Archive for January 7th, 2009
ಚಿತ್ರೋತ್ಸವದ ಫೋಟೊ ನೋಡಿ

“ಸಾಂಗತ್ಯ’ ಕುಪ್ಪಳ್ಳಿಯಲ್ಲಿ ಜ. ೩ ಮತ್ತು ೪ ರಂದು ಸಂಘಟಿಸಿದ “ನಮ್ಮ ಚಲನಚಿತ್ರೋತ್ಸವ’ ದ ಛಾಯಾಚಿತ್ರಗಳ ಮೊದಲ ಸಂಪುಟವನ್ನು ಚಿತ್ರ ಕುಲುಮೆಯ ಗೆಳೆಯರು ಪ್ರಕಟಿಸಿದ್ದಾರೆ.
ಚಿತ್ರ ಕುಲುಮೆ ಚಿತ್ರಗಳಿಗಾಗಿಯೇ ಇರುವ ಬ್ಲಾಗ್. ಕಾವಾದಲ್ಲಿ ವಿದ್ಯಾರ್ಥಿಯಾಗಿರುವ ಗೆಳೆಯ ಪ್ರವೀಣ್ ಹೆಗಡೆ ನಮ್ಮ ಚಿತ್ರೋತ್ಸವಕ್ಕೆ ಬಂದಿದ್ದ. ಅವನು ತೆಗೆದ ಚಿತ್ರಗಳನ್ನು “ಚಿತ್ರ ಕುಲುಮೆ’ ಗೆಳೆಯರು ಪ್ರಕಟಿಸಿದ್ದಕ್ಕೆ ಸಾಂಗತ್ಯದ ವತಿಯಿಂದ ಧನ್ಯವಾದ ಹೇಳಬೇಕು. ನಮ್ಮ ಚಿತ್ರೋತ್ಸವದ ಇನ್ನಷ್ಟು ಫೋಟೋಗಳು ಸದ್ಯದಲ್ಲೇ ಪ್ರಕಟಿಸಲಾಗುವುದು.
ನಮ್ಮ ಬ್ಲಾಗ್‌ನಲ್ಲಿ ಚಿತ್ರೋತ್ಸವದ ಸಮಾರೋಪ ಸಮಾರಂಭದ ನಂತರ ತೆಗೆದ ಸಮೂಹದ ಫೋಟೋ ಹಾಕಿದ್ದೇವೆ. ಕುವೆಂಪು ಟ್ರಸ್ಟ್‌ನ ಕಡಿದಾಳ್ ಪ್ರಕಾಶ್ ಮತ್ತು ನಮ್ಮೊಂದಿಗಿದ್ದ ಸಿನಿಮಾ ತಜ್ಞ ಪರಮೇಶ್ವರ ಗುರುಸ್ವಾಮಿಯವರೊಂದಿಗೆ ಎಲ್ಲರನ್ನೂ ಕಾಣಬಹುದು. ಹೆಚ್ಚಿನ ಫೋಟೋಗಳಿಗೆ www.chitrakulume.wordpress.com ನ್ನು ದಯವಿಟ್ಟು ನೋಡಿ.




