ಚಿತ್ರ ಖಜಾನೆ-ಚಿತ್ರ ಮಾಹಿತಿ ಪುಟ
“ಸಾಂಗತ್ಯ” ದ ಬೆಳವಣಿಗೆಗೆ ನಿಮ್ಮೆಲ್ಲರ ಬೆಂಬಲ-ಹಂಬಲ ಅತ್ಯಂತ ಅವಶ್ಯ. ಇದುವರೆಗೆ ಸಿಕ್ಕ ಆ ಎರಡೂ ಸಕಾರಾತ್ಮಕ ನೆಲೆಗಳು ನಮ್ಮ ಪ್ರಯಾಣದ ದಿಕ್ಕನ್ನು ಸ್ಪಷ್ಟಗೊಳಿಸಿರುವುದಲ್ಲದೇ, ಪಯಣದ ಹಾದಿಯ ಶ್ರಮವನ್ನು ಹಗುರಗೊಳಿಸುತ್ತಿವೆ. ಈಗ ಎಲ್ಲರ ಹಂಬಲದಿಂದಲೇ ಹೊಸ ಪ್ರಯತ್ನಕ್ಕೆ ಮುಖಿಯಾಗುತ್ತಿದೆ ಸಾಂಗತ್ಯ. ಅದರ ಹೊಸ ಪ್ರಯತ್ನ “ಚಿತ್ರ ಖಜಾನೆ”.
ಕನ್ನಡದಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಬಗ್ಗೆ ಪುಟ್ಟ ಮಾಹಿತಿ ಖಜಾನೆಯದು. ಚಿತ್ರದ ತಿರುಳು (ಎರಡು ಪ್ಯಾರಾಗಳಲ್ಲಿ), ತಾರಾಗಣದಲ್ಲಿನ ಪ್ರಮುಖರ ಹೆಸರು-ಪಾತ್ರ, ನಿರ್ದೇಶಕರು, ಛಾಯಾಗ್ರಹಕರು ಇತ್ಯಾದಿ ತಾಂತ್ರಿಕ ತಂಡದ ವಿವರ, ಪ್ರಶಸ್ತಿ ದೊರೆತಿದ್ದರೆ ಅದರ ವಿವರಗಳನ್ನು saangatya@gmail.com ಗೆ ಕಳುಹಿಸಿಕೊಟ್ಟರೆ ಸಾಕು. ದಯವಿಟ್ಟು ಎಲ್ಲರೂ ಸಹಕರಿಸಿ.




