ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for February 21st, 2009

“ಸಾಂಗತ್ಯ”ದಲ್ಲಿ ಕುರಸೋವಾನ “ಡ್ರೀಮ್ಸ್ ದೃಶ್ಯ”ಗಳು

with one comment

ನಮಸ್ಕಾರ. ಮಧುರ್ ಭಂಡಾರ್ಕರ್ ನವರ ಕುರಿತ, ಚಿತ್ರಗಳ ಕುರಿತ ವಿಮರ್ಶೆಯ ಮಧ್ಯೆಯೇ ಯಾಕೋ ಜಪಾನಿನ ಮಹಾನ್ ನಿರ್ದೇಶಕ ಅಕಿರಾ ಕುರಸೋವಾ ನೆನಪಾದರು. ಅವರ ಹಲವು ಚಿತ್ರಗಳ ಪೈಕಿ ಕನಸುಗಳ ಗುಚ್ಛ ಅತ್ಯಪರೂಪವಾದದ್ದು. ಒಂದೊಂದು ಪುಟ್ಟ ಪುಟ್ಟ ಕನಸುಗಳೇ.

ಅಂದಹಾಗೆ ಇಂದಿನಿಂದ “ಸಾಂಗತ್ಯ”ದಲ್ಲಿ ಆಗಾಗ್ಗೆ ನಾವು ನೋಡಿದ, ನೋಡಬಹುದಾದ ಚಿತ್ರಗಳ ತುಣುಕುಗಳ ದೃಶ್ಯಾವಳಿಯನ್ನು ನೀಡುತ್ತಿದ್ದೇವೆ. ಅದನ್ನು ಕ್ಲಿಕ್ಕಿಸುವ ಮೂಲಕ ಆ ಚಿತ್ರವನ್ನು ನೋಡಬಹುದು. ಈ ಹಿನ್ನೆಲೆಯಲ್ಲೇ ಅಕಿರಾ ಕುರಸೋವಾನ ಮೂರು ಡ್ರೀಮ್ಸ್ ಗಳನ್ನು ಕೊಟ್ಟಿದ್ದೇವೆ ನಮ್ಮ “ವಿಡಿಯೋ ದೃಶ್ಯಾವಳಿ” ಯ ಅಂಕಣದಲ್ಲಿ. ಜತೆಗೆ ನಮ್ಮ “ಜಗತ್ತಿನ ಚೆಂದದ ಸಿನಿಮಾ” ದ ವಿಭಾಗದಲ್ಲಿ “ಡ್ರೀಮ್ಸ್” ಕುರಿತಾದ ಲೇಖನವೂ ಇದೆ. ಎರಡನ್ನೂ ನೋಡಿ ಸಂಭ್ರಮಿಸಿ.