Archive for February 6th, 2009
ಹೊಸ ಪ್ರಕಟಣೆ- ಮತ್ತೊಂದು ಸಂವಾದದಲ್ಲಿ ಪಾಲ್ಗೊಳ್ಳಿ
ಎಲ್ಲರಿಗೂ ನಮಸ್ಕಾರ.
ಸಾಂಗತ್ಯ ಸಿನಿಮಾ ಕುರಿತು ಒಂದು ನಿರ್ದಿಷ್ಟ ನೆಲೆಯ ಹಾಗೂ ಸಕಾರಾತ್ಮಕ ನೆಲೆಯ ಸಂವಾದಕ್ಕೆ ಸದಾ ಅವಕಾಶ ನೀಡುವಂಥದ್ದು. “ಸ್ಲಂ ಡಾಗ್ ಮಿಲಿನಿಯೇರ್‘ ಕುರಿತು ನಡೆದ ಸಂವಾದಕ್ಕೆ ಎಲ್ಲರೂ ಪ್ರತಿಕ್ರಿಯಿಸಿದ್ದ ರೀತಿ ನಿಜಕ್ಕೂ ಪ್ರೋತ್ಸಾಹ ತರುವಂಥದ್ದು. ತಿಂಗಳಿಗೊಂದಾದರೂ ಸಂವಾದ ನಡೆಸುವ ಉದ್ದೇಶವಿದೆ. ಅದಕ್ಕಾಗಿ ಸೂಕ್ತ ಸಿದ್ಧತೆಯೂ ನಡೆದಿದೆ.
ಅಂದಹಾಗೆ ಹೊಸ ಸಂವಾದಕ್ಕೆ ಸಾಂಗತ್ಯ ಸಜ್ಜಾಗಿದೆ. ಸ್ಲಂಡಾಗ್ ಮಿಲಿನಿಯೇರ್ ಸೇರಿದಂತೆ ಹಲವು ಚಿತ್ರಗಳನ್ನು ಚರ್ಚಿಸುವ ಸಂದರ್ಭದಲ್ಲಿ ಸಹಜವಾಗಿ ನಮಗೆಲ್ಲರಿಗೂ ಎದುರಾದ ಪ್ರಶ್ನೆಯೆಂದರೆ “ಒಂದು ಚಿತ್ರವನ್ನು ನೋಡುವಾಗ ಸ್ಥಳೀಯ ನೆಲೆ, ನಮ್ಮ ನೆಲೆಯ ಅನುಭವಗಳನ್ನು ಮೀರಬೇಕೇ? ಅದನ್ನು ಪರಿಗಣಿಸುವ ಅಗತ್ಯವಿಲ್ಲವೇ? ಅಥವಾ ಅವುಗಳನ್ನೂ ಒಳಗೊಂಡು ಚಿತ್ರವನ್ನು ಗ್ರಹಿಸಬೇಕೇ?’ ಎಂಬುದು. ನಿಜವಾಗಲೂ ಚಿತ್ರಭಾಷೆ ಅರ್ಥವಾಗಿಸಿಕೊಳ್ಳುವ ನೆಲೆಯಲ್ಲಿ ಸ್ಥಳೀಯತೆಯೂ ಮುಖ್ಯ ಎನಿಸುವಂಥದ್ದೇ. ಈ ಕುರಿತೇ ಸಂವಾದ ಆರಂಭಿಸುತ್ತಿದೆ.
ದಯವಿಟ್ಟು ತಮ್ಮ ಅನಿಸಿಕೆಗಳನ್ನು saangatya@gmail.com ಗೆ ಕಳುಹಿಸಿ.




