಟ್ ಸಿನಿಮಾಗಳು
ತಮ್ಮ ಹಾಲಿವುಡ್ ಸಿನಿಮಾಗಳ ಬಗೆಗಿನ ಮೋಹ ಹಂಚಿಕೊಂಡಿದ್ದಾರೆ ಬೇಳೂರು ತಮ್ಮ ಅಂಕಣದಲ್ಲಿ
ಹಾಲಿವುಡ್ ಸಿನೆಮಾ ನೋಡುವ ಹವ್ಯಾಸ ಬೆಳೆದರೆ ಬಿಡುವುದು ಕಷ್ಟ. ಒಂಥರ ಅಡಿಕ್ಟ್ ಆಗಿಬಿಡುತ್ತೇವೆ. ನಾನಂತೂ ಏಳನೇ ಕ್ಲಾಸಿನಿಂದ ಇವುಗಳನ್ನು ನೋಡುತ್ತ ಮರುಳಾದವ. ಆಗ ದಾವಣಗೆರೆಯಲ್ಲಿದ್ದೆ. ಪುಷ್ಪಾಂಜಲಿ ಥಿಯೇಟರಿನಲ್ಲಿ ಯಾವಾಗ್ಲೂ ಇಂಗ್ಲಿಷ್ ಸಿನೆಮಾದ ಮಾರ್ನಿಂಗ್ ಶೋ ಇರ್ತಾ ಇತ್ತು. ಅಲ್ಲಿ ಸಾಮಾನ್ಯ ಪ್ರತೀ ವಾರಾನೂ ಸಿನೆಮಾ ನೋಡುತ್ತಿದ್ದೆ. ಬ್ರೂಸ್ ಲೀ ಯಿಂದ ಹಿಡಿದು ಜಾಕೀ ಚಾನ್‌ನ ದಿ ಯಂಗ್ ಮಾಸ್ಟರ್‌ವರೆಗೆ ಎಷ್ಟೋ ಸಿನೆಮಾ. ಆಗ ನನಗೆ ಹಾಲಿವುಡ್ ಸಿನೆಮಾ ತಾರೆಯರ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ.
ಬೆಂಗಳೂರಿಗೆ ಬಂದಮೇಲೆ, ಕಾಟನ್‌ಪೇಟೆಯ ವಿಜಯಲಕ್ಷ್ಮಿ ಥಿಯೇಟರಿನಲ್ಲಿ ಸೆಕೆಂಡ್ ಹ್ಯಾಂಡ್ ಸಿನೆಮಾಗಳನ್ನೂ, ಎಂ ಜಿ ರಸ್ತೆ / ಬ್ರಿಗೇಡ್ ರೋಡ್ / ರೆಸಿಡೆನ್ಸಿ ರಸ್ತೆಯಲ್ಲಿದ್ದ ಬ್ಲೂಮೂನ್, ಬ್ಲೂ ಡೈಮಂಡ್, ರೆಕ್ಸ್, ಪ್ಲಾಝಾ, ಗೆಲಾಕ್ಸಿ, ಸಿಂಫೋನಿ, ಲಿಡೋಗಳಲ್ಲಿ ಫಸ್ಟ್ ಹ್ಯಾಂಡ್ ಹಾಲಿವುಡ್ ಸಿನೆಮಾಗಳನ್ನೂ ನೋಡತೊಡಗಿದೆ. ಇಂಥ ಥಿಯೇಟರಿನಲ್ಲಿ ಇಂಥ ಸೀಟಿನಲ್ಲೇ ಕೂತುಕೊಳ್ಳಬೇಕು ಎಂಬ ಹಠ ತೊಟ್ಟಿದ್ದೂ ಇದೆ. ಆ ದಿನಗಳಲ್ಲಿ (1986-90) ನಾನು ನೋಡದ ಸಿನೆಮಾ ಇಲ್ಲ ಅನ್ನುವಷ್ಟು ಹಾಲಿವುಡ್‌ಗೆ ಅಡಿಕ್ಟ್ ಆದೆ. ಈಗ ತುಂಬಾ ಸೆಲೆಕ್ಟಿವ್ ಆಗಿದ್ದೇನೆ. ಆದರೆ ಆ ಆಕರ್ಷಣೆ ಬಿಟ್ಟಿಲ್ಲ; ಬಿಡುವುದೂ ಇಲ್ಲ. Read the rest of this entry »




